’ಪರಿ’ಚಯವಾದರೆ ಪರವಶವಾಗುವಿರಿ, ಇದು ಟೇಸ್ಟ್ ಆಫ್ ರಾಜಾಜಿನಗರ!
ಸಿಲಿಕಾನ್ ಸಿಟಿಯಲ್ಲಿ ಇತ್ತೀಚೆಗಂತೂ ಹೊಟೇಲ್ ಉದ್ಯಮದಲ್ಲಿ ಆಸಕ್ತಿ ತೋರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಅದರಲ್ಲೂ ವಿಭಿನ್ನವಾದ ಆಹಾರ ಪದ್ಧತಿಯ ಜತೆಗೆ ಕಲರ್‌ಫುಲ್ ಆಂಬಿಯನ್ಸ್ ನೀಡಿ ಗ್ರಾಹಕರನ್ನು ಸೆಳೆಯುವ ತಂತ್ರ ಅನೇಕ ಕಡೆ ವರ್ಕ್‌ಔಟ್ ಆಗಿದೆ. ಅಂಥ ರೆಸ್ಟೋರೆಂಟ್‌ಗಳ ಸಾಲಿನಲ್ಲಿ ರಾಜಾಜಿನಗರದ ಪರಿ ಪ್ಯೂರ್ ವೆಜಿಟೇರಿಯನ್ ರೆಸ್ಟೋರೆಂಟ್ ಟಾಪ್ ಲಿಸ್ಟ್‌ನಲ್ಲಿದ್ದು, ಹೊಸ ರುಚಿ, ವಿಭಿನ್ನ ವಾತಾವರಣ ನೀಡಿ ಮೋಡಿ ಮಾಡುತ್ತಿದೆ.
ರಾಜಾಜಿನಗರದ ತುಂಬೆಲ್ಲಾ ಹುಡುಕಾಡಿದರೂ ಬೆರಳೆಣಿಕೆಯಷ್ಟು ವೆಜ್ ಡೈನಿಂಗ್‌ಗಳಷ್ಟೇ ಕಾಣಸಿಗುತ್ತವೆ. ನಿತ್ಯವೂ ಅದೇ ರುಚಿಯನ್ನುಂಡು ಬೇಸರವಾಗಿ, ಟೇಸ್ಟೀ ಫುಡ್‌ಗಾಗಿ ರಾಜಾಜಿನಗರದ ಗಡಿ ದಾಟಿ ಮತ್ತೆಲ್ಲಿಗೋ ಹೋಗಲೇಬೇಕಾದ ಅನಿವಾರ್ಯತೆ ಇತ್ತು. ಆದರೆ ತಿಂಗಳ ಹಿಂದಷ್ಟೇ ಐಕಾನಿಕ್ ಇಸ್ಕಾನ್ ಟೆಂಪಲ್ ಬಳಿ ನಿರ್ಮಾಣಗೊಂಡಿರುವ ಪರಿ ರೆಸ್ಟೋರೆಂಟ್ ರಾಜಾಜಿನಗರದ ಫುಡ್ಡೀಗಳ ಈ ಕೊರಗನ್ನು ನಿವಾರಿಸಿದೆ. ರಾಜಾಜಿನಗರ ಮೆಟ್ರೋ ನಿಲ್ದಾಣದಿಂದ ಸ್ವಲ್ಪ ದೂರದಲ್ಲೇ ಇರುವ ಪರಿ ರೆಸ್ಟೋರೆಂಟ್ ಗ್ಲೋಬಲ್ ಕ್ಯುಸೈನ್ ತಾಣವಾಗಿ ಸದ್ಯ ಸುದ್ದಿಯಲ್ಲಿದೆ.

ಕೆಲವು ಹೊಟೇಲ್‌ಗಳೇ ಹಾಗೆ. ಅಲ್ಲಿನ ವಾತಾವರಣ, ಶುಚಿತ್ವಕ್ಕೆ ಅವರು ನೀಡುವ ಮಹತ್ವದ ಮೂಲಕವೇ ಅಲ್ಲಿನ ಸಿಗುವ ಆಹಾರದ ಗುಣಮಟ್ಟ ಹೇಗಿರಬಹುದೆಂದು ಊಹಿಸಿಕೊಳ್ಳಬಹುದು. ಅಂಥ ಪಟ್ಟಿಗೆ ಸೇರಿರುವ ಈ ರೆಸ್ಟೋರೆಂಟ್, ಔಟ್‌ಲುಕ್‌ನಲ್ಲೇ ವಾವ್ ಎನಿಸುವ ಅನುಭವ ನೀಡುತ್ತದೆ. ಅದ್ಭುತವಾದ ಆಂಬಿಯನ್ಸ್, ವಿಶಾಲವಾದ ಸೀಟಿಂಗ್ ವ್ಯವಸ್ಥೆ, ಗೋಡೆಯ ಮೇಲಿನ ಸುಂದರವಾದ ಚಿತ್ತಾರಗಳು, ಗಾಢವೆನಿಸದ ಲೈಟಿಂಗ್ಸ್ ಇವೆಲ್ಲವೂ ಆಹಾರಕ್ಕೂ ಮುನ್ನವೇ ಮನಸನ್ನು ತಿಳಿಗೊಳಿಸುತ್ತವೆ.

ಇಲ್ಲಿನ ಯುನಿಕ್ ಸಿಗ್ನೇಚರ್ ಪಂಪ್ಕಿನ್ ಸೂಪ್, ಕ್ರೀಮೀ ಟೆಕ್ಸ್ಚರ್ ಮೂಲಕವೇ ಮೋಡಿ ಮಾಡಿದರೆ, ಡ್ರೀಮೀ ಸ್ಮೋಕಿ ಮಾಕ್‌ಟೇಲ್ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. ಬೀಟ್‌ರೂಟ್ ಟಿಕ್ಕಿ, ಸ್ಪೈಸೀ ಮಸಾಲೆದಾರ್ ಸೋಯಾ ಛಾಪ್, ಗುಂಟೂರ್ ಚಿಲ್ಲಿ, ಪೊಟಾಟೋ ಹರ್ಬ್ ಕ್ರೋಕೆಟ್ಸ್, ಬನಾನಾ ಪ್ಲವರ್ ಫ್ಲಿಟರ್ಸ್, ಮುಲ್ತಾನಿ ಪನೀರ್ ಟಿಕ್ಕಾದಂಥ ಅನೇಕ ಬಗೆಯ ಸ್ಟಾರ್ಟರ್ಸ್ ಮತ್ತೆ ಮತ್ತೆ ತಿನ್ನುತ್ತಿರಬೇಕೆನ್ನುವಂತೆ ಮಾಡುತ್ತದೆ. ಫ್ಲೇವರ್‌ಫುಲ್ ಆಗಿದ್ದು, ಪ್ರೆಸೆಂಟೇಷನ್ ವಿಚಾರದಲ್ಲಂತೂ ಫೈವ್ ಸ್ಟಾರ್ ಕೊಡಲೇಬೇಕು.

ಬುರ್ರಾಟ ಚೀಸ್ ಪಾಪ್ಡಿ ಚಾಟ್, ಸ್ಪೆಷಲ್ ಎನಿಸುವ ಮನೀ ಬ್ಯಾಗ್, ಪನೀರ್ ಝೋಲ್ ಮೋಮೋಸ್, ಮಾತ್ರವಲ್ಲದೆ ಸೂಶಿ ಲವರ್ಸ್‌ಗಾಗಿಯೂ ಸಾಕಷ್ಟು ಆಯ್ಕೆಗಳು ಆಹಾರಪ್ರಿಯರಿಗೆ ಇಲ್ಲಿದೆ. ಡೆಸರ್ಟ್‌ಗಳಲ್ಲಂತೂ ಲೆಕ್ಕವಿಲ್ಲದಷ್ಟು ಆಯ್ಕೆಯಿರುವುದರಿಂದ ಯಾವುದನ್ನು ಟೇಸ್ಟ್ ಮಾಡೋದು, ಯಾವುದನ್ನು ಬಿಡುವುದೆಂಬ ಗೊಂದಲವಾಗುವುದು ಸಹಜ. ಇಲ್ಲಿ ನಾರ್ತ್ ಇಂಡಿಯನ್, ಏಷ್ಯನ್ ಹಾಗೂ ಕಾಂಟಿನೆಂಟಲ್ ಫುಡ್‌ಗಳಷ್ಟೇ ಅಲ್ಲದೇ ಪ್ರತ್ಯೇಕವಾದ ಜೈನ್ ಮೆನುವೂ ಇದ್ದು ಆಯ್ಕೆ ನಿಮಗೇ ಬಿಟ್ಟಿದ್ದು.

ಆಹಾರದ ಜತೆಗೆ ಮನಸಿಗೆ ಮುದ ನೀಡುವ ಹಾಡುಗಳಿದ್ದರೆ ಅದೆಷ್ಟು ಚೆನ್ನಾಗಿರುತ್ತದೆ ಎಂದುಕೊಳ್ಳುವವರಿಗಾಗಿಯೇ ಇಲ್ಲಿ ಲೈವ್ ಮ್ಯೂಸಿಕ್ ಕನ್ಸರ್ಟ್‌ಗಳಿವೆ. ಪ್ರೈವೇಟ್ ಡೈನಿಂಗ್ ಸ್ಪೇಸ್ ಬೇಕೆಂದುಕೊಳ್ಳುವ ಕಪಲ್ಸ್ ಹಾಗೂ ಫ್ಯಾಮಿಲಿಗಾಗಿ ವಿಶೇಷ ಸೌಕರ್ಯವನ್ನೂ ಕಲ್ಪಿಸಲಾಗಿದೆ.
ಒಟ್ಟಿನಲ್ಲಿ ರಾಜಾಜಿನಗರದಲ್ಲಿ ಪ್ರೀಮಿಯಂ ವೆಜಿಟೇರಿಯನ್ ರೆಸ್ಟೋರೆಂಟ್‌ಗಾಗಿ ಹುಡುಕಾಡುವವರಿಗೆ ಇದು ಬೆಸ್ಟ್ ಆಯ್ಕೆಯಾಗಿದ್ದು, ರುಚಿ ನೋಡಿದರೆ ಫೆಲ್ ಇನ್ ಲವ್ ವಿತ್ ಪರಿ ಅನ್ನುವುದರಲ್ಲಿ ಸಂದೇಹವಿಲ್ಲ.
ಪ್ರತಿಯೊಬ್ಬರಿಗೆ : 800-1000 ರುಪಾಯಿ
ಸಮಯ : ಮಧ್ಯಾಹ್ನ 1ರಿಂದ ಸಂಜೆ 4 ಗಂಟೆಯವರೆಗೆ
ರಾತ್ರಿ 7ರಿಂದ 11 ಗಂಟೆಯವರೆಗೆ
ಕಾಯ್ದಿರಿಸಲು: 8006100656
ವಿಳಾಸ:
ಪರಿ ,75/5, ಕಾರ್ಡ್ ರೋಡ್, ಇಸ್ಕಾನ್ ಟೆಂಪಲ್ ಸಮೀಪ, ರಾಜಾಜಿನಗರ, ಬೆಂಗಳೂರು, ಕರ್ನಾಟಕ – 560010