ಆದರಾತಿಥ್ಯಕ್ಕೊಂದು ಮಾದರಿ ಹೊಟೇಲ್
ಹತ್ತುಹಲವು ಕಾರಣಕ್ಕೆ ಮಧ್ಯಕರ್ನಾಟಕದ ಕೇಂದ್ರಬಿಂದು ಹರಿಹರಕ್ಕೆ ಬರುವವರ ಸಂಖ್ಯೆ ಅಧಿಕ. ಜತೆಗೆ, ಒಂದೊಳ್ಳೆ ರುಚಿ, ಶುಚಿಯಾದ ಹೊಟೇಲ್ ಬಯಸುವವರಿಗೆ ಸೂಕ್ತ ಸ್ಥಳ ಈ ಹನಿ ಗಾರ್ಡನ್. ಉತ್ತರ ಕರ್ನಾಟಕದ ಬಾಣಸಿಗರು ಮಾಡುವ ಅಡುಗೆಗೆ ಮನಸೋಲದವರಿಲ್ಲ. ಮುಖ್ಯವಾಗಿ ಹನಿ ಗಾರ್ಡನ್ ಗಮನ ಸೆಳೆಯುವುದೇ ಇಲ್ಲಿನ ಆಹಾರ ಪದಾರ್ಥಗಳ ಗುಣಮಟ್ಟದ ವಿಚಾರಕ್ಕೆ.
ಹೊಟೇಲ್ ಉದ್ಯಮವೆಂದರೆ ಅಲ್ಲಿ ಸ್ಪರ್ಧೆ ಮಾಮೂಲು. ಆದರೆ, ನಾವೆಂದಿಗೂ ಸ್ಪರ್ಧೆ, ಹಣದ ಹಿಂದೆ ಬಿದ್ದವರಲ್ಲ. ಜನರಿಗೆ ರುಚಿಕರ ಆಹಾರ ಒದಗಿಸಿ ಅವರ ಹಸಿವು ನೀಗಿಸುವ ಮೂಲಕ ಬದುಕಿನಲ್ಲಿ ಸಾರ್ಥಕತೆ ಹೊಂದುವ ಉದ್ದೇಶವನ್ನಿಟ್ಟುಕೊಂಡವರು ಎನ್ನುತ್ತಲೇ ಮಾತಿಗಿಳಿದವರು ಹೊಟೇಲ್ ಉದ್ಯಮಿ, ಮಿತಭಾಷಿ ಡಿ. ಕುಮಾರ್.
ಹರಿಹರ ಹೊರವಲಯದ ಬೈಪಾಸ್ ಬಳಿಯ ಶಿವಮೊಗ್ಗ ರಸ್ತೆಯಲ್ಲಿ ಕಳೆದ 4 ವರ್ಷಗಳ ಹಿಂದೆ ಎಲ್ಲ ವರ್ಗದವರನ್ನು ದೃಷ್ಟಿಯಲ್ಲಿಟ್ಟುಕೊಂಡು ಹನಿ ಗಾರ್ಡನ್ ಹಾಗೂ ಬ್ಯಾಂಗೋ ಫ್ಯಾಮಿಲಿ ರೆಸ್ಟೋರೆಂಟ್ ಆರಂಭಿಸಿ ಕಡಿಮೆ ಅವಧಿಯಲ್ಲಿ ಉದ್ಯಮದಲ್ಲಿ ಯಶಸ್ಸು ಕಂಡವರಿವರು.
ಹತ್ತುಹಲವು ಕಾರಣಕ್ಕೆ ಮಧ್ಯಕರ್ನಾಟಕದ ಕೇಂದ್ರಬಿಂದು ಹರಿಹರಕ್ಕೆ ಬರುವವರ ಸಂಖ್ಯೆ ಅಧಿಕ. ಜತೆಗೆ, ಒಂದೊಳ್ಳೆ ರುಚಿ, ಶುಚಿಯಾದ ಹೊಟೇಲ್ ಬಯಸುವವರಿಗೆ ಸೂಕ್ತ ಸ್ಥಳ ಈ ಹನಿ ಗಾರ್ಡನ್. ತಂಪಾದ ಗಾಳಿ, ಇಂಪಾದ ಸಂಗೀತದ ನಿನಾದದೊಂದಿಗೆ ಒಂದಿಷ್ಟು ಹೊತ್ತು ಜೀವನದ ಎಲ್ಲ ಜಂಜಾಟ ಮರೆತು ಥರಥರದ ಊಟ ಸವಿಯುತ್ತಾ ಕಾಲಕಳೆಯಲು ದಿ ಬೆಸ್ಟ್ ಪ್ಲೇಸ್ ಅಂದ್ರೆ ಅದು ಹನಿ ಗಾರ್ಡನ್.
ಇಲ್ಲಿ ಉತ್ತರ ಕರ್ನಾಟಕದ ಬಾಣಸಿಗರು ಮಾಡುವ ಅಡುಗೆಗೆ ಮನಸೋಲದವರಿಲ್ಲ. ಮುಖ್ಯವಾಗಿ ಹನಿ ಗಾರ್ಡನ್ ಗಮನ ಸೆಳೆಯುವುದೇ ಇಲ್ಲಿನ ಆಹಾರ ಪದಾರ್ಥಗಳ ಗುಣಮಟ್ಟದ ವಿಚಾರಕ್ಕೆ.
ಹೌದು.. ಇಲ್ಲಿ ಗುಣಮಟ್ಟದಲ್ಲಿ ರಾಜಿಯಿಲ್ಲ. ಎಲ್ಲವೂ ಐಎಸ್‌ಐ ಮಾರ್ಕ್ ನ ಉತ್ಪನ್ನಗಳನ್ನೇ ಬಳಸಲಾಗುತ್ತದೆ. ಅಡುಗೆಗೆ ಯಾವುದೇ ಕೃತಕ ಬಣ್ಣವಾಗಲೀ, ರುಚಿಗೆ ರಾಸಾಯನಿಕವಾಗಲೀ ಬಳಸುವುದಿಲ್ಲ. ಮನೆಯಲ್ಲಿಯೇ ಮಾಡಿದಂತೆ ರುಚಿಕಟ್ಟಾಗಿ ಅಡುಗೆ ತಯಾರಿಸುತ್ತೇವೆ. ಹಾಗಾಗಿಯೇ, ಹರಿಹರ ನಗರವೊಂದಷ್ಟೇ ಅಲ್ಲದೆ ದಾವಣಗೆರೆ, ರಾಣೆಬೆನ್ನೂರು ಮತ್ತಿತರ ಭಾಗದವರು ನಮಗೆ ನಿತ್ಯದ ಕಸ್ಟಮರ್ ಎನ್ನುತ್ತಾರೆ ಮಾಲೀಕ ಡಿ. ಕುಮಾರ್.

ಹೊಟೇಲ್‌ನಲ್ಲಿ ಬಿಸಿಬಿಸಿಯಾದ ತಂದೂರಿ ರೋಟಿ, ಪರೋಟ, ಪರೋಟ ನಾನ್, ಗೋಧಿ ರೋಟಿ, ಕುಲ್ಚಾ, ದಾಲ್ ಫ್ರೈ, ದಾಲ್ ಕೊಲ್ಲಾಪುರಿ, ಪನೀರ್ ಮಸಲಾ, ಮಶ್ರೂಮ್ ಮಸಾಲಾ, ಚೆನ್ನ ಮಸಾಲ, ಖಾಜು ಮಸಾಲಾ ಸೇರಿದಂತೆ ಜೀರಾ ರೈಸ್, ಘೀ ರೈಸ್, ವೆಜಿಟೆಬಲ್ ರೈಸ್ ಸೇರಿದಂತೆ ಹತ್ತಾರೂ ಬಗೆಯ ಊಟದ ಜತೆಗೆ ಲೆಮೆನ್ ಕೊರಿಯಾಂಡರ್, ಟೊಮೊಟೋ ಸೂಪ್, ಬೇಬಿ ಕಾರ್ನ್, ವೆಜ್ ತಿಲಿವಾಲಿ, ಬಟರ್ ಚಿಲ್ಲಿ ಸೇರಿದಂತೆ ಬಗೆಬಗೆಯ ಸ್ನ್ಯಾಕ್ಸ್ ಮತ್ತು ಸ್ಟಾರ್ಟರ್ ಗಳು ಇಲ್ಲಿ ಲಭ್ಯ.
ಅಯ್ಯೋ.. ನಗರ ಪ್ರದೇಶದ ಹೊರಗಿನ ಹೊಟೇಲ್‌ಗಳಲ್ಲಿ ದರ ಹೆಚ್ಚು. ಮನಬಂದಂತೆ ರೇಟ್ ಇರುತ್ತದೆ ಎಂಬ ಚಿಂತೆಯೂ ಇಲ್ಲಿಲ್ಲ. ಏಕೆಂದರೆ ನೀವು ಯಾವುದೇ ಹೊಟೇಲ್ ಗೆ ಹೋಗಿದ್ದರೂ ಅಲ್ಲಿನ ದರಕ್ಕಿಂತ ಹೆಚ್ಚು ಇಲ್ಲಿಲ್ಲ. ಹಾಗಾಗಿ, ಬದುಕಿನ ಜಂಜಾಟಕ್ಕೆ ಕೆಲ ಸಮಯ ವಿರಾಮ ಹೇಳಿ ಅರಾಮವಾಗಿ ಸಮಾನ ಮನಸ್ಕರೊಂದಿಗೆ ಹನಿ ಗಾರ್ಡನ್‌ಗೆ ಬಂದು ಮನ ತಣಿಸಿಕೊಳ್ಳಲು ಇದೊಂದು ಅದ್ಭುತ ಸ್ಥಳವೆಂಬುದರಲ್ಲಿ ಎರಡು ಮಾತಿಲ್ಲ. ಹೆಸರೇ ಹೇಳುವಂತೆ ಜೇನುತುಪ್ಪದಷ್ಟೇ ರುಚಿ ಈ ಹನಿ ಗಾರ್ಡನ್.
ಬ್ಯಾಂಗೋದಲ್ಲಿ ನಾನ್‌ವೆಜ್!
ಶುದ್ಧ ಸಸ್ಯಹಾರಿಗಳಿಗೆ ಹನಿ ಗಾರ್ಡನ್ ಓಕೆ. ಆದರೆ, ಮಾಂಸಪ್ರಿಯರ ಗತಿ ಏನು? ಎಂಬುದಕ್ಕೂ ಡಿ. ಕುಮಾರ್ ಬಳಿ ಉತ್ತರವಿದೆ. ಮಾಂಸಪ್ರಿಯರಿಗೆಂದೇ ಹನಿ ಗಾರ್ಡನ್ ಎದುರಿನಲ್ಲಿಯೇ ಬ್ಯಾಂಗೋ ಫ್ಯಾಮಿಲಿ ರೆಸ್ಟೋರೆಂಟ್ ತೆರೆದಿದ್ದಾರೆ. ಚಿಕನ್ ಫ್ರೈ, ಚಿಕನ್ ಲಾಲಿಪಾಪ್, ಚಿಕನ್ ಟಿಕ್ಕಾ, ತವಾ ಫ್ರೈ, ಚಿಕನ್ ಮಸಾಲಾ, ಲೆಗ್‌ಪೀಸ್, ಎಗ್ ಮಸಾಲಾ, ಬಿರಿಯಾನಿ ಸೇರಿದಂತೆ ವಿಧವಿಧದ ಮೀನೂಟ ಸಹ ಲಭ್ಯ. ಇಲ್ಲಿನ ಬಾಣಸಿಗರು ತಯಾರಿಸುವ ಊಟಕ್ಕೆ ನಿತ್ಯ ಮಾಂಸಪ್ರಿಯರ ದಂಡೇ ನೆರೆದಿರುತ್ತದೆ. ಈ ಭಾಗಕ್ಕೆ ಬಂದವರು ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಸ್ಥಳವಿದು.

ಕಷ್ಟ ಕಂಡುಂಡು ಬೆಳೆದವರು:
ಮೂಲತ ಹರಿಹರದ ಬಳಿಯಿರುವ ಹನಗವಾಡಿ ಗ್ರಾಮದವರಾಗಿರುವ ಡಿ. ಕುಮಾರ್ ಸಕಲಕಲಾ ವಲ್ಲಭರು. ಶುದ್ಧ ರಾಜಕಾರಣಿ. ಶ್ರಮಜೀವಿ. ತಾಲೂಕು ಪಂಚಾಯಿತಿ ಸದಸ್ಯರಾಗಿ ಜನಸೇವೆಗೈದಿದ್ದಲ್ಲದೇ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾಗಿ, ರಿಯಲ್ ಎಸ್ಟೇಟ್ ಉದ್ಯಮಿಯಾಗಿ, ಹೊಟೇಲ್ ಉದ್ಯಮದಲ್ಲೂ ಯಶಸ್ಸು ಕಂಡವರು. ಆದರೆ, ಅವರು ಬೆಳೆದುಬಂದ ಹಾದಿ ಹೂವಿನ ಹಾಸಿಗೆಯಾಗಿರಲಿಲ್ಲ. ಮಧ್ಯಮ ವರ್ಗದಲ್ಲಿ ಜನಿಸಿದರೂ ಚಿಕ್ಕ ವಯಸ್ಸಿನಲ್ಲಿಯೇ ಕಷ್ಟದ ಅರಿವುಂಡವರು. ದಿನಪತ್ರಿಕೆ ಏಜೆಂಟರಾಗಿ, ಪತ್ರಕರ್ತರಾಗಿ ಒಂದೂವರೆ ದಶಕ ಸೈಕಲ್ ತುಳಿದು ಹಂತಹಂತವಾಗಿ ಶ್ರಮದಿಂದ ಮೇಲೆ ಬಂದು ಇಂದು ತಮ್ಮ ಎರಡೂ ಹೊಟೇಲ್‌ಗಳಲ್ಲಿ 25ಕ್ಕೂ ಅಧಿಕ ಜನರ ಕುಟುಂಬಕ್ಕೆ ಆಸರೆಯಾಗಿದ್ದಾರೆ.
ಪ್ರಸ್ತುತ ತಮ್ಮದೇ ಸ್ವಂತ 30 ಗುಂಟೆ ಜಾಗದಲ್ಲಿ ಹನಿಗಾರ್ಡನ್ ತೆರೆದಿದ್ದು, ಇದಕ್ಕೆ ದಾವಣಗೆರೆಯಲ್ಲಿ ಪ್ರೋ ಸ್ಟೂಡಿಯೋ ನಡೆಸುತ್ತಿರುವ ಶರತ್ ಹಾಗೂ ಇನ್ನೋರ್ವ ಪುತ್ರ ವರುಣ್ ಕೈಜೋಡಿಸಿದ್ದಾರೆ.
ನಮ್ಮ ಮಾಲೀಕರ ಮಾತಿನಲ್ಲಿ ಏರುದನಿಯಿದ್ದರೂ ಮನಸು ಮೃದು. ಕೆಲಸಗಾರರನ್ನು ಎಂದಿಗೂ ಗದರಿದ ಉದಾಹರಣೆಗಳಿಲ್ಲ. ಅಲ್ಲದೆ, ಅನೇಕ ಕಷ್ಟಗಳಿಗೆ ತಕ್ಷಣವೇ ಸ್ಪಂದಿಸುವ ಗುಣ ಡಿ. ಕುಮಾರ್ ಅವರಲ್ಲಿದೆ. ಹಾಗಾಗಿಯೇ, ಇಲ್ಲಿಗೆ ಕೆಲಸ ಕೇಳಿಕೊಂಡು ಬಂದವರು ಬೇಸರಿಸಿಕೊಂಡು ಹೋದ ಉದಾಹರಣೆಗಳೇ ಇಲ್ಲವೆನ್ನುತ್ತಾರೆ ಹನಿಗಾರ್ಡನ್ ಉಸ್ತುವಾರಿ ನೋಡಿಕೊಳ್ಳುವ ಮಂಜುನಾಥ್.
ಜೈನ್ ಫುಡ್ ಲಭ್ಯ
ಕೆಲವರು ಅಡುಗೆಯಲ್ಲಿ, ಈರುಳ್ಳಿ, ಬೆಳ್ಳುಳ್ಳಿ ಮತ್ತಿತರ ಪದಾರ್ಥ ಬಳಸುವುದಿಲ್ಲ. ಅಂತವರಿಗೂ ಇಲ್ಲಿ ರುಚಿರುಚಿಯಾದ ಅವರಿಷ್ಟದಂತೆ ಆಹಾರ ತಯಾರಿಸಿಕೊಡಲಾಗುತ್ತದೆ. ಹಾಗಾಗಿಯೇ, ಜೈನರು ಈ ಹೋಟೆಲ್‌ನ ಖಾಯಂ ಕಸ್ಟಮರ್‌ಗಳು.
ಸೌಲಭ್ಯಗಳೇನಿವೆ?
ಶುದ್ಧ ಸಸ್ಯಹಾರಿ ತಾಜಾ ಊಟದ ಜತೆಗೆ ಬರ್ತ್ಡೇ ಫಂಕ್ಷನ್, ನೂರಿನ್ನೀರೂ ಜನರ ಸಭೆ ನಡೆಸಲು ಸುಸಜ್ಜಿತ ಫಂಕ್ಷನ್ ಹಾಲ್, ದೊಡ್ಡದಾದ ಲಾನ್ ಇದೆ. 12 ಡಬಲ್ ಕಾಟೇಜ್, ಒಂದೇ ಬಾರಿಗೆ ಸುಮಾರು 70 ಜನರು ಒಟ್ಟಿಗೆ ಕೂತು ಊಟ ಮಾಡುವಷ್ಟು ಬೃಹತ್ ಸ್ಥಳವಿದೆ.
ಮಾಲೀಕರು, ಹನಿ ಗಾರ್ಡನ್ ಅಂಡ್ ಬ್ಯಾಂಗೋ ಹೊಟೇಲ್, ಫ್ಯಾಮೀಲಿ ರೆಸ್ಟೋರೆಂಟ್ , ಬೈಪಾಸ್ ಬಳಿಯ ಪಂಚಮಸಾಲಿ ಪೀಠದ ಹತ್ತಿರ, ಶಿವಮೊಗ್ಗ ರಸ್ತೆ, ಹರಿಹರ.
ಮೊ: 9916029414