ಎಂಟ್ರೆ ಸಿಯೆಲೋಸ್ ವೈನ್ ಅಂಡ್ ವೆಲ್‌ನೆಸ್‌ಗೆ ಎಂಟ್ರಿ ಕೊಟ್ರೆ
ಈ ಹೊಟೇಲ್ ಇರುವುದು ವೈನ್ ತಯಾರಿಕೆಗಾಗಿಯೇ ಪ್ರಸಿದ್ಧವಾಗಿರುವ ಅರ್ಜೆಂಟೀನಾದ 'ಲುಜಾನ್ ಡಿ ಕುಯೊ' ಪ್ರದೇಶದಲ್ಲಿ. ಹಾಗಾಗಿ ಪಕ್ಕಾ ಅಲ್ಲಿನ ದೇಶಿ ವೈನ್ ತೋಟದಲ್ಲಿ ಉಳಿದು ಪ್ರಸಿದ್ಧ ವೈನ್‌ಗಳನ್ನು ಸವಿಯಬಹುದು. ಈ ಹೊಟೇಲ್ ನೆಲೆಯಾಗಿರುವ ದ್ರಾಕ್ಷಿ ತೋಟ 20 ಎಕರೆಯಷ್ಟು ವಿಸ್ತಾರವಾಗಿದೆ. ಇದರ ತುಂಬಾ ವೈನ್ ತಯಾರಿಕೆಗಾಗಿ ಬೆಳೆಯಲಾದ ದ್ರಾಕ್ಷಿ ಬಳ್ಳಿಗಳೇ
ಪ್ರವಾಸದಲ್ಲಿ ಹುಟ್ಟಿಕೊಳ್ಳುವಷ್ಟು ಉದ್ಯಮಗಳು ಬೇರೆಲ್ಲೂ ಹುಟ್ಟಿಕೊಳ್ಳಲಾರುವು. ಈ ಮಾತಿಗೆ ಖುದ್ದು ಅದರ ಒಂದು ಭಾಗವಾಗಿರು ಆತಿಥ್ಯ ಕ್ಷೇತ್ರ ದೊಡ್ಡ ಉದಾಹರಣೆ. ಇಲ್ಲಿ ಕೃಷಿ ಪ್ರದೇಶ, ಹಳ್ಳಿ, ರಣರಣ ಬಿಸಿಲು, ಚುಮುಚುಮು ಚಳಿ, ಪ್ರವಾಸಿ ತಾಣಗಳು, ಸ್ಥಳೀಯ ಆಹಾರಗಳು ಹೀಗೆ ಸಾಕಷ್ಟು ವಿಷಯ ವಸ್ತುಗಳನ್ನು ಆಧರಿಸಿಕೊಂಡು ಹೊಟೇಲ್, ರೆಸಾರ್ಟ್, ಹೋಮ್ ಸ್ಟೇಗಳು ಹುಟ್ಟಿಕೊಳ್ಳಬಲ್ಲವು. ಹಾಗೇ ಆಗಿವೆ ಸಹ. ಅವುಗಳಲ್ಲಿ ಒಂದು ವೈನ್ ಯಾರ್ಡ್.
ಇದನ್ನೂ ಓದಿ: ಆಗಿನ ಬಂಕರ್ ಈಗಿನ ರೆಸಾರ್ಟ್
ವೈನ್ ಯಾರ್ಡ್‌ಗಳು ಭಾರತದಾದ್ಯಂತ ಇವೆ. ಕರ್ನಾಟಕದಲ್ಲೂ ಕಡೆಗೆ ರಾಜಧಾನಿ ಬೆಂಗಳೂರಿನಲ್ಲೂ ವೈನ್ ಯಾರ್ಡ್‌ಗಳಿವೆ. ಹಾಗೇ ರೆಸಾರ್ಟ್‌ಗಳೂ. ಆ ರೆಸಾರ್ಟ್‌ಗಳಲ್ಲಿ ಉಳಿದು ಶುದ್ಧ ದ್ರಾಕ್ಷಿಗಳಿಂದ ತಯಾರಾದ ವೈನ್‌ಗಳನ್ನು ಅತಿಥಿಗಳು ಸವಿಯಬಹುದು. ಖುದ್ದು ಅತಿಥಿಗಳೇ ವೈನ್‌ಗಳನ್ನು ತಯಾರಿಸಲು ಕೆಲವು ರೆಸಾರ್ಟ್‌ಗಳು ಅನುವು ಮಾಡಿಕೊಡುತ್ತವೆ.
ಅರ್ಜೆಂಟೀನಾದಲ್ಲಿ ಇಂಥದ್ದೇ ಒಂದು ಹೊಟೇಲ್ ಇದೆ. ಇದರ ಹೆಸರು ʻಎಂಟ್ರೆ ಸಿಯೆಲೋಸ್ ವೈನ್ ಅಂಡ್ ವೆಲ್‌ನೆಸ್. ಈ ಹೊಟೇಲ್ ಇರುವುದು ವೈನ್ ತಯಾರಿಕೆಗಾಗಿಯೇ ಪ್ರಸಿದ್ಧವಾಗಿರುವ 'ಲುಜಾನ್ ಡಿ ಕುಯೊ' ಪ್ರದೇಶದಲ್ಲಿ. ಹಾಗಾಗಿ ಪಕ್ಕಾ ಅಲ್ಲಿನ ದೇಶಿ ವೈನ್ ತೋಟದಲ್ಲಿ ಉಳಿದು ಪ್ರಸಿದ್ಧ ವೈನ್‌ಗಳನ್ನು ಸವಿಯಬಹುದು. ಈ ಹೊಟೇಲ್ ನೆಲೆಯಾಗಿರುವ ದ್ರಾಕ್ಷಿ ತೋಟ 20 ಎಕರೆಯಷ್ಟು ವಿಸ್ತಾರವಾಗಿದೆ. ಇದರ ತುಂಬಾ ವೈನ್ ತಯಾರಿಕೆಗಾಗಿ ಬೆಳೆಯಲಾದ ದ್ರಾಕ್ಷಿ ಬಳ್ಳಿಗಳೇ ಕಾಣಿಸಿಕೊಳ್ಳುತ್ತವೆ.

ಆಂಡೀಸ್ ಪರ್ವತಗಳ ಸಾಲು
ಎಂಟ್ರೆ ಸಿಯೆಲೋಸ್ ವೈನ್ ಅಂಡ್ ವೆಲ್‌ನೆಸ್ ಮೆಂಡೋಜಾದ ಬಳಿ ಇದ್ದು, ಆಂಡೀಸ್ ಪರ್ವತ ಶ್ರೇಣಿಗೆ ಹತ್ತಿರದಲ್ಲಿದೆ. ಹಿಮದ ಹೊದಿಕೆಯ ಈ ಪರ್ವತಗಳ ಸಾಲಿನ ದೃಶ್ಯವನ್ನು ಈ ಹೊಟೇಲ್‌ನಿಂದಲೇ ಆನಂದಿಸಬಹುದು. ಸೂರ್ಯೋದಯ ಮತ್ತು ಸೂರ್ಯಾಸ್ತಗಳ ವೀಕ್ಷಣೆಗಂತೂ ಇದು ದಿ ಬೆಸ್ಟ್ ಪ್ಲೇಸ್. ಐಷಾರಾಮಿ ಫೀಲ್ ಇರುವುದೇ ಇಲ್ಲಿ. ಒಂದು ಗ್ಲಾಸ್‌ನಲ್ಲಿ ವೈನ್ ಹಿಡಿದು, ಹೊಟೇಲ್‌ನ ಹೊರಾಂಗಣದಲ್ಲಿ ಇರುವ ಈಜುಕೊಳದಲ್ಲಿ ನಿಂತು ಸುಂದರ ಆಂಡೀಸ್ ಪರ್ವತಗಳ ನೋಟವನ್ನು ಕಣ್ತುಂಬಿಕೊಳ್ಳಬಹುದು. ಫೊಟೋಶೂಟ್‌ಗೆ ಈ ಸ್ಥಳ ದಿ ಬೆಸ್ಟ್ ಆಯ್ಕೆ. ಹಚ್ಚ ಹಸಿರಿನ ಪರಿಸರ, ಹಿನ್ನೆಲೆಯಲ್ಲಿ ಲೈಟ್‌ಬ್ಲೂ ಬಣ್ಣದ ಆಂಡೀಸ್ ಪರ್ವತಗಳ ಸಾಲು ಮತ್ತು ದ್ರಾಕ್ಷಿ ತೋಟದಿಂದ ಅದ್ಭುತ ದೃಶ್ಯಗಳು ನಿಮ್ಮ ಕ್ಯಾಮೆರಾ ಆಕ್ಷನ್‌ಗಳಲ್ಲಿ ಸೆರೆಯಾಗುತ್ತವೆ.

ಸೈಕಲ್ ಮತ್ತು ಕುದುರೆ ಸವಾರಿ
ಈ ದ್ರಾಕ್ಷಿ ತೋಟದಲ್ಲಿ ಒಂದಲ್ಲ ಅಂತ ಹಾತ್ತಾರು ಬಾರಿ ಅಡ್ಡಾಡಬಹುದು. ನೀವು ಬಯಸಿದರೆ ಕುದುರೆ ಅಥವಾ ಬೈಸಿಕಲ್ ಅನ್ನು ಇಲ್ಲಿ ಒದಗಿಸಲಾಗುತ್ತದೆ. ದ್ರಾಕ್ಷಿಯಿಂದ ವೈನ್ ತಯಾರಿಕೆಯ ವಿಧಾನವನ್ನು ತಿಳಿದುಕೊಳ್ಳಬಹುದು. ಖುದ್ದು ಅತಿಥಿಗಳೇ ವೈನ್ ಅನ್ನು ತಯಾರಿಸುವ ಅನುಭವವನ್ನು ಪಡೆಯಬಹುದು. ರೆಸಾರ್ಟ್‌ನ ಓನ್ ಬ್ರ್ಯಾಂಡ್‌ನ ವೈನ್ ಇಲ್ಲಿ ಸಿಗುತ್ತದೆ. ಸವಿಯಬಹುದು. ಬೇಕಾದರೆ ಮನೆಗೂ ಒಯ್ಯಬಹುದು.

ಹಮಾಮ್ ಸ್ಪಾ
ಹಮಾಮ್ ಸ್ಪಾ ಈ ಹೊಟೇಲ್‌ನ ಒಂದು ವಿಶೇಷ. ದೇಹವನ್ನು ಹಗುರಾಗಿಸಲು ಒಂದು ದಾರಿ. ತೆಳುವಾದ ಒಂದು ನಿಲುವಂಗಿಯನ್ನು ಧರಿಸಿ, ಲ್ಯಾವೆಂಡರ್ ಸ್ಟೀಮ್‌ಬಾತ್, ಬಿಸಿಯಾದ ಹಮಾಮ್ ಪೂಲ್‌ನಲ್ಲಿ ಸ್ನಾನ, ನಂತರ ಸ್ಪಾ ಚಿಕಿತ್ಸೆ, ಇಷ್ಟು ಕ್ರಮಗಳಿಂದ ದೇಹ ಹಗುರಾಗುತ್ತದೆ. ಆರಾಮದ ಫೀಲ್ ಆಗುತ್ತದೆ.
ಫುಡ್ ವಿಚಾರ ಹೇಳಿಕೊಳ್ಳುವಷ್ಟೇನು ಇಲ್ಲ. ಮಾಂಸಾಹಾರ. ಸಿಹಿ ತಿನಿಸುಗಳನ್ನೂ ಆರ್ಡರ್ ಮಾಡಬಹುದು. ಅದಕ್ಕೂ ಮುನ್ನಾ ಅಲ್ಲಿ ಸಸ್ಯಾಹಾರದಲ್ಲಿ ಮೊಟ್ಟೆ ಮತ್ತು ಮೀನು ಇದೆಯೋ ಅಥವಾ ಇಲ್ಲವೋ ಎಂದು ತಿಳಿದು ಆರ್ಡರ್ ಮಾಡುವುದು ಒಳಿತು.
ವೈನ್ ಅಂಡ್ ವೆಲ್‌ನೆಸ್ ಎರಡೂ ಒಂದೇ ಸೂರಿನಡಿ ಇರುವ ಈ ಪ್ಲೇಸ್ ಒಂದು ವಿಚಿತ್ರ ಮತ್ತು ವಿಶೇಷ ಎರಡನ್ನೂ ಒಳಗೊಂಡಿದೆ. ಐಷಾರಾಮಿ ಫೀಲ್ ನಿಮ್ಮನ್ನು ಖುಷಿಯಾಗಿಡುತ್ತದೆ ಎನ್ನುವ ಮನೋಭಾವ ನಿಮಗೆ ಇದ್ದರೆ ಮಾತ್ರ ಈ ರೆಸಾರ್ಟ್‌ಗೆ ಹೋಗುವುದು ಉತ್ತಮ. ಜೇಬುಗಳತ್ತ ಹೆಚ್ಚು ಒತ್ತು ನೀಡುವವರಿಗೆ ಇದು ಭಾರೀ ಆಘಾತ ನೀಡುತ್ತದೆ. ದುಬಾರಿ ಬೆಲೆಗೆ ಅಕೌಂಟ್ ಖಾಲಿ ಆಗಲೂಬಹುದು.