ಕೇವ್ ಎನ್ ಡೈನ್ ಎಂಬ ಗವಿಯಲ್ಲಿ ಸವಿಯೂಟ
ಇಲ್ಲಿಗೆ ಬರುವವರಲ್ಲಿ ರಿಪೀಟ್ ಕಸ್ಟಮರ್‌ಗಳೇ ಜಾಸ್ತಿ ಎನ್ನುತ್ತದೆ ಅಂಕಿಅಂಶಗಳು. ಆದರೆ ಆ ರಿಪೀಟ್ ಕಸ್ಟಮರ್‌ಗಳ ವರ್ಡ್ ಆಫ್ ಮೌತ್ ಪ್ರಚಾರದಿಂದಾಗಿ ಹೊಸ ಹೊಸ ಆಹಾರಪ್ರಿಯರು ಈ ಹೊಟೇಲ್‌ಗೆ ಲಗ್ಗೆ ಇಡುತಿದ್ದಾರೆ. ಸೋಷಿಯಲ್ ಮೀಡಿಯಾ ಮತ್ತು ಗೂಗಲ್‌ನಲ್ಲಿ ಕೇವ್ ಎನ್ ಡೈನ್ ಬಗ್ಗೆ ಅತಿ ಹೆಚ್ಚು ಪಾಸಿಟಿವ್ ರಿವ್ಯೂಗಳೇ ಬಂದಿವೆ.
ಬೆಂಗಳೂರು ಎಂದಾಕ್ಷಣ ನೆನಪಾಗುವುದು ಇಲ್ಲಿನ ವೈವಿಧ್ಯಮಯ ಆಹಾರ ಸಂಸ್ಕೃತಿ. ಅದರಲ್ಲೂ ಬಸವೇಶ್ವರ ನಗರದಂಥ ಜನವಸತಿ ಪ್ರದೇಶಗಳಲ್ಲಿ ಹೊಸ ಹೊಸ ಪ್ರಯೋಗದ ಹೊಟೇಲ್‌ಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಅಂಥ ವಿಶಿಷ್ಟ ಪ್ರಯೋಗಗಳಲ್ಲಿ ಒಂದು 'ಕೇವ್ ಎನ್ ಡೈನ್'. ನೀವು ನಗರದ ಗದ್ದಲದ ನಡುವೆ ಇದ್ದರೂ, ಒಮ್ಮೆ ಈ ಹೊಟೇಲ್ ಪ್ರವೇಶಿಸಿದರೆ ಯಾವುದೋ ಬೆಟ್ಟದ ಗುಹೆಯೊಳಗೆ ಬಂದಿದ್ದೀವೇನೋ ಎಂಬ ಅನುಭವವಾಗುತ್ತದೆ. ಪ್ರಾರಂಭವಾಗಿ ಹತ್ತು ವರ್ಷಗಳೇ ಕಳೆದರೂ ಈ ಹೊಟೇಲ್ ಮೇಲಿನ ಆಕರ್ಷಣೆ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ಕಾರಣ ಇದರ ವಿಶಿಷ್ಟ ವಿನ್ಯಾಸ, ಆಹಾರ ಮತ್ತು ಆತಿಥ್ಯ.
ವಿಶಿಷ್ಟವಾದ ಆಂಬಿಯನ್ಸ್

ಈ ಹೊಟೇಲ್‌ನ ಪ್ರಮುಖ ಆಕರ್ಷಣೆಯೇ ಇದರ ಒಳಾಂಗಣ ವಿನ್ಯಾಸ. ಹೆಸರೇ ಸೂಚಿಸುವಂತೆ ಇದನ್ನು ಒಂದು 'ಗುಹೆ'ಯ (Cave) ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಕಲ್ಲಿನ ಗೋಡೆಗಳು, ಮಂದವಾದ ಬೆಳಕು ಮತ್ತು ಗುಹೆಯೊಳಗಿನ ನೈಸರ್ಗಿಕ ರಚನೆಗಳನ್ನು ನೆನಪಿಸುವ ವಿನ್ಯಾಸವು ಗ್ರಾಹಕರಿಗೆ ಒಂದು ವಿಭಿನ್ನ ಲೋಕಕ್ಕೆ ಬಂದ ಅನುಭವ ನೀಡುತ್ತದೆ. ಫ್ಯಾಮಿಲಿ ಜತೆ ಅಥವಾ ಸ್ನೇಹಿತರ ಜತೆ ವಿಭಿನ್ನವಾಗಿ ಸಮಯ ಕಳೆಯಲು ಇದು ಅತ್ಯುತ್ತಮ ತಾಣ. ನೀವು ಹೊಟೇಲ್ ಪ್ರವೇಶಿಸುತ್ತಿದ್ದಂತೆ ಕೃತಕ ಬಂಡೆಗಳಿಂದ ಕೂಡಿದ ಗುಹೆಯ ದ್ವಾರ ನಿಮ್ಮನ್ನು ಸ್ವಾಗತಿಸುತ್ತದೆ. ಗುಹೆಯ ನೈಜತೆ ನೀಡಲು ಗೋಡೆಗಳ ಸಂದಿನಿಂದ ಮಂದವಾದ ಹಳದಿ ಮತ್ತು ನೀಲಿ ಬೆಳಕು ಬರುವ ಹಾಗೆ ವಿನ್ಯಾಸ ಮಾಡಲಾಗಿದೆ. ಪ್ರತಿಯೊಂದು ಟೇಬಲ್ ಅನ್ನು ಕೂಡ ಒಂದು ಪ್ರತ್ಯೇಕ ಗುಹೆಯ ಭಾಗದಂತೆ ವಿಭಾಗಿಸಲಾಗಿದೆ, ಇದು ಗ್ರಾಹಕರಿಗೆ ಪ್ರೈವೆಸಿ ನೀಡುತ್ತದೆ.
ಇಲ್ಲಿನ ಆಂಬಿಯನ್ಸ್ ಫೊಟೋ ಮತ್ತು ಸೆಲ್ಫೀ ತೆಗೆದುಕೊಳ್ಳಲು ತುಂಬ ಚೆನ್ನಾಗಿದ್ದು, ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಿಗೆ ಇದು ಹೇಳಿ ಮಾಡಿಸಿದ ಜಾಗ ಎನ್ನಬಹುದಾಗಿದೆ. ಸಣ್ಣ ಮಟ್ಟದ ಬರ್ತ್‌ಡೇ ಪಾರ್ಟಿ ಅಥವಾ ಫ್ಯಾಮಿಲಿ ಗೆಟ್-ಟು-ಗೆದರ್ ಮಾಡಲು ಇಲ್ಲಿ ಪ್ರತ್ಯೇಕ ವ್ಯವಸ್ಥೆಗಳ ಬಗ್ಗೆ ಕೂಡ ವಿಚಾರಿಸಬಹುದು.
ಆಹಾರ ವೈವಿಧ್ಯ
ಕೇವ್ ಎನ್ ಡೈನ್ ಕೇವಲ ವಿನ್ಯಾಸಕ್ಕೆ ಮಾತ್ರ ಸೀಮಿತವಾಗಿಲ್ಲ, ಇಲ್ಲಿನ ರುಚಿಕರ ಆಹಾರವೂ ಅಷ್ಟೇ ಪ್ರಸಿದ್ಧ.
ಮಲ್ಟಿಕ್ಯುಸೈನ್ ಮೆನು ಇಲ್ಲಿನ ಸ್ಪೆಷಾಲಿಟಿ. ಇಲ್ಲಿ ಉತ್ತರ ಭಾರತೀಯ, ಚೈನೀಸ್ ಮತ್ತು ತಂದೂರಿ ಶೈಲಿಯ ವೈವಿಧ್ಯಮಯ ಆಹಾರಗಳು ಲಭ್ಯವಿದೆ.
ಇಲ್ಲಿನ ಹಾಟ್ ಫೇವರಿಟ್ ಮತ್ತು ಬಹಳ ಬೇಡಿಕೆಯ ಫುಡ್ ಏನು ಅಂತ ಕೇಳಿದರೆ ಆ ಪಟ್ಟಿಯಲ್ಲಿ ಕಬಾಬ್‌ಗಳು, ಚಿಕನ್ ಘೀ ರೋಸ್ಟ್ ಮತ್ತು ವಿವಿಧ ಥರದ ಬಿರಿಯಾನಿಗಳನ್ನು ಗ್ರಾಹಕರು ಪಟ್ಟಿ ಮಾಡುತ್ತಾರೆ.
ಸಸ್ಯಾಹಾರಿಗಳೇ ಗಮನಿಸಿ

ಇಲ್ಲಿ ಸಸ್ಯಾಹಾರಿಗಳಿಗೂ ಬಾಯಿ ನೀರೂರಿಸುವ ಖಾದ್ಯಗಳಿವೆ. ಪನೀರ್ ಟಿಕ್ಕಾ, ಮಶ್ರೂಮ್ ಮಸಾಲಾದಂಥ ಸ್ಟಾರ್ಟರ್‌ಗಳಿಗೆ ಇಲ್ಲಿ ರಿಪೀಟ್ ಕಸ್ಟಮರ್ ಗಳು ಬರುತ್ತಾರೆ.
ಒಟ್ಟಾರೆ, ನಿಮ್ಮ ದೈನಂದಿನ ಜಂಜಾಟದಿಂದ ಹೊರಬಂದು, ಒಂದು ವಿಭಿನ್ನ ಪರಿಸರದಲ್ಲಿ ಕುಟುಂಬದೊಂದಿಗೆ ರುಚಿಕರ ಊಟ ಸವಿಯಬೇಕೆಂದಿದ್ದರೆ 'ಕೇವ್ ಎನ್ ಡೈನ್' ಗೆ ಒಮ್ಮೆ ಭೇಟಿ ನೀಡಿ.
ಮಾಲೀಕರು ಏನಂತಾರೆ?
ಹೊಟೇಲ್‌ನ ಉದ್ದೇಶದ ಬಗ್ಗೆ ಮಾತನಾಡುವ ಮಾಲೀಕರು, ʻನಾವು ಇಲ್ಲಿ ಕೇವಲ ಆಹಾರವನ್ನು ಮಾರಾಟ ಮಾಡುತ್ತಿಲ್ಲ, ಅತಿಥಿಗಳಿಗೆ ಒಂದು ಸುಂದರವಾದ ಅನುಭವ ಮತ್ತು ನೆನಪನ್ನು ನೀಡಿ ಕಳಿಸುತ್ತಿದ್ದೇವೆ. ಬೆಂಗಳೂರಿನ ಜನರಿಗೆ ರೆಗ್ಯುಲರ್ ಹೊಟೇಲ್‌ಗಳಿಗಿಂತ ಭಿನ್ನವಾದ ಪರಿಸರ ನೀಡಬೇಕು ಎಂಬ ಉದ್ದೇಶದಿಂದ ಈ 'ಕೇವ್' ಥೀಮ್ ಮಾಡಿದ್ದೇವೆ. ಗುಣಮಟ್ಟ ಮತ್ತು ಸ್ವಚ್ಛತೆಗೆ ನಾವು ಮೊದಲ ಆದ್ಯತೆ ನೀಡುತ್ತೇವೆʼ ಎನ್ನುತ್ತಾರೆ.
ಅನ್ನದಾತೋ ಸುಖೀಭವ!

ಇಲ್ಲಿಗೆ ಬರುವವರಲ್ಲಿ ರಿಪೀಟ್ ಕಸ್ಟಮರ್‌ಗಳೇ ಜಾಸ್ತಿ ಎನ್ನುತ್ತದೆ ಅಂಕಿಅಂಶಗಳು. ಆದರೆ ಆ ರಿಪೀಟ್ ಕಸ್ಟಮರ್‌ಗಳ ವರ್ಡ್ ಆಫ್ ಮೌತ್ ಪ್ರಚಾರದಿಂದಾಗಿ ಹೊಸ ಹೊಸ ಆಹಾರಪ್ರಿಯರು ಈ ಹೊಟೇಲ್‌ಗೆ ಲಗ್ಗೆ ಇಡುತಿದ್ದಾರೆ. ಸೋಷಿಯಲ್ ಮೀಡಿಯಾ ಮತ್ತು ಗೂಗಲ್‌ನಲ್ಲಿ ಕೇವ್ ಎನ್ ಡೈನ್ ಬಗ್ಗೆ ಅತಿ ಹೆಚ್ಚು ಪಾಸಿಟಿವ್ ರಿವ್ಯೂಗಳೇ ಬಂದಿವೆ.
ರಾಜೇಶ್ ಕುಮಾರ್ ಎಂಬ ಜಯನಗರದ ವಾಸಿ ʻಈ ಹೊಟೇಲ್ ಕುಟುಂಬ ಮತ್ತು ಮಕ್ಕಳೊಂದಿಗೆ ಹೋಗಲು ಇದು ಬೆಸ್ಟ್ ಪ್ಲೇಸ್. ಗುಹೆಯ ವಾತಾವರಣ, ಲೈಟಿಂಗ್, ಹೊರಗಡೆ ಕಾವಲುಗಾರರ ಪೋಷಾಕಿನಲ್ಲಿ ನಿಂತು ಸ್ವಾಗತಿಸುವ ಪರಿ ಇವೆಲ್ಲವೂ ಮಕ್ಕಳಿಗೆ ಹೊಸ ಲೋಕಕ್ಕೆ ಬಂದಂತೆ ಅನಿಸುತ್ತದೆ. ಕೇವ್ ಎನ್ ಡೈನ್ ಎಂಟ್ರಿ ಆಗುವಾಗ ಸ್ಕೇರಿ ಹೌಸ್‌ಗೆ ಹೋಗುತ್ತಿದ್ದೇವೇನೋ ಅನಿಸಿದರೂ, ಇಲ್ಲಿ ಭಯದ ವಾತಾವರಣ ಇಲ್ಲ. ಆಹಾರ ಆತಿಥ್ಯ ಎರಡೂ ಸೊಗಸಾಗಿದೆʼ ಎನ್ನುತ್ತಾರೆ.
ಗೂಗಲ್‌ನಲ್ಲಿ ನೋಡಿ ವೈಟ್ ಫೀಲ್ಡ್ ನಿಂದ ಬಸವೇಶ್ವರ ನಗರದ ತನಕ ಬಂದಿದ್ದ ಸ್ವಾತಿ ದೀಪಕ್ ಹೇಳಿದ್ದು ಹೀಗೆ.- ’ಇಲ್ಲಿನ ಸರ್ವಿಸ್ ತುಂಬಾ ಚೆನ್ನಾಗಿದೆ. ವಾರಾಂತ್ಯದಲ್ಲಿ ಸ್ವಲ್ಪ ಜನದಟ್ಟಣೆ ಇರುತ್ತದೆ, ಆದರೆ ಇಲ್ಲಿ ಕಾಯುವುದು ಕೂಡ ಒಂದು ಒಳ್ಳೆಯ ಅನುಭವವೇ. ಇಲ್ಲಿ ಬಂದವರು ತಂದೂರಿ ಐಟಂಗಳನ್ನು ಮಿಸ್ ಮಾಡಬೇಡಿ!ʼ
ಬೆಂಗಳೂರಿನ ಬಸವೇಶ್ವರನಗರದ ಮುಖ್ಯರಸ್ತೆಯಲ್ಲೇ ಇರುವ ಹೊಟೇಲ್ ಹುಡುಕಲು ಕಷ್ಟವಿಲ್ಲ. ಹೆಸರೇ ಹೇಳುವಂತೆ ಇದು ಡೈನಿಂಗ್ ತಾಣ. ಹೀಗಾಗಿ ಮಧ್ಯಾಹ್ನ ಹನ್ನೆರಡಕ್ಕೆ ತೆರೆಯುವ ರೆಸ್ಟೋರೆಂಟ್ ರಾತ್ರಿ ಹತ್ತೂವರೆ ತನಕ ಗ್ರಾಹಕರಿಗೆ ಸೇವೆ ನೀಡುತ್ತದೆ. ಪಾರ್ಕಿಂಗ್ ವ್ಯವಸ್ಥೆಯೂ ಇರುವುದರಿಂದ ಕಾರ್‌ನಲ್ಲಿ ಹೋಗುವವರಿಗೆ ಸಮಸ್ಯೆ ಇಲ್ಲ.
ಸಿಗ್ನೇಚರ್ ಫುಡ್ಸ್
ಸ್ಟಾರ್ಟರ್ಸ್ (Non-Veg Starters)
ಕೇವ್ ಸ್ಪೆಷಲ್ ಚಿಕನ್ ಕಬಾಬ್
ಚಿಕನ್ ಮಲೈ ಟಿಕ್ಕಾ
ಗಾರ್ಲಿಕ್ ಚಿಕನ್ / ಪೆಪ್ಪರ್ ಚಿಕನ್
ಮೇನ್ ಕೋರ್ಸ್
ಹೈದರಾಬಾದಿ ದಮ್ ಬಿರಿಯಾನಿ
ಬಟರ್ ಚಿಕನ್ & ಕುಲ್ಚಾ
ವೆಜ್ ವಿಶೇಷಗಳು
ಪನೀರ್ ಟಿಕ್ಕಾ
ಕೇವ್ ಸ್ಪೆಷಲ್ ವೆಜ್ ಪ್ಲ್ಯಾಟರ್
ಕ್ರಿಸ್ಪಿ ಕಾರ್ನ್
ಪಲಾವ್ / ಕಡಾಯಿ ಪನೀರ್
ವಿಳಾಸ:
#332, 2ನೇ ಹಂತ, 3ನೇ ಬ್ಲಾಕ್, ಬಸವೇಶ್ವರ ನಗರ, ಶಾರದಾ ಕಾಲೇಜು ಹತ್ತಿರ, ಬೆಂಗಳೂರು - 560079.