Tuesday, August 19, 2025
Tuesday, August 19, 2025

ಸಿಂಹವಾಹಿನಿ ಕಾಳಿಯ ರುದ್ರನರ್ತನ ದುರ್ಗೆಯ ವಾಹನ ಹುಲಿಗಳ ಅಭಯಾರಣ್ಯ!

ದಾಂಡೇಲಿ ಬರೀ ಒಂದು ಊರಲ್ಲ. ಇದು ಕಾಡಿನ ನಡುವೆ ಇರುವ ಒಂದು ಸ್ವರ್ಗ. ಅಲ್ಲಿ ಕಾಲಿಟ್ಟಲ್ಲೆಲ್ಲ ಹೊಸತನ. ಅದರ ಜತೆಗೆ ಕಾಳಿ ನದಿಯ ರಭಸ. ನದಿಯೂ ನಮ್ಮ ಜತೆಯಲ್ಲಿ ಬರಬಹುದೇನೋ ಎಂಬಷ್ಟು ನೋಡಿದ್ದೆಲ್ಲ ಪ್ರಕೃತಿ. ಆ ಪ್ರಕೃತಿಯನ್ನು ಅನುಭವಿಸಲೆಂದೇ ದೇಶದ ಹಲವಾರು ಕಡೆಗಳಿಂದ ಜನ ಬರುತ್ತಿರುತ್ತಾರೆ. ಸರ್ವ ಋತುಗಳಲ್ಲೂ ಪ್ರವಾಸಿಗರನ್ನು ಕೈಬೀಸಿ ಕರೆಯುವ ಸ್ವರ್ಗಸದೃಶ ದಾಂಡೇಲಿಯ ಪರಿಚಯ ಇಲ್ಲಿದೆ..

ಮಳೆಗಾಲ ಬಂತು. ಇಷ್ಟು ದಿನ ನೀರಿಗೆ ಬಾಯ್ಬಿಟ್ಟಿದ್ದ ಭೂಮಿಗೆ ನೀರಿನ ಅಭಿಷೇಕವಾಗಿ ಗಿಡ ಮರಗಳಿಗಳಿಂದ ಪುಷ್ಪಾಚನೆಯೂ ಆಗಿರುತ್ತದೆ. ಇತ್ತೀಚೆಗೆ ನಾವೆಲ್ಲ ಯಾವ ಋತುಗಳನ್ನೂ ಸಹಿಸುತ್ತಿಲ್ಲ. ಜಾಸ್ತಿ ಬಿಸಿಲಿದ್ದರೆ, “ಏನ್‌ ಹಾಳಾದ ಬಿಸಿಲಪ್ಪ! ಒಂದ್‌ ಹನಿಯಾದರೂ ಮಳೆ ಬಾರಬಾರದಾ?” ಅಂತ ಆಕಾಶ ನೋಡಿ ಹೇಳುತ್ತೇವೆ. ಮಳೆ ಬರುವುದಕ್ಕೆ ಶುರುವಾಯಿತೆಂದರೆ ಮತ್ತೊಂದು ಹೊಸ ವರಾತ ಶುರುಮಾಡಿಕೊಳ್ಳುತ್ತೇವೆ. ಅದು ಹೇಗೆಂದರೆ, “ ಇಷ್ಟೊಂದೆಲ್ಲ ಮಳೆ ಬಿದ್ದರೆ ಹೇಗೆ? ಮನೇಲಿ ಬಟ್ಟೆ ಬೇರೆ ಒಣಗುತ್ತಿಲ್ಲ, ಕಚೇರಿಗೆ ಹೋಗಲು ಸಮಯವಾದರೂ ಮಳೆ ನಿಲ್ಲುತ್ತಿಲ್ಲ! ಇದೊಂದು ಥರ ಕಷ್ಟ ಕಷ್ಟ!” ಅಂತ ಹೇಳಿಯೋ, ಸಾಮಾನ್ಯವಾಗಿ ರಸ್ತೆಯಲ್ಲಿ ಎಲ್ಲೋ ಹೊರಟಿದ್ದಾಗ ದಿಢೀರನೆ ಮಳೆ ಬಂದರೆ, “ಥೋ, ನಾನ್‌ ಮನೆಗೆ ಸೇರುವರೆಗಾದರೂ ಮಳೆ ಸಮಯ ಕೊಡಬಾರದಿತ್ತಾ? ಬಟ್ಟೆಯೆಲ್ಲ ಹಸಿಯಾಯ್ತು ಛೇ!” ಅಂತ ಅದೇ ಆಕಾಶದ ಕಡೆ ಮುಖಮಾಡಿ ನೋಡುತ್ತೇವೆ.

ಕೆಲವು ಜನರಿಗೆ ಮಳೆ ಬಂದಾಗ ಚಹಾ ಮತ್ತು ಬೋಂಡಾ ಬಜ್ಜಿ ಬೇಕು ಅನ್ನಿಸಿದರೆ, ಮತ್ತು ಕೆಲವರಿಗೆ ಬೇರೆ ಏನೋ ಬೇಕಾಗುತ್ತದೆ. ಮಳೆ ಬಂದಾಗ ಕೆಲವರಿಗೆ ಪುಸ್ತಕ ಓದುವ ಮನಸಾದರೆ, ಇನ್ನೂ ಕೆಲವರಿಗೆ ಸಿನಿಮಾ ನೋಡುವ ಹುಚ್ಚು. ಏನೂ ಕೆಲಸವಿಲ್ಲದವರು ನಿದ್ದೆಯೂ ಮಾಡಬಹುದು. ಅದೆಲ್ಲ ಅವರಿಚ್ಛೆ!

ಅಷ್ಟಕ್ಕೂ ನಾವು ಪರಿಸರ ಮತ್ತು ಪ್ರಕೃತಿಯನ್ನು Taken For Granted ಮಾಡಿಕೊಂಡಿದ್ದೇವೆ. ನಮ್ಮ ಮನಸು ಹಂಬಲಿಸಿದಾಗ ಮಳೆ ಬರಬೇಕು, ಇಷ್ಟವಿಲ್ಲದಾಗ ಮಳೆ ಬರಕೂಡದು. ನಮಗೆ ಚಳಿ ಜಾಸ್ತಿ ಆದಾಗ ಬಿಸಿಲು ಬರಬೇಕು, ಸ್ವಲ್ಪ ಬೆವರುವುದಕ್ಕೆ ಶುರು ಮಾಡಿದ ಮೇಲೆ ಬಿಸಿಲು ಮರೆಯಾಗಿಬಿಡಬೇಕು!

ನಾವೆಲ್ಲ ಹೀಗಿದ್ದಾಗ, ನಮಗೆ ಬೇಕಿದ್ದರೂ ಬೇಡವಾಗಿದ್ದರೂ ಯಾರ ಆಜ್ಞೆಗೂ ಕಾಯದೆ ಮಳೆಗಾಲ ಬಂತು. ಮಳೆಯಿಂದ ಕೆಲವು ನಗರಗಳಿಗೆ ಪ್ರೋಕ್ಷಣೆಯಾದರೆ, ಕಾಡುಗಳಿಗಂತೂ ಹಬ್ಬದ ಸಮಯ. ಮೊದಲಿಗಿಂತಲೂ ತುಸು ನಿಧಾನವಾಗಿ ಹುಟ್ಟುವ ಸೂರ್ಯ, ಸೂರ್ಯನಿಗೆ ಸಲಾಮು ಹೊಡೆಯಲು ನಿಲ್ಲುವ ಎಲ್ಲ ಪಕ್ಷಿಪ್ರಾಣಿಗಳು. ಅದೆಲ್ಲ ಹೇಗಿರುತ್ತದೆಂದರೆ, ಶಾಲೆ ಬಿಟ್ಟ ತಕ್ಷಣ ಮಕ್ಕಳೆಲ್ಲ ಕೂಗಾಡುತ್ತಾ, ಓಡಾಡುತ್ತಾ ಮನೆಯ ಕಡೆಗೆ ಹೋದಹಾಗೆ. ಹಸಿವಿನಿಂದ ನರಳುತ್ತಿದ್ದವನಿಗೆ ಮೃಷ್ಠಾನ್ನ ಭೋಜನ ಸಿಕ್ಕಹಾಗೆ. ನೆಟ್‌ವರ್ಕ್‌ ಸಿಗದ ಜಾಗದಲ್ಲಿ, ಗರ್ಲ್‌ಫ್ರೆಂಡ್‌ ವಿಡಿಯೋ ಕಾಲ್‌ ಮಾಡಿದ ಹಾಗೆ! ಅದೊಂದು ಅವರ್ಣನೀಯ ಸಂಗತಿ. ಬಿಡಿ, ಕೆಲವನ್ನು ಅನುಭವಿಸಲೂ ಟೇಸ್ಟ್‌ ಬೇಕು!

kali

ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ ಎಂದು ನಡೆಯುವ ಕಾಡಿನ ಪ್ರಜೆಗಳ ಈ ಸಂಭ್ರಮವನ್ನು ನೋಡೋದಕ್ಕೆ ಎಲ್ಲರಿಗೂ ಮನಸಿರುತ್ತದೆ. ಅವು ನಮ್ಮನ್ನು ಮೆಚ್ಚಿಸಲು ಹಾಗೆ ಸಂಭ್ರಮ ಪಡದಿದ್ದರೂ ಅವುಗಳನ್ನು ನೋಡಿ ನಾವೆಲ್ಲ ಮೆಚ್ಚಿಕೊಳ್ಳುತ್ತೇವೆ. ಆ ಪ್ರಾಣಿ ಪಕ್ಷಿಗಳೂ ಪ್ರಕೃತಿಯೇ. ನಮ್ಮ ಕಾಸಿಗೆ ಅಂತಾನೋ, ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ಸ್‌, ಶೇರ್ಸ್‌ ಸಿಗುತ್ತದೆ ಅಂತಾನೋ ಖುಷಿ ಪಡಲ್ಲ. ಆದರೆ ಅದನ್ನೆಲ್ಲ ನೋಡಿದಾಗ ನಮಗೆಲ್ಲ ಖುಷಿ, ಹುಮ್ಮಸ್ಸು, ಮನಸು ಹಗುರವಾಗಿ, ಪ್ರಕೃತಿ ಎಷ್ಟೊಂದು ಚೆನ್ನಾಗಿದೆ ಎಂದು ಅನಿಸದೇ ಇರದು.

ಅಂಥದ್ದೇ ಒಂದು ಸ್ಥಳದೊಳಗೆ ಇಂದು ನಿಮ್ಮನ್ನು ಸುತ್ತಾಡಿಸಲಿದೆ ಈ ಲೇಖನ.

ಅದು ದಾಂಡೇಲಿ. ದಾಂಡೇಲಿ ಬರೀ ಒಂದು ಊರಲ್ಲ. ಇದು ಕಾಡಿನ ನಡುವೆ ಇರುವ ಒಂದು ಸ್ವರ್ಗ. ಅಲ್ಲಿ ಕಾಲಿಟ್ಟಲ್ಲೆಲ್ಲ ಹೊಸತನ. ಅದರ ಜತೆಗೆ ಕಾಳಿ ನದಿಯ ರಭಸ. ನದಿಯೂ ನಮ್ಮ ಜತೆಯಲ್ಲಿ ಬರಬಹುದೇನೋ ಎಂಬಷ್ಟು ನೋಡಿದ್ದೆಲ್ಲ ಪ್ರಕೃತಿ. ಆ ಪ್ರಕೃತಿಯನ್ನು ಅನುಭವಿಸಲೆಂದೇ ದೇಶದ ಹಲವಾರು ಕಡೆಗಳಿಂದ ಜನ ಬರುತ್ತಿರುತ್ತಾರೆ. ದಾಂಡೇಲಿಗೆ ಹೋಗೋಕೆ ನಾವು ಋತುಗಳ ಬಗ್ಗೆ ಜಾಸ್ತಿ ಯೋಚನೆಯೂ ಮಾಡಬೇಕಿಲ್ಲ. ಏಕೆಂದರೆ ಅದು ಸರ್ವ ಋತುಗಳಲ್ಲೂ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಸರ್ವಋತುವೂ ಅಲ್ಲಿ ಸ್ವರ್ಗಸದೃಶವಾಗಿಯೇ ಇರುತ್ತದೆ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ!

ಸರಿ, ಈಗ ದಾಂಡೇಲಿಗೆ ಹೊರಡೋಕೆ ಸಿದ್ಧರಾದ ಮೇಲೆ, ಅಲ್ಲಿ ಉಳಿಯುವ ಬಗೆ ಹೇಗೆ? ಯಾವ ರೆಸಾರ್ಟ್‌ ಬೆಸ್ಟ್‌ ಎಂದು ಕೇಳಿದರೆ, ಜಂಗಲ್‌ ಲಾಡ್ಜ್‌ ರೆಸಾರ್ಟ್‌ಗಿಂತ ಯಾವುದು ಚೆನ್ನಾಗಿರುತ್ತೆ ಹೇಳಿ? ಅಲ್ಲಿ ಜೇಬಿನ ಆರೋಗ್ಯ ಕಾಪಾಡುವಂಥ ದರ, ಪ್ರತಿಕ್ಷಣವೂ ಅನುಭವಿಸಬಹುದಾದ ambience, ಹೊಟ್ಟೆ ಹಿಗ್ಗುವಂಥ ಊಟ, ಮನೆಯವರೇ ನೋಡಿಕೊಳ್ಳುವಂಥ ಆತಿಥ್ಯ, ಎರಡೆರಡು ಬಾರಿ ಕಾಡಿನಲ್ಲಿ ಸಫಾರಿ! ಸಫಾರಿಗೆ ಹೋದವರನ್ನು ಬೆರಗುಗಣ್ಣಿನಿಂದ ಸ್ವಾಗತಿಸಲು ಜಿಂಕೆ, ಕಾಡೆಮ್ಮೆ, ಕರಡಿ, ಹಾರ್ನ್‌ ಬಿಲ್‌ಗಳು, ಹಳದಿ ಪಾದದ ಪಾರಿವಾಳಗಳು, ಲಂಗೂರ್‌ಗಳು, ನವಿಲುಗಳು ಸೇರಿದಂತೆ ಹತ್ತು ಹಲವು ಪ್ರಾಣಿ ಪಕ್ಷಿಗಳು ನೀವು ಹೋಗೋ ಹಾದಿಯಲ್ಲಿ ನಿಮಗೆ “ಹಾಯ್‌” ಹೇಳುವುದಕ್ಕೆ ನಿಂತಿರುತ್ತವೆ. ಅದಷ್ಟೇ ಅಲ್ಲ, ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕೆಲವೊಮ್ಮೆ ಅಪರೂಪದ ಕರಿಚಿರತೆಯೂ ಕಾಣಬಹುದು.

ಕಾಳಿ ಅಡ್ವೆಂಚರ್‌ ಕ್ಯಾಂಪ್‌ ಏಕೆ?

ದಾಂಡೇಲಿಯ ಕಾಡು ಅಂದ್ರೆ ಅದು ಭೂತಾಯಿ ಸ್ವಲ್ಪ ಹೆಚ್ಚೇ ಸಮಯ ತೆಗೆದುಕೊಂಡು ಕೆತ್ತಿರುವ ರೀತಿಯಲ್ಲಿರುವ ಭೂಪ್ರದೇಶ. ಇಲ್ಲಿ ಕಮರಿಗಳು, ಕಣಿವೆಗಳು, ದಟ್ಟಮರಗಳ ಕಾಡು... ಕಣ್ಣು ಹಾಯಿಸಿದಷ್ಟೂ ದಟ್ಟ ಹಸಿರು. ಇದರ ನಡುವೆ ಯಾವ ಅಡೆತಡೆ ಇಲ್ಲದೆ ಹರಿದು ಧುಮ್ಮಿಕ್ಕುವ ಹಾಲ್ನೊರೆಯ ಕಾಳಿ ನದಿ. ಇಂಥ ಸ್ಥಳದಲ್ಲೇ ಕಾಳಿ ಅಡ್ವೆಂಚರ್‌ ಕ್ಯಾಂಪ್‌ ಇರುವುದು. ಇದೇ ಕಾಳಿ ನದಿಯ ದಂಡೆಯ ಮೇಲಿದೆ ವಿಶಾಲವಾದ, ಕಣ್ಣು ಕುಕ್ಕುವ ಬಂಗಲೆ. ಈ ಕಾಡಿನಲ್ಲಿರುವ ಕ್ಯಾಂಪ್‌ಗಳು ನಿಸರ್ಗದೊಳಗೆ ನಮಗೇ ಗೊತ್ತಿಲ್ಲದೆ ನಾವು ಕಳೆದು ಹೋಗುವಂತೆ ಮಾಡುತ್ತವೆ. ಅಂದರೆ, ಇಲ್ಲಿನ ಪರಿಸರ ಆ ಮಟ್ಟಿಗೆ ಮೈಮರೆಸಿಬಿಡುತ್ತದೆ. ಕಾಡಿನಲ್ಲಿ ಒಂದು ಸಣ್ಣ ವಾಕಿಂಗ್‌ ಮಾಡಿದರೆ ಸಾಕು, ನಾವೇಕೆ ಕಾಳಿ ಅಡ್ವೆಂಚರ್‌ ಕ್ಯಾಂಪ್‌ ಆರಿಸಿಕೊಂಡಿದ್ದು ಎಂದು ಗೊತ್ತಾಗುತ್ತದೆ. ಸಿನಿಮಾ ಭಾಷೆಯಲ್ಲಿ ಹೇಳೋದಾದ್ರೆ ಈ ಕ್ಯಾಂಪ್‌ನಲ್ಲಿರುವ ಎಲ್ಲ ಕ್ಷಣಗಳೂ ಪಕ್ಕಾ ಪೈಸಾ ವಸೂಲ್‌ ಮೊಮೆಂಟ್ಸ್. ಇಂಗ್ಲಿಷಿನಲ್ಲಿ ’ಅಡ್ರೆನಲಿನ್‌ ರಷ್‌’ ಅಂತಾರಲ್ಲ, ಹಾಗಂದ್ರೇನು ಅಂತ ಅರ್ಥ ಆಗಬೇಕಂದ್ರ ಒಮ್ಮೆ ಕಾಳಿ ಅಡ್ವೆಂಚರ್ ಕ್ಯಾಂಪ್ ಗೆ ಬರಲೇಬೇಕು.

ಇಲ್ಲಿನ ಅನುಭವಗಳು

ಜೆಎಲ್‌ಆರ್‌ ಕಾಳಿ ಅಡ್ವೆಂಚರ್‌ ಕ್ಯಾಂಪ್‌ ಬರೀ ಸಾಹಸಪ್ರಿಯರಿಗೆ ಮಾತ್ರವಲ್ಲ. ಪರಿಸರ ಪ್ರೇಮಿಗಳಿಗೂ ನೆಚ್ಚಿನ ತಾಣ. ಇಲ್ಲಿನ ಬಿಳಿ ಹಾಲ್ನೊರೆಯ ನೀರು ರಿವರ್ ರ‍್ಯಾಫ್ಟಿಂಗ್ ಗೆ ಆ ದೇವರೇ ಹೇಳಿ ಮಾಡಿಸಿದಂತಿದೆ. ಹಾಗಂತ ಇಲ್ಲಿ ಬರೀ ರಿವರ್‌ ರ‍್ಯಾಫ್ಟಿಂಗ್ ಮಾತ್ರ ಇರೋದಾ? ಉಹೂಂ. ಇರಿ ಏನೇನಿದೆ ಅನ್ನೋ ಪಟ್ಟಿಯನ್ನೇ ಕೊಡ್ತೀನಿ. ಕಯಾಕಿಂಗ್‌, ತೆಪ್ಪದ ಸವಾರಿ, ಪಕ್ಷಿ ವೀಕ್ಷಣೆ, ನಿಸರ್ಗದ ನಡೆ, ಜಂಗಲ್‌ ಸಫಾರಿ, ಪರಿಸರ ವೀಕ್ಷಣೆ ಇವೆಲ್ಲವೂ ನಿಮ್ಮ ಪ್ಯಾಕೇಜ್ ನೊಳಗೆ ಬರೋ ಖುಷಿಗಳು.

ಅಂದ ಹಾಗೆ ಈ ಕಾಳಿ ನದಿ ಸ್ವಲ್ಪ ವಿಚಿತ್ರ ಸ್ವಭಾವದವಳು. ಅವಳು ಬೆಟ್ಟ-ಗುಡ್ಡಗಳಲ್ಲೂ ಹರಿಯುತ್ತಾಳೆ, ಕಾಡಲ್ಲೂ ಹರಿಯುತ್ತಾಳೆ. ಜಾಗ ಸಿಕ್ಕಲ್ಲೆಲ್ಲ ದಾರಿ ಮಾಡಿಕೊಂಡು ಹರಿದು ಆ ಪ್ರದೇಶವನ್ನು ಸಿಂಗಾರಗೊಳಿಸಿದಾಕೆ ಈ ಕಾಳಿ ನದಿ. ನಾವು ಒಂದು ಕಡೆ ತೆಪ್ಪದಲ್ಲಿ ಮೊಸಳೆಗಳನ್ನು ನೋಡುತ್ತಾ, ಪಕ್ಷಿಗಳನ್ನು ನೋಡುತ್ತಾ ಸಾಗಿದರೆ, ಮತ್ತೊಂದೆಡೆ ರಬ್ಬರ್‌ನ ದೋಣಿಗಳಲ್ಲಿ ಕುಳಿತು ರಭಸವಾಗಿ ಉಕ್ಕುವ ಅಲೆಗಳ ವಿರುದ್ಧವಾಗಿ ಕೈಯಲ್ಲಿ ಹುಟ್ಟು ಹಿಡಿದು ಹೋರಾಡಬೇಕಾಗುತ್ತದೆ.

ಸಫಾರಿಯಲ್ಲಿ ಸವಾರಿ

ಈ ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯ ಯಾರ ಕೈಗೂ ಸಿಗದ ಕರಿಚಿರತೆಗಳ ಮನೆ. ಇಲ್ಲಿ ಅತಿಥಿಗಳನ್ನು ಜೀಪಿನಲ್ಲಿ ಕರೆದುಕೊಂಡು ಕಾಡಿನ ಸಫಾರಿಗೆ ಕೊಂಡೊಯ್ಯುತ್ತಾರೆ. ಆ ಸಫಾರಿ ಸುಮ್ಮನೆ ಮುಗಿಯುತ್ತೆ ಅಂದುಕೊಳ್ಳುತ್ತೀರಾ? ಇಲ್ಲ! ಅಲ್ಲಿ ಕಾಡೆಮ್ಮೆ, ಜಿಂಕೆ, ಸೋಮಾರಿ ಕರಡಿ, ಕಾಡುಕುರಿ, ಹಾರ್ನ್‌ಬಿಲ್‌, ಹಳದಿ ಪಾದದ ಪಾರಿವಾಳ, ಗರಿಗೆದರಿ ಕುಣಿಯುವ ನವಿಲು, ಹಾವು, ಗಿಡುಗಗಳು ಕಾಣಿಸುತ್ತವೆ.

safari

ಸೈಲೆಂಟಾಗಿದ್ರೆ ಬಹುಮಾನ!

ಹೌದು. ನಿಮ್ಮ ಸದ್ದೇ ಪ್ರಾಣಿಪಕ್ಷಿಗಳ ಶತ್ರು. ನೀವು ಶಾಂತವಾಗಿದ್ದರೆ, ನಿಶ್ಶಬ್ದದಿಂದಿದ್ದರೆ ಗೊತ್ತಿರದ ಎಷ್ಟೋ ಪ್ರಾಣಿಪಕ್ಷಿಗಳು ಕಾಣಸಿಗುತ್ತವೆ. ಎಲ್ಲ ಪ್ರಾಣಿ ಪಕ್ಷಿಗಳ ಬಗ್ಗೆ ನಿಮಗೆ ತಿಳಿದಿರಲೇಬೇಕು ಅಂತಾಗ್ಲೀ, ಅಲ್ಲಿಗೆ ಹೊರಡುವ ಮುನ್ನ ಪ್ರಾಣಿ ಪಕ್ಷಿಗಳ ಅಧ್ಯಯನ ಮಾಡಿಕೊಂಡಿರಲೇಬೇಕು ಎಂದಾಗ್ಲೀ ಇಲ್ಲ. ಏಕೆಂದರೆ, ನಿಮ್ಮ ಜೊತೆ ಸಫಾರಿಯಲ್ಲಿ ಒಬ್ಬ ಪರಿಸರ ತಜ್ಞ ಅಥವಾ ಆ ಕಾಡಿನ ಬಗ್ಗೆ, ಪ್ರಾಣಿಗಳ ಬಗ್ಗೆ ತಿಳಿದುಕೊಂಡ ಗೈಡ್ ಇದ್ದೇ ಇರುತ್ತಾರೆ. ಅವರು ಇಂಚಿಂಚು ಮಾಹಿತಿಗಳನ್ನು ನಿಮಗೆ ಲೈವ್ ನಲ್ಲಿ ತಿಳಿಸಿಕೊಡ್ತಾರೆ. ಗೂಗಲ್ ಮತ್ತು ವಿಕಿಪೀಡಿಯಾಗೂ ಗೊತ್ತಿರದ ಹಲವು ಮಾಹಿತಿಗಳು ನಿಮಗೆ ಇಲ್ಲಿನ ಗೈಡ್ ಗಳಿಂದ ಸಿಗುತ್ತದೆ.

ಈ ಸಂಜೆ ಬೇಕಾಗಿದೆ..!

ಹಗಲು ಇಷ್ಟೆಲ್ಲ ಎಂಜಾಯ್ ಮಾಡಿದ ನಿಮಗೆ ಸಂಜೆ ಆಗ್ತಾ ಇದ್ರೆ ಈ ಸಂಜೆ ಯಾಕಾಗಿದೆ ಅಂತ ಬೇಸರವಾಗಬಹುದು. ಆದರೆ ಸಂಜೆಯಾಗುತ್ತಾ ಇದ್ದ ಹಾಗೆ ಜೆ ಎಲ್ ಆರ್ ಇನ್ನೊಂದು ಅದ್ಭುತ ಲೋಕವನ್ನು ಪರಿಚಯಿಸುತ್ತದೆ. ಈ ಸಂಜೆ ಬೇಕಾಗಿದೆ ಎಂದು ಉದ್ಗರಿಸುವಂತೆ ಮಾಡುತ್ತದೆ. ಇಲ್ಲಿನ ಕತ್ತಲು, ತಿಳಿಬೆಳಕು, ಕಾಡುಮರಗಳ ನಡುವಿಂದ ತೂರಿಬರುವ ಚಂದ್ರನ ಕಿರುಪ್ರಕಾಶ ಎಲ್ಲವೂ ಒಂದು ಮೂಡ್ ಕ್ರಿಯೇಟ್ ಮಾಡಿಕೊಡುತ್ತದೆ. ನಿಮ್ಮಿಷ್ಟದಂತೆ ಸಮಯ ಕಳೆಯಲು ಬೇಕಾದ ಎಲ್ಲವೂ ಇಲ್ಲಿ ಲಭ್ಯ. ಮಧುಪಾನ ಪ್ರಿಯರಿಗೆ ಹಿತಮಿತವಾದ ಪಾರ್ಟಿ ಮಾಡುವವರಿಗೆ ಬಾರ್‌ ಸೌಲಭ್ಯ ಇದೆ. ಗೋಲ್‌ ಘರ್‌ನಲ್ಲಿ ರಾತ್ರಿಯ ಊಟಕ್ಕಾಗಿ ಭಾರತೀಯ ಶೈಲಿಯ ಪದಾರ್ಥಗಳು ಸಿದ್ಧವಾಗಿರುತ್ತವೆ. ಡಿಮ್ಯಾಂಡ್ ಮಾಡಿದರೆ ಚೈನೀಸ್‌ ಅಥವಾ ಕಾಂಟಿನೆಂಟಲ್‌ ಶೈಲಿಯ ಆಹಾರವೂ ಪ್ರೀತಿಯಿಂದ ಸಿದ್ಧವಾಗುತ್ತದೆ.

ಸ್ಪೆಷಲ್ ರೂಮ್ ಪ್ಯಾಕೇಜ್

ಆನ್‌ಲೈನ್ ಬುಕಿಂಗ್ ಮಾಡಿದ್ರೆ ಡಿಸ್ಕೌಂಟ್!

ದರ ವಿವರ: ಪ್ರತಿ ವ್ಯಕ್ತಿಗೆ, ಹಂಚಿಕೆಯ ಆಧಾರದ ಮೇಲೆ, ಒಂದು ರಾತ್ರಿಗೆ.

ಪ್ಯಾಕೇಜಲ್ಲಿ ಏನೇನಿದೆ?

  • ಜೆ ಎಲ್ ಆರ್ ನಲ್ಲಿ ವಾಸ್ತವ್ಯ
  • ಲಂಚ್, ದಿನ್ನರ್ ಮತ್ತು ಬ್ರೇಕ್‌ಫಾಸ್ಟ್‌
  • ಕಾಳಿ ಟೈಗರ್ ರಿಸರ್ವ್‌ಗೆ ಜೀಪ್ ಸಫಾರಿ
  • ತೊಟ್ಟಿ ಸವಾರಿ (Coracle Ride), ಪರಿಸರದಲ್ಲಿ ನಡಿಗೆ (Nature Walk)
  • ವೈಟ್ ವಾಟರ್ ರಾಫ್ಟಿಂಗ್

ಸ್ಟ್ಯಾಂಡರ್ಡ್ ಪ್ಯಾಕೇಜ್

ದರ ವಿವರ:
ಪ್ರತಿ ವ್ಯಕ್ತಿಗೆ, ಶೇರಿಂಗ್ ಆಧಾರದ ಮೇಲೆ, ಒಂದು ರಾತ್ರಿ.

ಪ್ಯಾಕೇಜ್ :

  • ವಾಸ್ತವ್ಯ
  • ಲಂಚ್, ಡಿನ್ನರ್, ಬ್ರೇಕ್‌ಫಾಸ್ಟ್
  • ಜೀಪ್ ಸಫಾರಿ (KTR)
  • ತೊಟ್ಟಿ ಸವಾರಿ (Coracle Ride), ಪರಿಸರದಲ್ಲಿ ನಡಿಗೆ (Nature Walk)
  • ವೈಟ್ ವಾಟರ್ ರಾಫ್ಟಿಂಗ್

ಟೆಂಟ್ ಪ್ಯಾಕೇಜ್

ದರ ವಿವರ:
ಹಂಚಿಕೆ ಆಧಾರದ ಮೇಲೆ ಪ್ರತಿಯೊಬ್ಬರಿಗೆ. ಒಬ್ಬರಿದ್ದರೆ ಶೇ.30 ರಷ್ಟು ಹೆಚ್ಚು.
ಪ್ಯಾಕೇಜ್ ಒಳಗೊಂಡಿದ್ದು:

  • ಟೆಂಟ್ ಕಾಟೇಜ್‌ನಲ್ಲಿ ವಾಸ್ತವ್ಯ
  • ಊಟ, ನಡಿಗೆ, ತೊಟ್ಟಿ ಸವಾರಿ, ಸಫಾರಿ
  • ಅರಣ್ಯ ಪ್ರವೇಶ ಶುಲ್ಕ
kali adventure

ರಿವರ್ ವ್ಯೂ ಟೆಂಟ್ ಪ್ಯಾಕೇಜ್

ನದಿಯ ಪಕ್ಕದ ಟೆಂಟ್ ಹಾಕಿ ಇಡೀ ದಿನ ನದಿ ಹೇಗೆ ಇರುತ್ತೆ, ಅಲ್ಲಿನ ಪರಿಸರ ಹೇಗಿರುತ್ತದೆ ಅನ್ನೋದನ್ನು ಸವಿಯುವ ಅವಕಾಶ!

ದರ ವಿವರ:
ಒಬ್ಬರಿಗೆ, ಹಂಚಿಕೆ ಆಧಾರದ ಮೇಲೆ. ಒಬ್ಬರಿದ್ದರೆ ಶೇ.30 ರಷ್ಟು ಹೆಚ್ಚು.
ಪ್ಯಾಕೇಜ್ ಒಳಗೊಂಡಿದ್ದು:

  • ನದಿಯ ನೋಟವಿರುವ ಟೆಂಟ್ ಕಾಟೇಜ್
  • ಲಂಚ್, ಡಿನ್ನರ್, ಬ್ರೇಕ್‌ಫಾಸ್ಟ್
  • ಜೀಪ್ ಸಫಾರಿ (KTR)
  • ತೊಟ್ಟಿ ಸವಾರಿ (Coracle Ride), ಪರಿಸರದಲ್ಲಿ ನಡಿಗೆ (Nature Walk)

ಡಾರ್ಮೆಟ್ರಿ ಪ್ಯಾಕೇಜ್

ವಿವರ:

  • ಡಾರ್ಮಿಟರಿಯಲ್ಲಿ ಹಂಚಿಕೆ ವಾಸ್ತವ್ಯ
  • ಲಂಚ್‌, ಡಿನ್ನರ್‌, ಬ್ರೇಕ್‌ಫಾಸ್ಟ್‌

ರಾಫ್ಟಿಂಗ್ ಪ್ಯಾಕೇಜ್

ದರ ಆರಂಭ: ರು.1500/-

  • ಕಾಳಿ ನದಿಯಲ್ಲಿ ವೈಟ್ ವಾಟರ್ ರಾಫ್ಟಿಂಗ್
  • ಟ್ರೇನ್ಡ್ ಗೈಡ್, ಅರಣ್ಯ ಪ್ರವೇಶ ಶುಲ್ಕ
  • ಸೀಸನ್: ಅಕ್ಟೋಬರ್ – ಮೇ
  • ರಿಪೋರ್ಟ್ ಸಮಯ: 6:30am, 10:30am, 1:30pm

ಹೋಗುವುದು ಹೇಗೆ?

ರಸ್ತೆಮಾರ್ಗದಲ್ಲಿ (By Road)

ಬೆಂಗಳೂರು ನಗರದಿಂದ ಈ ರೆಸಾರ್ಟ್ ಸುಮಾರು 473 ಕಿಮೀ ದೂರದಲ್ಲಿದೆ.
ಮುಂಬೈನಿಂದ 559 ಕಿಮೀ.

ರೈಲು ಮಾರ್ಗದಲ್ಲಿ

ರೈಲುಮಾರ್ಗದಲ್ಲಿ (By Rail)

ಹತ್ತಿರದ ರೈಲು ನಿಲ್ದಾಣವೆಂದರೆ ಹುಬ್ಬಳ್ಳಿ ಜಂಕ್ಷನ್, ಇದು ಪ್ರಮುಖ ನಗರಗಳಿಗೆ ರೈಲು ಸಂಪರ್ಕ ಹೊಂದಿದೆ.

ವಿಮಾನಮಾರ್ಗದಲ್ಲಿ

ಹತ್ತಿರದ ವಿಮಾನ ನಿಲ್ದಾಣ ಎಂದರೆ ಡಾಬೋಲಿಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Dabolim Airport) – ಭಾರತದಲ್ಲಿನ ಪ್ರಮುಖ ನಗರಗಳಿಗೆ ವಿಮಾನ ಸಂಪರ್ಕವಿದೆ.

ವಿಳಾಸ ಮತ್ತು ಸಂಪರ್ಕ

ಕೋಗಿಲಬನ್, ಹಳಿಯಾಳ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ,
ದಾಂಡೇಲಿ – 581325, ಕರ್ನಾಟಕ

ರಾಫ್ಟಿಂಗ್ ಬುಕ್ಕಿಂಗ್: 📲 94495 99765

ದೂರವಾಣಿ ಸಂಖ್ಯೆ: ☎️ 08284–230266

ಮ್ಯಾನೇಜರ್: ಶ್ರೀ ಮೋಹನ್ ಬಾಬು

ಮೊಬೈಲ್: 94495 97871

ಇಮೇಲ್ ಐಡಿ: info@junglelodges.com

ಹೆಚ್ಚಿನ ಮಾಹಿತಿಗಾಗಿ: junglelodges.com

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ