ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಸಮೀಪದ ಕೈಮರ ಗ್ರಾಮದಲ್ಲಿರುವ ʻತೋಟದ ಹಳ್ಳಿ ಹೋಮ್‌ ಸ್ಟೇʼ ಎಂಥವರನ್ನೂ ಬೆರಗುಗೊಳಿಸುತ್ತದೆ. ಪಶ್ಚಿಮ ಘಟ್ಟದ ಪರ್ವತ ಶ್ರೇಣಿಗಳ ನಡುವೆ ಇರುವ ಈ ಹೋಮ್‌ ಸ್ಟೇ ಕಾಫಿ ಎಸ್ಟೇಟ್‌ ಹಾಗೂ ಕರಿಮೆಣಸಿನ ತೋಟದ ನಡುವೆಯೇ ಇದ್ದು ಸುಮಾರು 75 ಎಕರೆಯ ಹಚ್ಚ ಹಸಿರಿನ ವಾತಾವರಣದಲ್ಲಿ ಮನಸ್ಸಿಗೆ ನೆಮ್ಮದಿಯನ್ನು ನೀಡುವಂತಿದೆ.

ಇದನ್ನೂ ಓದಿ: ಪರಮಾತ್ಮ ಸಿನಿಮಾ ನೋಡಿ ಹೋಮ್‌ಸ್ಟೇ ಕಟ್ಟಿದ MYಸೂರು ಯುವಕ

ಮನೆಯ ಅನುಭವಕ್ಕಿದು ಬೆಸ್ಟ್‌

ನಗರ ಜೀವನದಿಂದ ಬೇಸತ್ತು ಹಳ್ಳಿಯ ವಾತಾವರಣವನ್ನು ಅರಸಿ ಬರುವ ಮಂದಿಗೆ ಇದು ಸೂಕ್ತ ಆಯ್ಕೆಯಾಗಿದ್ದು, ಮನೆಯಲ್ಲೇ ಇರುವ ಅನುಭವವನ್ನು ನೀಡುತ್ತದೆ. ಐ ಆರ್‌ ಪ್ರಕಾಶ್‌ ಹಾಗೂ ಪಲ್ಲವಿ ದಂಪತಿ ಈ ಹೋಮ್‌ ಸ್ಟೇಯನ್ನು ನಿರ್ಮಿಸಿ ಹಸಿರಿನೊಂದಿಗೆ ಪ್ರವಾಸಿಗರನ್ನು ಬೆಸೆಯುವ ಮಹತ್ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಂಪ್ರದಾಯಿಕ ಮಲೆನಾಡು ಶೈಲಿಯಲ್ಲಿ ನಿರ್ಮಾಣವಾಗಿರುವ ಇಲ್ಲಿನ ರೂಮ್‌ಗಳಲ್ಲಿ ಆಂಟಿಕ್‌ ಫೀಲ್‌ ವಿತ್ ಮಾಡರ್ನ್‌ ಕಂಫರ್ಟ್‌ ನಿಮಗೆ ಲಭ್ಯವಾಗಲಿದೆ. ವಿಭಿನ್ನವಾದ ಸುಮಾರು ಐದು ರೂಮ್‌ಗಳಲ್ಲಿ ಅಂದಾಜು 23 ಮಂದಿಗೆ ಉಳಿದುಕೊಳ್ಳುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

Untitled design (55)

ಡಿಜಿಟಲ್‌ ಡೀಟಾಕ್ಸ್‌ ಬೇಕೆನ್ನುವವರಿಗೆ ಇದು ಬಲು ಉತ್ತಮ ಆಯ್ಕೆಯಾಗಿದ್ದು, ಕಾಫಿ ತೋಟದ ನಡುವೆ ಚಿಂತೆ, ಒತ್ತಡಗಳಿಂದ ದೂರವಿರಬಹುದು. ಮಾಲೀಕರಾದ ಐ ಆರ್‌ ಪ್ರಕಾಶ್‌ ಹಾಗೂ ಪಲ್ಲವಿ ದಂಪತಿ ತಮ್ಮ ಆಸಕ್ತಿಯಂತೆ ಸುತ್ತಲೂ ಸುಂದರವಾದ ಹೂದೋಟ, ಬೋನ್ಸಾಯ್‌ ಉದ್ಯಾನವನವನ್ನೇ ನಿರ್ಮಾಣ ಮಾಡಿದ್ದಾರೆ. ಕಾಫಿ ಹಾಗೂ ಕರಿಮೆಣಸು ಕೊಯಿಲಿನ ಸಂದರ್ಭದಲ್ಲಿ ಭೇಟಿ ನೀಡಿದರಂತೂ ಕೃಷಿ ಜೀವನದ ವಿಶೇಷ ಅನುಭವವನ್ನು ಇಲ್ಲಿ ಪಡೆಯಬಹುದು. ಕೃಷಿ ಪ್ರವಾಸೋದ್ಯಮಮಕ್ಕೆ ಇದಕ್ಕಿಂತ ಉತ್ತಮ ಆಯ್ಕೆ ಬೇರೆಲ್ಲೂ ಸಿಗಲಾರದು.

ಎಲ್ಲ ಹೋಮ್‌ಸ್ಟೇಗಳಂತಲ್ಲ, ಇಲ್ಲಿ ದಿನಕ್ಕೆ ಪ್ರತಿ ವ್ಯಕ್ತಿಗೆ ಇಷ್ಟು ಎಂಬ ಲೆಕ್ಕಾಚಾರವಿದೆ. ಅಂದರೆ 3-5 ವರ್ಷದ ಮಗುವಿಗೆ ಪ್ರತಿ ದಿನಕ್ಕೆ 500 ರು, 5-12 ವರ್ಷದ ಮಕ್ಕಳಿಗೆ 1200 ರು. ಹಾಗೂ 12 ವರ್ಷ ಮೇಲ್ಪಟ್ಟವರಿಗೆ 3,750 ರು ನಿಗದಿಪಡಿಸಲಾಗಿದೆ. ಇದರಲ್ಲಿ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ, ಸಂಜೆಯ ಲಘು ಉಪಾಹಾರ ಅಲ್ಲದೆ ರಾತ್ರಿಯ ಊಟವೂ ಸೇರಿಕೊಂಡಿರುತ್ತದೆ.

Untitled design (56)

ರುಚಿಕರವಾದ ಮಲೆನಾಡಿನ ಆಹಾರ

ಚಿಕ್ಕಮಗಳೂರಿಂದ ಸುಮಾರು 10 ಕಿಮೀ ದೂರದಲ್ಲಿ ಮಲೆನಾಡಿನ ಶೈಲಿಯಲ್ಲಿ ನಿರ್ಮಾಣವಾಗಿರುವ ಈ ಹೋಮ್‌ ಸ್ಟೇಯಲ್ಲಿ ಮಲೆನಾಡಿನ ಪ್ರಮುಖ ಆಹಾರವನ್ನೂ ಸವಿಯುವ ಅವಕಾಶವಿದೆ. ಅಕ್ಕಿ ರೊಟ್ಟಿ, ಕಡುಬು, ಪತ್ರೊಡೆ, ಅಪ್ಪೆಕಾಯಿ ಸಾರು, ಹೀಗೆ ಮಲೆನಾಡಿನ ಆಹಾರವಷ್ಟೇ ಅಲ್ಲದೆ ಆಹಾರ ಪ್ರಿಯರಿಗಾಗಿ ಪ್ಯಾನ್‌ ಇಂಡಿಯಾ ಆಹಾರ ಪದ್ಧತಿಯನ್ನೂ ಅಳವಡಿಸಿಕೊಳ್ಳಲಾಗಿದೆ.

ಮಲೆನಾಡಿನ ಮ್ಯೂಸಿಯಂ

ಆಹಾರ, ವಿಹಾರಕ್ಕಷ್ಟೇ ಅಲ್ಲದೆ ಈ ಹೋಮ್‌ ಸ್ಟೇಯನ್ನು ಮ್ಯೂಸಿಯಂ ಎಂದರೂ ತಪ್ಪಾಗಲಾರದು. ವರ್ಷಗಳ ಇತಿಹಾಸವಿರುವ ಹಿತ್ತಾಳೆಯ ವಸ್ತುಗಳು ಕಾಫಿ ಬೇರುಗಳಿಂದ ಅರಳಿದ ಅನೇಕ ಕಲಾಕೃತಿಗಳು, ವಿಶೇಷವಾದ ಪೀಠೋಪಕರಣಗಳು ಹೀಗೆ ಹೇಳುತ್ತಾ ಹೋದರೆ ವಸ್ತುಸಂಗ್ರಹಾಲಯವೇ ಇಲ್ಲಿ ನಿರ್ಮಾಣವಾಗಿದೆ. ಇಂದಿನ ಯುವ ಜನತೆಗೆ ಅವುಗಳನ್ನು ಪರಿಚಯಿಸುವ ಇಲ್ಲಿನ ಸಿಬ್ಬಂದಿಯ ಶ್ರಮವನ್ನಂತೂ ಮೆಚ್ಚಲೇಬೇಕು.

ಸತತ 5 ವರ್ಷಗಳಿಂದಲೂ ನಂಬರ್‌ ಒನ್‌

ಕರ್ನಾಟಕದಲ್ಲಿ ಟ್ರಾವೆಲ್‌ ಗೈಡ್‌ ಆ್ಯಪ್‌ಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಟ್ರಿಪ್‌ ಅಡ್ವೈಸರ್‌ ಟ್ರಾವೆಲರ್ ಚಾಯ್ಸ್‌ ಆಗಿ 2013ರಿಂದ ಸತತ 5‌ ವರ್ಷಗಳಿಂದಲೂ ಹೆಸರು ಮಾಡಿರುವ ಹೆಮ್ಮೆ ತೋಟದ ಹಳ್ಳಿ ಹೋಮ್‌ ಸ್ಟೇ ಇದೆ. ಆಹಾರ, ಆತಿಥ್ಯ ಎರಡರಲ್ಲೂ ಈ ಹೋಮ್‌ ಸ್ಟೇ ಆಲ್‌ ಟೈಮ್‌ ಬೆಸ್ಟ್‌ ಚಾಯ್ಸ್‌ ಎನ್ನುವುದರಲ್ಲಿ ಎರಡು ಮಾತಿಲ್ಲ.

Untitled design (54)

ಸಮೀಪದಲ್ಲೇ ಏನೇನಿದೆ ?

ಚಿಕ್ಕಮಗಳೂರಿಗೆ ಹತ್ತಿರದಲ್ಲೇ ಇರುವ ʻತೋಟದ ಹಳ್ಳಿ ಹೋಮ್‌ ಸ್ಟೇʼ ಗೆ ಭೇಟಿ ನೀಡಿದರೆ ಸಮೀಪದಲ್ಲೇ ಇರುವ ಕುದುರೆಮುಖ, ಕೆಮ್ಮಣ್ಣುಗುಂಡಿ ಹಾಗೂ ಮುಳ್ಳಯ್ಯನಗಿರಿಯನ್ನೂ ಏರಿ ಬರಬಹುದು. ಮುತ್ತೋಡಿ ವೈಲ್ಡ್‌ ಸ್ಯಾಂಕ್ಚುರಿ, ಬಟರ್‌ ಮಿಲ್ಕ್‌ ಫಾಲ್ಸ್‌, ಕಾಫಿ ಮ್ಯೂಸಿಯಂ, ಬಾಬಾ ಬುಡನ್‌ ಗಿರಿ ಹೀಗೆ ಅನೇಕ ಪ್ರವಾಸಿ ತಾಣಗಳನ್ನು ಸುತ್ತಾಡಿ ಬರಬಹುದು. ಇನ್ನು ಧಾರ್ಮಿಕ ಪ್ರವಾಸ ಬೇಕೆನ್ನುವವರು ನೀವಾದರೆ ಶ್ರವಣಬೆಳಗೊಳ, ಬೇಲೂರು ಚೆನ್ನಕೇಶವ ದೇವಾಲಯ, ಶೃಂಗೇರಿ ಶಾರದೆ ಹಾಗೂ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯಕ್ಕೂ ಹೋಗಿಬರಬಹುದು.

ನಮ್ಮದು ವರ್ಷಗಳಿಂದಲೂ ಕಾಫಿ ಎಸ್ಟೇಟ್, ಕಾಫಿ ಪ್ಲ್ಯಾಂಟೇಷನ್‌ ಇತ್ತು. ಆತಿಥ್ಯ ಕ್ಷೇತ್ರದಲ್ಲೂ ಆಸಕ್ತಿ ಇದ್ದುದರಿಂದ ಬಳಕೆಯಿರದೆ ಉಳಿದುಕೊಂಡಿದ್ದ ಕಟ್ಟಡಕ್ಕೆ ಹೊಸ ರೂಪನ್ನು ನೀಡಿ ಹೋಮ್‌ ಸ್ಟೇ ಮಾಡಿಕೊಂಡೆವು.15 ವರ್ಷಗಳ ಹಿಂದೆ ಚಿಕ್ಕಮಗಳೂರಿನಲ್ಲಿ ಅಷ್ಟಾಗಿ ಹೋಮ್‌ಸ್ಟೇ ಗಳಿರದ ಕಾಲದಲ್ಲೇ ನಮ್ಮ ಬ್ಯುಸಿನೆಸ್‌ ಪ್ರಾರಂಭವಾಯ್ತು. ಅಂದಿಗೂ ಇಂದಿಗೂ ನಮಗೆ ಬೇಡಿಕೆ ಕಡಿಮೆಯಾಗಿಲ್ಲ.
- ಪಲ್ಲವಿ, ಮಾಲೀಕರು, ತೋಟದ ಹಳ್ಳಿ ಹೋಮ್‌ ಸ್ಟೇ

ವೆಬ್‌ ಸೈಟ್ : http://www.thotadahalli.com/
ವಿಳಾಸ : ಪೋಸ್ಟ್‌ ತೋಟದಹಳ್ಳಿ ಎಸ್ಟೇಟ್‌, ಕೈಮರ, ಕರ್ನಾಟಕ - 577131
https://goo.gl/maps/TGKDmBcP8JegHBNTA
ಸಂಪರ್ಕ ಸಂಖ್ಯೆ : +91 9448245240, +91 9448668789