ಇತ್ತೀಚೆಗಷ್ಟೇ ಬಣ್ಣಗಳ ಹಬ್ಬ ಹೋಳಿಯನ್ನು ದೇಶದೆಲ್ಲೆಡೆ ವಿಶೇಷವಾಗಿ ಆಚರಣೆ ಮಾಡಲಾಯಿತು. ಹೋಳಿಗೆ ಹಬ್ಬಕ್ಕೆಇನ್ನೂ ತಿಂಗಳು ಬಾಕಿ ಉಳಿದಿದೆಯನ್ನುವಾಗಲೇ ಸಿಲಿಕಾನ್‌ ಸಿಟಿ ಬೆಂಗಳೂರು ಸಕಲ ಸಿದ್ಧತೆಗಳನ್ನು ಮಾಡಿಕೊಂಡುಬಿಡುತ್ತದೆ. ಅದರಲ್ಲೂ ನಗರದ ಸುತ್ತಮುತ್ತಲಿನ ಬೃಹತ್‌ ರೆಸಾರ್ಟ್‌ಗಳಂತೂ ಅದ್ದೂರಿಯಾಗಿಯೇ ಸಿದ್ಧಗೊಂಡು ಬಣ್ಣದೋಕುಳಿಗೆ ಸಜ್ಜಾಗಿಬಿಡುತ್ತವೆ. ಹೀಗೆ ಹೋಳಿ ಆಚರಣೆಗೆ ಸೂಕ್ತ ರೆಸಾರ್ಟ್‌ ಯಾವುದು ಎಂದು ಹುಡುಕುವ ವೇಳೆ ಗಮನಸೆಳೆದದ್ದು ಎಲೆಕ್ಟ್ರಾನಿಕ್‌ ಸಿಟಿ ಮೊದಲ ಹಂತದ ಹುಲಿಮಂಗಲ ರಸ್ತೆಯ ಸಮೀಪದಲ್ಲಿರುವ ʻನಿರಂತರ ರೆಸಾರ್ಟ್‌ ಹಾಗೂ ಸ್ಪಾʼ.

ಇದನ್ನೂ ಓದಿ: ಕಲ್ಪತರು ನಾಡಿನ ಆಹಾರದ ರುಚಿ

4 ರಿಂದ 5 ಎಕರೆ ಪ್ರದೇಶದಲ್ಲಿ ವಿಶಾಲವಾಗಿ ನಿರ್ಮಾಣವಾಗಿರುವ ಈ ರೆಸಾರ್ಟ್‌ನಲ್ಲಿರುವ ಸೌಕರ್ಯ, ಸೌಲಭ್ಯಗಳನ್ನು ಕೇಳಿದರೆ ಅಚ್ಚರಿಯೆನಿಸಿಬಿಡುತ್ತದೆ. ಪುಟ್ಟ ಮಕ್ಕಳಿಂದ ತೊಡಗಿ ಎಲ್ಲ ವಯಸ್ಸಿನವರಿಗೂ ಹೊಂದುವಂತೆ ನಿರ್ಮಾಣವಾಗಿರುವ ಈ ಹೊಸತನದ ರೆಸಾರ್ಟ್‌ ನಗರ ಜೀವನದ ಜತೆಗೆ ಶಾಂತಿ, ನೆಮ್ಮದಿಯನ್ನು ಬಯಸುವ ಮಂದಿಗೆ ಸೂಕ್ತವಾದ ಜಾಗ.

ಜನರ ಆಸಕ್ತಿಗೆ ಹೊಂದುವಂತೆ ಸಿದ್ಧವಾಗಿರುವ ಈ ರೆಸಾರ್ಟ್‌ನಲ್ಲಿ ಕಾಟೇಜಸ್‌, ರೂಮ್ಸ್‌, ಪೂಲ್‌ ಸೈಡ್‌ ರೂಮ್ಸ್‌ ಹಾಗೂ ಎಕ್ಸಿಕ್ಯೂಟಿವ್‌ ರೂಮ್ಸ್‌ ಎಂಬ ನಾಲ್ಕು ವಿಭಾಗಗಳಿದ್ದು, ಒಟ್ಟು 19 ರೂಮುಗಳಿವೆ. ಇಲ್ಲಿಗೆ ಬರುವ ಮುನ್ನ ಯಾವ ಬಗೆಯ ರೂಮುಗಳು ಬೇಕೆಂಬುದನ್ನು ಬುಕ್‌ ಮಾಡಿಕೊಂಡೇ ಬಂದರೆ ಉಳಿದಂತೆ ಇಲ್ಲಿನ ಅನೇಕ ಚಟುವಟಿಕೆಗಳಲ್ಲಿ ಭಾಗಿಯಾಗಬಹುದು.

ಇವೆಂಟ್‌ಗಳಿಗೆ ಹೇಳಿ ಮಾಡಿಸಿದ ಜಾಗ

New Project (42)

ನಿರಂತರ ರೆಸಾರ್ಟ್‌ನಲ್ಲಿ ಇವೆಂಟ್‌ಗಳಿಗಾಗಿಯೇ ಮೂರು ವಿಶೇಷ ಜಾಗಗಳನ್ನು ಗುರುತು ಮಾಡಲಾಗಿದೆ. ಅರಿಶಿಣ ಶಾಸ್ತ್ರ, ನಾಮಕರಣ, ಸೀಮಂತ, ಡೆಸ್ಟಿನೇಷನ್‌ ವೆಡ್ಡಿಂಗ್‌ ನಂಥ ಅದ್ದೂರಿ ಕಾರ್ಯಕ್ರಮಗಳಿಗೆ ಇಲ್ಲಿ ಆಂಫಿ ಥಿಯೇಟರ್‌ ಹಾಗೂ ಓಪನ್‌ ಏರಿಯಾ ಲಭ್ಯವಿದೆ. ಕಾರ್ಪೊರೇಟ್‌ ಇವೆಂಟ್‌ ಮಾಡುವ ಯೋಜನೆಯಿದ್ದವರಿಗಾಗಿ 50-100 ಮಂದಿ ಕೂರಬಲ್ಲ ಹಾಲ್‌ ಒಂದಿದೆ. ಫೌಂಟೇನ್‌ ಏರಿಯಾದಲ್ಲೂ 200 ಮಂದಿಗೆ ಸೀಟಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ.

ರೆಸಾರ್ಟ್‌ನಲ್ಲಿ ಏನೇನಿದೆ ?

ಇವೆಂಟ್‌ ಏರಿಯಾ

ಪ್ಲೇ ಏರಿಯಾ

ರೋಪ್‌ ಗೇಮ್ಸ್‌ ಹಾಗೂ ಆರ್ಚರಿ

ಇಂಡೋರ್‌ ಆಕ್ಟಿವಿಟೀಸ್‌

ಸ್ಪಾ ಹಾಗೂ ಇನ್‌ ಹೌಸ್‌ ಪಬ್‌

ರೆಸ್ಟೋರೆಂಟ್‌

ಇಲ್ಲಿರುವ ಸ್ಪಾಗೆ ಭೇಟಿ ನೀಡಬೇಕಾದರೆ ನೀವು ಈ ರೆಸಾರ್ಟ್‌ಗೆ ಬರಲೇಬೇಕೆಂದಿಲ್ಲ. ಇನ್‌ ಹೌಸ್‌ ಪಬ್‌ ಹಾಗೂ ರೆಸ್ಟೋರೆಂಟ್‌ಗೂ ನೇರವಾಗಿ ವಾಕ್‌ ಇನ್‌ ಮಾಡಬಹುದು. ಇಲ್ಲಿ ಲೈವ್‌ ಮ್ಯೂಸಿಕ್‌ ಬ್ಯಾಂಡ್‌ ಪರ್ಫಾರ್ಮೆನ್ಸ್‌ಗಳು ನಡೆಯುವದರಿಂದ ಮ್ಯೂಸಿಕ್‌ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಉಳಿದಂತೆ ಗೇಮ್ಸ್‌, ಸ್ವಿಮ್ಮಿಂಗ್‌ ಪೂಲ್‌, ರೇನ್‌ ಡ್ಯಾನ್ಸ್‌, ಪ್ಲೇ ಏರಿಯಾಗಳೆಲ್ಲವೂ ರೆಸಾರ್ಟ್‌ಗೆ ಬರುವವರಿಗಷ್ಟೇ ಸೀಮಿತವಾಗಿದೆ.

New Project (43)

ಬಣ್ಣದ ಹಬ್ಬದ ವಿಶೇಷ

ಬಣ್ಣಗಳ ಹಬ್ಬ ಹೋಳಿ ಪ್ರಯುಕ್ತ ಪ್ರತಿ ವರ್ಷದಂತೆ ಈ ಬಾರಿಯೂ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 5000ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದ ಈ ಹೋಳಿ ಸಂಭ್ರಮದಲ್ಲಿ 10ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪೂಲ್‌ ಪಾರ್ಟಿ, ರೇನ್‌ ಡ್ಯಾನ್ಸ್‌ ಮಾತ್ರವಲ್ಲದೆ ಓಪನ್‌ ಏರ್‌ ಹೋಳಿ ಕಾನ್ಸರ್ಟ್‌ನಲ್ಲಿ ಬಣ್ಣಗಳೊಂದಿಗೆ ಆಟವಾಡುವ ಅವಕಾಶ ನೀಡಿದ್ದು ಎಲ್ಲರ ಗಮನಸೆಳೆದಿತ್ತು. ಬರಿಯ ಹೋಳಿ ಮಾತ್ರವಲ್ಲದೆ ಪ್ರತಿ ವರ್ಷವೂ ಇಲ್ಲಿ ದಾಂಡಿಯಾ ನೈಟ್ಸ್‌ ಸೇರಿದಂತೆ ಸಾಮಾಜಿಕವಾಗಿ ಆಚರಿಸುವ ಅನೇಕ ಹಬ್ಬಗಳನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.

ಪೆಟ್‌ ಫ್ರೆಂಡ್ಲೀ ರೆಸಾರ್ಟ್‌

ಸಾಮಾನ್ಯವಾಗಿ ರೆಸಾರ್ಟ್‌ಗೆ ತೆರಳುವಾಗ ಪೆಟ್‌ಗಳನ್ನು ಜತೆಗೆ ಕರೆದೊಯ್ಯುವುದು ಹೇಗೆ ಎಂಬ ಗೊಂದಲ ಎಲ್ಲರನ್ನೂ ಕಾಡುತ್ತದೆ. ಅದಕ್ಕೆ ಉತ್ತರವೆಂಬಂತಿರುವ ಈ ರೆಸಾರ್ಟ್‌ ಸಾಕು ಪ್ರಾಣಿಗಳಿಗೂ ಪ್ರವೇಶಕ್ಕೆ ಅನುವು ಮಾಡಿದೆ. ರೆಸಾರ್ಟ್‌ನಲ್ಲೇ ಮೊಲ, ಬಾತುಕೋಳಿ ಸೇರಿದಂತೆ ಅನೇಕ ಬಗೆಯ ಪ್ರಾಣಿ ಪಕ್ಷಿಗಳೂ ಇದ್ದು, ರೆಸಾರ್ಟ್‌ ಪ್ರೇಮಿಗಳ ಮನಸೂರೆಗೈಯುತ್ತವೆ.

ಕಲಾಕಾರಂಜಿ - ಆರ್ಟ್‌ ಗ್ಯಾಲರಿ

ರೆಸಾರ್ಟ್‌ಗಳಲ್ಲಿ ಪ್ರಮುಖ ಆಕರ್ಷಣೆ ಇಲ್ಲಿರುವ ಆರ್ಟ್‌ ಗ್ಯಾಲರಿ. ಕಲಾಕಾರಂಜಿ ಎಂಬ ಈ ಗ್ಯಾಲರಿಯಲ್ಲಿ ಅನೇಕ ಕಲಾವಿದರ ಕುಂಚದಿಂದ ಅರಳಿರುವ ವಿಶೇಷ ಪೇಂಟಿಂಗ್ಸ್‌ ಮಾತ್ರವಲ್ಲದೆ ವಿಭಿನ್ನವಾದ ಶಿಲ್ಪಕಲೆಗಳೂ, ಮೂರ್ತಿಗಳೂ ಒಂದೇ ಸೂರಿನಡಿಯಲ್ಲಿ ಕಾಣಸಿಗುತ್ತವೆ. ರೆಸಾರ್ಟ್‌ ನೆನಪುಗಳ ಜತೆಗೆ ಚಿತ್ತಾರಗಳನ್ನೂ ಕೊಂಡುಕೊಳ್ಳುವುದಾದರೂ ನೋ ಪ್ರಾಬ್ಲಂ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.

New Project (44)

ಗ್ರಾಹಕರೆಂದರೆ ರಾಜನ ಸಮಾನರೆಂದು ತಿಳಿದವನು ನಾನು. ಆ ಧ್ಯೇಯದೊಂದಿಗೆ ರೆಸಾರ್ಟ್‌ ಪ್ರಾರಂಭಿಸಿದಾಗಿನಿಂದಲೂ ಗ್ರಾಹಕರಿಗೆ ಚೆನ್ನಾಗಿ ನೋಡಿಕೊಳ್ಳುತ್ತಾ, ಉತ್ತಮ ಸೇವೆಯನ್ನು ನೀಡುತ್ತಲೇ ಬಂದಿದ್ದೇವೆ. ಮುಂದೆಯೂ ಆ ರೂಢಿಯನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ಮುಂದಿನ ದಿನಗಳಲ್ಲಿ ಇನ್ನೊಂದಷ್ಟು ಹೊಸ ಸೌಕರ್ಯಗಳನ್ನು ಕಲ್ಪಿಸಿಕೊಡುವ ಮೂಲಕ ಹೊಸ ಪ್ರಯತ್ನಗಳಿಗೆ ನಾಂದಿ ಹಾಡುತ್ತೇವೆ.

-ಸುಹಾಸ್‌ ಉದಯ್‌ ಕುಮಾರ್‌, ಸಹಮಾಲೀಕರು, ನಿರಂತರ ರೆಸಾರ್ಟ್‌ & ಸ್ಪಾ

ವಿಳಾಸ :

221/1, ಹುಲಿಮಂಗಲ ಗ್ರಾಮ, ಜಿಗಣಿ ಹೋಬಳಿ, ತಾಲೂಕು, ಆನೇಕಲ್, ಬೆಂಗಳೂರು, ಕರ್ನಾಟಕ - 560106

ಮೊ: 083109 44102