Monday, July 21, 2025
Monday, July 21, 2025

ವಿಮಾನಗಳಲ್ಲಿ ಬ್ರೇಕ್‌ ವ್ಯವಸ್ಥೆ

ಕೆಲವು ವಿಮಾನಗಳಲ್ಲಿ Braking Energy Monitoring System ಕೂಡ ಇರುತ್ತದೆ. ಇದು ಬ್ರೇಕ್‌ಗಳ ಮೇಲೆ ಒತ್ತಡದ ಪ್ರಮಾಣವನ್ನು ಹತ್ತಿರದಿಂದ ಗಮನಿಸುತ್ತದೆ. ಇಲ್ಲಿ ನಿಮಗೆ ಕೆಲವು ಸ್ವಾರಸ್ಯಕರ ಸಂಗತಿಗಳನ್ನು ಹೇಳಬೇಕು. ಬೋಯಿಂಗ್ 777 ವಿಮಾನದಲ್ಲಿ 12 ಚಕ್ರಗಳು ಇರುತ್ತವೆ. ಪ್ರತಿ ಲ್ಯಾಂಡಿಂಗ್ ಗಿಯರ್‌ನಲ್ಲಿ ಆರು ಬ್ರೇಕ್ ಅಸೆಂಬ್ಲಿಗಳು ಇರುತ್ತವೆ

ವಿಮಾನದ ಬ್ರೇಕ್ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಯೋಚಿಸಿದ್ದೀರಾ? ಒಂದು ದೈತ್ಯ ಲೋಹದ ಹಕ್ಕಿಯನ್ನು ಭದ್ರವಾಗಿ, ಸುರಕ್ಷಿತವಾಗಿ, ನಿಶ್ಚಿತ ಅಂತರದಲ್ಲಿ ಮತ್ತು ನಿಗದಿತ ಅವಧಿಯಲ್ಲಿ ನಿಲ್ಲಿಸುವುದು ಸುಲಭದ ವಿಷಯವಲ್ಲ! ಇದಕ್ಕೆ ಮೂಲ ಕಾರಣ ಅದರ ಹಿಂದೆ ಇರುವ ತಂತ್ರಜ್ಞಾನ. ವಿಮಾನ ಬ್ರೇಕ್ ವ್ಯವಸ್ಥೆ ( Aircraft Brake System) ಎಂದರೆ, ವಿಮಾನವನ್ನು ಭದ್ರವಾಗಿ ನಿಲ್ಲಿಸಲು ಬಳಸುವ ಬಹುಪರಿಣಾಮಕಾರಿ ಯಂತ್ರ ವ್ಯವಸ್ಥೆ. ಲ್ಯಾಂಡಿಂಗ್ ಅಥವಾ ರದ್ದಾದ ಟೆಕ್ ಆಫ್ ಸಂದರ್ಭದಲ್ಲಿ ವಿಮಾನವನ್ನು ನಿಲ್ಲಿಸುವಾಗ ಮತ್ತು ನೆಲದ ಮೇಲೆ ವಿಮಾನವನ್ನು ಸ್ಥಿರವಾಗಿ ( Static ) ನಿಲ್ಲಿಸುವಾಗ ಬ್ರೇಕುಗಳನ್ನು ಹಾಕಲಾಗುತ್ತದೆ.‌

ಇದು ವಿಮಾನದ ಲ್ಯಾಂಡಿಂಗ್ ಗಿಯರ್ ಸಿಸ್ಟಮ್‌ನ ಅತ್ಯಂತ ಮುಖ್ಯ ಭಾಗವಾಗಿದೆ. ಲ್ಯಾಂಡಿಂಗ್ ಅಥವಾ ರಿಜೆಕ್ಟೆಡ್ ಟೇಕ್‌‌ ಆಫ್ ವೇಳೆ, ಪೈಲಟ್ ತನ್ನ ಕಾಲುಗಳಿಂದ ರಡರ್ ಪೆಡಲ್‌ಗಳ ಮೇಲಿರುವ ಬ್ರೇಕ್‌ಗಳನ್ನು ಒತ್ತುತ್ತಾನೆ. ಇದರಿಂದ ಹೈಡ್ರಾಲಿಕ್ ಒತ್ತಡ ನಿರ್ಮಾಣವಾಗಿ ಲ್ಯಾಂಡಿಂಗ್ ಗಿಯರ್‌ನ ಮುಖ್ಯ ಚಕ್ರಗಳ ಬಳಿಯ ಬ್ರೇಕ್‌ಗಳಿಗೆ ರವಾನೆಯಾಗುತ್ತದೆ.

ಇದನ್ನೂ ಓದಿ: ವಿಮಾನದ ಟೈರುಗಳಲ್ಲಿ ನೈಟ್ರೋಜನ್ ಬಳಸುವುದೇಕೆ?

ಬ್ರೇಕ್ ಪ್ಯಾಡ್‌ಗಳು ರೋಟೇಟಿಂಗ್ ಡಿಸ್ಕ್‌ಗಳ ವಿರುದ್ಧ ಒತ್ತಲ್ಪಡುತ್ತವೆ. ಅಲ್ಲಿ ಘರ್ಷಣೆಯಿಂದ ಚಕ್ರಗಳ ವೇಗ ಕಡಿಮೆಯಾಗುತ್ತದೆ. ಆಂಟಿಸ್ಕಿಡ್ ಸಿಸ್ಟಂ ಚಕ್ರಗಳು ಲಾಕ್ ಆಗದಂತೆ ನೋಡಿ ಕೊಳ್ಳುತ್ತದೆ. ಇದು ನಿಲ್ಲುವ ದೂರವನ್ನು ಬಹುಬೇಗ ಕಡಿಮೆ ಮಾಡುತ್ತದೆ. ಜತೆಗೆ ಸ್ಪಾಯ್ಲರ್‌ಗಳು ಮತ್ತು ರಿವರ್ಸ್ thrust ಸಹ ವೇಗ ಕಡಿಮೆ ಮಾಡಲು ಸಹಾಯ ಮಾಡುತ್ತವೆ.

flight break 1

ಪೈಲಟ್‌ಗಳು ಪಾರ್ಕಿಂಗ್ ಬ್ರೇಕ್ ಅನ್ನು ಕಾಕ್ ಪಿಟ್ ನ ಲೀವರ್ ಅಥವಾ ಸ್ವಿಚ್ ಮೂಲಕ ಸಕ್ರಿಯಗೊಳಿಸುತ್ತಾರೆ. ಈ ವೇಳೆ ಬ್ರೇಕ್‌ಗಳಲ್ಲಿ ಹೈಡ್ರಾಲಿಕ್ ಒತ್ತಡ ಸ್ಥಿರವಾಗಿರುತ್ತದೆ. ವಿಮಾನ ಚಲಿಸದಂತೆ ಲಾಕ್ ಆಗಿರುತ್ತದೆ. ವಿಮಾನಗಳ ಬ್ರೇಕ್ ವ್ಯವಸ್ಥೆಯಲ್ಲಿ ಹಲವಾರು ಸುರಕ್ಷತಾ ಅಂಶಗಳು ಸೇರಿವೆ. ಅವುಗಳ ಪೈಕಿ ಮುಖ್ಯವಾದುದು ಆಂಟಿಸ್ಕಿಡ್ ಪ್ರೊಟೆಕ್ಷನ್.

ಇದು ಚಕ್ರಗಳು ಸ್ಕಿಡ್ ಆಗದಂತೆ ತಡೆಯುತ್ತದೆ. ಇದು ಟೈರ್ ಬ್ಲೋ ಅಥವಾ ಲಾಕ್ ಆಗುವ ಅಪಾಯವನ್ನು ಕಡಿಮೆ ಮಾಡುತ್ತದೆ. ಬ್ರೇಕ್ ತಾಪಮಾನ ನಿಯಂತ್ರಣವೂ ಅಷ್ಟೇ ಮುಖ್ಯ. ಲ್ಯಾಂಡಿಂಗ್ ನಂತರ ಬ್ರೇಕ್‌ಗಳ ತಾಪಮಾನವು ಕೆಲವು ಸಲ 500 ಡಿಗ್ರಿ ಸೆಂಟಿಗ್ರೇಡ್ ತನಕ ಹೆಚ್ಚಾಗ ಬಹುದು. ಹೆಚ್ಚು ತಾಪಮಾನಕ್ಕೆ ಬೆಂಕಿ, ಬ್ರೇಕ್ ವೈಫಲ್ಯ ಆಗಬಹುದು.

ಇತ್ತೀಚಿನ ವಿಮಾನಗಳಲ್ಲಿ ಕಾರ್ಬನ್-ಫೈಬರ್ ಡಿಸ್ಕ್ ಬ್ರೇಕ್‌ಗಳನ್ನು ಬಳಸಲಾಗುತ್ತವೆ. ಇವು ಹೆಚ್ಚು ಉಷ್ಣನಿರೋಧಕ. ದೀರ್ಘಕಾಲಿಕ ಬಾಳಿಕೆಯೂ ಬರುತ್ತವೆ. ವಿಮಾನಗಳ ಬ್ರೇಕ್ ವ್ಯವಸ್ಥೆಯನ್ನು ನಿರಂತರವಾಗಿ ತಪಾಸಣೆ ಮಾಡಲಾಗುತ್ತದೆ. ವಿಶೇಷವಾಗಿ ಪ್ರತಿ ಲ್ಯಾಂಡಿಂಗ್ ನಂತರ, ತಾಪಮಾನಗಳನ್ನು ಸೆನ್ಸರ್‌ಗಳು ದಾಖಲಿಸುತ್ತವೆ. ಅವಶ್ಯಕತೆಯಿದ್ದರೆ ಬ್ರೇಕ್‌ಗಳಿಗೆ ಪ್ಯಾಕೇಜ್ಡ್ ಕೂಲಿಂಗ್ ಸಿಸ್ಟಂ (ತಂಪಾಗಿಸುವ ವ್ಯವಸ್ಥೆ) ಉಪಯೋಗಿಸಲಾಗುತ್ತದೆ.

flight  break 3

ಕೆಲವು ವಿಮಾನಗಳಲ್ಲಿ Braking Energy Monitoring System ಕೂಡ ಇರುತ್ತದೆ. ಇದು ಬ್ರೇಕ್‌ಗಳ ಮೇಲೆ ಒತ್ತಡದ ಪ್ರಮಾಣವನ್ನು ಹತ್ತಿರದಿಂದ ಗಮನಿಸುತ್ತದೆ. ಇಲ್ಲಿ ನಿಮಗೆ ಕೆಲವು ಸ್ವಾರಸ್ಯಕರ ಸಂಗತಿಗಳನ್ನು ಹೇಳಬೇಕು. ಬೋಯಿಂಗ್ 777 ವಿಮಾನದಲ್ಲಿ 12 ಚಕ್ರಗಳು ಇರುತ್ತವೆ. ಪ್ರತಿ ಲ್ಯಾಂಡಿಂಗ್ ಗಿಯರ್‌ನಲ್ಲಿ ಆರು ಬ್ರೇಕ್ ಅಸೆಂಬ್ಲಿಗಳು ಇರುತ್ತವೆ. ಲ್ಯಾಂಡಿಂಗ್ ನಂತರ ಬ್ರೇಕ್‌ಗಳ ತಾಪಮಾನವು 500 ಡಿಗ್ರಿ ಸೆಂಟಿಗ್ರೇಡ್ (932 KF ) ದಾಟಬಹುದು!

ಕೆಲವು ವಿಮಾನಗಳಲ್ಲಿ ಥರ್ಮಲ್ ಫ್ಯಾನ್ ಸಿಸ್ಟಂ ಅಥವಾ ಟೈರ್ ತಂಪಾಗಿಸುವ ವಿಶೇಷ ವ್ಯವಸ್ಥೆ ಕೂಡ ಇರುತ್ತದೆ. ಈಗಿನ ಬಹುತೇಕ ವಿಮಾನಗಳಲ್ಲಿ ‘ಹೈಡ್ರಾಲಿಕ್ ಪುನರುಕ್ತಿ’ (redundancy) ಎಂಬ ಅತ್ಯವಶ್ಯಕ ಸುರಕ್ಷತಾ ವ್ಯವಸ್ಥೆ ಇದ್ದು, ಒಂದು ಸಿಸ್ಟಮ್ ವಿಫಲವಾದರೂ ಇನ್ನೊಂದು ಕಾರ್ಯ ನಿರ್ವಹಿಸುತ್ತದೆ.

ವಿಮಾನ ಬ್ರೇಕ್ ವ್ಯವಸ್ಥೆ ಸರಳವಾದ ಬ್ರೇಕ್ ಪೆಡಲ್ ಮೇಲೆ ಕಾಲಿಡುವ ಕೆಲಸದಿಂದ ಆರಂಭವಾದರೂ, ಅದರ ಹಿಂದೆ ನೂರಾರು ಘಟಕಗಳು, ಸುರಕ್ಷತಾ ವ್ಯವಸ್ಥೆಗಳು ಮತ್ತು ತಂತ್ರಜ್ಞಾನ ಸೇರಿವೆ. ವಿಮಾನವನ್ನು ಸುರಕ್ಷಿತವಾಗಿ ನೆಲಕ್ಕೆ ಇಳಿಸಿ ನಿಲ್ಲಿಸುವುದಕ್ಕೆ ಈ ಬ್ರೇಕ್ ವ್ಯವಸ್ಥೆಯ ಪಾತ್ರ ಅತೀ ಮುಖ್ಯ. ಇದು ಇಂಜಿನಿಯರಿಂಗ್ ಮತ್ತು ಸುರಕ್ಷತಾ ತಂತ್ರಜ್ಞಾನಗಳ ಸಂಯೋಜನೆಯ ಅತ್ಯುತ್ತಮ ನಿದರ್ಶನವಾಗಿದೆ.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

Read Previous

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!

Read Next

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!