Tuesday, November 3, 2026
Tuesday, November 3, 2026

ಆಕ್ಷನ್ ಕ್ಯಾಮೆರಾ- ನಿಮ್ಮ ಪ್ರಯಾಣದ ಸಂಗಾತಿ

ಆಕ್ಷನ್ ಕ್ಯಾಮೆರಾದ ವಿಶೇಷತೆಯೆಂದರೆ ಅದರ ಗಾತ್ರ ಮತ್ತು ಸರಳ ಬಳಕೆ. ಚಿಕ್ಕದಾಗಿರುವುದರಿಂದ ಅದನ್ನು ಕೈಯಲ್ಲಿ ಹಿಡಿದುಕೊಂಡೋ, ಬ್ಯಾಗ್‌ಗೆ ಅಳವಡಿಸಿಕೊಂಡೋ ಅಥವಾ ಬೈಕ್, ಹೆಲ್ಮೆಟ್, ಕಾರಿಗೆ ಸಹ ಮೌಂಟ್ ಮಾಡಬಹುದು. ಅದಕ್ಕಂಟಿಕೊಂಡೇ ಇರುವ ವಿಶಾಲವಾದ ವೈಡ್ ಲೆನ್ಸ್‌ನಿಂದ ನಮ್ಮ ಕಣ್ಣಿಗೆ ಕಾಣಿಸುವ ಪರಿಸರದ ಬಹುತೇಕ ಭಾಗವನ್ನು ಒಂದೇ ಫ್ರೇಮ್‌ನಲ್ಲಿ ಸೆರೆಹಿಡಿಯಬಹುದು.

- ಹರ್ಷದ್‌ ಉದಯ್‌ ಕಾಮತ್‌

ಇಂದು ವ್ಲಾಗಿಂಗ್‌ಗೆ ಎಲ್ಲಿಲ್ಲದ ಡಿಮ್ಯಾಂಡು. ಕೆಲ ವರ್ಷಗಳ ಹಿಂದೆ ವೀಡಿಯೋ ಮಾಡಲು ದೊಡ್ಡ ಕ್ಯಾಮೆರಾ, ಟ್ರೈಪಾಡ್, ಮೈಕ್ರೋಫೋನ್ ಸೇರಿದಂತೆ ಹಲವು ಉಪಕರಣಗಳು ಬೇಕಾಗುತ್ತಿತ್ತು. ಆದರೆ ಈಗ ಒಂದು ಚಿಕ್ಕ ಆಕ್ಷನ್ ಕ್ಯಾಮೆರಾ ಕೈಯಲ್ಲಿದ್ದರೆ ಸಾಕು, ಇಡೀ ಪ್ರವಾಸದ ಅನುಭವಗಳನ್ನು ಸುಲಭವಾಗಿ ತೆರೆದಿಡಬಹುದು. ಇದೇ ಕಾರಣಕ್ಕೆ ಸೋಲೋ-ವ್ಲಾಗಿಂಗ್ ಇಂದು ಯುವಜನತೆಯಲ್ಲಿ ಜನಪ್ರಿಯವಾಗುತ್ತಿದೆ. ಇಂಥವಕ್ಕೆ ಬಹಳಷ್ಟು ಪುಷ್ಟಿ ಕೊಡುತ್ತಿರುವುದು ಈ ಸೋಷಿಯಲ್ ಮೀಡಿಯಾ ವೇದಿಕೆಗಳು. ಇವರುಗಳು ತಮಗಾಗುವ ಅನುಭವವನ್ನೇ ವಿಡಿಯೋ ಮುಖಾಂತರ ಪ್ರೇಕ್ಷಕ ಬಂಧುಗಳಿಗೆ ಹಂಚಿ ಸಂತಸ ಪಡುತ್ತಾರೆ.

ಇದನ್ನೂ ಓದಿ: ಸ್ಮಾರ್ಟ್‌ಫೋನ್ ಅನ್ನು 'ಸೂಪರ್ ಝೂಮ್' ಕ್ಯಾಮೆರಾ ಮಾಡಬಹುದು

ಆಕ್ಷನ್ ಕ್ಯಾಮೆರಾದ ವಿಶೇಷತೆಯೆಂದರೆ ಅದರ ಗಾತ್ರ ಮತ್ತು ಸರಳ ಬಳಕೆ. ಚಿಕ್ಕದಾಗಿರುವುದರಿಂದ ಅದನ್ನು ಕೈಯಲ್ಲಿ ಹಿಡಿದುಕೊಂಡೋ, ಬ್ಯಾಗ್‌ಗೆ ಅಳವಡಿಸಿಕೊಂಡೋ ಅಥವಾ ಬೈಕ್, ಹೆಲ್ಮೆಟ್, ಕಾರಿಗೆ ಸಹ ಮೌಂಟ್ ಮಾಡಬಹುದು. ಅದಕ್ಕಂಟಿಕೊಂಡೇ ಇರುವ ವಿಶಾಲವಾದ ವೈಡ್ ಲೆನ್ಸ್‌ನಿಂದ ನಮ್ಮ ಕಣ್ಣಿಗೆ ಕಾಣಿಸುವ ಪರಿಸರದ ಬಹುತೇಕ ಭಾಗವನ್ನು ಒಂದೇ ಫ್ರೇಮ್‌ನಲ್ಲಿ ಸೆರೆಹಿಡಿಯಬಹುದು. ಪ್ರಯಾಣದಲ್ಲಿ ನೀವು ಸಾಗುತ್ತಿರುವ ದಾರಿಯಿರಬಹುದು, ಪರಿಚಯವಾದ ಜನರೊಂದಿಗೆ ನಡೆಸುವ ಮಾತುಕತೆ, ಎದುರಿಸುವ ಸವಾಲುಗಳು ಮತ್ತು ತಾವು ಸುತ್ತಮುತ್ತಲೂ ಅನುಭವಿಸಿದ ಕ್ಷಣಗಳನ್ನು ಆಡಿಯೋ ಜತೆ ರೆಕಾರ್ಡ್ ಮಾಡಬಹುದಾಗಿದೆ.

Untitled design - 2026-11-02T155717.274

ಯಾವ ಕ್ಯಾಮೆರಾ ಖರೀದಿಸಬಹುದು?

ಪ್ರಸ್ತುತ ಆಕ್ಷನ್ ಕ್ಯಾಮೆರಾಗಳಲ್ಲಿ ಗಮನ ಸೆಳೆಯುತ್ತಿರುವ ಆಯ್ಕೆ DJI Osmo Action 6. ಉತ್ತಮವಾದ ಸ್ಥಿರತೆ, ಕಡಿಮೆ ಬೆಳಕಿನಲ್ಲೂ ಉತ್ತಮ ಕಾರ್ಯಕ್ಷಮತೆ, ದೀರ್ಘ ಬ್ಯಾಟರಿ ಲೈಫ್ ಮತ್ತು 8K ವಿಡಿಯೋ ರೆಕಾರ್ಡಿಂಗ್ ಇದರ ಪ್ರಮುಖ ವೈಶಿಷ್ಟ್ಯಗಳು. ಪ್ರವಾಸ, ವಾಯು ವಿಹಾರ, ಬೈಕ್ ರೈಡ್ ಮತ್ತು ಪಾಯಿಂಟ್ ಆಫ್ ವ್ಯೂ ಶೂಟಿಂಗ್ಗೆ ಇದು ಸಹಕಾರಿ. ಇದರ ಅಂದಾಜು ಬೆಲೆ 40 ರಿಂದ 45 ಸಾವಿರ ರುಪಾಯಿಗಳು.

ನೀವು ಕ್ಯಾಮೆರಾದ ಮುಂದೆ ಮಾತನಾಡುತ್ತಾ ವ್ಲಾಗ್ ಮಾಡುವವರಾಗಿದ್ದರೆ Insta360 Ace Pro 2 ಗಮನಿಸಬಹುದಾದ ಕ್ಯಾಮೆರಾ. ಇದರ ಫ್ಲಿಪ್ ಸ್ಕ್ರೀನ್ ಸೋಲೋ-ವ್ಲಾಗರ್ಗಳಿಗೆ ಬಹಳ ಅನುಕೂಲ. 8K ವಿಡಿಯೋ ರೆಕಾರ್ಡಿಂಗ್ ಮತ್ತು ಇರುಳಿನ ಸಮಯದಲ್ಲಿ ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ. ಇದರ ಅಂದಾಜು ಮಾರುಕಟ್ಟೆ ಬೆಲೆ 45 ರಿಂದ 50 ಸಾವಿರ ರುಪಾಯಿಗಳು.

ಬೈಕ್ ರೈಡ್ ಸಮಯದಲ್ಲಿ ಹೆಲ್ಮೆಟ್ಗೆ ಮೌಂಟ್ ಮಾಡಿ, ಅಲ್ಲಿನ ಪಾಯಿಂಟ್ ಆಫ್ ವ್ಯೂ ಪಡೆಯಲು, ಅಥವಾ ಚಾರಣದ ಸಾಹಸಮಯ ಶೂಟಿಂಗ್ಗೆ GoPro HERO13 Black ಇನ್ನೂ ಬಲವಾದ ಆಯ್ಕೆಯಾಗಿದೆ. ಇದರ ದೊಡ್ಡ ವಿಶೇಷತೆ ಎಂದರೆ ವಿಧವಾದ ಮೌಂಟ್ ಮತ್ತು ಪರಿಕರಗಳನ್ನು ಕ್ಯಾಮೆರಾಗೆ ಅಳವಡಿಸಬಹುದು. ಇದರಲ್ಲಿರುವ 5.3K ವಿಡಿಯೋ ರೆಕಾರ್ಡಿಂಗ್ ಸೋಷಿಯಲ್ ಮೀಡಿಯಾ ವೇದಿಕೆಗೆ ಸಹಕಾರಿ. ಮೊಬೈಲ್ ಸ್ಕ್ರೀನ್ಗೆ ತಕ್ಕಂತೆ ವಿಡಿಯೋ ಅಥವಾ ರೀಲ್ಸ್ ಮಾಡಬಹುದು. ಆಸುಪಾಸು ಬೆಲೆ 38 ರಿಂದ 45 ಸಾವಿರ ರುಪಾಯಿಗಳು.

‘ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು’ ಎನ್ನುವಂತೆ ಈ ಕ್ಯಾಮೆರಾಗಳೆಲ್ಲವೂ ಗಾತ್ರದಲ್ಲಿ ಚಿಕ್ಕದ್ದಿದ್ದರೂ, ಉತ್ತಮ ಗುಣಮಟ್ಟದ ವಿಡಿಯೋ, ಸ್ಥಿರತೆಯನ್ನು ನೀಡುವ ಸಾಮರ್ಥ್ಯವನ್ನು ಹೊಂದಿವೆ. ಕ್ಯಾಮೆರಾ ಖರೀದಿಸುವಾಗ ಅದರ ಜತೆಗೆ ವೈರ್‌ಲೆಸ್ ಮೈಕ್ರೊಫೋನ್, ಹೆಚ್ಚುವರಿ ಬ್ಯಾಟರಿ, ಟ್ರೈಪಾಡ್ ಮತ್ತು ಸೆಲ್ಫಿ ಸ್ಟಿಕ್ಗಳನ್ನು ಪರಿಗಣಿಸುವುದು ಉತ್ತಮ. ನಿಮ್ಮ ಕಥೆಯ ಮುಖಾಂತರ ಪ್ರೇಕ್ಷಕರನ್ನು ನಿಮ್ಮೊಂದಿಗೆ ಪಯಣಿಸಲು ಈ ಆಕ್ಷನ್ ಕ್ಯಾಮೆರಾಗಳು ಪರ್ಫೆಕ್ಟ್.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?