ಹಿತವಾದ ಮನಸಿಗೆ ಹದವಾದ ಕಾಫಿ
ಮಾತಾಸ್ ಕಾಫಿ ಎಂದರೆ ಕರ್ನಾಟಕದ ಜನರಿಗೆ ಎಮೋಷನ್ ಆಗಿಬಿಟ್ಟಿದೆ. ಮಾತಾಸ್ ಅವರು ಬರಿ ಕಾಫಿ ಪುಡಿ ಮಾರಾಟ ಮಾಡುವುದಕ್ಕಷ್ಟೇ ಸೀಮಿತವಾಗಿಲ್ಲ. ಇವರು ಕಾಫಿ ಸಂಸ್ಕೃತಿಯನ್ನು ಪ್ರತಿಯೊಬ್ಬರ ಜೀವನದ ಭಾಗವಾಗಿಸಲು ಶ್ರಮಿಸುತ್ತಿದ್ದಾರೆ. ನೀವು ಹೊಟೇಲ್‌ಗೆ ಹೋದಾಗ ಅಲ್ಲಿ ಬರುವ ಆ ನೊರೆ ಭರಿತ ಫಿಲ್ಟರ್ ಕಾಫಿಯ ಹಿಂದಿರೋ ಶ್ರಮವೇ ಇವರ ಬ್ರ್ಯಾಂಡ್ ಮೇಲೆ ಜನರಿಟ್ಟಿರುವ ನಂಬಿಕೆ.
ಕಾಫಿ ಎಂದರೆ ಪ್ರೀತಿ. ಅದರ ರುಚಿ ಸವಿದವರಿಗೆ ಗೊತ್ತು! ಬೆಳಗ್ಗೆ ಎದ್ದ ಕೂಡಲೇ ಒಂದು ಲೋಟ ಕಾಫಿ ಕುಡಿಯುವುದರಿಂದ ಶುರುವಾಗುವ ದಿನಚರಿ ಸಂಜೆ ಸುಸ್ತಾಗಿ ಮನೆಗೆ ಬಂದಾಗ ಒಂದು ಲೋಟ ಕಾಫಿ ಕುಡಿಯುವುದರೊಂದಿಗೆ ಮುಕ್ತಾಯವಾಗುತ್ತದೆ. ಬೆಂಗಳೂರಿನ ಟ್ರಾಫಿಕ್ ನಡುವೆ ಬಸವಳಿದು ಬಂದಾಗ ಅಥವಾ ಭಾನುವಾರ ಮಧ್ಯಾಹ್ನ ಒಂದು ಕುರ್ಚಿ ಹಾಕಿಕೊಂಡು ಕೂತಾಗ, ಕೈಯಲ್ಲೊಂದು ಕಾಫಿ ಲೋಟ ಇದ್ದರೆ ಸ್ವರ್ಗವೇ ಕೈಯಲ್ಲಿದ್ದಂತೆ ಅನಿಸುತ್ತದೆ. ಪ್ರಪಂಚದಲ್ಲಿ ಹೊಸ ಬಗೆಯ ಏನೇನೋ ಕಾಫಿ ಪುಡಿಗಳು ಬಂದರೂ ಬಹುತೇಕರಿಗೆ ಬಿಸಿಯಾದ, ಹದವಾಗಿ ಮಾಡಿದ ಒಂದು ಸ್ಟ್ರಾಂಗ್ ಫಿಲ್ಟರ್ ಕಾಫಿ ಕುಡಿದಾಗ ಆಗುವ ಖುಷಿ ಬೇರೆ ಯಾವ ಕಾಫಿ ಕುಡಿದರೂ ಸಿಗುವುದಿಲ್ಲ. ಅಂಥದ್ದೊಂದು ಸ್ವರ್ಗವನ್ನು ಕಾಫಿ ಪುಡಿ ರೂಪದಲ್ಲಿ ನೀಡುತ್ತಿರುವವರು ಬೆಂಗಳೂರಿನ ಫೇಮಸ್ ʼಮಾತಾಸ್ ಕಾಫಿʼ. 2009ರಲ್ಲಿ ವಿಶ್ವನಾಥ್ ಟಿ ಅಡಿಗ ಅವರು ಶುರು ಮಾಡಿದ ಈ ಮಾತಾಸ್ ಕಾಫಿ ಪುಡಿ ಈಗ ದೇಶಾದ್ಯಂತ ಕಾಫಿಯ ಘಮವನ್ನು ಪಸರಿಸುತ್ತಿದೆ.
ಇದನ್ನೂ ಓದಿ: ವಿದ್ಯಾರ್ಥಿಗಳ ಭವಿಷ್ಯ ಬಂಗಾರವಾಗಿಸುತ್ತಿರುವ ವಿದ್ಯಾಸಂಸ್ಥೆ!
ಮಾತಾಸ್ ಕಾಫಿ ಎಂದರೆ ಕರ್ನಾಟಕದ ಜನರಿಗೆ ಎಮೋಷನ್ ಆಗಿಬಿಟ್ಟಿದೆ. ಮಾತಾಸ್ ಅವರು ಬರಿ ಕಾಫಿ ಪುಡಿ ಮಾರಾಟ ಮಾಡುವುದಕ್ಕಷ್ಟೇ ಸೀಮಿತವಾಗಿಲ್ಲ. ಇವರು ಕಾಫಿ ಸಂಸ್ಕೃತಿಯನ್ನು ಪ್ರತಿಯೊಬ್ಬರ ಜೀವನದ ಭಾಗವಾಗಿಸಲು ಶ್ರಮಿಸುತ್ತಿದ್ದಾರೆ. ನೀವು ಹೊಟೇಲ್‌ಗೆ ಹೋದಾಗ ಅಲ್ಲಿ ಸಿಗುವ ಆ ನೊರೆ ಭರಿತ ಫಿಲ್ಟರ್ ಕಾಫಿಯ ಹಿಂದಿರುವ ಶ್ರಮವೇ ಇವರ ಬ್ರ್ಯಾಂಡ್. ಹೊಟೇಲ್ ಮಾಲೀಕರಿಗಂತೂ ಮಾತಾಸ್ ಕಾಫಿ ಎಂದರೆ ʼಬೆಸ್ಟ್ ಟೇಸ್ಟ್ʼಗೆ ಇನ್ನೊಂದು ಹೆಸರು. ಯಾಕೆಂದರೆ ಇಲ್ಲಿ ಕ್ವಾಲಿಟಿ ವಿಷಯದಲ್ಲಿ ನೋ ಕಾಂಪ್ರಮೈಸ್!

ಮಾರ್ಕೆಟಿಂಗ್‌ನಿಂದ ಆರಂಭ
ಕಂಪೆನಿ ಸೆಕ್ರಟರಿ ಕೋರ್ಸ್ ಕಲಿಯಬೇಕು ಎಂದು ಬೆಂಗಳೂರಿಗೆ ಬಂದ ವಿಶ್ವನಾಥ್ ಅವರು ಕಾಫಿ ವ್ಯಾಪಾರಕ್ಕೆ ಕಾಲಿಡುವ ಹಾಗಾಯಿತು. 2009ರಲ್ಲಿ ರಿಸೆಷನ್ ಆದಾಗ ಮುಂದೇನು ಎಂಬ ಪ್ರಶ್ನೆಗೆ ಕಾಫಿ ಪುಡಿ ಇವರಿಗೆ ಉತ್ತರ ನೀಡಿತು. ಯಾವುದೇ ವ್ಯಾಪಾರ ಶುರು ಮಾಡಲು ಸಣ್ಣ ಐಡಿಯಾ ಬೇಕು. ನಂತರ ಅದೇ ಐಡಿಯಾ ದೊಡ್ಡ ಸಾಮ್ರಾಜ್ಯವಾಗಿ ಬೆಳೆಯುತ್ತದೆ. ಇದಕ್ಕೆ ಉದಾಹರಣೆ ಈ ಮಾತಾಸ್ ಕಾಫಿ. 2009ರಲ್ಲಿ ಒಂದು ಸಣ್ಣ ಆಲೋಚನೆಯಿಂದ ಶುರವಾದ ವ್ಯಾಪಾರವಿದು. ಮೊದಲು ಮಾರ್ಕೆಟಿಂಗ್‌ನಿಂದ ಶುರುವಾದ ಕೆಲಸವಿದು. ಬೆಂಗಳೂರಿನ ಉತ್ತರಹಳ್ಳಿಯಲ್ಲಿ ಸಣ್ಣ ಔಟ್‌ಲೆಟ್ ಮಾಡಿ ಬೇರೆಯವರಿಂದ ಕಾಫಿ ಪುಡಿ ತರಿಸಿ ಬೆಂಗಳೂರಿನ ಹೊಟೇಲ್‌ಗಳಿಗೆ ಸಪ್ಲೈ ಮಾಡಲಾಗುತ್ತಿತ್ತು. ಮಡಿಕೇರಿ, ಶೃಂಗೇರಿ ಹೀಗೆ ಹಲವು ಕಡೆಗಳಿಂದ ತರಿಸಲಾಗುತ್ತಿತ್ತು. ಕಾಫಿಯ ರುಚಿಯ ಬಗ್ಗೆ ಕೆಲವು ದೂರುಗಳು ಕೇಳಿ ಬಂದ ಬಳಿಕ 2011ರಲ್ಲಿ ಯೆಲಚೇನಹಳ್ಳಿಯಲ್ಲಿ ಸ್ವಂತ ಫ್ಯಾಕ್ಟರಿ ಶುರು ಮಾಡಲಾಯಿತು. ಹಂತ ಹಂತವಾಗಿ ವಿಸ್ತಾರ ಹೊಂದಿದ ಮಾತಾಸ್ 2016ರಲ್ಲಿ ತಾಡಗುಣಿಯಲ್ಲಿ ಜರ್ಮನ್ ಟೆಕ್ನಾಲಜಿಯನ್ನು ಹೊಂದಿರುವಂಥ ವಿದೇಶಿ ಕಂಪೆನಿಯ ವಿಶೇಷ ರೋಸ್ಟರ್ ಯುನಿಟ್ ಸೆಟಪ್ ಮಾಡಲಾಯಿತು. ಸಣ್ಣ 10 ಬೈ 15 ಅಡಿ ಜಾಗದಲ್ಲಿ ಶುರುವಾದ ಕನಸು ಈಗ ಬೆಂಗಳೂರಿನ ಒಂದಲ್ಲ, ಎರಡಲ್ಲ 1000ಕ್ಕೂ ಹೆಚ್ಚು ಪ್ರತಿಷ್ಠಿತ ಹೊಟೇಲ್‌ಗಳಲ್ಲಿ ಈಗ ಮಾತಾಸ್ ಕಾಫಿಯೇ ರಾಜ! ಇವೆಲ್ಲದರ ಜತೆಗೆ ಬೆಂಗಳೂರಿನಲ್ಲಿ ಇವರದ್ದೇ ಐದು ಬೊಂಬಾಟ್ ಔಟ್‌ಲೆಟ್‌ಗಳಿವೆ. ಜಯನಗರದಲ್ಲಿ ಮುಖ್ಯ ಔಟ್‌ಲೆಟ್ ಇದೆ. ಇಲ್ಲಿ ಚಿಕೋರಿ ಇಲ್ಲದ ಫ್ರೆಶ್ ಕಾಫಿಯ ರುಚಿಯನ್ನು ಸವಿಯುವ ಅವಕಾಶವಿದೆ.
ದೇಶಾದ್ಯಂತ ಸಪ್ಲೈ
ಕಂಪ್ಯೂಟರ್ ಮುಂದೆ ಕೂತು ತಲೆ ಬಿಸಿಯಾದಾಗ, ಆ ಹಳೇ ಕಾಲದ ಫಿಲ್ಟರ್ ಕಾಫಿ ನೆನಪಾದರೆ ಹೇಗೆ? ಅದಕ್ಕಾಗಿಯೇ ಮಾತಾಸ್ ಕಾಫಿಯವರು ಕಾರ್ಪೊರೆಟ್ ವಲಯಕ್ಕೆ ಕಾಲಿಟ್ಟಿದ್ದಾರೆ. ಕೆಲಸದ ಒತ್ತಡದ ನಡುವೆ ಒಂದು ಸಣ್ಣ ರಿಲ್ಯಾಕ್ಸೇಷನ್ ನೀಡುವ ಉದ್ದೇಶದಿಂದ ಕಾಫಿ ವೆಂಡಿಂಗ್ ಮಷಿನ್‌ಗಳನ್ನು ಅಳವಡಿಸಿದ್ದಾರೆ. ಬಾಷ್ ಹಾಗೂ ಇನ್ನೂ ಹಲವು ಕಾರ್ಪೊರೆಟ್ ಸಂಸ್ಥೆಗಳಲ್ಲಿ ಇವರ ವೆಂಡಿಂಗ್ ಮಷಿನ್‌ಗಳನ್ನು ನೋಡಬಹುದು. ಇವರ ಲೈವ್ ಕೌಂಟರ್‌ಗಳಂತೂ ಮದುವೆ ಅಥವಾ ಇನ್ಯಾವುದೇ ಫಂಕ್ಷನ್‌ಗಳಲ್ಲಿ ಫುಲ್ ಡಿಮ್ಯಾಂಡ್ ಕ್ರಿಯೇಟ್ ಮಾಡಿವೆ. ಹಾಗೆಯೇ ರಿಟೇಲ್ ಅಲ್ಲಿ ಕೂಡ ಇವರ ಕಾಫಿ ಪುಡಿಗಳ ಸಪ್ಲೈ ಶುರು ಆಗಿದೆ. ಅಮೆಝಾನ್, ಬ್ಲಿಂಕಿಟ್ ಮೂಲಕ ಕೂಡ ಕಾಫಿ ಪುಡಿ ಪ್ಯಾಕೆಟ್ ತರಿಸಿಕೊಳ್ಳಬಹುದು. ವಿಶೇಷ ಎಂದರೆ ಇತ್ತೀಚೆಗೆ ಭಾರತದಾದ್ಯಂತ ಕಾಫಿ ಸಪ್ಲೈ ಮಾಡುವುದಕ್ಕಾಗಿ ಹೆಲ್ಪ್‌ಲೈನ್ ಶುರು ಮಾಡಲಾಗಿದೆ. ಪೋಸ್ಟ್ ಆಫೀಸ್ ಸಹಾಯ ಪಡೆದು ದೇಶಾದ್ಯಂತ ಕಾಫಿ ಪುಡಿಗಳನ್ನು ವಿತರಿಸುವ ಜವಾಬ್ದಾರಿಯನ್ನು ಮಾತಾಸ್ ಹೊತ್ತುಕೊಂಡಿದೆ.

ಅಮ್ಮನ ನೆನಪು
ಈ ಸಂಸ್ಥೆಗೆ ಮಾತಾಸ್ ಎಂದು ಹೆಸರಿಡುವ ಹಿಂದೆ ಒಂದು ಕಾರಣವಿದೆ. ಚಿಕ್ಕವಯಸ್ಸಿನಂದಲೂ ಕಾಫಿ ಪ್ರಿಯರಾದ ವಿಶ್ವನಾಥ್ ಅವರು ಅಮ್ಮ ಮಾಡಿಕೊಡುವ ರುಚಿಯಾದ ಕಾಫಿಯನ್ನು ನೆನಪಿಸುವಂಥ ಕಾಫಿ ಪುಡಿ ಇದಾಗಬೇಕು ಎನ್ನುವ ಉದ್ದೇಶದಿಂದ ಈ ಹೆಸರು ಇಟ್ಟಿದ್ದಾರೆ. ಮಾತಾಸ್ ಎಂದರೆ ಮಾತೆಯದ್ದು ಎಂಬ ಅರ್ಥದಲ್ಲಿ ಹೆಸರಿಡಲಾಗಿದೆ. ಅಪ್ಪಟ ದೇಸಿ ಸ್ಟೈಲ್‌ನಲ್ಲಿ, ಮನೆಮನೆಗೂ ಹೊಟೇಲ್ ರುಚಿಯ ಕಾಫಿ ತಲುಪಿಸಬೇಕು ಎನ್ನುವುದು ಇವರ ಕನಸಾಗಿತ್ತು. ಈ ರುಚಿಯ ರಹಸ್ಯ ಇರುವುದೇ ಕಾಫಿ ನಾಡು ಚಿಕ್ಕಮಗಳೂರಿನಲ್ಲಿ! ಅಲ್ಲಿನ ಬೆಟ್ಟಗುಡ್ಡಗಳಲ್ಲಿ ಬೆಳೆದ ಬೆಸ್ಟ್ ಕಾಫಿ ಬೀಜಗಳನ್ನು ಆಯ್ದು ತಂದು, ಬೆಂಗಳೂರಿನಲ್ಲಿ ಹದವಾಗಿ ಹುರಿದು, ಪುಡಿ ಮಾಡಿ, ಪ್ಯಾಕ್ ಮಾಡಲಾಗುತ್ತದೆ. ಮಾತಾಸ್ ಕಾಫಿಯ ಮತ್ತೊಂದು ವಿಶೇಷತೆ ಎಂದರೆ ಅವರ ಪ್ಯಾಕೇಜಿಂಗ್. ನೋಡಲು ಮಾಡರ್ನ್ ಆಗಿದ್ದರೂ, ಒಳಗಿರುವುದು ಮಾತ್ರ ಅಪ್ಪಟ ಹಳೆಯ ಕಾಲದ ರುಚಿ. ಕಾಲ ಬದಲಾದಂತೆ ಮಾತಾಸ್ ಕಾಫಿ ಕೂಡ ಬದಲಾಗಿದೆ, ಆದರೆ ಅವರ ಮೂಲ ತತ್ತ್ವ ಮಾತ್ರ ಹಾಗೆಯೇ ಇದೆ. ಪ್ರತಿ ಪ್ಯಾಕೆಟ್‌ನಲ್ಲೂ ಫ್ರೆಶ್‌ನೆಸ್ ಇರಬೇಕು ಎನ್ನುವುದು ವಿಶ್ವನಾಥ್ ಅಡಿಗ ಅವರ ಕಟ್ಟುನಿಟ್ಟಾದ ಆದೇಶ. ಅದಕ್ಕಾಗಿಯೇ ಕಾಫಿ ಬೀಜಗಳನ್ನು ಪುಡಿ ಮಾಡಿದ ತಕ್ಷಣ ಆ ಸುಗಂಧ ಆವಿಯಾಗದಂತೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಪ್ಯಾಕ್ ಮಾಡಲಾಗುತ್ತದೆ.
ಬಗೆಬಗೆಯ ರುಚಿ
ಮಾತಾಸ್ ಹತ್ತಿರ ಪ್ರತಿಯೊಬ್ಬರಿಗೂ ಒಂದೊಂದು ಸ್ಪೆಷಲ್ ಬ್ಲೆಂಡ್ ಇದೆ. 100% ಪ್ಯೂರ್ ಕಾಫಿ ಬೇಕಾದವರಿಗೆ ʼಲೆಜೆಂಡ್ʼ, ಉಳಿದಂತೆ ʼಗೋಲ್ಡ್ʼ, ʼಸುಪ್ರೀಂʼ ಮತ್ತು ʼಎನ್‌ರಿಚ್ʼ ಎಂಬ ವೆರೈಟಿ ಪ್ಯಾಕ್‌ಗಳಿವೆ. ಮಾಡರ್ನ್ ಡಿಸೈನ್ ಜತೆಗೆ ಟ್ರೆಡಿಷನಲ್ ರುಚಿಯನ್ನು ಕಾಪಾಡಿಕೊಂಡಿರುವ ಮಾತಾಸ್ ಕಾಫಿ, ಇಂದಿನ ಇನ್ಸ್ಟಂಟ್ ಕಾಫಿ ಯುಗದಲ್ಲೂ ಫಿಲ್ಟರ್ ಕಾಫಿಯ ಘಮವನ್ನು ಜೀವಂತವಾಗಿರಿಸಿದೆ. 2025ರಲ್ಲಿ ಬೆಂಗಳೂರು ಹೊಟೇಲ್ ಅಸೋಸಿಯೇಷನ್ (BHA) ಮಾತಾಸ್ ಕಾಫಿಗೆ ʼಬೆಂಗಳೂರಿನ ಅತ್ಯುತ್ತಮ ಫಿಲ್ಟರ್ ಕಾಫಿʼ ಎಂಬ ಕಿರೀಟ ತೊಡಿಸಿದೆ. ಕೇವಲ ಬೆಂಗಳೂರಷ್ಟೇ ಅಲ್ಲ, ಮೈಸೂರು, ಶಿವಮೊಗ್ಗ, ಉಡುಪಿ, ಮಂಗಳೂರಿನಿಂದ ಹಿಡಿದು ಮುಂಬೈ, ತಮಿಳುನಾಡು ಮತ್ತು ಆಂಧ್ರಪ್ರದೇಶದವರೆಗೂ ಮಾತಾಸ್ ಕಾಫಿಯ ಫ್ಯಾನ್ಸ್ ಇದ್ದಾರೆ. ನಿಮಗೆ ಕಾಫಿ ಪುಡಿ ಬೇಕಿದ್ದರೆ ಡೈರೆಕ್ಟಾಗಿ ಒಂದು ಫೋನ್ ಕಾಲ್ ಮಾಡಿದರೆ ಸಾಕು, ನಿಮ್ಮ ಮನೆ ಬಾಗಿಲಿಗೆ ಪಾರ್ಸೆಲ್ ಬರುತ್ತದೆ.
ಕಾಫಿ ರುಚಿಯಲ್ಲಿ ಪ್ರವಾಸೋದ್ಯಮ
ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರು ಕೇವಲ ದೇವಸ್ಥಾನ ಅಥವಾ ಬೀಚ್‌ಗಳಿಗೆ ಹೋಗುವುದನ್ನು ಬಿಟ್ಟು, ಹೊಸ ಅನುಭವಗಳ ಹುಡುಕಾಟದಲ್ಲಿದ್ದಾರೆ. ಅಂಥವರಿಗೆ ಕಾಫಿ ಪ್ರವಾಸೋದ್ಯಮ ಅಥವಾ ಕಾಫಿ ಟೂರಿಸಂ ಒಂದು ಅದ್ಭುತ ಆಯ್ಕೆ.

ಕರ್ನಾಟಕದ ಚಿಕ್ಕಮಗಳೂರು, ಕೊಡಗು ಮತ್ತು ಬಾಬಾಬುಡನ್‌ಗಿರಿಯಂಥ ಪ್ರದೇಶಗಳು ಕಾಫಿ ಪ್ರವಾಸೋದ್ಯಮಕ್ಕೆ ವಿಶ್ವವಿಖ್ಯಾತವಾಗಿವೆ. ಇಲ್ಲಿನ ಎಸ್ಟೇಟ್‌ಗಳಲ್ಲಿ ತಂಗುವುದು ಅಂದ್ರೆ ಅದು ಪ್ರಕೃತಿಯ ಮಡಿಲಲ್ಲಿ ಮಲಗಿದಂತೆ. ಹಚ್ಚ ಹಸಿರಿನ ಕಾಫಿ ಗಿಡಗಳ ನಡುವೆ ನಡಿಗೆ, ಬೆಳ್ಳಂಬೆಳಗ್ಗೆ ಮಂಜಿನ ಹನಿಗಳ ಜತೆ ಕಾಫಿ ತೋಟದ ವೀಕ್ಷಣೆ ಮನಸ್ಸಿಗೆ ಎಲ್ಲಿಲ್ಲದ ಶಾಂತಿ ನೀಡುತ್ತದೆ. ಪ್ರವಾಸಿಗರು ಇಲ್ಲಿ ಕಾಫಿ ಬೀಜಗಳನ್ನು ಕೊಯ್ಯುವುದು, ಅವುಗಳನ್ನು ಸಂಸ್ಕರಿಸುವುದು ಮತ್ತು ಹದವಾಗಿ ಹುರಿಯುವ ಪ್ರಕ್ರಿಯೆಯನ್ನು ಕಣ್ಣಾರೆ ನೋಡಬಹುದು.
ಅನೇಕ ಕಾಫಿ ಎಸ್ಟೇಟ್‌ಗಳು ಈಗ ಹೋಂ ಸ್ಟೇಗಳಾಗಿ ಬದಲಾಗಿದ್ದು, ಪ್ರವಾಸಿಗರಿಗೆ ಸ್ಥಳೀಯ ಕೊಡವ ಅಥವಾ ಮಲೆನಾಡು ಶೈಲಿಯ ಅಡುಗೆಯ ಜೊತೆಗೆ ವಿವಿಧ ಬಗೆಯ ಕಾಫಿ ರುಚಿ ನೋಡುವ ಅವಕಾಶ ನೀಡುತ್ತವೆ. ಕಾಫಿ ಹೂವು ಬಿಡುವ ಸಮಯದಲ್ಲಿ ತೋಟಗಳು ಬಿಳಿ ಬಣ್ಣದ ಹಾಸಿಗೆಯಂತೆ ಕಾಣುತ್ತವೆ, ಅದರ ಸುಗಂಧವಂತೂ ಅದ್ಭುತ! ಕೆಲಸದ ಒತ್ತಡದಿಂದ ದೂರವಾಗಿ, ಹಸಿರಿನ ನಡುವೆ ಒಂದು ಕಪ್ ಅಪ್ಪಟ ಫಿಲ್ಟರ್ ಕಾಫಿ ಹೀರುತ್ತಾ ಕಾಲ ಕಳೆಯುವುದು ಪ್ರತಿಯೊಬ್ಬ ಕಾಫಿ ಪ್ರೇಮಿಯ ಕನಸು. ಈ ಕಾಫಿ ಪ್ರವಾಸೋದ್ಯಮವು ಸ್ಥಳೀಯ ರೈತರಿಗೆ ಆದಾಯ ತರುವುದಲ್ಲದೆ, ನಮ್ಮ ಮಣ್ಣಿನ ಕಾಫಿ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುತ್ತಿದೆ. ಹಾಗೇನಾದರು ಕಾಫಿಯ ಅಥೆಂಟಿಕ್ ರುಚಿಯನ್ನು ನೋಡುವ ಅವಕಾಶ ಇಲ್ಲದಿದ್ದರೆ ಅಥವಾ ಎಲ್ಲೂ ಪ್ರವಾಸ ಹೋಗಲು ಸಾಧ್ಯವಾಗದಿದ್ದರೆ ಮಾತಾಸ್ ಕಾಫಿ ಪುಡಿಯನ್ನು ಮನೆಗೆ ತರಿಸಿಕೊಂಡು ರುಚಿಯನ್ನು ಸವಿಯಬಹುದು.
ಆಹಾರ ಕ್ಷೇತ್ರದಲ್ಲಿ ಏನಾದರು ವ್ಯಾಪಾರ ಮಾಡಬೇಕು ಎನ್ನುವುದು ನನ್ನ ಆಸೆಯಾಗಿತ್ತು. ಹಾಗೆ ಶುರುವಾದ ಬ್ಯಸಿನೆಸ್ ಇದು. ಶುರುವಿನಲ್ಲಿ ಬಹಳ ಕಷ್ಟವಿತ್ತು. ಆದರೆ, ಅನೇಕ ಹೊಟೇಲ್ ಮಾಲೀಕರ ಪರಿಚಯ ಇದ್ದಿದ್ದರಿಂದ ಅವರು ಸಹಾಯ ಮಾಡಿದರು. ಸಾಕಷ್ಟು ಹೊಟೇಲ್‌ಗಳಿಗೆ ಭೇಟಿ ನೀಡಿ ಒತ್ತಾಯ ಮಾಡಿ ನಮ್ಮ ಕಾಫಿ ಪುಡಿಯ ಸ್ಯಾಂಪಲ್ ನೀಡುತ್ತಿದ್ದೆವು. ಸಾಮಾನ್ಯವಾಗಿ ಯಾವುದೇ ಹೊಟೇಲ್‌ನವರು ಕಾಫಿ ಪುಡಿಯನ್ನು ಬದಲಾಯಿಸಲು ಇಷ್ಟಪಡುವುದಿಲ್ಲ. ಹೀಗಾಗಿ ಅವರನ್ನು ಕನ್ವಿನ್ಸ್ ಮಾಡುವುದು ಕಷ್ಟವಿತ್ತು. ಶುರುವಿನಲ್ಲಿ ಪ್ರೊಡಕ್ಷನ್ ಇಂದ ಹಿಡಿದು ಮಾರ್ಕೆಟಿಂಗ್‌ವರೆಗೆ ಎಲ್ಲವೂ ನಾನೇ ನೋಡಿಕೊಳ್ಳಬೇಕಿತ್ತು. ಎರಡನೆಯ ಮಹಡಿಯಲ್ಲಿ ನಮ್ಮ ಫ್ಯಾಕ್ಟರಿ ಇತ್ತು. ಅಲ್ಲಿಗೆ ಚೀಲವನ್ನು ಕೂಡ ನಾನೇ ಎತ್ತಿಕೊಂಡು ಹೋಗಿದ್ದೇನೆ. ಆಗೆಲ್ಲ ಕೆಲಸಗಾರರನ್ನು ಕರೆಸುವುದು ಕಷ್ಟವಿತ್ತು. ಹಾಗೆಯೇ ಇತರ ಸಂಸ್ಥೆಗಳ ಕಾಂಪಿಟೇಶನ್ ಕೂಡ ಹೆಚ್ಚಿತ್ತು. ಯಾವುದೇ ಹೊಸ ಸಾಹಸ ಮಾಡುವುದಾದರೂ ಹೂಡಿಕೆ ತರುವುದು ಕಷ್ಟವಾಗುತ್ತದೆ. ನಮಗೂ ಹಾಗೆಯೇ ಆಗಿತ್ತು. ಬಳಿಕ ಕೋವಿಡ್ ಸಂದರ್ಭದಲ್ಲಿ ವ್ಯಾಪಾರ ಕಡಿಮೆ ಅಯಿತು. ಆಗ ಆರ್ಥಿಕವಾಗಿ ಸ್ವಲ್ಪ ಪೆಟ್ಟು ಬಿದ್ದಿತ್ತು. ಆದರೆ, ನಂತರದ ಒಂದೆರಡು ವರ್ಷಗಳಲ್ಲಿ ನಮ್ಮ ವ್ಯಾಪಾರ ಮತ್ತೆ ಚಿಗುರಿತು. ಈಗ 90 ಜನ ಕೆಲಸಗಾರರು ಕೆಲಸ ಮಾಡುತ್ತಿದ್ದಾರೆ.
- ವಿಶ್ವನಾಥ ಅಡಿಗ ಟಿ, ಮಾತಾಸ್ ಸಂಸ್ಥಾಪಕ
ವಿಳಾಸ: ಮೊದಲನೆಯ ಬ್ಲಾಕ್, ಅಶೋಕ ಪಿಲ್ಲರ್ ರಸ್ತೆ, ಮಯ್ಯ ಆಸ್ಪತ್ರೆ ಪಕ್ಕ, 1st ಬ್ಲಾಕ್, ಜಯನಗರ, ಬೆಂಗಳೂರು, ಕರ್ನಾಟಕ- 560011
ಸಂಪರ್ಕ: 9900988820