• ವಾಣಿ ಮೈಸೂರು

ಐತಿಹಾಸಿಕ, ಧಾರ್ಮಿಕ ಹಾಗೂ ಭಾರತೀಯ ಪರಂಪರೆಯ ಹಿನ್ನಲೆ ಇರುವ ಹಲವು ತಾಣಗಳು ಇವೆ. ಅವುಗಳಲ್ಲಿ ಒಂದು ʼಹಿಮವದ್ ಗೋಪಾಲ ಸ್ವಾಮಿ ಬೆಟ್ಟʼ. ಕರ್ನಾಟಕದ ರಮಣೀಯ ಪ್ರವಾಸಿ ತಾಣ. ಈ ದೇವಾಲಯದ ಗರ್ಭಗುಡಿಗೆ ಇರುವ ಬಾಗಿಲಿನ ಮೇಲ್ಭಾಗದಿಂದ ಸತತವಾಗಿ ಹಿಮದ ನೀರು ಸುರಿಯುತ್ತಲೇ ಇರುತ್ತದೆ. ಹಾಗಾಗಿ ಈ ಬೆಟ್ಟಕ್ಕೆ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಎಂಬ ಹೆಸರಿದೆ.

ಇದನ್ನೂ ಓದಿ: ಜೆನ್‌ ಜಿ಼ ಟ್ರಾವೆಲ್‌ ಮಾಡುವ ಪರಿ ಗೊತ್ತೇನು?

ಇಲ್ಲಿ ಹಿಮದ ಹನಿಗಳಿಂದ ಬೆಟ್ಟವು ಮಣಿಗಳಿಂದ ಪೋಣಿಸಿದಂತೆ ಕಾಣುತ್ತದೆ. ನಿಸರ್ಗದ ಈ ಸೌಂದ್ರ್ಯಕ್ಕೆ ಎಂಥವರೂ ಮೆಚ್ಚಿಕೊಳ್ಳುತ್ತರೆ. ಈ ಬೆಟ್ಟದ ಸುತ್ತ ಒಂದು ಪ್ರದಕ್ಷಿಣೆ ಹಾಕಿದರೆ ತಂಗಾಳಿಯಲ್ಲಿ ಕೆಳೆದುಹೋದ ಅನುಭವವಾಗುತ್ತದೆ. ಸುಂದರ ಹಸಿರಿನ ಸಂಪತ್ತು ಇಲ್ಲಿನ ವಾತಾವರಣವನ್ನು ಆವರಿಸಿದೆ. ಇಲ್ಲಿನ ಉಂಟಾಗುವ ಫಾಗ್‌ ಮಧ್ಯೆ ಓಡಾಡುವಾಗ ಆಗುವ ಅನಿಭವವನ್ನು ಪದಗಳಲ್ಲಿ ಬಣ್ಣಿಸುವುದು ಕಷ್ಟಸಾಧ್ಯ. ಅದನ್ನು ಅನುಭವಿಸಿಯೇ ಅರಿತುಕೊಳ್ಳಬೇಕು.

Untitled design - 2026-03-09T132106.691

ಪ್ರಕೃತಿಯನ್ನು ಆರಾಧಿಸುವ ಮತ್ತು ಆಸ್ವಾದಿಸುವ ಜನರಿಗೆ ಈ ಬೆಟ್ಟ ನಿಸರ್ಗದ ಚಿತ್ತಾರಗಳನ್ನೇ ಹೆಕ್ಕಿ ಕಲೆ ಹಾಕಿದೆ ಅನಿಸುತ್ತದೆ. ಹಿಮವದ್ ಗೋಪಾಲ ಸ್ವಾಮಿ ಬೆಟ್ಟ ರಾಜ್ಯದ ಅತ್ಯಂತ ಎತ್ತರದ ಬೆಟ್ಟಗಳಲ್ಲಿ ಮೂರನೆಯ ಸ್ಥಾನದಲ್ಲಿದೆ. ಇದು ಸಮುದ್ರಮಟ್ಟದಿಂದ ಸುಮಾರು 1440 ಮೀಟರ್‌ ಎತ್ತರವಿದ್ದು, ಬೆಟ್ಟದ ಮೇಲೆ ಶ್ರೀ ಕೃಷ್ಣನ ದೇವಾಲಯವಿದೆ. ಪುರಾಣದಲ್ಲಿ ಕೃಷ್ಣನ ಕೊಳಲಿ ನಾದಕ್ಕೆ ಗೋವುಗಳು ಕೃಷ್ಣಪರಮಾತ್ಮರ ಸುತ್ತ ನಿಲ್ಲುತ್ತಿದ್ದವು, ಮೈ ಮರೆತು ಕೊಳಲಿನ ಸದ್ದಿಗೆ ಮಂತ್ರಮುಗ್ದವಾಗುತ್ತಿದ್ದವು. ಥೇಟ್‌ ಅದರಂತೆ ಇಲ್ಲಿನ ವಾತಾವರಣವನ್ನು ಆಸ್ವಾಧಿಸುವ ಎಲ್ಲರಿಗೂ ಅದರ ಅನುಭವವಾಗುತ್ತದೆ. ಈ ಬೆಟ್ಟದ ತುದಿಯಿಂದ ಸೂರ್ಯೋದಯ ಮತ್ತು ಸೂರ್ಯಾಸ್ತಗಳ ವಿಹಂಗಮ ನೋಟಗಳು ತುಂಬಾ ಪ್ರಸಿದ್ಧಿ ಪಡೆದಿವೆ.

ಇಲ್ಲಿ ಪ್ರವಾಸಿಗರು ಮುಕ್ತವಾಗಿ ಓಡಾಡಲು ಅವಕಾಶವಿಲ್ಲ. ಏಕೆಂದರೆ ಇಲ್ಲಿಗೆ ಸಮೀಪದಲ್ಲಿ ಬಂಡಿಪುರ ರಾಷ್ಟ್ರೀಯ ಉದ್ಯಾನವಿದೆ. ಅದರ ವ್ಯಾಪ್ತಿಯ ಪ್ರದೇಶದಲ್ಲಿ ಹಿಮವದ್‌ ಗೋಪಾಲ ಸ್ವಾಮಿ ದೇವಾಲಯವಿದೆ. ಹಾಗಾಗಿ ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಭೇಟಿಗೆ ಅವಕಾಶವಿದ್ದು, ನಂತರ ಇಲ್ಲಿಗೆ ಪ್ರವೇಶವಿರುವುದಿಲ್ಲ. ಅಲ್ಲಿ ಉಳಿದುಕೊಳ್ಳಲೂ ಅವಕಾಶ ಇರುವುದಿಲ್ಲ. ಏಕೆಂದರೆ ಈ ಸಮಯದಲ್ಲಿ ಇಲ್ಲಿ ಕಾಡಾನೆಗಳ ಸಂಚಾರವಿರುತ್ತದೆ.. ಇದು ಜನರ ಪಾಲಿಗೆ ಅಪಾಯ ಎಂಬುದು ಅರಣ್ಯ ಇಲಾಖೆಯ ಮುನ್ನೆಚ್ಚರಿಕೆ ಕ್ರಮ.

Untitled design - 2026-03-09T132004.099

ದಾರಿ ಹೇಗೆ?

ಹಿಮವದ್ ಗೋಪಾಲಸ್ವಾಮಿ ಬೆಟ್ಟವು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿದೆ. ಗುಂಡ್ಲುಪೇಟೆಯಿಂದ ಕೇವಲ 35 ಕಿಲೋ ಮೀಟರ್ ಮತ್ತು ಚಾಮರಾಜನಗರದಿಂದ 75 ಕಿಲೋ ಮೀಟರ್‌ ದೂರದಲ್ಲಿದೆ.