Saturday, March 7, 2026
Saturday, March 7, 2026

ಶಿರಸಿಯಲ್ಲಿ ಮಾರಿಕಾಂಬಾ ಜಾತ್ರೆಯ ಕಲರವ

ಎರಡು ವರ್ಷಗಳಿಗೊಮ್ಮೆ ಇಲ್ಲಿ ಸತತ 9 ದಿನಗಳವರೆಗೆ ಅದ್ದೂರಿ ಜಾತ್ರಾ ಮಹೋತ್ಸವವನ್ನು ಆಯೋಜಿಸಲಾಗುತ್ತದೆ. ಇದು ರಾಜ್ಯದ ಅತ್ಯಂತ ಪ್ರಸಿದ್ಧ ಮತ್ತು ದೊಡ್ಡ ಜಾತ್ರೆಗಳಲ್ಲಿ ಒಂದು ಎಂದು ಗುರುತಿಸಿಕೊಂಡಿದೆ. ಜಾತ್ರೆಯ ಸಮಯದಲ್ಲಿ ದೇವಿಯ ಮೂರ್ತಿಯನ್ನು ಅದ್ಧೂರಿ ರಥೋತ್ಸವದಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಕೇವಲ ಪ್ರಾರ್ಥನೆಯಿಂದ ಭಕ್ತರ ಸಕಲ ಇಷ್ಟಾರ್ಥಗಳನ್ನು ದೇವಿ ಪೂರೈಸುತ್ತಾಳೆ ಎಂಬುದು ಭಕ್ತರ ನಂಬಿಕೆ.

  • ಯಶಸ್ವಿ ದೇವಾಡಿಗ, ಶಿರಸಿ

ಶಿರಸಿ ಮಾರಿಕಾಂಬಾ ದೇವಾಲಯ, ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿನ ಪ್ರಸಿದ್ಧ ದೇವಾಲಯ. ಈ ದೇವಾಲಯದ ಬಳಿ ಒಂದಷ್ಟು ಸಮಯ ಕಳೆದರೂ ಸಾಕು ಮನಸು ಹಗುರಾಗುತ್ತದೆ. ಈ ಪವಿತ್ರ ದೇವಾಲಯವನ್ನು ಪ್ರವೇಶಿಸುತ್ತಿದ್ದಂತೆ ಎರಡು ಆನೆಗಳ ಮೂರ್ತಿಯು ನಿಮ್ಮನ್ನು ಸ್ವಾಗತಿಸುತ್ತವೆ. ತಾಯಿಯ ದರ್ಶನವಾಗುತ್ತಿದ್ದಂತೆ ಧನ್ಯತೆಯ ಭಾವ ಮೂಡುತ್ತದೆ.

ಉತ್ತರ ಕನ್ನಡ ಜಿಲ್ಲೆ ಒಂದು ಸುಂದರ ಪ್ರವಾಸಿ ತಾಣವೂ ಆಗಿದೆ. ದೇಶ-ವಿದೇಶಗಳಿಂದ ಭಕ್ತರು ದೇವಿಯ ಆಶೀರ್ವಾದ ಪಡೆಯಈ ಬಾರಿಯ ಜಾತ್ರಾ ಮಹೋತ್ಸವ ಇದೇ ಫೆಬ್ರವರಿ 24 ರಿಂದ ಮಾರ್ಚ್ 4 ರವರೆಗೆ ನಡೆಯಲಿದೆ.

ಇದನ್ನೂ ಓದಿ: ದಕ್ಷಿಣ ಭಾರತದ ಬಹುದೊಡ್ಡ ಜಾತ್ರೆ

ದೇವಸ್ಥಾನದ ಇತಿಹಾಸ

ಶಿರಸಿಯ ಮಾರಿಕಾಂಬಾ ದೇವಾಲಯವನ್ನು ಅಮ್ಮನವರ ಗುಡಿ, ಮಾರಿಗುಡಿ, ದೊಡ್ಡಮ್ಮನ ದೇವಸ್ಥಾನ ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ. ದೇವಿಯ ಕುರಿತು ಸಾಕಷ್ಟು ಪುರಾಣ ಕಥೆಗಳೂ ಇವೆ. ಅವುಗಳಲ್ಲಿ ಒಂದು ಕಥೆಯ ಪ್ರಕಾರ, ಶಿರಸಿ ಒಂದು ಕುಗ್ರಾಮವಾಗಿತ್ತು. ಇಲ್ಲಿನ ಒಂದು ಕೆರೆಯಲ್ಲಿ ದೇವಿಯ ಕಟ್ಟಿಗೆಯ ವಿಗ್ರಹ ಸಿಕ್ಕಿತ್ತು ಎನ್ನಲಾಗಿದೆ. ಭಕ್ತರು ಆಗ ವಿಜಯನಗರ ಸಾಮ್ರಾಜ್ಯದ ಅಂಗವಾಗಿದ್ದ ಸೋಂದಾ ರಾಜ್ಯದ ಮಹಾಪ್ರಭುಗಳಲ್ಲಿ ವಿನಂತಿಸಿದಾಗ, ಅರಸರಾದ ಶ್ರೀ ಇಮ್ಮಡಿ ಸದಾಶಿವರಾಯರು ಶಿರಸಿಯಲ್ಲಿ ಗ್ರಾಮದೇವತೆಯಾಗಿ ಪ್ರತಿಷ್ಠೆ ಮಾಡಲು ಅನುಮತಿ ನೀಡಿದರು. ಇದರಿಂದ ದೇವಾಲಯ ನಿರ್ಮಾಣವಾಯಿತು ಎನ್ನಲಾಗಿದೆ. ಕರ್ನಾಟಕದ ಎಲ್ಲಾ ಮಾರಿಯಮ್ಮಗಳ ಹಿರಿಯ ಸಹೋದರಿ ಶ್ರೀ ಮಾರಿಕಾಂಬಾ ಎಂಬ ಪ್ರತೀತಿ ಇಲ್ಲಿದೆ. ಹಾನಗಲ್‌ನಿಂದ ಶಿರಸಿಗೆ ದೇವಿಯ ವಿಗ್ರಹ ಬಂದಿತೆಂದು ಪುರಾಣಗಳು ಹೇಳುತ್ತವೆ.

Untitled design - 2026-03-06T163532.541

ಶಿರಸಿ ಮಾರಿಕಾಂಬಾ ಜಾತ್ರೆ

ಎರಡು ವರ್ಷಗಳಿಗೊಮ್ಮೆ ಇಲ್ಲಿ ಸತತ 9 ದಿನಗಳವರೆಗೆ ಅದ್ದೂರಿ ಜಾತ್ರಾ ಮಹೋತ್ಸವವನ್ನು ಆಯೋಜಿಸಲಾಗುತ್ತದೆ. ಇದು ರಾಜ್ಯದ ಅತ್ಯಂತ ಪ್ರಸಿದ್ಧ ಮತ್ತು ದೊಡ್ಡ ಜಾತ್ರೆಗಳಲ್ಲಿ ಒಂದು ಎಂದು ಗುರುತಿಸಿಕೊಂಡಿದೆ. ಜಾತ್ರೆಯ ಸಮಯದಲ್ಲಿ ದೇವಿಯ ಮೂರ್ತಿಯನ್ನು ಅದ್ಧೂರಿ ರಥೋತ್ಸವದಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಕೇವಲ ಪ್ರಾರ್ಥನೆಯಿಂದ ಭಕ್ತರ ಸಕಲ ಇಷ್ಟಾರ್ಥಗಳನ್ನು ದೇವಿ ಪೂರೈಸುತ್ತಾಳೆ ಎಂಬುದು ಭಕ್ತರ ನಂಬಿಕೆ. ಜಯಂತಿ, ನವರಾತ್ರಿ, ಕಾರ್ತಿಕೋತ್ಸವ ಹಾಗೂ ಎರಡು ವರ್ಷಗಳಿಗೊಮ್ಮೆ ವೈಭವ ಪೂರ್ಣ ಜಾತ್ರೆ ಇಲ್ಲಿ ಜರುಗುವ ಪ್ರಸಿದ್ದ ಧಾರ್ಮಿಕ ಉತ್ಸವಗಳು. ಜಾತ್ರಾ ಮಹೋತ್ಸವದ ನಂತರ 10 ದಿನಗಳವರೆಗೆ ಇಲ್ಲಿ ಯಾವುದೇ ಶುಭ ಕಾರ್ಯವನ್ನು ಆಯೋಜಿಸುವುದಿಲ್ಲ.

ಜಾತ್ರೆಯ ನೀಲಿನಕ್ಷೆ

ಫೆ.24 ರಂದು ದೇವಿಯ ರಥದ ಕಳಸ ಪ್ರತಿಷ್ಠೆ ಮತ್ತು ಜಾತ್ರಾ ಕಲ್ಯಾಣ ಪ್ರತಿಷ್ಠೆ, ಫೆ.25 ರಂದು ಬೆಳಗ್ಗೆ 7.27ಕ್ಕೆ ರಥೋತ್ಸವ ಹಾಗೂ ಫೆ.26ರಂದು ಗದ್ದುಗೆ ಸೇವೆಗಳು ನಡೆಯಲಿವೆ. ಮಾರ್ಚ್‌ 4ರಂದು ಜಾತ್ರೆ ಮುಕ್ತಾಯವಾಗಲಿದ್ದು, ಮಾರ್ಚ್‌ 19ರಂದು ಯುಗಾದಿ ಪ್ರತಿಷ್ಠೆ ನೆರವೇರಲಿದೆ.

Untitled design - 2026-03-06T163459.820

ಸೇವೆ ಸೌಲಭ್ಯಗಳ ಮಾಹಿತಿ

ಮಂಗಳವಾರ ಮತ್ತು ಶುಕ್ರವಾರ ಬೆಳಗ್ಗೆ 7 ರಿಂದ ರಾತ್ರಿ 10 ಗಂಟೆಯವರೆಗೆ, ಉಳಿದ ದಿನಗಳಲ್ಲಿ ಬೆಳಗ್ಗೆ 7 ರಿಂದ ರಾತ್ರಿ 9 ಗಂಟೆಯವರೆಗೆ ಸೇವೆಗಳು ನಡೆಯುತ್ತವೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಗ್ರಂಥಾಲಯ – ವಾಚನಾಲಯ, ಭಕ್ತರ ವಾಹನಗಳ ನಿಲುಗಡೆ ಪ್ರದೇಶ ಎಲ್ಲವನ್ನು ಸಿದ್ಧಗೊಳಿಸಲಾಗಿದೆ. ಪೂಜೆಗಳ ಕುರಿತು ಮಾಹಿತಿಯನ್ನು ದೇವಸ್ಥಾನದಲ್ಲಿಯೇ ಪಡೆದುಕೊಳ್ಳಬಹದು. ಹೆಚ್ಚಿನ ಮಾಹಿತಿಗಾಗಿ ದೇವಸ್ಥಾನದ ಅಧಿಕೃತ ವೆಬ್‌ಸೈಟ್‌ ಸಹಾಯವನ್ನು ಪಡೆಯಬಹುದು. https://marikambatemple.com/

ದಾರಿ ಹೇಗೆ?

ಶಿರಸಿ ಮಾರಿಕಾಂಬಾ ದೇವಾಲಯಕ್ಕೆ ತಲುಪಲು ರಸ್ತೆ ಮಾರ್ಗ ಉತ್ತಮವಾಗಿದೆ. ಹುಬ್ಬಳ್ಳಿ- ತಾಳಗುಪ್ಪದಿಂದ 54 ಕಿಮೀ, ಗೋಕರ್ಣದಿಂದ 83 ಕಿಮೀ ದೂರದಲ್ಲಿ ದೇವಾಲಯವಿದೆ. ಬಸ್ ಅಥವಾ ಟ್ಯಾಕ್ಸಿ ಮೂಲಕ ಸುಲಭವಾಗಿ ಹೋಗಬಹುದು. ಬೆಂಗಳೂರು, ಹುಬ್ಬಳ್ಳಿ, ಕಾರವಾರ, ಶಿವಮೊಗ್ಗ, ಸಾಗರ, ಕುಂದಾಪುರದಿಂದ ಶಿರಸಿಗೆ ನೇರ ಬಸ್ ಸೌಲಭ್ಯವಿದೆ. ಶಿರಸಿ ಬಸ್ ನಿಲ್ದಾಣದಿಂದ ದೇವಾಲಯಕ್ಕೆ 2.5 ಕಿಮೀ ದೂರವಿದ್ದು, ಆಟೋ ಅಥವಾ ಟ್ಯಾಕ್ಸಿ ಲಭ್ಯವಿದೆ. ತಾಳಗುಪ್ಪ ಮತ್ತು ಹಾವೇರಿ ಹತ್ತಿರದ ರೈಲ್ವೆ ನಿಲ್ದಾಣಗಳು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ