Thursday, January 1, 2026
Thursday, January 1, 2026

ಕಪ್ಪು ಚಿರತೆಗಳ ಕಾಪಿಡಲು ಭದ್ರಾ ಬದ್ದವಾಗಬೇಕು

ಪ್ರಾಣಿಗಳಲ್ಲಿ ಕಂಡುಬರುವ ಈ ಕಪ್ಪುತನಕ್ಕೆ ಅವುಗಳಲ್ಲಿ ಆಗುವ ರಾಸಾಯನಿಕ ಪ್ರಕ್ರಿಯೆ ಕಾರಣವಾಗಿದೆ. ಇವುಗಳ ರೋಮ ಅಥವಾ ತುಪ್ಪಳ ಮತ್ತು ಚರ್ಮ ಪದರದಲ್ಲಿ ಮೆಲನಿನ್‌ ಎಂಬ ರಾಸಾಯನಿಕದ ಹೆಚ್ಚುವಿಕೆಯು ರೋಮವನ್ನು ಕಪ್ಪಾಗಿ ಕಾಣುವಂತೆ ಮಾಡುತ್ತದೆ. ಇನ್ನೂ ಈ ಬಣ್ಣ ಹಾಲಿನಂತೆ ಬಿಳಿಯೂ ಆಗಬಹುದು

ಯಾವುದೇ ಕಾಡಿನಲ್ಲಿ ಸಫಾರಿ ಹೋದರೂ ಪ್ರಾಣಿಗಳನ್ನು ನೋಡಬಹುದು. ಆದರೆ, ಅಭಯಾರಣ್ಯಗಳಲ್ಲಿ ಸ್ವಚ್ಛಂದವಾಗಿ ಓಡಾಡಿಕೊಂಡಿರುವ ಹುಲಿ, ಸಿಂಹಗಳ ದೃಶ್ಯಗಳು ನಿಮಗೆ ನೋಡಲು ಸಿಗುತ್ತವೆ ಎನ್ನುವುದು ಮಾತ್ರ ಶುದ್ಧ ಸುಳ್ಳು. ಅದು ಅದೃಷ್ಟದಾಟ. ಕೆಲವೊಮ್ಮೆ ಆ ಪ್ರಾಣಿಗಳು ನಿಮ್ಮ ಸಫಾರಿ ವಾಹನದ ಮುಂದೆಯೋ ಅಥವಾ ಮೇಲೆ ಹತ್ತಿಯೂ ಬಿಡಬಹುದು. ಮತ್ತೂ ಕೆಲವೊಮ್ಮೆ ಕಣ್ಣಿಗೆ ಬೀಳುವುದೂ ಕಷ್ಟ ಸಾಧ್ಯ. ಜಿಂಕೆ, ಕಾಡುಕೋಳಿ, ಕಾಡುಕೋಣ, ಗಿಳಿ, ನವಿಲು ಇಂಥ ಜೀವಿಗಳ ವಿಷಯದಲ್ಲಿ ಹೀಗಲ್ಲ ಅವುಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಅನಾಯಾಸವಾಗಿ ಕಾಣಬಹುದು. ಏಕೆಂದರೆ ಒಂದು ಅರಣ್ಯದಲ್ಲಿ ಇವುಗಳ ಸಂಖ್ಯೆ ಹುಲಿ, ಸಿಂಹ, ಚಿರತೆ ಹೀಗೆ ಬೆಕ್ಕಿನ ಜಾತಿಯ ದೈತ್ಯಗಳ ಸಂಖ್ಯೆಗಿಂತ ಹತ್ತಾರು ಪಟ್ಟು ಹೆಚ್ಚಾಗಿರುತ್ತದೆ. ಕೆಲವೆಡೆ ಇದು ಇನ್ನಷ್ಟೂ ಹೆಚ್ಚಿರಬಹುದು.

ಈ ಪ್ರಾಣಿಗಳೇ ಅಪರೂಪ ಎನ್ನುವಂತಿರುವಾಗ ಇವಗಳಲ್ಲಿ ಇನ್ನೂ ಅಪರೂಪ ಎನ್ನುವ ವಿಷಯಗಳನ್ನು ಹೊಂದಿದ ಪ್ರಾಣಿಗಳು ನಿಮಗೆ ನೋಡಲು ಸಿಕ್ಕರೆ ಹೇಗಿರುತ್ತದೆ? ಹೀಗೆ ಒಂದು ಅಚಾನಕ್‌ ಭೇಟಿ ಇತ್ತೀಚೆಗೆ ಭದ್ರಾ ಅಭಯಾರಣ್ಯಕ್ಕೆ ಭೇಟಿ ಪ್ರವಾಸಿಗರಿಗೆ ಆಗಿದೆ.

ಭದ್ರಾ ಅಭಯಾರಣ್ಯದಲ್ಲಿ ಕಪ್ಪು ಚಿರತೆ ಪ್ರತ್ಯಕ್ಷ

black1

ಭದ್ರಾ ಅಭಯಾರಣ್ಯದಲ್ಲಿ ಇತ್ತೀಚೆಗೆ ಒಂದು ಕಪ್ಪು ಚಿರತೆ ಕಾಣಿಸಿಕೊಂಡಿದೆ. ಈ ಹಿಂದೆ ಜೂನ್‌ ತಿಂಗಳಿನಲ್ಲಿ ಒಂದು ಕಪ್ಪು ಚಿರತೆಯ ಮರಿಯೂ ಕಾಣಿಸಿಕೊಂಡಿತ್ತು. ಅದರ ನಂತರ ಕಾಣಿಸಿಕೊಂಡ ಕಪ್ಪು ಚಿರತೆ ಇದಾಗಿದೆ. ಅರಣ್ಯ ಸಿಬ್ಬಂದಿಯ ಮಾಹಿತಿಯಂತೆ ಭದ್ರಾ ಅಭಯಾಣ್ಯದಲ್ಲಿ ಒಟ್ಟು ಮೂರು ಕಪ್ಪು ಚಿರತೆಗಳು ಈ ಮೊದಲು ಇದ್ದವು. ಈಗ ಕಾಣಿಸಿಕೊಂಡಿರುವ ಚಿರತೆಯೊಂದಿಗೆ ಈ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಲಿದೆ. ಈ ವಿಷಯ ಪ್ರಾಣಿ ಪ್ರಿಯರನ್ನು ಅಭಯಾರಣ್ಯದತ್ತ ಸೆಳೆಯುವಂತೆ ಮಾಡಿದೆ.

ಕಪ್ಪಾಗಲು ಮೆಲನಿಸಂ, ಬಿಳಿಯಾಗಲು ಕಾರಣ?

white

ಪ್ರಾಣಿಗಳಲ್ಲಿ ಕಂಡುಬರುವ ಈ ಕಪ್ಪುತನಕ್ಕೆ ಅವುಗಳಲ್ಲಿ ಆಗುವ ರಾಸಾಯನಿಕ ಪ್ರಕ್ರಿಯೆ ಕಾರಣವಾಗಿದೆ. ಇವುಗಳ ರೋಮ ಅಥವಾ ತುಪ್ಪಳ ಮತ್ತು ಚರ್ಮ ಪದರದಲ್ಲಿ ಮೆಲನಿನ್‌ ಎಂಬ ರಾಸಾಯನಿಕದ ಹೆಚ್ಚುವಿಕೆಯು ರೋಮವನ್ನು ಕಪ್ಪಾಗಿ ಕಾಣುವಂತೆ ಮಾಡುತ್ತದೆ. ಇನ್ನೂ ಬಣ್ಣ ಹಾಲಿನಂತೆ ಬಿಳಿಯೂ ಆಗಬಹುದು ಅದಕ್ಕೆ ಅಲ್ಬೆನಿಸಂ ಮತ್ತು ಲೂಸಿಯಿಸಂ ಎಂಬ ಎರಡು ಕಾರಣಗಳಿರುತ್ತವೆ. ಅಲ್ಬೆನಿಸಂ ಸಂಭವಿಸಲು ಪ್ರಾಣಿಯ ತುಪ್ಪಳ ಅಥವಾ ಚರ್ಮಗಳಲ್ಲಿ ಮೆಲನಿನ್‌ ಅಂಶ ಇಲ್ಲದೇ ಇರುವುದು ಕಾರವಾದರೆ, ಲೂಸಿರಿಸಂ ಪ್ರಾಣಿಯ ಚರ್ಮ ಅಥವಾ ತುಪ್ಪಳದಲ್ಲಿ ಯಾವುದೇ ಬಣ್ಣಗಳನ್ನು ನೀಡುವ ರಾಸಾಯನಿಕಗಳ ಉತ್ಪತ್ತಿ ಇಲ್ಲದಿರುವುದು ಕಾರಣವಾಗುತ್ತದೆ.

ಅಪರೂಪದಲ್ಲೇ ಅಪರೂಪ

black

ಜಾಗತಿಕವಾಗಿ ಬೆಕ್ಕಿನ ಜಾತಿಯ ಪ್ರಾಣಿಗಳ ಒಟ್ಟು 38 ಪ್ರಭೇದಗಳಿವೆ. ಅವುಗಳಲ್ಲಿ ಹುಲಿ, ಸಿಂಹ, ಚಿರತೆ, ಸ್ನೋ ಲೆಪರ್ಡ್‌, ಚೀತಾ ಸಾಮಾನ್ಯವಾಗಿ ನೀವು ಕೇಳಿರುತ್ತೀರಿ. ಇವುಗಳಲ್ಲಿ ಕೇವಲ 14 ಪ್ರಭೇದಗಳಲ್ಲಿ ಮಾತ್ರ ಈ ಥರದ ಕಪ್ಪುತನ ಕಾಣಲು ಸಿಗುತ್ತದೆ. ಅವುಗಳಲ್ಲಿ ಈ ಕಪ್ಪು ಚಿರತೆಯೂ ಒಂದು.

ಬ್ಲಾಕ್‌ ಟೈಗರ್‌ ಕೂಡ ಈ ಹಿಂದೆ ಕಂಡುಬಂದಿತ್ತು. ಅದೂ ಹುಲಿಯೇ ಆಗಿದ್ದು, ಹುಲಿಗಳಲ್ಲೂ ಮೆಲನಿಸಂ ಕಾರಣದಿಂದಾಗಿ ಈ ಥರದ ಕಪ್ಪುಬಣ್ಣ ಕಂಡು ಬರುತ್ತದೆ. ಆದರೆ, ಈವರೆಗೆ ಸಂಪೂರ್ಣ ಕಪ್ಪು ಬಣ್ಣದಿಂದ ಕೂಡಿದ ಹುಲಿಯ ಉದಾಹರಣೆಗಳು ಕಂಡುಬಂದಿಲ್ಲ. ಸರಳವಾಗಿ ಹೇಳುವುದಾದರೆ ಕೇಸರಿಗಿಂತ ಹೆಚ್ಚಿನ ಪಾಲು ಕಪ್ಪು ಬಣ್ಣದಿಂದ ಕೂಡಿರುತ್ತದೆ. ಇಂಥ ಹುಲಿಗಳ ಸಂಖ್ಯೆ ಅಧಿಕವಾಗಿರುವುದರಿಂದಲೇ ಸಿಮಿಲಿಪಾಲ್‌ ಟೈಗರ್‌ ರಿಸರ್ವ್‌ ಫಾರೆಸ್ಟ್‌ ಸಾಕಷ್ಟು ಹೆಸರು ಮಾಡಿದೆ.

ಮೆಲನಿಸಂ ಶಕ್ತಿಯ ಪ್ರತೀಕವಲ್ಲ

ಯಾವುದೇ ಬೆಕ್ಕಿನ ಪ್ರಜಾತಿಯಲ್ಲೂ ಈ ಮೆಲನಿಸಂ ಕಂಡುಬಂದರೂ ಅವುಗಳು ಪ್ರಾಣಿಗಳ ಶಕ್ತಿಯ ಮೇಲೆ ಪ್ರಭಾವ ಬೀರುವುದಿಲ್ಲ. ಬದಲಿಗೆ ರಾತ್ರಿವೇಳೆ ಬೇಟೆಯಾಡಲು ಇದರಿಂದ ಒಂದು ಉತ್ತಮ ಅವಕಾಶ ದೊರೆಯುತ್ತದೆಯಷ್ಟೆ. ಕತ್ತಲಿನಲ್ಲಿ ಈ ಕಪ್ಪು ರೋಮಗಳು ಬೇಟೆಯಾಗಲಿರುವ ಪ್ರಾಣಿಗಳ ಗಮನಕ್ಕೆ ಬರುವುದಿಲ್ಲವಾದ್ದರಿಂದ ರಾತ್ರಿಹೊತ್ತಿನ ಬೇಟೆ ಕೊಂಚ ಸಹಕಾರಿಯಾಗುತ್ತದೆ. ಉಳಿದಂತೆ ಇವುಗಳೂ ಸಾಮಾನ್ಯವಾಗಿ ತಮ್ಮ ಪ್ರಭೇದದ ಪ್ರಾಣಿಗಳಂತೆ.

Jadesha Emmiganur

Jadesha Emmiganur

Jadesha Emmiganur Is a Passionate Journalist from Ballari

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!