ಭಾರತದ ಪ್ರಮುಖ ನಗರಗಳು ಕೇವಲ ಜನನಿಬಿಡ ಪ್ರದೇಶಗಳಲ್ಲ, ಅವು ಇತಿಹಾಸ, ಸಂಸ್ಕೃತಿ ಮತ್ತು ಆಧುನಿಕತೆಯ ಅದ್ಭುತ ಸಂಗಮಗಳಾಗಿವೆ. ಈ ಲೇಖನವು ಭಾರತದ ಪ್ರಸಿದ್ಧ ನಗರಗಳ ಬಗ್ಗೆ ನಮಗೆ ತಿಳಿಯದ ಕೆಲವು ಕುತೂಹಲಕಾರಿ ಸಂಗತಿಗಳನ್ನು ತೆರೆದಿಡುತ್ತದೆ.

ದೆಹಲಿ: ಇತಿಹಾಸದ ಪದರಗಳು

ದೆಹಲಿ ಎಂಬ ನಗರವನ್ನು ಏಳು ಬಾರಿ ನಾಶಮಾಡಿ ನಿರ್ಮಿಸಲಾಗಿದೆ. ದೆಹಲಿಯ 'ಮೆಹ್ರೌಲಿ' ಭಾಗದಲ್ಲಿರುವ ಕುತುಬ್ ಮಿನಾರ್ ಸಂಕೀರ್ಣದಲ್ಲಿ1,600 ವರ್ಷ ಹಳೆಯದಾದ ಕಬ್ಬಿಣದ ಸ್ತಂಭವಿದೆ. ಇದು ಇಂದಿಗೂ ತುಕ್ಕು ಹಿಡಿಯದಿರುವುದು ವಿಜ್ಞಾನಿಗಳಿಗೆ ಒಂದು ದೊಡ್ಡ ರಹಸ್ಯ. ಚಾಂದಿನಿ ಚೌಕ್‌ನ ಕಿರಿದಾದ ಗಲ್ಲಿಗಳಲ್ಲಿ ಹಳೆಯ ಕಾಲದ ಮೊಘಲ್ ಆಹಾರ ಪದ್ಧತಿ ಇಂದಿಗೂ ಸಿಗುವಂತಿದೆ.

ಕೋಲ್ಕತ್ತಾ: ಸಂಸ್ಕೃತಿಯ ನೆಲೆ

ಕೋಲ್ಕತ್ತಾವನ್ನು ಸಿಟಿ ಆಫ್‌ ಜಾಯ್‌ ಎಂದು ಕರೆಯುತ್ತಾರೆ. ಬ್ರಿಟಿಷ್ ಕಾಲದ ವಾಸ್ತುಶಿಲ್ಪ ಇಲ್ಲಿನ ವಿಶೇಷತೆ. ಇಲ್ಲಿನ ಬೊಟಾನಿಕಲ್ ಗಾರ್ಡನ್‌ನಲ್ಲಿರುವ ದೊಡ್ಡ ಆಲದ ಮರ ವಿಶ್ವದಲ್ಲೇ ಅತಿ ದೊಡ್ಡದು.ಈ ಒಂದು ಮರ ಇಡೀ ಕಾಡಿಗೆ ಸಮನಾಗಿ ಕಾಣುತ್ತದೆ. ಹೌರಾ ಸೇತುವೆಯ ಮೇಲಿನ ನಸುಕಿನ ದೃಶ್ಯ ಮತ್ತು ಟ್ರಾಮ್ ಪ್ರಯಾಣ ಇಲ್ಲಿನ ವಿಶಿಷ್ಟ ಅನುಭವ.

ಮುಂಬೈ: ಕನಸುಗಳ ನಗರಿ

ಭಾರತದ ಆರ್ಥಿಕ ರಾಜಧಾನಿ ಮುಂಬೈ, ಎಂದಿಗೂ ಎಚ್ಚರವಿರುವ ನಗರ. ಮುಂಬೈ ಎಕ್‌ ಐಸಾ ಶಹರ್‌ ಹೈ ಜೊ ಕಭಿ ಸೋತಾ ನಹಿ ಎಂಬ ಮಾತು ಜಗತ್ಪ್ರಸಿದ್ಧ! ಮುಂಬೈನ 'ಡಬ್ಬಾವಾಲಾ'ಗಳ ನಿರ್ವಹಣಾ ಕೌಶಲ್ಯ ವಿಶ್ವದಾದ್ಯಂತ ಪ್ರಸಾರವಾಗಿದೆ. ಇವರು ಈಗಲೂ ಗಾಡಿಯಲ್ಲಿ ಡಬ್ಬಿಗಳನ್ನು ಇಟ್ಟುಕೊಂಡು, ಗಾಡಿಯನ್ನು ತಳ್ಳಿಕೊಂಡು ಲಕ್ಷಾಂತರ ಟಿಫನ್ ಬಾಕ್ಸ್‌ಗಳನ್ನು ಜನರಿಗೆ ತಲುಪಿಸುತ್ತಾರೆ. ಇದು ಫೋರ್ಬ್ಸ್‌ನಿಂದ ಸಿಕ್ಸ್ ಸಿಗ್ಮಾ ಎಂಬ ಖ್ಯಾತಿ ಕೂಡ ಪಡೆದಿದೆ. ಮರೀನ್ ಡ್ರೈವ್‌ನ ʼಕ್ವೀನ್ಸ್ ನೆಕ್ಲೇಸ್ʼ ರಾತ್ರಿಯ ವೇಳೆ ಮುತ್ತಿನ ಹಾರದಂತೆ ಹೊಳೆಯುತ್ತದೆ.

ಇದನ್ನೂ ಓದಿಭಾರತದಲ್ಲಿ ಗ್ರಾಮೀಣ ಪ್ರವಾಸೋದ್ಯಮದ ವಿಸ್ತರಣೆ

ಬೆಂಗಳೂರು: ಗಾರ್ಡನ್ ಸಿಟಿಯಿಂದ ಸಿಲಿಕಾನ್ ವ್ಯಾಲಿ

ಬೆಂಗಳೂರು ಇಂದು ಜಾಗತಿಕ ತಂತ್ರಜ್ಞಾನದ ಕೇಂದ್ರವಾಗಿದೆ. ಬೆಂಗಳೂರು ಒಂದು ಕಾಲದಲ್ಲಿ ಕೋಟೆಗಳು ಮತ್ತು ಕೆರೆಗಳ ನಗರವಾಗಿತ್ತು. ಹೃದಯಭಾಗದಲ್ಲಿರುವ ಇಲ್ಲಿನ 'ಕಬ್ಬನ್ ಪಾರ್ಕ್' ಮತ್ತು 'ಲಾಲ್‌ಬಾಗ್' ನಗರದ ಜೀವಾಳ. ಇಲ್ಲಿನ 'ಬೆಂಗಳೂರು ಅರಮನೆ' ಇಂಗ್ಲೆಂಡ್‌ನ ವಿಂಡ್ಸರ್ ಕೋಟೆಯ ಮಾದರಿಯಲ್ಲಿದೆ. ಇಲ್ಲಿನ ಪಬ್ ಸಂಸ್ಕೃತಿ ಮತ್ತು ವಿಶಿಷ್ಟವಾದ 'ಬೆಂಗಳೂರು ಶೈಲಿಯ ತಿಂಡಿ' ಪ್ರವಾಸಿಗರಿಗೆ ಅತ್ಯಂತ ದೊಡ್ಡ ಆಕರ್ಷಣೆ.

ಜೈಪುರ: ಗುಲಾಬಿ ನಗರಿ

ರಾಜಸ್ಥಾನದ ಈ ನಗರವು ರಜಪೂತ ರಾಜರ ವೈಭವಕ್ಕೆ ಸಾಕ್ಷಿ. ಜೈಪುರ ಭಾರತದ ಮೊದಲ ಯೋಜಿತ ನಗರ. ಇಲ್ಲಿನ 'ಹವಾ ಮಹಲ್' 953 ಕಿಟಕಿಗಳನ್ನು ಹೊಂದಿದ್ದು, ಯಾವುದೇ ಫ್ಯಾನ್ ಇಲ್ಲದಿದ್ದರೂ ಕಟ್ಟಡವು ಸದಾ ತಂಪಾಗಿರುವಂತೆ ವಿನ್ಯಾಸಗೊಳಿಸಲಾಗಿದೆ.

ಇದನ್ನೂ ಓದಿ: ಕಟ್ಟೋಕೆ ನಾನಾ ದಿನ ಕೆಡವೋಕೆ ಮೂರೇ ದಿನ!

ವಾರಾಣಸಿ: ಆಧ್ಯಾತ್ಮದ ಕೇಂದ್ರ

ವಿಶ್ವದ ಅತ್ಯಂತ ಹಳೆಯ ಮತ್ತು ಇಂದಿಗೂ ಜನವಸತಿ ಇರುವ ನಗರಗಳಲ್ಲಿ ವಾರಾಣಸಿ ಪ್ರಮುಖವಾದದ್ದು. ಇಲ್ಲಿನ ಗಂಗಾ ಆರತಿ ನೋಡುಗರಿಗೆ ಒಂದು ದಿವ್ಯ ಅನುಭವ ನೀಡುತ್ತದೆ. ಇಲ್ಲಿನ ಗಲ್ಲಿಗಳಲ್ಲಿ ಅಡಗಿರುವ ಸಾವಿರಾರು ಪುರಾತನ ದೇವಾಲಯಗಳು ಇತಿಹಾಸದ