Saturday, October 17, 2026
Saturday, October 17, 2026

ಷೆಂಗೆನ್ ವೀಸಾ ಪಡೆಯಲು ಇಲ್ಲಿದೆ ಸಮಗ್ರ ಮಾರ್ಗದರ್ಶಿ

ನೀವು ಯುರೋಪ್‌ಗೆ ಏಕೆ ಹೋಗುತ್ತಿದ್ದೀರಿ, ನಿಮ್ಮ ದಿನನಿತ್ಯದ ಪ್ರವಾಸದ ಯೋಜನೆ ಏನು, ಮತ್ತು ಮರಳಿ ಭಾರತಕ್ಕೆ ಬರುವ ಬಲವಾದ ಕಾರಣಗಳೇನು ಎಂಬುದನ್ನು ಕವರ್ ಲೆಟರ್‌ನಲ್ಲಿ ಸ್ಪಷ್ಟವಾಗಿ ವಿವರಿಸಬೇಕು. ಅನೇಕರು ವೀಸಾ ಪ್ರಕ್ರಿಯೆಗಾಗಿ ದಿಢೀರನೆ ತಮ್ಮ ಬ್ಯಾಂಕ್ ಖಾತೆಗೆ ದೊಡ್ಡ ಮೊತ್ತದ ಹಣವನ್ನು ಜಮೆ ಮಾಡುತ್ತಾರೆ. ಇದು ವೀಸಾ ಅಧಿಕಾರಿಗಳಲ್ಲಿ ಅನುಮಾನ ಮೂಡಿಸುತ್ತದೆ. ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ (ITR) ಮತ್ತು ಉದ್ಯೋಗದ ದಾಖಲೆಗಳು ನಿಮ್ಮ ಬ್ಯಾಂಕ್ ಸ್ಟೇಟ್‌ಮೆಂಟ್‌ಗೆ ಪೂರಕವಾಗಿರಬೇಕು.

ಇತ್ತೀಚಿನ ದಿನಗಳಲ್ಲಿ ಭಾರತೀಯರು ಸಲ್ಲಿಸುವ ಷೆಂಗನ್‌ ವೀಸಾ ಅರ್ಜಿಗಳು ಹೆಚ್ಚಿನ ಪ್ರಮಾಣದಲ್ಲಿ ತಿರಸ್ಕೃತಗೊಳ್ಳುತ್ತಿರುವುದು ಆತಂಕಕಾರಿ ವಿಷಯವಾಗಿದೆ. ನಿಮ್ಮ ಯುರೋಪ್ ಪ್ರವಾಸದ ಕನಸು ಭಗ್ನವಾಗದಿರಲು, ವೀಸಾ ನಿಯಮಗಳನ್ನು ಸರಿಯಾಗಿ ಅರಿತುಕೊಳ್ಳುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ, ವೀಸಾ ಅರ್ಜಿ ಸಲ್ಲಿಕೆ, ಅಗತ್ಯ ದಾಖಲೆಗಳು ಮತ್ತು ಇತ್ತೀಚಿನ ನಿಯಮಾವಳಿಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಅರ್ಜಿ ಸಲ್ಲಿಕೆಯ ಸರಿಯಾದ ವಿಧಾನ

ನೀವು ಯಾವ ದೇಶದ ರಾಯಭಾರ ಕಚೇರಿಗೆ ಅರ್ಜಿ ಸಲ್ಲಿಸಬೇಕು ಎಂಬುದು ನಿಮ್ಮ ಪ್ರವಾಸದ ರೂಪುರೇಷೆಯ ಮೇಲೆ ನಿಂತಿದೆ. ನೀವು ಒಂದಕ್ಕಿಂತ ಹೆಚ್ಚು ದೇಶಗಳಿಗೆ ಭೇಟಿ ನೀಡುತ್ತಿದ್ದರೆ, ನೀವು ಅತಿ ಹೆಚ್ಚು ದಿನ ಉಳಿದುಕೊಳ್ಳುವ 'ಮುಖ್ಯ ತಂಗುದಾಣ'ದ ದೇಶದ ಮೂಲಕವೇ ಅರ್ಜಿ ಸಲ್ಲಿಸಬೇಕು. ಉದಾಹರಣೆಗೆ, ಫ್ರಾನ್ಸ್‌ನಲ್ಲಿ ಐದು ದಿನ ಹಾಗೂ ಇಟಲಿಯಲ್ಲಿ ಮೂರು ದಿನ ಇದ್ದರೆ, ಫ್ರಾನ್ಸ್‌ಗೆ ಅರ್ಜಿ ಸಲ್ಲಿಸಬೇಕು. ಎಲ್ಲೆಡೆ ಸಮಾನ ದಿನ ಕಳೆಯುತ್ತಿದ್ದರೆ, ನೀವು ಯುರೋಪ್‌ಗೆ ಮೊದಲು ಕಾಲಿಡುವ ದೇಶವನ್ನು ಆಯ್ಕೆ ಮಾಡಬೇಕು. ನಿಮ್ಮ ಪ್ರಯಾಣದ ದಿನಾಂಕಕ್ಕಿಂತ ಗರಿಷ್ಠ 6 ತಿಂಗಳು ಮತ್ತು ಕನಿಷ್ಠ 15 ದಿನಗಳ ಮುಂಚಿತವಾಗಿ ಅರ್ಜಿ ಸಲ್ಲಿಸಬಹುದು. ವೀಸಾ ಶುಲ್ಕ ವಯಸ್ಕರಿಗೆ ಸುಮಾರು ₹9,860 ಮತ್ತು 6 ರಿಂದ 12 ವರ್ಷದ ಮಕ್ಕಳಿಗೆ ಸುಮಾರು ₹4,930 ಇರುತ್ತದೆ. 6 ವರ್ಷದೊಳಗಿನ ಮಕ್ಕಳಿಗೆ ಶುಲ್ಕ ವಿನಾಯಿತಿ ಇದೆ. ಸಾಮಾನ್ಯ ಪ್ರಕ್ರಿಯೆ 15 ದಿನಗಳಾದರೂ, ಕೆಲವೊಮ್ಮೆ 45 ದಿನಗಳವರೆಗೂ ಸಮಯ ತೆಗೆದುಕೊಳ್ಳಬಹುದು.

Untitled design (97)

ಪ್ರವಾಸಿ ವಿಮೆ ಹಾಗೂ ಕವರ್ ಲೆಟರ್

ನೀವು ಯುರೋಪ್‌ಗೆ ಏಕೆ ಹೋಗುತ್ತಿದ್ದೀರಿ, ನಿಮ್ಮ ದಿನನಿತ್ಯದ ಪ್ರವಾಸದ ಯೋಜನೆ ಏನು, ಮತ್ತು ಮರಳಿ ಭಾರತಕ್ಕೆ ಬರುವ ಬಲವಾದ ಕಾರಣಗಳೇನು ಎಂಬುದನ್ನು ಕವರ್ ಲೆಟರ್‌ನಲ್ಲಿ ಸ್ಪಷ್ಟವಾಗಿ ವಿವರಿಸಬೇಕು. ಅನೇಕರು ವೀಸಾ ಪ್ರಕ್ರಿಯೆಗಾಗಿ ದಿಢೀರನೆ ತಮ್ಮ ಬ್ಯಾಂಕ್ ಖಾತೆಗೆ ದೊಡ್ಡ ಮೊತ್ತದ ಹಣವನ್ನು ಜಮೆ ಮಾಡುತ್ತಾರೆ. ಇದು ವೀಸಾ ಅಧಿಕಾರಿಗಳಲ್ಲಿ ಅನುಮಾನ ಮೂಡಿಸುತ್ತದೆ. ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ (ITR) ಮತ್ತು ಉದ್ಯೋಗದ ದಾಖಲೆಗಳು ನಿಮ್ಮ ಬ್ಯಾಂಕ್ ಸ್ಟೇಟ್‌ಮೆಂಟ್‌ಗೆ ಪೂರಕವಾಗಿರಬೇಕು.

ಇದರ ಜತೆಗೆ, ಸಂಪೂರ್ಣವಾಗಿ ಭರ್ತಿ ಮಾಡಿದ ಅರ್ಜಿ, ಮಾನ್ಯತೆಯುಳ್ಳ ಪಾಸ್‌ಪೋರ್ಟ್, ಇತ್ತೀಚಿನ ಫೊಟೋಗಳು, ರೌಂಡ್-ಟ್ರಿಪ್ ವಿಮಾನ ಟಿಕೆಟ್ ಮತ್ತು ಹೊಟೇಲ್ ಬುಕಿಂಗ್ ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಷೆಂಗೆನ್ ವೀಸಾ ಪಡೆಯಲು ಪ್ರವಾಸಿ ವೈದ್ಯಕೀಯ ವಿಮೆ ಅತ್ಯಂತ ಪ್ರಮುಖವಾಗಿದೆ. ಈ ವಿಮೆಯು ಕನಿಷ್ಠ ಸುಮಾರು ₹32 ಲಕ್ಷ ಕವರೇಜ್ ಹೊಂದಿರಬೇಕು ಮತ್ತು ತುರ್ತು ಚಿಕಿತ್ಸೆ ಹಾಗೂ ವೈದ್ಯಕೀಯ ಕಾರಣಗಳಿಗಾಗಿ ಸ್ವದೇಶಕ್ಕೆ ವಾಪಸ್ ಕಳುಹಿಸುವ ವೆಚ್ಚವನ್ನು ಭರಿಸುವಂತಿರಬೇಕು.

ಭಾರತೀಯರಿಗೆ ಹೊಸ ಕ್ಯಾಸ್ಕೇಡ್ ನಿಯಮ

ಇತ್ತೀಚೆಗಷ್ಟೇ ಯುರೋಪಿಯನ್ ಒಕ್ಕೂಟವು ಭಾರತೀಯ ಪ್ರಯಾಣಿಕರಿಗಾಗಿ ಹೊಸ 'ಕ್ಯಾಸ್ಕೇಡ್' ವೀಸಾ ನಿಯಮವನ್ನು ಜಾರಿಗೆ ತಂದಿದೆ. ಇದರ ಅನ್ವಯ, ಉತ್ತಮ ಪ್ರಯಾಣದ ಇತಿಹಾಸ ಹೊಂದಿರುವ ಮತ್ತು ಈ ಹಿಂದೆ ನಿಗದಿತ ಅವಧಿಯಲ್ಲಿ ಷೆಂಗೆನ್ ವೀಸಾಗಳನ್ನು ನಿಯಮಬದ್ಧವಾಗಿ ಬಳಸಿದ ಭಾರತೀಯರಿಗೆ ಸುಲಭವಾಗಿ 2 ವರ್ಷದಿಂದ 5 ವರ್ಷಗಳವರೆಗಿನ ಬಹು-ಪ್ರವೇಶ ವೀಸಾಗಳು ಲಭ್ಯವಾಗಲಿವೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!