ಜಂಗಲ್ ರೆಸಾರ್ಟ್‌ಗಳು ಮತ್ತು ಖಾಸಗಿ ಆಪರೇಟರ್‌ಗಳ ನಡುವೆ ಸಂಘರ್ಷ
ಜಂಗಲ್ ಲಾಡ್ಜ್ ಸಂಸ್ಥೆ ರಾಫ್ಟಿಂಗ್ ನಡೆಸಲು ಟೆಂಡರ್ ಆಹ್ವಾನಿಸಿದ್ದು, ಖಾಸಗಿ ಸಂಸ್ಥೆಯೊಂದು ಈ ಟೆಂಡರ್ ಪಡೆದುಕೊಂಡಿದ್ದು, ಇತರ ಖಾಸಗಿ ಆಪರೇಟರ್ ಗಳಿಗೆ ರಾಫ್ಟಿಂಗ್ ಅವಕಾಶ ನೀಡದಂತೆ ಜಿಲ್ಲಾಡಳಿತದ ಮೊರೆ ಹೋಗಿದೆ. ಆದರೆ, ದಾಂಡೇಲಿ ಹಾಗೂ ಜೋಯಡಾ ಸುತ್ತಮುತ್ತಲಿನ ಸಾವಿರಾರು ಕುಟುಂಬಗಳು ಈ ಜಲಕ್ರೀಡೆಗಳ ಆದಾಯದ ಮೇಲೆ ಅವಲಂಬಿತವಾಗಿವೆ. ಈ ವಿವಾದ ಹೀಗೆ ಮುಂದುವರೆದರೆ ಸ್ಥಳೀಯರ ಬದುಕಿಗೆ ಸಂಕಷ್ಟ ಎದುರಾಗಬಹುದು.
ಕಾಳಿ ನದಿ ರಿವರ್ ರಾಫ್ಟಿಂಗ್ ಹಾಗೂ ಜಲಕ್ರೀಡೆ ಚಟುವಟಿಕೆಗಳು ವಿವಾದಕ್ಕೆ ಕಾರಣವಾಗಿವೆ. ಸರಕಾರಿ ಜಂಗಲ್ ರೆಸಾರ್ಟ್ ಗಳ ಮತ್ತು ಖಾಸಗಿ ಆಪರೇಟರ್‌ಗಳ ನಡುವೆ ಸಂಘರ್ಷ ಉಂಟಾಗಿದ್ದು, ಇದು ದಾಂಡೇಲಿ–ಜೋಯಿಡಾ ಭಾಗದ ಪ್ರವಾಸೋದ್ಯಮಕ್ಕೆ ಮುಳುವಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ಸರಕಾರ ಅರಣ್ಯ ಇಲಾಖೆ ವಿರುದ್ಧ ಆತಿಥ್ಯ ವಲಯದ ಅಸಮಾಧಾನ!
ಅಷ್ಟಕ್ಕೂ ಈ ಸಮಸ್ಯೆಗೆ ಮೂಲ ಕಾರಣ, ಈ ಬಾರಿ ಜಂಗಲ್ ಲಾಡ್ಜ್ ಸಂಸ್ಥೆ ರಾಫ್ಟಿಂಗ್ ನಡೆಸಲು ಟೆಂಡರ್ ಆಹ್ವಾನಿಸಿ, ಖಾಸಗಿ ಸಂಸ್ಥೆಯೊಂದು ಈ ಟೆಂಡರ್ ಪಡೆದುಕೊಂಡಿರುವುದು. ಈಗ ಟೆಂಡರ್ ಪಡೆದಿರುವ ಸಂಸ್ಥೆ ಇತರ ಖಾಸಗಿ ಆಪರೇಟರ್ ಗಳಿಗೆ ರಾಫ್ಟಿಂಗ್ ಅವಕಾಶ ನೀಡದಂತೆ ಜಿಲ್ಲಾಡಳಿತದ ಮೊರೆ ಹೋಗಿದೆ. ಆದರೆ, ದಾಂಡೇಲಿ ಹಾಗೂ ಜೋಯಡಾ ಸುತ್ತಮುತ್ತಲಿನ ಸಾವಿರಾರು ಕುಟುಂಬಗಳು ಈ ಜಲಕ್ರೀಡೆಗಳ ಆದಾಯದ ಮೇಲೆ ಅವಲಂಬಿತವಾಗಿವೆ. ಈ ವಿವಾದ ಹೀಗೆ ಮುಂದುವರೆದರೆ ಸ್ಥಳೀಯರ ಬದುಕಿಗೆ ಸಂಕಷ್ಟ ಎದುರಾಗಬಹುದು. ಹೀಗಾಗಿ ಜಿಲ್ಲಾಡಳಿತ ಈ ವಿವಾದವನ್ನು ಕೂಲಂಕಷವಾಗಿ ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಿ ಎಂದು ಖಾಸಗಿ ರೆಸಾರ್ಟ್ ಮಾಲೀಕರ ಸಂಘ ಹಾಗೂ ಆಪರೇಟರ್ ಗಳು ಮನವಿ ಮಾಡಿದ್ದಾರೆ.