ಗುಲಾಬಿ ಬಣ್ಣದ ಪಾಸ್‌ಪೋರ್ಟ್‌ಗಳು ಏಕಿಲ್ಲ? ಕಾರಣವೇನು ಗೊತ್ತೇ?
ವಿಶ್ವದ 193 ದೇಶಗಳಲ್ಲಿ ಪಾಸ್‌ಪೋರ್ಟ್‌ಗಳ ಬಣ್ಣಗಳು ಹಲವು ರೀತಿಯಲ್ಲಿರಬಹುದು ಎಂದು ನಾವು ಊಹಿಸಬಹುದು. ಆದರೆ, ಬಹುತೇಕ ದೇಶಗಳ ಪಾಸ್‌ಪೋರ್ಟ್‌ಗಳು ಕೆಂಪು, ನೀಲಿ, ಹಸಿರು ಮತ್ತು ಕಪ್ಪು ಎಂಬ ನಾಲ್ಕು ಬಣ್ಣಗಳಲ್ಲೇ ಕಾಣಿಸಿಕೊಳ್ಳುತ್ತವೆ.
ವಿಶ್ವದ 193 ದೇಶಗಳಲ್ಲಿ ಪಾಸ್‌ಪೋರ್ಟ್‌ಗಳ ಬಣ್ಣಗಳು ಹಲವು ರೀತಿಯಲ್ಲಿರಬಹುದು ಎಂದು ನಾವು ಊಹಿಸಬಹುದು. ಆದರೆ, ಬಹುತೇಕ ದೇಶಗಳ ಪಾಸ್‌ಪೋರ್ಟ್‌ಗಳು ಕೆಂಪು, ನೀಲಿ, ಹಸಿರು ಮತ್ತು ಕಪ್ಪು ಎಂಬ ನಾಲ್ಕು ಬಣ್ಣಗಳಲ್ಲೇ ಕಾಣಿಸಿಕೊಳ್ಳುತ್ತವೆ. ಇದರ ಹಿಂದೆ ಇತಿಹಾಸ, ರಾಜಕೀಯ, ಧರ್ಮದ ಜತೆಗೆ ತಯಾರಿಕಾ ಪ್ರಕ್ರಿಯೆಯೂ ಪ್ರಮುಖ ಕಾರಣವಾಗಿದೆ ಎಂದು ಕಂಟೆಂಟ್ ಕ್ರಿಯೇಟರ್ ಅಪೂರ್ವ ಅವರ ವೈರಲ್ ವಿಡಿಯೋದಲ್ಲಿ ವಿವರಿಸಲಾಗಿದೆ.
ಯುರೋಪಿಯನ್ ಒಕ್ಕೂಟವು 1980ರ ದಶಕದಲ್ಲಿ ಸದಸ್ಯ ರಾಷ್ಟ್ರಗಳ ಪಾಸ್‌ಪೋರ್ಟ್‌ಗಳಿಗೆ ಬರ್ಗಂಡಿ ಬಣ್ಣವನ್ನು ಶಿಫಾರಸು ಮಾಡಿತ್ತು. ಇದರಿಂದ ಕೆಂಪು ಬಣ್ಣ ಯುರೋಪಿನೊಂದಿಗೆ ಗುರುತಿಸಿಕೊಂಡಿತು. ನೀಲಿ ಬಣ್ಣವನ್ನು ‘ನ್ಯೂ ವರ್ಲ್ಡ್’ ದೇಶಗಳೊಂದಿಗೆ ಸಂಪರ್ಕಿಸಲಾಗುತ್ತದೆ. ಹಸಿರು ಬಣ್ಣಕ್ಕೆ ಹಲವು ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಧಾರ್ಮಿಕ ಮಹತ್ವವಿದೆ. ಕಪ್ಪು ಬಣ್ಣ ಅಪರೂಪವಾಗಿದ್ದು, ನ್ಯೂಜಿಲೆಂಡ್‌ನ ರಾಷ್ಟ್ರೀಯ ಗುರುತಿನ ಭಾಗವಾಗಿದೆ.
ಹಾಗಾದರೆ ಗುಲಾಬಿ ಅಥವಾ ಹಳದಿ ಬಣ್ಣ ಏಕೆ ಇಲ್ಲ? ಪಾಸ್‌ಪೋರ್ಟ್ ಮೇಲಿನ ಚಿನ್ನದ ಲಾಂಛನವನ್ನು ಬಿಸಿ ಲೋಹದ ಫಾಯಿಲ್ ಮೂಲಕ ಮುದ್ರಿಸಲಾಗುತ್ತದೆ. ಗಾಢ ಬಣ್ಣದ ಹಿನ್ನೆಲೆಯ ಮೇಲೆ ಇದು ಹೆಚ್ಚು ಸ್ಪಷ್ಟವಾಗಿ ಕಾಣುತ್ತದೆ. ಹೀಗಾಗಿ ತಯಾರಿಕಾ ಕಾರಣವೂ ಪಾಸ್‌ಪೋರ್ಟ್‌ಗಳ ಗಾಢ ಬಣ್ಣಕ್ಕೆ ಕಾರಣವಾಗಿದೆ.