ವಿಯೆಟ್ನಾಂಗೆ ಪ್ರಯಾಣಿಸುವ ಭಾರತೀಯರಿಗೆ ವಿಯೆಟ್ಜೆಟ್ ವಿಮಾನಯಾನ ಸಂಸ್ಥೆ 11 ರು. ರಿಂದ (ತೆರಿಗೆ ಮತ್ತು ಶುಲ್ಕ ಹೊರತುಪಡಿಸಿ) ಆರಂಭವಾಗುವ ವಿಶೇಷ ವಿಮಾನ ಟಿಕೆಟ್ ಕೊಡುಗೆಯನ್ನು ಘೋಷಿಸಿದೆ. ಏಷ್ಯಾದಲ್ಲಿ ತನ್ನ ವಿಮಾನ ಸಂಪರ್ಕ ಜಾಲ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಈ ಕೊಡುಗೆ ಪ್ರಕಟಿಸಿದ್ದು, 2027ರ ಅಕ್ಟೋಬರ್ 31ರವರೆಗಿನ ಪ್ರಯಾಣಕ್ಕೆ ಟಿಕೆಟ್ ಕಾಯ್ದಿರಿಸಬಹುದಾಗಿದೆ. ದೆಹಲಿ, ಮುಂಬೈ, ಅಹಮದಾಬಾದ್‌, ಹೈದರಾಬಾದ್ ಮತ್ತು ಬೆಂಗಳೂರು ನಗರಗಳಿಂದ ವಿಯೆಟ್ನಾಂನ ಪ್ರಮುಖ ನಗರಗಳಾದ ಹನೋಯ್ ಹಾಗೂ ಹೋ ಚಿ ಮಿನ್ ನಗರಗಳಿಗೆ ತೆರಳುವ ವಿಮಾನಗಳಿಗೆ ಈ ಕೊಡುಗೆ ಅನ್ವಯಿಸಲಿದೆ. ನವೆಂಬರ್ 1ರಿಂದ 2027ರ ಅಕ್ಟೋಬರ್ 31ರವರೆಗೆ ಪ್ರಯಾಣಿಸಲು ಅವಕಾಶವಿದ್ದು, ಕೆಲವು ನಿರ್ದಿಷ್ಟ ದಿನಗಳಲ್ಲಿ ಈ ಕೊಡುಗೆ ಅನ್ವಯಿಸುವುದಿಲ್ಲ. ಪ್ರಯಾಣಿಕರು ನವೆಂಬರ್ 1ರ ರಾತ್ರಿ 9.30ರೊಳಗೆ ವಿಯೆಟ್ಜೆಟ್ ಅಧಿಕೃತ ವೆಬ್‌ಸೈಟ್ ಅಥವಾ ಮೊಬೈಲ್ ಆ್ಯಪ್ ಮೂಲಕ ಟಿಕೆಟ್ ಕಾಯ್ದಿರಿಸಬಹುದು. ಈ ವಿಶೇಷ ದರ ಸೀಮಿತ ಅವಧಿಗೆ ಲಭ್ಯವಿದ್ದು, ತೆರಿಗೆ ಮತ್ತು ಇತರ ಶುಲ್ಕ ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.