ಭಾರತದ ಪ್ರವಾಸೋದ್ಯಮ ಕ್ಷೇತ್ರವು ಇಂದು ಕೇವಲ ರಜೆ ಕಳೆಯುವ ತಾಣವಾಗಿ ಉಳಿದಿಲ್ಲ. ಇತ್ತೀಚಿನ ವರದಿಗಳ ಪ್ರಕಾರ, ಮಾಹಿತಿ ತಂತ್ರಜ್ಞಾನ ಮತ್ತು ಕಾರ್ಪೊರೇಟ್ ವಲಯದ ಉನ್ನತ ಮಟ್ಟದ ಪ್ರತಿಭೆಗಳು ಈಗ ಪ್ರವಾಸೋದ್ಯಮ ಕ್ಷೇತ್ರವನ್ನು ತಮ್ಮ ಮುಖ್ಯ ವೃತ್ತಿಯನ್ನಾಗಿ ಅಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಒಂದು ಕಾಲದಲ್ಲಿ ಐಟಿ ಕ್ಷೇತ್ರವು ಅತಿ ಹೆಚ್ಚು ವೇತನ ಮತ್ತು ಐಷಾರಾಮಿ ಜೀವನಕ್ಕೆ ಹೆಸರಾಗಿತ್ತು. ಆದರೆ ಈಗ ಪ್ರವಾಸೋದ್ಯಮ ಕ್ಷೇತ್ರವು ತಂತ್ರಜ್ಞಾನ ಮತ್ತು ಹೊಸತನವನ್ನು ಅಳವಡಿಸಿಕೊಂಡಿರುವುದರಿಂದ, ಇಲ್ಲಿನ ಸಂಬಳ ಮತ್ತು ಸೌಲತ್ತುಗಳು ಐಟಿ ಕ್ಷೇತ್ರಕ್ಕೆ ಸರಿಸಮಾನವಾಗಿವೆ.

ಇದನ್ನೂ ಓದಿ: ಬೆಂಗಳೂರನ್ನು ಸ್ಮಾರ್ಟ್‌ ಸಿಟಿ ಮಾಡಲು ಜಪಾನ್‌ ಬೆಂಬಲ!

ಪ್ರವಾಸಿಗರ ವರ್ತನೆಯನ್ನು ಅರ್ಥಮಾಡಿಕೊಳ್ಳಲು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಲಾಗುತ್ತಿದೆ. ಮೇಕ್‌ಮೈಟ್ರಿಪ್, ಈಸ್‌ ಮೈ ಟ್ರಿಪ್‌ನಂಥ ಕಂಪನಿಗಳು ಈಗ ದೊಡ್ಡ ಟೆಕ್ ಕಂಪನಿಗಳಂತೆಯೇ ಕಾರ್ಯನಿರ್ವಹಿಸುತ್ತಿವೆ. ಇವೆಲ್ಲದಕ್ಕೂ ಐಟಿ ಹಿನ್ನೆಲೆ ಇರುವ ನೌಕಕರನ್ನು ಆಯ್ಕೆ ಮಾಡಲಾಗುತ್ತಿದೆ. ಪ್ರಾಡಕ್ಟ್‌ ಮ್ಯಾನೇಜರ್‌, ಡಿಜಿಟಲ್‌ ಮಾರ್ಕೆಟಿಂಗ್‌, ಕಸ್ಟಮರ್‌ ಎಕ್ಸ್‌ಪೀರಿಯನ್ಸ್‌ ಡಿಸೈನರ್‌ ಹೀಗೆ ಹಲವು ಹೊಸ ಅವಕಾಶಗಳು ಪ್ರವಾಸೋದ್ಯಮದಲ್ಲಿ ತೆರೆದುಕೊಂಡಿವೆ.

ಬೃಹತ್ ಐಟಿ ಕಂಪನಿಗಳಲ್ಲಿ ಲೇ ಆಫ್‌ ಮಾಡುತ್ತಿರುವ ಕಾರಣಕ್ಕೂ ಅನೇಕ ಪ್ರತಿಭೆಗಳು ಪ್ರವಾಸೋದ್ಯಮದತ್ತ ಮುಖ ಮಾಡಲು ಒಂದು ಕಾರಣ. ಐಟಿ ಕ್ಷೇತ್ರದಿಂದ ಪ್ರವಾಸೋದ್ಯಮಕ್ಕೆ ಜಿಗಿಯುತ್ತಿರುವ ವೃತ್ತಿಪರರ ಸಂಖ್ಯೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ 20-30 % ಹೆಚ್ಚಳ ಕಂಡುಬಂದಿದೆ.