ರೈಲಿನಲ್ಲಿ ಪ್ರಯಾಣಿಸುವಾಗ ಇಷ್ಟವಾದ ಊಟವನ್ನು ಸವಿಯಲು ಅನುಕೂಲವಾಗುವಂತೆ ಪ್ರಮುಖ ಆನ್‌ಲೈನ್ ಫುಡ್ ಡೆಲಿವರಿ ಸಂಸ್ಥೆಯಾದ ಸ್ವಿಗ್ಗಿ ತನ್ನ 'ಫುಡ್ ಆನ್ ಟ್ರೈನ್' ಸೇವೆಯನ್ನು ದೇಶಾದ್ಯಂತ ಭಾರಿ ಪ್ರಮಾಣದಲ್ಲಿ ವಿಸ್ತರಿಸಿದೆ. ಭಾರತೀಯ ರೈಲ್ವೇ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (IRCTC) ಸಹಯೋಗದೊಂದಿಗೆ ಈ ಸೇವೆಯನ್ನು ಈಗ ದೇಶದ ಒಟ್ಟು 201 ಪ್ರಮುಖ ರೈಲು ನಿಲ್ದಾಣಗಳಿಗೆ ವಿಸ್ತರಿಸಲಾಗಿದೆ ಎಂದು ಕಂಪೆನಿ ಅಧಿಕೃತವಾಗಿ ಘೋಷಿಸಿದೆ.

ಇದನ್ನೂ ಓದಿ: ಡಾರ್ಜಿಲಿಂಗ್‌ ಹಿಮಾಲಯನ್ ರೈಲ್ವೇಯ ವಿಶೇಷ ಜಾಯ್‌ರೈಡ್

ಪ್ರಯಾಣಿಕರು ತಮ್ಮ ರೈಲು ಪ್ರಯಾಣದ ಸಮಯದಲ್ಲಿ ತಮ್ಮ ಇಷ್ಟದ ರೆಸ್ಟೋರೆಂಟ್‌ಗಳಿಂದ ಆಹಾರವನ್ನು ಆರ್ಡರ್ ಮಾಡಬಹುದು. ರೈಲು ನಿರ್ದಿಷ್ಟ ನಿಲ್ದಾಣಕ್ಕೆ ತಲುಪುತ್ತಿದ್ದಂತೆ ಸ್ವಿಗ್ಗಿ ಡೆಲಿವರಿ ಪಾಲುದಾರರು ಆಹಾರವನ್ನು ನೇರವಾಗಿ ನಿಮ್ಮ ರೈಲು ಸೀಟಿಗೆ ಅಥವಾ ಬೋಗಿಯ ಬಳಿಗೆ ತಂದು ತಲುಪಿಸಲಿದ್ದಾರೆ.

ಈ ಸೇವೆಯು ಭಾರತೀಯ ರೈಲ್ವೆಯ ಅಧಿಕೃತ ಇ-ಕ್ಯಾಟರಿಂಗ್ ವ್ಯವಸ್ಥೆಯೊಂದಿಗೆ ಸಂಪೂರ್ಣವಾಗಿ ಸಂಯೋಜನೆಗೊಂಡಿದ್ದು, ಸುರಕ್ಷಿತ ಮತ್ತು ವಿಶ್ವಾಸಾರ್ಹ ಆಹಾರ ಪೂರೈಕೆಯನ್ನು ಖಾತರಿಪಡಿಸುತ್ತದೆ.

ಕಳಪೆ ಗುಣಮಟ್ಟದ ರೈಲ್ವೇ ಆಹಾರದಿಂದ ಮುಕ್ತಿ ಪಡೆದು, ಪ್ರಯಾಣಿಕರು ತಮ್ಮ ನೆಚ್ಚಿನ ಬ್ರಾಂಡ್‌ಗಳು ಮತ್ತು ರೆಸ್ಟೋರೆಂಟ್‌ಗಳ ರುಚಿಕರ ಆಹಾರವನ್ನು ನೇರವಾಗಿ ರೈಲಿನಲ್ಲೇ ಆನಂದಿಸಬಹುದು.