ಸೌದಿ ಅರೇಬಿಯಾದಲ್ಲಿ ಕಡಲತೀರ ಪ್ರವಾಸೋದ್ಯಮಕ್ಕೆ ಹೊಸ ನಿಯಮಗಳು ಜಾರಿ
ಹೊಸ ಮಾರ್ಗಸೂಚಿಗಳ ಪ್ರಕಾರ, ಬೀಚ್ ನಿರ್ವಹಣೆ ನಡೆಸುವ ಸಂಸ್ಥೆಗಳು ಲೈಸೆನ್ಸ್ ಹೊಂದಿರುವುದು ಕಡ್ಡಾಯವಾಗಿದೆ. ಜತೆಗೆ ಪ್ರವಾಸಿಗರ ಭದ್ರತೆಗೆ ಅಗತ್ಯವಾದ ಲೈಫ್‌ಗಾರ್ಡ್ ವ್ಯವಸ್ಥೆ, ತುರ್ತು ಪ್ರತಿಕ್ರಿಯೆ ವ್ಯವಸ್ಥೆ, ಸಾರ್ವಜನಿಕ ಆರೋಗ್ಯ ಮತ್ತು ಸ್ವಚ್ಛತಾ ಸೌಲಭ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದು ಸೂಚಿಸಲಾಗಿದೆ. ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ತ್ಯಾಜ್ಯ ನಿರ್ವಹಣೆ ಹಾಗೂ ಸಮುದ್ರ ಜೀವವೈವಿಧ್ಯ ರಕ್ಷಣೆಗೆ ವಿಶೇಷ ಒತ್ತು ನೀಡಲಾಗಿದೆ.
ಸೌದಿ ಅರೇಬಿಯಾ ಸರಕಾರವು ಕಡಲತೀರ ಪ್ರವಾಸೋದ್ಯಮವನ್ನು ಸುರಕ್ಷಿತ ಹಾಗೂ ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಬೀಚ್‌ಗಳಿಗೆ ಸಂಬಂಧಿಸಿದಂತೆ ಹೊಸ ಕಡ್ಡಾಯ ನಿಯಮಗಳನ್ನು ಜಾರಿಗೊಳಿಸಿದೆ. ಈ ನಿಯಮಗಳು 2026ರ ಜನವರಿ 1ರಿಂದ ಜಾರಿಗೆ ಬರಲಿದ್ದು, ರೆಡ್ ಸೀ ಮತ್ತು ಪಶ್ಚಿಮ ಕರಾವಳಿ ಪ್ರದೇಶಗಳಲ್ಲಿನ ಎಲ್ಲ ಬೀಚ್ ಆಪರೇಟರ್‌ಗಳಿಗೆ ಅನ್ವಯವಾಗಲಿವೆ ಎಂದು ಸೌದಿ ರೆಡ್ ಸೀ ಅಥಾರಿಟಿ (SRSA) ತಿಳಿಸಿದೆ.
ಹೊಸ ಮಾರ್ಗಸೂಚಿಗಳ ಪ್ರಕಾರ, ಬೀಚ್ ನಿರ್ವಹಣೆ ನಡೆಸುವ ಸಂಸ್ಥೆಗಳು ಲೈಸೆನ್ಸ್ ಹೊಂದಿರುವುದು ಕಡ್ಡಾಯವಾಗಿದೆ. ಜತೆಗೆ ಪ್ರವಾಸಿಗರ ಭದ್ರತೆಗೆ ಅಗತ್ಯವಾದ ಲೈಫ್‌ಗಾರ್ಡ್ ವ್ಯವಸ್ಥೆ, ತುರ್ತು ಪ್ರತಿಕ್ರಿಯೆ ವ್ಯವಸ್ಥೆ, ಸಾರ್ವಜನಿಕ ಆರೋಗ್ಯ ಮತ್ತು ಸ್ವಚ್ಛತಾ ಸೌಲಭ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದು ಸೂಚಿಸಲಾಗಿದೆ. ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ತ್ಯಾಜ್ಯ ನಿರ್ವಹಣೆ ಹಾಗೂ ಸಮುದ್ರ ಜೀವವೈವಿಧ್ಯ ರಕ್ಷಣೆಗೆ ವಿಶೇಷ ಒತ್ತು ನೀಡಲಾಗಿದೆ.

ಇದಲ್ಲದೆ, ದಿವ್ಯಾಂಗರಿಗೆ ಸುಲಭವಾಗಿ ಪ್ರವೇಶ ಕಲ್ಪಿಸುವ ಮೂಲಸೌಕರ್ಯ ವ್ಯವಸ್ಥೆಗಳನ್ನು ಒದಗಿಸುವುದೂ ನಿಯಮಗಳಲ್ಲಿ ಸೇರಿದೆ. ಪ್ರವಾಸಿಗರು ಮತ್ತು ಹೂಡಿಕೆದಾರರಿಗೆ ಅಗತ್ಯ ಮಾಹಿತಿಯನ್ನು ಒದಗಿಸಲು SRSA ‘ಕೋಸ್ಟಲ್ ಟೂರಿಸಂ ಚಟುವಟಿಕೆಗಳ ಪರಿಚಯಾತ್ಮಕ ಡಿಜಿಟಲ್ ಮಾರ್ಗದರ್ಶಿ’ಯನ್ನೂ ಬಿಡುಗಡೆ ಮಾಡಿದೆ. ಈ ಡಿಜಿಟಲ್ ಪ್ಲಾಟ್‌ಫಾರ್ಮ್ ಮೂಲಕ ನಿಯಮಗಳು, ಲೈಸೆನ್ಸ್ ಪ್ರಕ್ರಿಯೆ ಮತ್ತು ಪ್ರವಾಸೋದ್ಯಮ ಸಂಬಂಧಿತ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಪಡೆಯಲು ಸಾಧ್ಯವಾಗಲಿದೆ.
ಈ ಕ್ರಮಗಳು ಸೌದಿ ಅರೇಬಿಯಾದ ‘ವಿಷನ್ 2030’ ಯೋಜನೆಯ ಭಾಗವಾಗಿದ್ದು, ದೇಶದ ಕಡಲತೀರ ಪ್ರವಾಸೋದ್ಯಮವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಆಕರ್ಷಕ, ಸುರಕ್ಷಿತ ಮತ್ತು ಸುಸ್ಥಿರವಾಗಿಸುವ ಉದ್ದೇಶ ಹೊಂದಿವೆ.