ದುಬೈ ವಿಮಾನ ನಿಲ್ದಾಣದಲ್ಲಿ ಹೊಸ ಭದ್ರತಾ ವ್ಯವಸ್ಥೆ
ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರಯಾಣಿಕರ ಭದ್ರತಾ ತಪಾಸಣೆಯನ್ನು ಇನ್ನಷ್ಟು ವೇಗವಾಗಿ ಮತ್ತು ಸುಗಮಗೊಳಿಸಲು ಹೊಸ ತಲೆಮಾರಿನ ಸ್ಕ್ಯಾನರ್‌ಗಳನ್ನು ಪರಿಚಯಿಸುತ್ತಿದೆ.
ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರಯಾಣಿಕರ ಭದ್ರತಾ ತಪಾಸಣೆಯನ್ನು ಇನ್ನಷ್ಟು ವೇಗವಾಗಿ ಮತ್ತು ಸುಗಮಗೊಳಿಸಲು ಹೊಸ ತಲೆಮಾರಿನ ಸ್ಕ್ಯಾನರ್‌ಗಳನ್ನು ಪರಿಚಯಿಸುತ್ತಿದೆ. ಈ ಹೊಸ ತಂತ್ರಜ್ಞಾನದಿಂದ ಪ್ರಯಾಣಿಕರು ಭದ್ರತಾ ತಪಾಸಣೆ ವೇಳೆ ತಮ್ಮ ಹ್ಯಾಂಡ್ ಬ್ಯಾಗ್‌ನಿಂದ ಲ್ಯಾಪ್‌ಟಾಪ್, ದ್ರವ ಪದಾರ್ಥಗಳು ಹಾಗೂ ಇತರ ವಸ್ತುಗಳನ್ನು ಹೊರತೆಗೆಯುವ ಅಗತ್ಯವಿರುವುದಿಲ್ಲ.
ದುಬೈ ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ನ ಹಳೆಯ ಸ್ಕ್ರೀನಿಂಗ್ ವ್ಯವಸ್ಥೆಗಳನ್ನು ಹಂತ ಹಂತವಾಗಿ ಬದಲಾಯಿಸಿ ಹೊಸ ಸ್ಕ್ಯಾನಿಂಗ್ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ಇದರಿಂದ ಭದ್ರತಾ ತಪಾಸಣೆಯ ಪ್ರಕ್ರಿಯೆ ವೇಗಗೊಳ್ಳುವುದರ ಜತೆಗೆ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ.
ಹೊಸ ವ್ಯವಸ್ಥೆಯು ಬ್ಯಾಗ್‌ಗಳನ್ನು ತೆರೆಯದೇ ಅವುಗಳೊಳಗಿನ ವಸ್ತುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಪರಿಶೀಲಿಸಲು ನೆರವಾಗಲಿದೆ. ಈ ಕ್ರಮವು ವಿಮಾನ ನಿಲ್ದಾಣದಲ್ಲಿ ಉಂಟಾಗುವ ಸರತಿ ಸಾಲು ಮತ್ತು ತಪಾಸಣೆಯ ಸಮಯವನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ. ದುಬೈ ವಿಮಾನ ನಿಲ್ದಾಣದ ಎಲ್ಲ ಟರ್ಮಿನಲ್‌ಗಳಲ್ಲಿ ಹಳೆಯ ಉಪಕರಣಗಳನ್ನು ಹಂತ ಹಂತವಾಗಿ ಹೊಸ ತಂತ್ರಜ್ಞಾನದಿಂದ ಬದಲಾಯಿಸಲಾಗುತ್ತಿದೆ.