ಭಾರತದ ಆಧ್ಯಾತ್ಮಿಕ ಭೂಪಟದಲ್ಲಿ ಅಯೋಧ್ಯೆಯು ಜಾಗತಿಕ ಕೇಂದ್ರವಾಗಿ ಹೊರಹೊಮ್ಮುತ್ತಿರುವ ಬೆನ್ನಲ್ಲೇ, ಅಲ್ಲಿನ ಪ್ರವಾಸೋದ್ಯಮಕ್ಕೆ ಈಗ 'ಹಸಿರು' ಸ್ಪರ್ಶ ಸಿಕ್ಕಿದೆ. ಪ್ರಖ್ಯಾತ ಹೊಟೇಲ್ ಶೃಂಖಲೆ ʼಇಕೊ ಹೊಟೇಲ್ಸ್ʼ ಅಯೋಧ್ಯೆಯಲ್ಲಿ ತನ್ನ ಅತ್ಯಾಧುನಿಕ ಮತ್ತು ಸಂಪೂರ್ಣ ಸುಸ್ಥಿರ ಹೊಟೇಲ್ ಅನ್ನು ಪ್ರಾರಂಭಿಸುವ ಮೂಲಕ ಆಧ್ಯಾತ್ಮಿಕ ಪ್ರವಾಸೋದ್ಯಮದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ಭಾರತ ಸರಕಾರವು 'ಸ್ವದೇಶಿ ದರ್ಶನ್' ಮತ್ತು 'ಪ್ರಸಾದ್' ಯೋಜನೆಗಳ ಅಡಿಯಲ್ಲಿ ಧಾರ್ಮಿಕ ಕೇಂದ್ರಗಳನ್ನು ಅಭಿವೃದ್ಧಿಪಡಿಸುತ್ತಿದೆ. ರಾಮ ಮಂದಿರದ ಉದ್ಘಾಟನೆಯ ನಂತರ ಅಯೋಧ್ಯೆಗೆ ಹರಿಯುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಈ ಬೆಳವಣಿಗೆಯ ನಡುವೆ, ಪರಿಸರದ ಮೇಲೆ ಉಂಟಾಗುವ ಒತ್ತಡವನ್ನು ಕಡಿಮೆ ಮಾಡಲು 'ಇಕೋ ಹೊಟೇಲ್ಸ್' ಈ ವಿನೂತನ ಹೆಜ್ಜೆಯನ್ನು ಇಟ್ಟಿದೆ.

ಅಮೃತ್ ಭಾರತ್, ಎಕ್ಸ್‌ಪ್ರೆಸ್ ಹಾಗೂ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಪ್ರಧಾನಿ

ಹೊಟೇಲ್‌ನಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುವುದು ಮತ್ತು ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹೊಟೇಲ್‌ನ ಬಹುತೇಕ ವಿದ್ಯುತ್ ಅಗತ್ಯಗಳನ್ನು ಸೌರಶಕ್ತಿಯ ಮೂಲಕ ಪೂರೈಸಲಾಗುತ್ತಿದೆ ಹಾಗೂ ಅತ್ಯಾಧುನಿಕ ಜಲ ಸಂರಕ್ಷಣಾ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಬಳಸಿದ ನೀರನ್ನು ಸಂಸ್ಕರಿಸಿ ಉದ್ಯಾನವನ ಮತ್ತು ಇತರ ಕಾರ್ಯಗಳಿಗೆ ಮರುಬಳಕೆ ಮಾಡಲಾಗುತ್ತದೆ.