ಶಿವಮೊಗ್ಗ ಜಿಲ್ಲೆಯಲ್ಲಿರುವ ಕಿಮ್ಮನೆ ಐಷಾರಾಮಿ ಗಾಲ್ಫ್‌ ರೆಸಾರ್ಟ್‌ನಲ್ಲಿ ಹೊಸ ವರ್ಷಾಚರಣೆ ತಯಾರಿಗಳು ಪ್ರಾರಂಭವಾಗಿವೆ. ಲೈಟ್ಸ್‌, ಮ್ಯೂಸಿಕ್‌, ಸೆಲೆಬ್ರೇಟ್‌ ಎಂಬ ಸುಂದರ ಆಲೋಚನೆಯ ಮೂಲಕ ಹೊಸವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲು, 2025ರ ಡಿಸೆಂಬರ್‌ 31ರಂದು ಹಲವು ಕಾರ್ಯಕ್ರಮಗಳನ್ನು ಕಿಮ್ಮನೆ ರೆಸಾರ್ಟ್‌ ಆಯೋಜಿಸಿದ್ದು, ಇದರ ಭಾಗವಾಗಿ ಡಿ.31ರ ರಾತ್ರಿ ಸಂಗೀತ (ಡಿಜೆ ನೈಟ್‌) ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ವಿಜಯ ಪ್ರಕಾಶ್‌ ಕನ್ಸರ್ಟ್‌ ನೀಡಲಿದ್ದು, ಸಾರ್ವಜನಿಕರನ್ನೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದಾರೆ. ಖ್ಯಾತ ಗಾಯಕಿ ಅನುರಾಧ ಭಟ್‌ ಮತ್ತು ಅರುಣ್‌ ಸಾಗರ್‌ ಅವರ ಬ್ಯಾಂಡ್‌ ಟೀಮ್‌ ಭಾಗವಹಿಸಲಿರುವ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಇವರ ಜತೆಗೆ ಹಲವಾರು ಗಾಯಕರು, ನೃತ್ಯ ಕಲಾವಿದರು, ಹಾಸ್ಯ ಕಲಾವಿದರು ಕಾರ್ಯಕ್ರಮ ನೀಡಿ ಮನರಂಜಿಸಲಿದ್ದಾರೆ.

kimmane 1

ಕಾರ್ಯಕ್ರಮದಲ್ಲಿ ಭಾಗವಹಿಸಲು 8000 ರುಪಾಯಿಗಳಿಗೆ ಒಂದು ದಂಪತಿ ಪಾಸ್‌ ಘೋಷಿಸಿದ್ದು, ಇದರ ಜತೆಗೆ 1ಲಕ್ಷ ರುಪಾಯಿ ಮೌಲ್ಯದ ಲಕ್ಕಿ ಡ್ರಾ ಅವಕಾಶವನ್ನು ಕಲ್ಪಿಸಿದೆ. ಈ ಹೊಸವರ್ಷ ಯಾರ ಪಾಲಿಗೆ ಈ ಒಂದು ಲಕ್ಷ ನೀಡಲಿದೆ ನೋಡಬೇಕಿದೆ.

ಕಿಮ್ಮನೆ, ಶಿವಮೊಗ್ಗದಲ್ಲಿ ನಿರ್ಮಾಣವಾದ ಮೊದಲ ಗಾಲ್ಫ್ ಕೋರ್ಸ್ ಹೊಂದಿರುವ ಐಷಾರಾಮಿ ರೆಸಾರ್ಟ್ ಆಗಿದ್ದು, 65 ಎಕರೆಗಳಷ್ಟು ವಿಶಾಲವಾಗಿದೆ. ಕಣ್ಣಾಯಿಸಿದಷ್ಟು ವಿಶಾಲವಾಗಿ ಹುಲ್ಲುಹಾಸು ಕಾಣುತ್ತದೆ. ಕಿಮ್ಮನೆ ರೆಸಾರ್ಟ್‌ನಲ್ಲಿ ಪ್ರಸ್ತುತ ಚಳಿಗಾಲದ ವಿಶೇಷವಾಗಿ, ರಿಯಾಯಿತಿ ದರದಲ್ಲಿ ಪ್ಯಾಕೇಜ್‌ ಒಂದು ಚಾಲ್ತಿಯಲ್ಲಿದ್ದು, ಡಿಸೆಂಬರ್‌ 20ರ ತನಕ ಮಾನ್ಯವಾಗಿರಲಿದೆ. 2 ದಿನಗಳ ವಾಸ್ತವ್ಯ ಕಲ್ಪಿಸುವ ಈ ಪ್ಯಾಕೇಜ್‌ ಅಡಿಯಲ್ಲಿ, ಇಬ್ಬರು ವಯಸ್ಕರ ಜತೆಗೆ ಹತ್ತು ವರ್ಷ ವಯೋಮಿತಿ ಒಳಗಿನ ಒಂದು ಮಗುವಿಗೆ ಉಚಿತ ಪ್ರವೇಶ ದೊರೆಯಲಿದೆ. ಊಟೋಪಚಾರವನ್ನು ಪ್ಯಾಕೇಜ್‌ ಒಳಗೊಂಡಿದ್ದು, 30000 ರುಪಾಯಿಗಳ ಪ್ಯಾಕೇಜ್‌ ಇದಾಗಿದೆ. ಬೆಂಗಳೂರಿನಿಂದ ಕೆಲವೇ ಗಂಟೆಗಳ ಪ್ರಯಾಣದ ದೂರದಲ್ಲಿರುವ ರೆಸಾರ್ಟ್‌ ಇದಾಗಿದ್ದು, ಶಿವಮೊಗ್ಗದ ಪಶ್ಚಿಮ ಘಟ್ಟಗಳ ಸುಂದರ ನೋಟ ಮತ್ತು ಹಸಿರು ಹುಲ್ಲು ಹಾಸಿನ ಮೇಲೆ ವಿಶಾಲ ಗಾಲ್ಫ್‌ ಆಟದಿಂದಲೂ ಹೆಚ್ಚು ಹೆಸರುವಾಸಿಯಾಗಿದೆ.

ಬುಕಿಂಗ್‌ಗಾಗಿ
9019960029, 9019960034, 9019960035, 9364016926