ಬೆಂಗಳೂರಿನ ಪ್ಯಾಲೇಸ್ ಗೌಂಡ್‌ನಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಸಮಾರಂಭದಲ್ಲಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕರ್ನಾಟಕ ಕಲಾ ಕಾಲೇಜಿನ ಪ್ರವಾಸೋದ್ಯಮ ಅಧ್ಯಯನ ವಿಭಾಗಕ್ಕೆ (ಸ್ನಾತಕ/ಸ್ನಾತಕೋತ್ತರ) ಪ್ರತಿಷ್ಠಿತ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ-2026' ನೀಡಿ ಗೌರವಿಸಲಾಯಿತು. ರಾಜ್ಯದಲ್ಲಿ 'ಪ್ರವಾಸೋದ್ಯಮ ಕ್ಷೇತ್ರದಲ್ಲಿನ ಅತ್ಯುತ್ತಮ ಶಿಕ್ಷಣ ಸಂಸ್ಥೆ' ಎಂದು ಈ ವಿಭಾಗವನ್ನು ಗುರುತಿಸಲಾಯಿತು. ಪ್ರವಾಸೋದ್ಯಮ ಶಿಕ್ಷಣ ಮತ್ತು ಪ್ರವಾಸೋದ್ಯಮ ವೃತ್ತಿಪರರನ್ನು ರೂಪಿಸುವಲ್ಲಿನ ಕೊಡುಗೆಯನ್ನು ಗುರುತಿಸಿ, ಕರ್ನಾಟಕದ ಗೌರವಾನ್ವಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಪ್ರವಾಸೋದ್ಯಮ ಮತ್ತು ಆತಿಥ್ಯ ವಲಯದ ಪ್ರಮುಖ ಪಾಲುದಾರರ ಸಮ್ಮುಖದಲ್ಲಿ, ಗೌರವಾನ್ವಿತ ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್‌ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿಗಳು-2026'ರ ಭಾಗವಾಗಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

Untitled Design - 2026-11-04T115017.903

ಕರ್ನಾಟಕಾದ್ಯಂತ ಪ್ರವಾಸೋದ್ಯಮ ಮತ್ತು ಆತಿಥ್ಯ ವಲಯದ ಅಭಿವೃದ್ಧಿಗೆ ವಿವಿಧ ವ್ಯಕ್ತಿಗಳು, ಕಂಪೆನಿಗಳು ಮತ್ತು ಸಂಸ್ಥೆಗಳು ನೀಡಿರುವ ಕೊಡುಗೆಗಳನ್ನು ಈ ಪ್ರಶಸ್ತಿಗಳು ಗೌರವಿಸುತ್ತವೆ. ಧಾರವಾಡದ ಕರ್ನಾಟಕ ಕಲಾ ಕಾಲೇಜಿನ ಪ್ರವಾಸೋದ್ಯಮ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ಜಗದೀಶ್ ಕಿವುಡನವ‌ರ್ ಅವರು, ಕಾಲೇಜಿನ ಪ್ರಾಂಶುಪಾಲರಾದ ಡಾ. ಐ.ಸಿ. ಮುಳಗುಂದ ಅವರೊಂದಿಗೆ ಈ ಪ್ರಶಸ್ತಿಯನ್ನು ಸ್ವೀಕರಿಸಿದರು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ.ರಾಣಿ ರವಿಶಂಕ‌ರ್, ಕೇದಾರನಾಥ ಅಂಗಡಿ ಉಪಸ್ಥಿತರಿದ್ದರು.