ಜಾರ್ಖಂಡ್‌ ವಿಧಾನಸಭೆಯಲ್ಲಿ ರಾಜ್ಯದ ಪ್ರವಾಸೋದ್ಯಮಕ್ಕೆ ಸಂಬಂಧಿತ “Jharkhand Tourism Development and Registration (Amendment) Bill 2025” ಎಂಬ ಬಿಲ್, ಧ್ವನಿಮತದ ಮುಖಾಂತರ ಅಂಗೀಕಾರವಾಗಿದೆ. ಈ ಬಿಲ್ ಮೂಲಕ, ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಗೆ ಬಾರದ ಪ್ರಮುಖ ಪ್ರವಾಸಿ ತಾಣಗಳನ್ನು ಗುರಿಯಾಗಿಸಿಕೊಂಡು, Jharkhand Tourism Area Authority (JTAA) ಎಂಬ ಹೊಸ ಸಂಸ್ಥೆಯನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.

ಈ ಸಂಸ್ಥೆಯ ಅಧ್ಯಕ್ಷರನ್ನಾಗಿ ಪ್ರತಿ ಜಿಲ್ಲೆಯ ಡಿಸ್ಟ್ರಿಕ್ಟ್‌ ಕಮಿಷನರ್‌ರನ್ನು ನೇಮಕ ಮಾಡಲು ನಿರ್ಧರಿಸಲಾಗಿದೆ. JTAA ವ್ಯಾಪ್ತಿಯಲ್ಲಿ ಬರುವ ಪ್ರವಾಸಿ ತಾಣಗಳ ಸ್ವಚ್ಛತೆಯನ್ನು ಕಾಪಾಡುವುದು, ಭದ್ರತೆಯನ್ನು ಒದಗಿಸುವುದು, ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸುವತ್ತ ಗಮನ ಹರಿಸಲಾಗುವುದೆಂದು ಸರಕಾರ ತಿಳಿಸಿದೆ.

ರಾಜ್ಯದ ʼಗ್ರೇಡ್-Aʼ ಪ್ರವಾಸಿ ತಾಣಗಳಾದ ಪತ್ರಾಟು, ನೇತಾರ್‌ಹಟ್‌, ರಾಜ್‌ರಪ್ಪಾ ಮತ್ತು ಮಧುಬನ ಸೇರಿದಂತೆ ಅನೇಕ ಸ್ಥಳಗಳನ್ನು JTAA ವ್ಯಾಪ್ತಿಗೆ ಸೇರಿಸಿಕೊಳ್ಳಲು ಯೋಜನೆ ರೂಪಿಸಲಾಗಿದೆ.