ಜಪಾನ್‌ನ ಮೌಂಟ್ ಫುಜಿ ಚೆರಿ ಬ್ಲಾಸಮ್ ಹಬ್ಬ ರದ್ದು
ಅರೆಕುರಾಯಮಾ ಸೇಂಗನ್ ಪಾರ್ಕ್‌ನಲ್ಲಿ ನಡೆಯುತ್ತಿದ್ದ ಈ ಹಬ್ಬವು ಮೌಂಟ್ ಫುಜಿಯ ಹಿನ್ನೆಲೆಯೊಂದಿಗೆ ಚೆರಿ ಹೂಗಳ ಅಪೂರ್ವ ಸೌಂದರ್ಯವನ್ನು ಪ್ರದರ್ಶಿಸುವ ಕಾರಣ ದೇಶ-ವಿದೇಶಗಳಿಂದ ಪ್ರತಿವರ್ಷ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿತ್ತು. ಕಳೆದ ಕೆಲವು ವರ್ಷಗಳಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಿದ ಪರಿಣಾಮ ಸಾರ್ವಜನಿಕ ಸ್ಥಳಗಳಲ್ಲಿ ವಾಹನ ಸಂಚಾರ ದಟ್ಟಣೆ, ಪರಿಸರ ಸ್ವಚ್ಛತೆ ಸಮಸ್ಯೆಗಳು ಮತ್ತು ಸ್ಥಳೀಯರ ಖಾಸಗಿ ಜೀವನಕ್ಕೆ ಅಡಚಣೆ ಉಂಟಾಗುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿಬಂದಿದ್ದವು.
ಜಪಾನ್‌ನ ಯಮನಾಶಿ ಪ್ರಾಂತ್ಯದ ಫುಜಿಯೋಷಿಡಾ ನಗರದಲ್ಲಿ ಪ್ರತಿವರ್ಷ ವಸಂತ ಋತುವಿನಲ್ಲಿ ಆಯೋಜಿಸಲಾಗುತ್ತಿದ್ದ ಪ್ರಸಿದ್ಧ ಮೌಂಟ್ ಫುಜಿ ಚೆರಿ ಬ್ಲಾಸಮ್ ಹಬ್ಬವನ್ನು ಈ ವರ್ಷ ರದ್ದುಪಡಿಸಲಾಗಿದೆ. ಪ್ರವಾಸಿಗರ ಅತಿಯಾದ ಸಂಖ್ಯೆ, ಸಂಚಾರ ಗೊಂದಲ ಮತ್ತು ಸ್ಥಳೀಯ ನಿವಾಸಿಗಳ ಸುರಕ್ಷತೆ ಹಾಗೂ ದಿನನಿತ್ಯದ ಜೀವನದ ಮೇಲೆ ಉಂಟಾಗುತ್ತಿರುವ ಪರಿಣಾಮಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ನಗರಾಡಳಿತ ತಿಳಿಸಿದೆ.
ಅರೆಕುರಾಯಮಾ ಸೇಂಗನ್ ಪಾರ್ಕ್‌ನಲ್ಲಿ ನಡೆಯುತ್ತಿದ್ದ ಈ ಹಬ್ಬವು ಮೌಂಟ್ ಫುಜಿಯ ಹಿನ್ನೆಲೆಯೊಂದಿಗೆ ಚೆರಿ ಹೂಗಳ ಅಪೂರ್ವ ಸೌಂದರ್ಯವನ್ನು ಪ್ರದರ್ಶಿಸುವ ಕಾರಣ ದೇಶ-ವಿದೇಶಗಳಿಂದ ಪ್ರತಿವರ್ಷ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿತ್ತು. ಕಳೆದ ಕೆಲವು ವರ್ಷಗಳಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಿದ ಪರಿಣಾಮ ಸಾರ್ವಜನಿಕ ಸ್ಥಳಗಳಲ್ಲಿ ವಾಹನ ಸಂಚಾರ ದಟ್ಟಣೆ, ಪರಿಸರ ಸ್ವಚ್ಛತೆ ಸಮಸ್ಯೆಗಳು ಮತ್ತು ಸ್ಥಳೀಯರ ಖಾಸಗಿ ಜೀವನಕ್ಕೆ ಅಡಚಣೆ ಉಂಟಾಗುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿಬಂದಿದ್ದವು.

ನಗರ ಮೇಯರ್ ಶಿಗೇರು ಹೋರಿಯುಚಿ ಅವರು, “ಪ್ರವಾಸೋದ್ಯಮ ಮಹತ್ವದ್ದಾದರೂ, ನಾಗರಿಕರ ಸುರಕ್ಷತೆ ಮತ್ತು ಶಾಂತ ಬದುಕಿಗೆ ಆದ್ಯತೆ ನೀಡುವುದು ಅನಿವಾರ್ಯ. ಈ ಕಾರಣದಿಂದಾಗಿ ಹಲವು ವರ್ಷಗಳಿಂದ ನಡೆಯುತ್ತಿದ್ದ ಹಬ್ಬವನ್ನು ಈ ಬಾರಿ ರದ್ದುಪಡಿಸಲಾಗಿದೆ,” ಎಂದು ಹೇಳಿದ್ದಾರೆ.
ಹಬ್ಬವನ್ನು ಅಧಿಕೃತವಾಗಿ ರದ್ದುಪಡಿಸಿದರೂ ಪಾರ್ಕ್ ಸಾರ್ವಜನಿಕರಿಗೆ ತೆರೆಯಲಾಗಿರುತ್ತದೆ. ವಸಂತಕಾಲದಲ್ಲಿ ಚೆರಿ ಹೂಗಳ ಅರಳುವಿಕೆಯನ್ನು ವೀಕ್ಷಿಸಲು ಜನರು ಆಗಮಿಸುವ ಸಾಧ್ಯತೆ ಇರುವುದರಿಂದ ಸಂಚಾರ ನಿಯಂತ್ರಣ, ಭದ್ರತೆ ಮತ್ತು ಮೂಲಭೂತ ಸೌಲಭ್ಯಗಳನ್ನು ಬಲಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೌಂಟ್ ಫುಜಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅತಿಥಿಗಳ ಸಂಖ್ಯೆಯನ್ನು ನಿಯಂತ್ರಿಸುವ ಮತ್ತು ಸ್ಥಳೀಯರ ಜೀವನಶೈಲಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ದೀರ್ಘಕಾಲಿಕ ಪ್ರವಾಸೋದ್ಯಮ ನಿರ್ವಹಣಾ ನೀತಿಗಳನ್ನು ಜಾರಿಗೆ ತರಲಾಗುವುದು ಎಂದು ನಗರಾಡಳಿತ ಸ್ಪಷ್ಟಪಡಿಸಿದೆ.