ಬಿಹಾರ ಮ್ಯೂಸಿಯಂಗೆ ಅಂತಾರಾಷ್ಟ್ರೀಯ ಮನ್ನಣೆ!
ಐತಿಹಾಸಿಕ ಕಲಾಕೃತಿಗಳು, ಶಿಲ್ಪಗಳು, ಚಿತ್ರಕಲೆಗಳು ಹಾಗೂ ಇತರ ಅಮೂಲ್ಯ ವಸ್ತುಗಳ ಮೂಲಕ ಬಿಹಾರದ ಶ್ರೀಮಂತ ಪರಂಪರೆಯನ್ನು ಈ ಮ್ಯೂಸಿಯಂ ಪರಿಚಯಿಸುತ್ತದೆ. ಈ ನಿಟ್ಟಿನಲ್ಲಿ ಏಷ್ಯಾದಲ್ಲಿ ಮೊದಲ ಸ್ಥಾನ ಹಾಗೂ ವಿಶ್ವಮಟ್ಟದಲ್ಲಿ ಒಂಬತ್ತನೇ ಸ್ಥಾನವನ್ನು ಬಿಹಾರ ಮ್ಯೂಸಿಯಂ ಪಡೆದುಕೊಂಡಿದೆ.
ಪಾಟ್ನಾದಲ್ಲಿರುವ ʻಬಿಹಾರ ಮ್ಯೂಸಿಯಂʼ ತನ್ನ ಅಪೂರ್ವ ಕಲಾ ಸಂಗ್ರಹ, ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಐತಿಹಾಸಿಕ ಕಲಾಕೃತಿಗಳು, ಶಿಲ್ಪಗಳು, ಚಿತ್ರಕಲೆಗಳು ಹಾಗೂ ಇತರ ಅಮೂಲ್ಯ ವಸ್ತುಗಳ ಮೂಲಕ ಬಿಹಾರದ ಶ್ರೀಮಂತ ಪರಂಪರೆಯನ್ನು ಈ ಮ್ಯೂಸಿಯಂ ಪರಿಚಯಿಸುತ್ತದೆ. ಈ ನಿಟ್ಟಿನಲ್ಲಿ ಏಷ್ಯಾದಲ್ಲಿ ಮೊದಲ ಸ್ಥಾನ ಹಾಗೂ ವಿಶ್ವಮಟ್ಟದಲ್ಲಿ ಒಂಬತ್ತನೇ ಸ್ಥಾನವನ್ನು ಬಿಹಾರ ಮ್ಯೂಸಿಯಂ ಪಡೆದುಕೊಂಡಿದೆ. ಜಾಗತಿಕ ಟಾಪ್ 10 ಮ್ಯೂಸಿಯಂಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಮ್ಯೂಸಿಯಂ ಎಂಬ ಹೆಗ್ಗಳಿಕೆಯನ್ನೂ ಇದು ಹೊಂದಿದೆ. ಈ ಮಾನ್ಯತೆ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವುದರ ಮಹತ್ವವನ್ನು ಸಾರುವುದರ ಜತೆಗೆ, ಭಾರತದ ಐತಿಹಾಸಿಕ ವೈಭವವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.