2026ರ ಮೊದಲಾರ್ಧದಲ್ಲಿ ಶ್ರೀಲಂಕಾ ಪ್ರವಾಸೋದ್ಯಮಕ್ಕೆ ಭಾರತವೇ ಅತಿದೊಡ್ಡ ಪ್ರವಾಸಿಗರ ಮೂಲ ರಾಷ್ಟ್ರವಾಗಿ ತನ್ನ ಸ್ಥಾನವನ್ನು ಮತ್ತೊಮ್ಮೆ ಕಾಯ್ದುಕೊಂಡಿದೆ. ಈ ಅವಧಿಯಲ್ಲಿ ಶ್ರೀಲಂಕಾಕ್ಕೆ ಭೇಟಿ ನೀಡಿದ ಒಟ್ಟು 11.5 ಲಕ್ಷ ಅಂತಾರಾಷ್ಟ್ರೀಯ ಪ್ರವಾಸಿಗರಲ್ಲಿ 2,93,683 ಮಂದಿ ಭಾರತೀಯರಾಗಿದ್ದು, ಇದು ಒಟ್ಟು ಪ್ರವಾಸಿಗರ ಶೇ.25.6ರಷ್ಟಿದೆ.

Untitled design - 2026-07-17T160547.533

2025ರ ಇದೇ ಅವಧಿಗೆ ಹೋಲಿಸಿದರೆ ಒಟ್ಟಾರೆ ಅಂತಾರಾಷ್ಟ್ರೀಯ ಪ್ರವಾಸಿಗರ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದ್ದರೂ, ಭಾರತದಿಂದ ಆಗಮಿಸಿದ ಪ್ರವಾಸಿಗರ ಸಂಖ್ಯೆ ಅತ್ಯಧಿಕವಾಗಿಯೇ ಉಳಿದಿದೆ. 2026ರ ಆರಂಭಿಕ ತಿಂಗಳುಗಳಲ್ಲಿ ಪ್ರವಾಸಿಗರ ಹರಿವು ಉತ್ತಮವಾಗಿದ್ದರೂ, ಜಾಗತಿಕ ಸಂಘರ್ಷಗಳು ಮತ್ತು ಅನಿಶ್ಚಿತ ಪರಿಸ್ಥಿತಿಗಳ ಪರಿಣಾಮವಾಗಿ ಮಾರ್ಚ್ ಹಾಗೂ ಏಪ್ರಿಲ್ನಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಕುಸಿತ ದಾಖಲಾಗಿದೆ. ಮೇ ತಿಂಗಳಲ್ಲಿ ಸ್ವಲ್ಪ ಚೇತರಿಕೆ ಕಂಡರೂ, ಜೂನ್‌ನಲ್ಲಿ ಮತ್ತೆ ವಿದೇಶಿ ಪ್ರವಾಸಿಗರ ಆಗಮನದಲ್ಲಿ ಇಳಿಕೆ ಕಂಡುಬಂದಿದೆ.

ಭಾರತದ ನಂತರ ಯುಕೆ, ರಷ್ಯಾ ಹಾಗೂ ಚೀನಾ ಶ್ರೀಲಂಕಾಕ್ಕೆ ಅತಿ ಹೆಚ್ಚು ಪ್ರವಾಸಿಗರನ್ನು ಕಳುಹಿಸಿದ ಪ್ರಮುಖ ರಾಷ್ಟ್ರಗಳಾಗಿ ಹೊರಹೊಮ್ಮಿವೆ. ಭಾರತೀಯ ಪ್ರವಾಸಿಗರ ನಿರಂತರ ಆಸಕ್ತಿ ಶ್ರೀಲಂಕಾದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಮಹತ್ವದ ಬಲ ನೀಡುತ್ತಿದೆ.