ಜರ್ಮನಿಯ ಬರ್ಲಿನ್‌ನಲ್ಲಿ ಇತ್ತೀಚೆಗೆ ನಡೆದ ವಿಶ್ವದ ಅತಿದೊಡ್ಡ ಪ್ರವಾಸೋದ್ಯಮ ಮೇಳವಾದ 'ಐಟಿಬಿ ಬರ್ಲಿನ್ 2026ನಲ್ಲಿ ಭಾರತವು ಯಶಸ್ವಿಯಾಗಿ ಪಾಲ್ಗೊಂಡಿದ್ದು, ಇದರ ಬೆನ್ನಲ್ಲೇ ದೇಶದ ಜಾಗತಿಕ ಪ್ರವಾಸೋದ್ಯಮವನ್ನು ವಿಸ್ತರಿಸಲು ಭಾರತ ಸರಕಾರ ಮಹತ್ವದ ಕ್ರಮಗಳನ್ನು ಕೈಗೊಂಡಿದೆ.

ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಜರ್ಮನಿಯ ಭಾರತೀಯ ರಾಯಭಾರಿ ಅಜಿತ್ ಗುಪ್ತೆ ಸಮ್ಮುಖದಲ್ಲಿ ಬರ್ಲಿನ್‌ನಲ್ಲಿ 'ಇನ್ಕ್ರೆಡಿಬಲ್ ಇಂಡಿಯಾ' ಪೆವಿಲಿಯನ್ ಅನ್ನು ಉದ್ಘಾಟಿಸಿದರು. ಈ ಪೆವಿಲಿಯನ್ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ವೈವಿಧ್ಯಮಯ ಸಂಪ್ರದಾಯಗಳು ಮತ್ತು ಆಧುನಿಕ ಪ್ರವಾಸಿ ತಾಣಗಳನ್ನು ಜಗತ್ತಿಗೆ ಪರಿಚಯಿಸಿತು.

ಚಿತ್ರೋತ್ಸವದ ಜತೆ ಕೈ ಜೋಡಿಸಿದ ಗ್ರೀಕ್ ಟೂರಿಸಂ

ಪ್ರವಾಸೋದ್ಯಮ ಸಚಿವರು ಜರ್ಮನಿ ಮತ್ತು ಇಂಡೋನೇಷ್ಯಾ ದೇಶಗಳ ಪ್ರವಾಸೋದ್ಯಮ ಪ್ರತಿನಿಧಿಗಳೊಂದಿಗೆ ಪ್ರತ್ಯೇಕ ದ್ವಿಪಕ್ಷೀಯ ಸಭೆಗಳನ್ನು ನಡೆಸಿದರು. ಈ ಸಭೆಗಳಲ್ಲಿ ಸುಸ್ಥಿರ ಪ್ರವಾಸೋದ್ಯಮ, ವಾಯು ಸಂಪರ್ಕದ ವಿಸ್ತರಣೆ ಮತ್ತು ಪ್ರವಾಸಿಗರ ಹರಿವನ್ನು ಹೆಚ್ಚಿಸುವ ಬಗ್ಗೆ ಚರ್ಚಿಸಲಾಯಿತು. ಭಾರತದ ರೋಮಾಂಚಕ ಸಂಸ್ಕೃತಿ, ಹಬ್ಬಗಳು ಮತ್ತು ಸಾಂಪ್ರದಾಯಿಕ ಆಹಾರದ ವೈವಿಧ್ಯತೆಯನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರ ಮಾಡಲು 'ನೆಟ್‌ಫ್ಲಿಕ್ಸ್' ಸಂಸ್ಥೆಯು ಸಿದ್ಧಪಡಿಸಿದ ಎರಡು ಕಿರುಚಿತ್ರಗಳನ್ನು ಸಚಿವರು ಬಿಡುಗಡೆ ಮಾಡಿದರು.

ಅಧ್ಯಾತ್ಮ, ವಿವಾಹ ಪ್ರವಾಸೋದ್ಯಮ, ಸಾಹಸ ಕ್ರೀಡೆಗಳು, ಪರಿಸರ ಪ್ರವಾಸೋದ್ಯಮ ಮತ್ತು ಆಹಾರ ಪ್ರವಾಸೋದ್ಯಮದಂಥ ಹೊಸ ಕ್ಷೇತ್ರಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಪರಿಚಯಿಸಿತು. ಈ ಕಾರ್ಯಕ್ರಮದಲ್ಲಿ ರಾಜಸ್ಥಾನ, ಕೇರಳ, ಮಧ್ಯಪ್ರದೇಶ, ತಮಿಳುನಾಡು, ಗೋವಾ, ಉತ್ತರ ಪ್ರದೇಶ, ಗುಜರಾತ್, ಉತ್ತರಾಖಂಡ ಸೇರಿದಂತೆ ಹಲವು ರಾಜ್ಯಗಳು ಮತ್ತು ಲಡಾಖ್, ಅಂಡಮಾನ್ ನಿಕೋಬಾರ್‌ನಂಥ ಕೇಂದ್ರಾಡಳಿತ ಪ್ರದೇಶಗಳು ಭಾಗವಹಿಸಿ ತಮ್ಮ ಪ್ರಾದೇಶಿಕ ಪ್ರವಾಸಿ ತಾಣಗಳನ್ನು ಜಾಗತಿಕ ವೇದಿಕೆಯಲ್ಲಿ ಪ್ರಚಾರ ಮಾಡಿದವು.

ಅತ್ಯುತ್ತಮ ನಗರಗಳಲ್ಲಿ ನ್ಯೂಯಾರ್ಕ್‌ಗೆ ಮೊದಲ ಸ್ಥಾನ

ಭಾರತಕ್ಕೆ ಅತಿ ಹೆಚ್ಚು ಪ್ರವಾಸಿಗರನ್ನು ಕಳುಹಿಸುವ ದೇಶಗಳಲ್ಲಿ ಜರ್ಮನಿ ಎಂಟನೇ ಸ್ಥಾನದಲ್ಲಿದೆ. 2025 ರಲ್ಲಿ ಸುಮಾರು 2.6 ಲಕ್ಷ ಜರ್ಮನ್ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡಿದ್ದು, ಈ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸುವುದು ಸರಕಾರದ ಗುರಿಯಾಗಿದೆ.