ಮುಂಬಯಿ-ಅಹಮದಾಬಾದ್ ಬುಲೆಟ್ ರೈಲು ಯೋಜನೆಗೆ ವೇಗ
ಜಪಾನ್‌ನ ಅತ್ಯಾಧುನಿಕ E10 ರೈಲು ಭಾರತಕ್ಕೂ ಬರುವ ಯೋಜನೆಗೆ ವೇಗ ಸಿಕ್ಕಿದೆ. ಭಾರತ ಮತ್ತು ಜಪಾನ್ ನಡುವಿನ ದೀರ್ಘಕಾಲದ ಸಹಭಾಗಿತ್ವದ ಫಲವಾಗಿ ಈ ಯೋಜನೆ ರೂಪುಗೊಂಡಿದ್ದು, ಭವಿಷ್ಯದಲ್ಲಿ ಭಾರತದ ಹೈಸ್ಪೀಡ್ ರೈಲು ಜಾಲ ವಿಸ್ತರಣೆಗೆ ಇದು ಮಹತ್ವದ ಮೈಲಿಗಲ್ಲಾಗಲಿದೆ.
ಭಾರತದ ಮೊದಲ ಹೈಸ್ಪೀಡ್ ರೈಲು ಯೋಜನೆಯಾದ ಮುಂಬಯಿ–ಅಹಮದಾಬಾದ್ ಬುಲೆಟ್ ರೈಲು ಯೋಜನೆ ವೇಗವಾಗಿ ಮುನ್ನಡೆಯುತ್ತಿದೆ. ಯೋಜನೆಯ ನಿರ್ಮಾಣ ಕಾಮಗಾರಿ ವಿವಿಧ ಹಂತಗಳಲ್ಲಿ ಉತ್ತಮ ಪ್ರಗತಿ ಸಾಧಿಸಿದ್ದು, ಭಾರತ ಮತ್ತು ಜಪಾನ್ ನಡುವಿನ ತಾಂತ್ರಿಕ ಸಹಕಾರ ಮತ್ತಷ್ಟು ಬಲಗೊಂಡಿದೆ.

ಈ ಯೋಜನೆಗಾಗಿ ಜಪಾನ್ ತನ್ನ ಮುಂದಿನ ತಲೆಮಾರಿನ E10 ಶಿಂಕಾನ್ಸೆನ್ ರೈಲುಗಳನ್ನು ಭಾರತದಲ್ಲೂ ಪರಿಚಯಿಸಲು ಯೋಜಿಸಿದೆ. ಈ ರೈಲುಗಳು ಗಂಟೆಗೆ ಸುಮಾರು 320 ಕಿಮೀ. ಕಾರ್ಯಾಚರಣೆಗೆ ವೇಗ ಸಿಕ್ಕಿದ್ದು, ಅತ್ಯಾಧುನಿಕ ಸುರಕ್ಷತಾ ತಂತ್ರಜ್ಞಾನ, ಕಡಿಮೆ ಕಂಪನ, ಹೆಚ್ಚು ಶಕ್ತಿಸಮರ್ಥ ಕಾರ್ಯಕ್ಷಮತೆ ಹಾಗೂ ಪ್ರಯಾಣಿಕರಿಗೆ ಹೆಚ್ಚಿನ ಆರಾಮವನ್ನು ಒದಗಿಸಲಿವೆ. E10 ರೈಲುಗಳು ಜಪಾನ್‌ನ ALFA-X ಪರೀಕ್ಷಾ ತಂತ್ರಜ್ಞಾನವನ್ನು ಆಧರಿಸಿ ಅಭಿವೃದ್ಧಿಪಡಿಸಲಾಗುತ್ತಿವೆ.
ಮುಂಬಯಿ–ಅಹಮದಾಬಾದ್ ನಡುವಿನ ಸುಮಾರು 508 ಕಿಮೀ. ಉದ್ದದ ಹೈಸ್ಪೀಡ್ ರೈಲು ಮಾರ್ಗದಲ್ಲಿ ಹೆಚ್ಚಿನ ಸೇತುವೆಗಳು, ಎತ್ತರದ ವಯಾಡಕ್ಟ್‌ಗಳು, ಸುರಂಗಗಳು ಹಾಗೂ ನಿಲ್ದಾಣಗಳ ನಿರ್ಮಾಣ ಕಾರ್ಯಗಳು ವೇಗವಾಗಿ ನಡೆಯುತ್ತಿವೆ. ಯೋಜನೆ ಪೂರ್ಣಗೊಂಡ ಬಳಿಕ ಮುಂಬಯಿ ಮತ್ತು ಅಹಮದಾಬಾದ್ ನಡುವಿನ ಪ್ರಯಾಣದ ಅವಧಿ ಗಣನೀಯವಾಗಿ ಕಡಿಮೆಯಾಗಲಿದ್ದು, ವ್ಯಾಪಾರ, ಪ್ರವಾಸೋದ್ಯಮ ಮತ್ತು ಕೈಗಾರಿಕಾ ಬೆಳವಣಿಗೆಗೆ ಹೊಸ ಉತ್ತೇಜನ ಸಿಗಲಿದೆ.
ಇದನ್ನೂ ಓದಿ: ಜಗನ್ನಾಥ ರಥಯಾತ್ರೆಗೆ ವಿಶೇಷ ರೈಲುಗಳು
ಭಾರತ ಮತ್ತು ಜಪಾನ್ ನಡುವಿನ ದೀರ್ಘಕಾಲದ ಸಹಭಾಗಿತ್ವದ ಫಲವಾಗಿ ಈ ಯೋಜನೆ ರೂಪುಗೊಂಡಿದ್ದು, ಭವಿಷ್ಯದಲ್ಲಿ ಭಾರತದ ಹೈಸ್ಪೀಡ್ ರೈಲು ಜಾಲ ವಿಸ್ತರಣೆಗೆ ಇದು ಮಹತ್ವದ ಮೈಲಿಗಲ್ಲಾಗಲಿದೆ.