ಜಮ್ಮು ಮತ್ತು ಕಾಶ್ಮೀರ ಪ್ರವಾಸವನ್ನು ಸುರಕ್ಷಿತ ಮತ್ತು ವರ್ಷಪೂರ್ತಿ ಭೇಟಿ ನೀಡಬಹುದಾದ ಪ್ರವಾಸಿತಾಣವಾಗಿ ಉತ್ತೇಜಿಸಲು ಸರಕಾರದೊಂದಿಗೆ ಕೈಜೋಡಿಸುವಂತೆ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಟ್ರಾವೆಲ್ ಏಜೆಂಟ್‌ಗಳು ಮತ್ತು ಟೂರ್‌ ಮ್ಯಾನೇಜರ್‌ಗಳನ್ನು ಒತ್ತಾಯಿಸಿದರು.

ಮಹಾರಾಷ್ಟ್ರ ಮತ್ತು ಗುಜರಾತ್ ಟ್ರಾವೆಲ್ ಫ್ರೆಟರ್ನಿಟಿ ಕಾರ್ಯಕ್ರಮದ ಭಾಗವಾಗಿ ಆಯೋಜಿಸಲಾದ ಈ ಜನಸಂಪರ್ಕ ಸಭೆಯಲ್ಲಿ ಮಹಾರಾಷ್ಟ್ರ ಮತ್ತು ಗುಜರಾತ್ ಪ್ರತಿನಿಧಿಗಳು, ಮುಂಬೈನ ಟ್ರಾವೆಲ್‌ ಮತ್ತು ವ್ಯಾಪಾರ ವಲಯದ ಪಾಲುದಾರರನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಒಮರ್‌, ಜಮ್ಮು ಕಾಶ್ಮೀರ ಪ್ರವಾಸೋದ್ಯಮಕ್ಕೆ ಮಾರುಕಟ್ಟೆಯಾಗಿ ಮಹಾರಾಷ್ಟ್ರದ ಪಾತ್ರವನ್ನು ವಿವರಿಸಿದರು. ಪಹಲ್ಗಾಮ್ ದಾಳಿಯ ನಂತರ ಮಹಾರಾಷ್ಟ್ರ ಮೂಲದ ಟ್ರಾವೆಲ್‌ ಏಜೆನ್ಸಿಗಳ ಬೆಂಬಲ ನೀಡಿದ್ದಾರೆ, ಅವರ ಈ ನಡೆ ಪ್ರವಾಸಿಗರನ್ನು ಆಕರ್ಷಿಸಲು ಮತ್ತು ಅವರಲ್ಲಿ ವಿಶ್ವಾಸ ಮೂಡಿಸಲು ಸಹಾಯ ಮಾಡಿದೆ ಎಂದು ಹೇಳಿದರು.

JAMMU

ಜಮ್ಮು ಮತ್ತು ಕಾಶ್ಮೀರದ ಪ್ರವಾಸವು ಪ್ರವಾಸಿಗರಿಗೆ ಸಾಹಸ ಚಟುವಟಿಕೆ, ಧಾರ್ಮಿಕ ಪ್ರವಾಸ, ಸುಂದರ ಕಾಲ ಕಳೆಯಲು ಹೀಗೆ ಸಾಕಷ್ಟು ವೈವಿಧ್ಯಮಯ ಪ್ರವಾಸಗಳಿಗೆ ಅನುವು ಮಾಡಿಕೊಡುತ್ತದೆ. ಇದರ ಜತೆಗೆ ಪ್ರವಾಸಿಗರಿಗೆ ಸುರಕ್ಷತೆ, ಅಗತ್ಯ ಮೂಲ ಸೌಕರ್ಯ ಮತ್ತು ಪ್ರವಾಸಿ ಸ್ನೇಹಿ ವಾತಾವರಣಕ್ಕೆ ನಮ್ಮ ಸರಕಾರ ಒತ್ತು ನೀಡುತ್ತದೆ ಎಂದು ಸಿಎಂ ಒಮರ್‌ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಜಮ್ಮು ಮತ್ತು ಕಾಶ್ಮೀರ ಪ್ರವಾಸೋದ್ಯಮವನ್ನು ಉತ್ತೇಜಿಸಲು ಕೊಡುಗೆ ನೀಡಿದ ಆಯ್ದ ಟ್ರಾವೆಲ್ ಏಜೆಂಟ್‌ಗಳು ಮತ್ತು ಸಂಘಗಳನ್ನು ಸನ್ಮಾನಿಸಲಾಯಿತು.

ಮುಖ್ಯಮಂತ್ರಿಗಳ ಸಲಹೆಗಾರ ನಾಸಿರ್ ಅಸ್ಲಾಂ ವಾನಿ, ಸಂಸತ್ ಸದಸ್ಯ ಗುರಿಂದರ್ ಸಿಂಗ್ ಶಮ್ಮಿ, ಗುಲ್ಮಾರ್ಗ್ ಶಾಸಕ ಪೀರ್ಜಾದಾ ಫಾರೂಕ್ ಅಹ್ಮದ್ ಶಾ, ಪ್ರವಾಸೋದ್ಯಮ ನಿರ್ದೇಶಕ ಜಮ್ಮು ವಿಕಾಸ್ ಗುಪ್ತಾ ಹಾಗೂ ಮಹಾರಾಷ್ಟ್ರ ಮತ್ತು ಗುಜರಾತ್‌ನ ಪ್ರಮುಖ ಪ್ರಯಾಣ ಸಂಸ್ಥೆಗಳ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.