Monday, July 6, 2026
Monday, July 6, 2026

ದೆಹಲಿ ಸರಕಾರದಿಂದ ಹೊಸ ಡಿಜಿಟಲ್‌ ಪೋರ್ಟಲ್‌ ಅಭಿವೃದ್ಧಿಗೆ ಯೋಜನೆ

ಸುಮಾರು 15 ಲಕ್ಷಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪ್ರವಾಸಿಗರು ಪ್ರತಿ ವರ್ಷ ಭಾರತಕ್ಕೆ ವೈದ್ಯಕೀಯ ಚಿಕಿತ್ಸೆಗೆ ಆಗಮಿಸುತ್ತಾರೆ. ಉತ್ತಮ ಗುಣಮಟ್ಟದ ಆಸ್ಪತ್ರೆಗಳು, ಪರಿಣತ ವೈದ್ಯರು ಮತ್ತು ಕೈಗೆಟುಕುವ ವೆಚ್ಚದ ಕಾರಣದಿಂದ ದೆಹಲಿ ಈಗಾಗಲೇ ಪ್ರಮುಖ ವೈದ್ಯಕೀಯ ತಾಣವಾಗಿದೆ. ಈ ಸಾಮರ್ಥ್ಯವನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಸರಕಾರ ಈ ಹೊಸ ಪೋರ್ಟಲ್‌ನ್ನು ತರಲು ಮುಂದಾಗಿದೆ.

ದೆಹಲಿ ಸರಕಾರ ವೈದ್ಯಕೀಯ ಮತ್ತು ವೆಲ್‌ನೆಸ್ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಹೊಸ ಏಕೀಕೃತ ಡಿಜಿಟಲ್ ಪೋರ್ಟಲ್‌ನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದೆ. ಈ ಪೋರ್ಟಲ್ ದೇಶೀಯ ಹಾಗೂ ವಿದೇಶಿ ರೋಗಿಗಳಿಗೆ ಚಿಕಿತ್ಸೆಯಿಂದ ಹಿಡಿದು ಪ್ರಯಾಣ ಮತ್ತು ವಸತಿ ಮಾಹಿತಿವರೆಗೆ ಎಲ್ಲ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ‘ಒನ್-ಸ್ಟಾಪ್’ ವ್ಯವಸ್ಥೆಯಾಗಿರಲಿದೆ.

ಸುಮಾರು 15 ಲಕ್ಷಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪ್ರವಾಸಿಗರು ಪ್ರತಿ ವರ್ಷ ಭಾರತಕ್ಕೆ ವೈದ್ಯಕೀಯ ಚಿಕಿತ್ಸೆಗೆ ಆಗಮಿಸುತ್ತಾರೆ. ಉತ್ತಮ ಗುಣಮಟ್ಟದ ಆಸ್ಪತ್ರೆಗಳು, ಪರಿಣತ ವೈದ್ಯರು ಮತ್ತು ಕೈಗೆಟುಕುವ ವೆಚ್ಚದ ಕಾರಣದಿಂದ ದೆಹಲಿ ಈಗಾಗಲೇ ಪ್ರಮುಖ ವೈದ್ಯಕೀಯ ತಾಣವಾಗಿದೆ. ಈ ಸಾಮರ್ಥ್ಯವನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಸರಕಾರ ಈ ಹೊಸ ಪೋರ್ಟಲ್‌ನ್ನು ತರಲು ಮುಂದಾಗಿದೆ.

ಇದನ್ನೂ ಓದಿ: ಡಿಜಿಟಲ್‌ ಮಾಯಾ ಬಜಾರ್!

ಈ ಪೋರ್ಟಲ್‌ನಲ್ಲಿ ಆಸ್ಪತ್ರೆಗಳ ಮಾಹಿತಿ, ವಿವಿಧ ಚಿಕಿತ್ಸೆಗಳ ವಿವರ, ವೈದ್ಯರ ಪರಿಣತಿ, ಚಿಕಿತ್ಸೆ ವೆಚ್ಚದ ಅಂದಾಜು, ವೀಸಾ ನೆರವು, ವಸತಿ, ಸಾರಿಗೆ, ವೆಲ್‌ನೆಸ್ ಸೇವೆಗಳು ಹಾಗೂ ಚಿಕಿತ್ಸೆಯ ನಂತರದ ಆರೈಕೆ ಕುರಿತ ಮಾಹಿತಿಯೂ ಲಭ್ಯವಾಗಲಿದ್ದು, ರೋಗಿಗಳು ಆಸ್ಪತ್ರೆಗಳನ್ನು ಹೋಲಿಕೆ ಮಾಡಿ, ಅಗತ್ಯ ಮಾಹಿತಿಯನ್ನು ಸುಲಭವಾಗಿ ಪಡೆದು ತಮ್ಮ ಚಿಕಿತ್ಸಾ ಯೋಜನೆಯನ್ನು ರೂಪಿಸಿಕೊಳ್ಳಲು ಇದು ನೆರವಾಗಲಿದೆ.

Untitled design (39)

ಇದರ ಜತೆಗೆ ದೆಹಲಿ ಸರಕಾರ ವೈದ್ಯಕೀಯ ಪ್ರವಾಸೋದ್ಯಮವನ್ನು ನಗರ ಪ್ರವಾಸೋದ್ಯಮ ಅಭಿವೃದ್ಧಿಯ ಪ್ರಮುಖ ಭಾಗವನ್ನಾಗಿಸಲು ಮುಂದಾಗಿದೆ. ಹೊಸ ಪ್ರವಾಸಿ ವಲಯಗಳ ಅಭಿವೃದ್ಧಿ, ಸಾಂಸ್ಕೃತಿಕ ಮತ್ತು ಪರಂಪರೆಯ ಅನುಭವಗಳು, ನಗರ ಪ್ರವಾಸಗಳ ರೂಪಣೆ, ಹೋಟೆಲ್ ಹಾಗೂ ಆತಿಥ್ಯ ಕ್ಷೇತ್ರದಲ್ಲಿ ಹೂಡಿಕೆ ಉತ್ತೇಜನ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಸರಕಾರದ ಅಭಿಪ್ರಾಯದಂತೆ, ಈ ಡಿಜಿಟಲ್ ವೇದಿಕೆ ಸೇವೆಗಳ ಪಾರದರ್ಶಕತೆಯನ್ನು ಹೆಚ್ಚಿಸುವುದರ ಜತೆಗೆ ರೋಗಿಗಳ ಅನುಭವವನ್ನು ಸುಧಾರಿಸಲಿದೆ. ವಿವಿಧ ಇಲಾಖೆಗಳ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಮೂಲಕ ದೆಹಲಿಯನ್ನು ಜಾಗತಿಕ ವೈದ್ಯಕೀಯ ಮತ್ತು ವೆಲ್‌ನೆಸ್ ಪ್ರವಾಸೋದ್ಯಮದ ಪ್ರಮುಖ ಕೇಂದ್ರವನ್ನಾಗಿ ರೂಪಿಸುವ ಗುರಿಯನ್ನು ಹೊಂದಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...