ಅಡಿಗಾಸ್ ಯಾತ್ರಾದಿಂದ ದಸರಾ ಕೊಡುಗೆ
ದೇಶೀಯ ಹಾಗೂ ಅಂತಾರಾಷ್ಟ್ರೀಯ ಪ್ರವಾಸಗಳ 600ಕ್ಕೂ ಅಧಿಕ ಪ್ಯಾಕೇಜ್ಗಳಿಗೆ ಸೀಮಿತ ಅವಧಿಗೆ ಜಿಎಸ್ಟಿ ವಿನಾಯಿತಿ ಹಾಗೂ 3ರಿಂದ 80 ವರ್ಷ ವಯಸ್ಸಿನ ಪ್ರವಾಸಿಗರಿಗೆ ಉಚಿತ ಟ್ರಾವೆಲ್ ಇನ್ಸೂರೆನ್ಸ್ ಸೌಲಭ್ಯ ಒದಗಿಸುವುದಾಗಿ ಸಂಸ್ಥೆ ತಿಳಿಸಿದೆ.
ದಸರಾ ಹಬ್ಬದ ಪ್ರಯುಕ್ತ ಪ್ರವಾಸಿಗರಿಗೆ ಅಡಿಗಾಸ್ ಯಾತ್ರಾ ಸಂಸ್ಥೆಯು ವಿಶೇಷ ಕೊಡುಗೆ ಘೋಷಿಸಿದೆ. ದೇಶೀಯ ಹಾಗೂ ಅಂತಾರಾಷ್ಟ್ರೀಯ ಪ್ರವಾಸಗಳ 600ಕ್ಕೂ ಅಧಿಕ ಪ್ಯಾಕೇಜ್ಗಳಿಗೆ ಸೀಮಿತ ಅವಧಿಗೆ ಜಿಎಸ್ಟಿ ವಿನಾಯಿತಿ ಹಾಗೂ 3ರಿಂದ 80 ವರ್ಷ ವಯಸ್ಸಿನ ಪ್ರವಾಸಿಗರಿಗೆ ಉಚಿತ ಟ್ರಾವೆಲ್ ಇನ್ಸೂರೆನ್ಸ್ ಸೌಲಭ್ಯ ಒದಗಿಸುವುದಾಗಿ ಸಂಸ್ಥೆ ತಿಳಿಸಿದೆ. ದೇಶದ ಪ್ರಮುಖ ಯಾತ್ರಾ ಸ್ಥಳಗಳಾದ ಅಮರನಾಥ, ಚಾರ್ಧಾಮ್, ಕಾಶಿ, ಗಯಾ, ಅಯೋಧ್ಯೆ, ಜ್ಯೋತಿರ್ಲಿಂಗ ಕ್ಷೇತ್ರ, ಅಷ್ಟವಿನಾಯಕ, ರಾಮೇಶ್ವರ, ಮಧುರೈ ಮತ್ತು ಕನ್ಯಾಕುಮಾರಿ ಪ್ರವಾಸಗಳಿಗೆ ಈ ಕೊಡುಗೆ ಅನ್ವಯಿಸಲಿದೆ. ಅಲ್ಲದೆ, ಕಾಶ್ಮೀರ, ಹಿಮಾಚಲ ಪ್ರದೇಶ, ಸಿಕ್ಕಿಂ, ಡಾರ್ಜಿಲಿಂಗ್, ಅಸ್ಸಾಂ, ಮೇಘಾಲಯ, ಕೇರಳ, ಗುಜರಾತ್ ಹಾಗೂ ರಾಜಸ್ಥಾನ ಪ್ರವಾಸಗಳಿಗೂ ಲಭ್ಯವಿದೆ. ಅಂತಾರಾಷ್ಟ್ರೀಯ ಪ್ರವಾಸಗಳಾದ ಯುರೋಪ್, ಯುನೈಟೆಡ್ ಕಿಂಗ್ಡಮ್, ಅಮೆರಿಕ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಜಪಾನ್, ವಿಯೆಟ್ನಾಂ, ದುಬೈ, ಬಾಲಿ, ನೇಪಾಳ, ಶ್ರೀಲಂಕಾ ಮತ್ತು ಭೂತಾನ್ ಪ್ರವಾಸಗಳಿಗೂ ಕೊಡುಗೆ ಅನ್ವಯಿಸಲಿದೆ. ಗ್ರೂಪ್ ಟೂರ್, ಕಸ್ಟಮೈಸ್ ಟೂರ್ ಹಾಗೂ ನಿಗದಿತ ನಿರ್ಗಮನದ ಪ್ರವಾಸ ಪ್ಯಾಕೇಜ್ ಮಾಡಿಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗೆ 080-26616678, ಅಥವಾ 9449478944 adigasyatra.com ಸಂಪರ್ಕಿಸಬಹುದು.