ಕೋಸ್ಟಲ್ ಟೂರಿಸಂ ಅಭಿವೃದ್ಧಿ ಕಾಮಗಾರಿ ಪ್ರಾರಂಭ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಲಿ ಟೂರಿಸಂ ಅನ್ನು ಅಭಿವೃದ್ಧಿಗೊಳಿಸಲು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ನಡೆಸಿವೆ. ಹೆಲಿ ಟೂರ್ ಗಳಿಗೆ ಪೂರಕವಾಗುವಂತೆ ಪರ್ಮನೆಂಟ್ ಹೆಲಿ ಪ್ಯಾಡ್ಗಳನ್ನು ನಿರ್ಮಿಸಲು ಈಗಾಗಲೇ ಸ್ಥಳಗಳನ್ನು ಗುರುತಿಸಿದೆ.
ಕರ್ನಾಟಕದಲ್ಲಿ ಕೋಸ್ಟಲ್ ಟೂರಿಸಂ ಡೆವಲಪ್‌ಮೆಂಟ್ ಯೋಜನೆಗಳು ಭರದಿಂದ ಸಾಗುತ್ತಿವೆ. ಇದರ ಭಾಗವಾಗಿ ಮಂಗಳೂರಿನಲ್ಲಿ ಹೆಲಿ ಟೂರಿಸಂಗಾಗಿ ಪರ್ಮನೆಂಟ್ ಹೆಲಿಪ್ಯಾಡ್‌ಗಳನ್ನು ನಿರ್ಮಿಸಲು ಜಿಲ್ಲಾಡಳಿತ ಮುಂದಾಗಿದೆ. ಈ ಹಿಂದೆ ಕರಾವಳಿ ಉತ್ಸವ ಸಂದರ್ಭದಲ್ಲಿ ಹೆಲಿ ಟೂರ್ ಆಯೋಜನೆ ಮಾಡಲಾಗಿತ್ತು. ಇದಕ್ಕೆ ಸಿಕ್ಕಿದ ಪ್ರತಿಕ್ರಿಯೆಗಳನ್ನು ಗಮನಿಸಿದ ಜಿಲ್ಲಾಡಳಿತ ಕರಾವಳಿಯ ಸೌಂದರ್ಯವನ್ನು ಪಕ್ಷಿನೋಟದಲ್ಲಿ ಪ್ರವಾಸಿಗರಿಗೆ ತೋರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಈ ಬಗ್ಗೆ ಮಾತನಾಡಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹೆಚ್ ವಿ ದರ್ಶನ್, " ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಲಿ ಟೂರಿಸಂ ಅನ್ನು ಅಭಿವೃದ್ಧಿಗೊಳಿಸಲು ಜಿಲ್ಲಾಡಳಿತ ಸಕಲ ಸಿದ್ಧತೆಯನ್ನು ನಡೆಸಿದೆ. ಹೆಲಿ ಟೂರ್ ಗಳಿಗೆ ಪೂರಕವಾಗುವಂತೆ ಪರ್ಮನೆಂಟ್ ಹೆಲಿ ಪ್ಯಾಡ್ ಗಳನ್ನು ನಿರ್ಮಿಸಲು ಈಗಾಗಲೇ ಸ್ಥಳಗಳನ್ನು ಗುರುತಿಸಿದೆ. ಇದು ಕರಾವಳಿ ಭಾಗದಲ್ಲಿ ಸ್ಪಿರಿಚುಯಲ್ ಮತ್ತು ಹೆಲ್ತ್ ಟೂರ್‌ಗಳಿಗೆ ಪುಷ್ಠಿ ನೀಡಲಿದೆ” ಎಂದು ತಿಳಿಸಿದ್ದಾರೆ.