ಫೆಬ್ರವರಿ 1ರಿಂದ ದೇಶದ ಆರ್ಥಿಕ ವಲಯ ಹಾಗೂ ಸಾಮಾನ್ಯ ಜನರ ದೈನಂದಿನ ಜೀವನಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ಬದಲಾವಣೆಗಳು ಜಾರಿಗೆ ಬಂದಿವೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡಿದ ಹಿನ್ನೆಲೆಯಲ್ಲಿ, ಫಾಸ್ಟ್‌ಟ್ಯಾಗ್ ನಿಯಮಗಳಲ್ಲಿ ಬದಲಾವಣೆಗಳು ಕಂಡುಬಂದಿವೆ.

ಈ ಮಧ್ಯೆ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ವಾಹನ ಸವಾರರಿಗೆ ಮಹತ್ವದ ರಿಲೀಫ್ ನೀಡಿದೆ. ಫಾಸ್ಟ್‌ಟ್ಯಾಗ್‌ಗೆ ಸಂಬಂಧಿಸಿದ ಕೆವೈಸಿ ಪರಿಶೀಲನಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ ಎಂದು ಎನ್‌ಎಚ್‌ಎಐ ಪ್ರಕಟಿಸಿದೆ.

Big Relief for Motorists_ FASTag KYC Requirement Withdrawn

ಹೊಸ ನಿಯಮಗಳ ಪ್ರಕಾರ, ಫೆಬ್ರವರಿ 1ರಿಂದ ಫಾಸ್ಟ್‌ಟ್ಯಾಗ್ ಅನ್ನು ಒಮ್ಮೆ ಸಕ್ರಿಯಗೊಳಿಸಿದ ಬಳಿಕ ಯಾವುದೇ ಹೆಚ್ಚುವರಿ ಕೆವೈಸಿ ಪರಿಶೀಲನೆ ಅಗತ್ಯವಿರುವುದಿಲ್ಲ. ವಾಹನದ ವಿವರಗಳನ್ನು ಪರಿಶೀಲಿಸುವ ಸಂಪೂರ್ಣ ಜವಾಬ್ದಾರಿಯನ್ನು ಫಾಸ್ಟ್‌ಟ್ಯಾಗ್ ವಿತರಿಸುವ ಸಂಬಂಧಿತ ಬ್ಯಾಂಕ್‌ಗಳೇ ವಹಿಸಿಕೊಳ್ಳಲಿವೆ. ಈ ಕ್ರಮದಿಂದ ಗ್ರಾಹಕರು ಪದೇಪದೇ ಕೆವೈಸಿ ಅಪ್‌ಡೇಟ್ ಮಾಡುವ ತೊಂದರೆಯಿಂದ ಮುಕ್ತರಾಗಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.