ಬಿಗ್ ಕ್ಯಾಟ್ಸ್ ಶೃಂಗ ಸಭೆಗೆ ಬಂಡೀಪುರದಲ್ಲಿ ಚಾಲನೆ
ದೇಶದಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಬಿಗ್ ಕ್ಯಾಟ್ಸ್ ಅಲಯನ್ಸ್ ಸಭೆ ನಡೆಯುತ್ತಿದ್ದು, 23 ದೇಶಗಳ ಪ್ರತಿನಿಧಿಗಳು ಇದರಲ್ಲಿ ಭಾಗಿಯಾಗಿದ್ದಾರೆ. ಐದು ದಿನಗಳ ಕಾಲ ಈ ಸಭೆ ನಡೆಯಲಿದ್ದು, ಹುಲಿ, ಸಿಂಹ, ಚಿರತೆ ಮುಂತಾದ ದೊಡ್ಡ ಬೆಕ್ಕುಗಳ ಸಂರಕ್ಷಣೆಗೆ ಅಷ್ಟೂ ದೇಶಗಳು ಸಹಿ ಹಾಕಿರುವುದು ವಿಶೇಷವಾಗಿತ್ತು.
ಬಂಡೀಪುರದಲ್ಲಿ ಬಿಗ್ ಕ್ಯಾಟ್ಸ್ ಶೃಂಗ ಸಭೆಗೆ ಚಾಲನೆ ಸಿಕ್ಕಿದೆ. ಅರಣ್ಯ ಜೀವಿಗಳ ಸಂರಕ್ಷಣೆಗೆ ಒತ್ತು ನೀಡಿ ಈ ಬಾರಿಯ ಬಜೆಟ್ ನಲ್ಲಿ ಕೇಂದ್ರ ಸರಕಾರ ’ಬಿಗ್ ಕ್ಯಾಟ್ ಅಲಯನ್ಸ್’ ಯೋಜನೆಯನ್ನು ಘೋಷಿಸಿತ್ತು. ಇದರ ಬೆನ್ನಲ್ಲೇ ಚಾಮರಾಜನಗರ ಬಂಡೀಪುರ ಹುಲಿ ಸಂರಕ್ಷಣಾ ಪ್ರದೇಶದಲ್ಲಿ ಬಿಗ್ ಕ್ಯಾಟ್ಸ್ ಶೃಂಗ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ: ಕೋಸ್ಟಲ್ ಟೂರಿಸಂ ಅಭಿವೃದ್ಧಿ ಕಾಮಗಾರಿ ಪ್ರಾರಂಭ
ದೇಶದಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಬಿಗ್ ಕ್ಯಾಟ್ಸ್ ಅಲಯನ್ಸ್ ಸಭೆ ನಡೆಯುತ್ತಿದ್ದು, 23 ದೇಶಗಳ ಪ್ರತಿನಿಧಿಗಳು ಇದರಲ್ಲಿ ಭಾಗಿಯಾಗಿದ್ದಾರೆ. ಐದು ದಿನಗಳ ಕಾಲ ಈ ಸಭೆ ನಡೆಯಲಿದ್ದು, ಹುಲಿ, ಸಿಂಹ, ಚಿರತೆ ಮುಂತಾದ ದೊಡ್ಡ ಬೆಕ್ಕುಗಳ ಸಂರಕ್ಷಣೆಗೆ ಅಷ್ಟೂ ದೇಶಗಳು ಸಹಿ ಹಾಕಿರುವುದು ವಿಶೇಷವಾಗಿತ್ತು. ಈ ಮಹತ್ತರ ಯೋಜನೆಯ ನಾಯಕತ್ವವನ್ನು ಭಾರತವೇ ವಹಿಸಿದ್ದು, ಜಗತ್ತಿನ ಎಲ್ಲಾ ದೊಡ್ಡ ಬೆಕ್ಕುಗಳ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯ ಎಂಬ ಸಂದೇಶವನ್ನು ಪ್ರಪಂಚಕ್ಕೆ ಸಾರಿದೆ. ಕಳೆದ 50 ವರ್ಷಗಳಲ್ಲಿ ಭಾರತ ಹುಲಿ ಅಥವಾ ಇನ್ನಿತರೆ ದೊಡ್ಡ ಬೆಕ್ಕುಗಳ ಸಂರಕ್ಷಣೆಗೆ ಮುಂದಾಗಿರುವ ಭಾರತದ ಕಾರ್ಯಶೈಲಿಗೆ ಪ್ರಪಂಚವೇ ಹೆಮ್ಮೆಪಡುತ್ತಿದೆ ಎಂಬುದು ವಿದೇಶಿ ಪ್ರತಿನಿಧಿಗಳ ಅಭಿಪ್ರಾಯವಾಗಿದೆ.