Wednesday, September 2, 2026
Wednesday, September 2, 2026

ಬೆಂಗಳೂರಿನ ಮೆಟ್ರೋ ರೈಲುಗಳಿಗೆ ಸರ್ವಿಸ್ ಭಾಗ್ಯ: 15 ದಿನ ತೀವ್ರ ತಪಾಸಣೆ, ಪ್ರಯಾಣಿಕರಿಗೆ ಇಲ್ಲ ಭಯ !

ಬೆಂಗಳೂರಿನ ಮೆಟ್ರೋ ರೈಲುಗಳ ಸುರಕ್ಷತೆ ಮತ್ತು ಕಾರ್ಯಕ್ಷಮತೆ ಹೆಚ್ಚಿಸಲು ಹಳೆಯ ರೈಲುಗಳಿಗೆ 15 ದಿನಗಳ ಸುದೀರ್ಘ ತಪಾಸಣೆ ಹಾಗೂ ನಿರ್ವಹಣೆ ಕೈಗೊಳ್ಳಲಾಗುತ್ತಿದೆ

ಬೆಂಗಳೂರಿನ ಸಾರ್ವಜನಿಕ ಸಾರಿಗೆಯ ಜೀವನಾಡಿಯಾಗಿರುವ ನಮ್ಮ ಮೆಟ್ರೋ ರೈಲುಗಳ ಸುರಕ್ಷತೆ ಮತ್ತು ಕಾರ್ಯಕ್ಷಮತೆ ಹೆಚ್ಚಿಸುವ ಉದ್ದೇಶದಿಂದ ಹಳೆಯ ರೈಲುಗಳನ್ನು ಸುದೀರ್ಘ ನಿರ್ವಹಣೆಗೆ ಒಳಪಡಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಮುಂದಾಗಿದೆ. 2011ರಿಂದ ಸೇವೆಯಲ್ಲಿರುವ ಕೆಲವು ರೈಲುಗಳು ಈಗಾಗಲೇ 10 ಲಕ್ಷ ಕಿಮೀ. ಗೂ ಹೆಚ್ಚು ಸಂಚರಿಸಿರುವ ಹಿನ್ನೆಲೆಯಲ್ಲಿ ಅವುಗಳ ತಾಂತ್ರಿಕ ಸ್ಥಿತಿಯನ್ನು ಪರಿಶೀಲಿಸಲಾಗುತ್ತಿದೆ.

ಪ್ರತಿ ರೈಲನ್ನು ಸುಮಾರು 15 ದಿನಗಳ ಕಾಲ ತಪಾಸಣೆ ಮತ್ತು ನಿರ್ವಹಣೆಗೆ ಒಳಪಡಿಸಲಾಗುತ್ತದೆ. ಈ ಸಂದರ್ಭದಲ್ಲಿ ಎಂಜಿನ್, ಬ್ರೇಕಿಂಗ್ ವ್ಯವಸ್ಥೆ, ವಿದ್ಯುತ್ ಉಪಕರಣಗಳು, ಬಾಗಿಲುಗಳು, ಹವಾನಿಯಂತ್ರಣ ವ್ಯವಸ್ಥೆ ಹಾಗೂ ಅಗತ್ಯ ಬಿಡಿಭಾಗಗಳನ್ನು ಪರಿಶೀಲಿಸಿ, ಹಾಳಾದ ಅಥವಾ ಸವೆತಗೊಂಡ ಭಾಗಗಳನ್ನು ಬದಲಾಯಿಸಲಾಗುತ್ತದೆ. ಈ ಪ್ರಕ್ರಿಯೆಯು ಸುಮಾರು ಮೂರು ತಿಂಗಳ ಅವಧಿಯಲ್ಲಿ ಹಂತ ಹಂತವಾಗಿ ನಡೆಯಲಿದೆ.

ಹಳೆಯ ರೈಲುಗಳನ್ನು ಸರ್ವಿಸ್‌ಗೆ ತೆಗೆದುಕೊಳ್ಳುವುದರಿಂದ ಪ್ರಯಾಣಿಕರ ಸಂಚಾರಕ್ಕೆ ತೊಂದರೆಯಾಗಬಹುದೇ ಎಂಬ ಆತಂಕವೂ ಇದೆ. ಆದರೆ, ಬಿಎಂಆರ್‌ಸಿಎಲ್ ಎಲ್ಲ ರೈಲುಗಳನ್ನು ಒಂದೇ ಬಾರಿಗೆ ನಿರ್ವಹಣೆಗೆ ಒಳಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಹೊಸ ರೈಲುಗಳು ಸೇರ್ಪಡೆಯಾಗುತ್ತಿದ್ದಂತೆ ಹಳೆಯ ರೈಲುಗಳನ್ನು ಸರ್ವಿಸ್ ಮಾಡಲಾಗುತ್ತದೆ. ಹಸಿರು ಮಾರ್ಗಕ್ಕೆ 2027ರ ಸೆಪ್ಟೆಂಬರ್‌ವರೆಗೆ 21 ಹೊಸ ರೈಲುಗಳು ಸೇರ್ಪಡೆಯಾಗಲಿದ್ದು, ಈಗಾಗಲೇ ನಾಲ್ಕು ರೈಲುಗಳು ಬಂದಿವೆ.

ಹೀಗಾಗಿ ನಿರ್ವಹಣಾ ಕಾರ್ಯದಿಂದ ದೈನಂದಿನ ಮೆಟ್ರೋ ಸೇವೆಗೆ ದೊಡ್ಡ ಮಟ್ಟದ ಪರಿಣಾಮ ಬೀರುವ ಸಾಧ್ಯತೆ ಕಡಿಮೆ. ಬದಲಾಗಿ, ಹಳೆಯ ರೈಲುಗಳ ಸವೆತ ಮತ್ತು ತಾಂತ್ರಿಕ ದೋಷಗಳನ್ನು ಮುಂಚಿತವಾಗಿ ಸರಿಪಡಿಸುವುದರಿಂದ ಮುಂದಿನ ದಿನಗಳಲ್ಲಿ ಪ್ರಯಾಣಿಕರಿಗೆ ಹೆಚ್ಚು ಸುರಕ್ಷಿತ ಹಾಗೂ ವಿಶ್ವಾಸಾರ್ಹ ಸೇವೆ ದೊರೆಯುವ ನಿರೀಕ್ಷೆಯಿದೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಮಕ್ಕಳ ಜೊತೆ ಬೆಂಗಳೂರಿನ ಈ ಸ್ಥಳಗಳಿಗೊಮ್ಮೆ ಭೇಟಿ ಕೊಟ್ಟು ನೋಡಿ, ನೀವೂ ಮಕ್ಕಳೇ ಆಗಿಬಿಡುತ್ತೀರಿ..

Read Next

ಮಕ್ಕಳ ಜೊತೆ ಬೆಂಗಳೂರಿನ ಈ ಸ್ಥಳಗಳಿಗೊಮ್ಮೆ ಭೇಟಿ ಕೊಟ್ಟು ನೋಡಿ, ನೀವೂ ಮಕ್ಕಳೇ ಆಗಿಬಿಡುತ್ತೀರಿ..