ಬೆಂಗಳೂರು–ಮೈಸೂರು: ರಸ್ತೆ ಮಾರ್ಗಗಳಲ್ಲಿ ಮುಂಚೂಣಿ
ಬೆಂಗಳೂರು–ಮೈಸೂರು ನಡುವಿನ ರಸ್ತೆ ಪ್ರಯಾಣ ದೇಶದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಅಂತರ್‌ನಗರ ಸಂಚಾರ ಮಾರ್ಗಗಳಲ್ಲಿ ಒಂದಾಗಿ ಹೊರಹೊಮ್ಮಿದೆ.
ಬೆಂಗಳೂರು–ಮೈಸೂರು ನಡುವಿನ ರಸ್ತೆ ಪ್ರಯಾಣ ದೇಶದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಅಂತರ್‌ನಗರ ಸಂಚಾರ ಮಾರ್ಗಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಉಬರ್ ಬಿಡುಗಡೆ ಮಾಡಿದ ಇಂಟರ್‌ಸಿಟಿ ಟ್ರಾವೆಲ್ ಇಂಡೆಕ್ಸ್ ವರದಿಯ ಪ್ರಕಾರ, 2026ರ ಏಪ್ರಿಲ್‌ನಿಂದ ಜೂನ್‌ವರೆಗೆ ಸಂಗ್ರಹಿಸಿದ ಪ್ರಯಾಣದ ಮಾಹಿತಿಯ ಆಧಾರದ ಮೇಲೆ ಬೆಂಗಳೂರು–ಮೈಸೂರು ಮಾರ್ಗವು ದೇಶದ ಮೂರನೆಯ ಅತಿ ಹೆಚ್ಚು ಬಳಸಲ್ಪಟ್ಟ ಅಂತರ್‌ನಗರ ಮಾರ್ಗವಾಗಿದೆ. ಜತೆಗೆ, ಬೇಡಿಕೆಯ ಏರಿಕೆಯಲ್ಲಿ ಇದು ದೇಶದ ಎರಡನೆಯ ಅತಿ ವೇಗವಾಗಿ ಬೆಳೆಯುತ್ತಿರುವ ಮಾರ್ಗವೆಂಬ ಸ್ಥಾನವನ್ನೂ ಪಡೆದಿದೆ.

ವರದಿಯ ಪ್ರಕಾರ, ಮುಂಬಯಿ–ಪುಣೆ ಮಾರ್ಗ ಮೊದಲ ಸ್ಥಾನದಲ್ಲಿದ್ದು, ದೆಹಲಿ–ಆಗ್ರಾ ಎರಡನೆಯ ಸ್ಥಾನದಲ್ಲಿದೆ. ನಂತರ ಬೆಂಗಳೂರು–ಮೈಸೂರು, ಲಖನೌ–ಕಾನ್ಪುರ ಹಾಗೂ ಅಹಮದಾಬಾದ್–ವಡೋದರಾ ಮಾರ್ಗಗಳು ಅಗ್ರ ಐದು ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಬೆಳೆಯುತ್ತಿರುವ ಮಾರ್ಗಗಳ ಪಟ್ಟಿಯಲ್ಲಿ ಅಹಮದಾಬಾದ್–ವಡೋದರಾ ಮೊದಲ ಸ್ಥಾನದಲ್ಲಿದ್ದರೆ, ಬೆಂಗಳೂರು–ಮೈಸೂರು ಎರಡನೆಯ ಸ್ಥಾನದಲ್ಲಿದೆ.
ಉತ್ತಮ ಹೆದ್ದಾರಿ ಮೂಲಸೌಕರ್ಯ, ವೇಗವಾದ ಸಂಪರ್ಕ, ವಾರಾಂತ್ಯದ ಪ್ರವಾಸಗಳು, ವ್ಯವಹಾರಿಕ ಸಂಚಾರ ಮತ್ತು ಪ್ರವಾಸೋದ್ಯಮದ ಹೆಚ್ಚಿದ ಚಟುವಟಿಕೆಗಳು ಈ ಬೆಳವಣಿಗೆಗೆ ಪ್ರಮುಖ ಕಾರಣಗಳಾಗಿವೆ. ಮೈಸೂರು ದೇಶದ ಪ್ರಮುಖ ಪರಂಪರೆ ಹಾಗೂ ಯಾತ್ರಾ ತಾಣಗಳಲ್ಲೊಂದಾಗಿ ಹೆಚ್ಚಿನ ಪ್ರವಾಸಿಗರನ್ನು ಸೆಳೆಯುತ್ತಿದೆ. ದೀರ್ಘ ವಾರಾಂತ್ಯಗಳಲ್ಲಿ ರಸ್ತೆ ಪ್ರಯಾಣಗಳತ್ತ ಜನರು ಹೆಚ್ಚಿನ ಆಸಕ್ತಿ ತೋರಿಸುತ್ತಿರುವುದನ್ನು ವರದಿ ಉಲ್ಲೇಖಿಸಿದೆ. ಉಬರ್ ಇಂಟರ್‌ಸಿಟಿಯ ಹೊಸ ಸೇವೆಗಳು ಮತ್ತು ಸುರಕ್ಷತಾ ಸೌಲಭ್ಯಗಳು ನಗರದಿಂದ ನಗರಕ್ಕೆ ರಸ್ತೆ ಪ್ರಯಾಣವನ್ನು ಇನ್ನಷ್ಟು ಅನುಕೂಲಕರವಾಗಿಸುತ್ತಿದ್ದು, ದೇಶದಲ್ಲಿ ರಸ್ತೆ ಪ್ರವಾಸಗಳ ಜನಪ್ರಿಯತೆಯೂ ವೇಗವಾಗಿ ಹೆಚ್ಚುತ್ತಿದೆ.