Saturday, July 25, 2026
Saturday, July 25, 2026

ಅರ್ಜೆಂಟಿನಾ ವೀಸಾ: ಭಾರತೀಯರಿಗೆ ಹೊಸ ನಿಯಮಗಳು

ಅಮೆರಿಕ ಪ್ರವಾಸಿ ವೀಸಾ (B2) ಹೊಂದಿರುವ ಭಾರತೀಯರು ಈಗ ಪ್ರತ್ಯೇಕ ಅರ್ಜೆಂಟಿನಾ ಪ್ರವಾಸಿ ವೀಸಾ ಪಡೆಯದೆ, ಗರಿಷ್ಠ 90 ದಿನಗಳವರೆಗೆ ಪ್ರವಾಸ ಉದ್ದೇಶಕ್ಕಾಗಿ ಅರ್ಜೆಂಟಿನಾಗೆ ಪ್ರವೇಶಿಸಬಹುದು.

ಅರ್ಜೆಂಟಿನಾಕ್ಕೆ ಪ್ರವಾಸ ಹೋಗಲು ಯೋಜಿಸುತ್ತಿರುವ ಭಾರತೀಯರಿಗೆ ವೀಸಾ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳಿವೆ. ಅಮೆರಿಕ ಪ್ರವಾಸಿ ವೀಸಾ (B2) ಹೊಂದಿರುವ ಭಾರತೀಯರು ಈಗ ಪ್ರತ್ಯೇಕ ಅರ್ಜೆಂಟಿನಾ ಪ್ರವಾಸಿ ವೀಸಾ ಪಡೆಯದೆ, ಗರಿಷ್ಠ 90 ದಿನಗಳವರೆಗೆ ಪ್ರವಾಸ ಉದ್ದೇಶಕ್ಕಾಗಿ ಅರ್ಜೆಂಟಿನಾಗೆ ಪ್ರವೇಶಿಸಬಹುದು. ಆದರೆ, ಅಮೆರಿಕದ ವೀಸಾ ಇಲ್ಲದವರು ಸಾಮಾನ್ಯ ಅರ್ಜೆಂಟಿನಾ ಪ್ರವಾಸಿ ವೀಸಾಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ.

Untitled design - 2026-07-25T174351.773

ಸಾಮಾನ್ಯ ಪ್ರವಾಸಿ ವೀಸಾಕ್ಕೆ ಅರ್ಜಿ ಸಲ್ಲಿಸುವವರು ಕನಿಷ್ಠ ಆರು ತಿಂಗಳ ಮಾನ್ಯತೆಯಿರುವ ಪಾಸ್‌ಪೋರ್ಟ್, ಭರ್ತಿ ಮಾಡಿದ ಅರ್ಜಿ ನಮೂನೆ, ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ, ವಿಮಾನ ಟಿಕೆಟ್, ಹೊಟೇಲ್ ಅಥವಾ ವಸತಿ ವಿವರ, ಪ್ರವಾಸದ ಉದ್ದೇಶದ ಪತ್ರ ಹಾಗೂ ಬ್ಯಾಂಕ್ ಖಾತೆ ವಿವರ ಸೇರಿದಂತೆ ಆರ್ಥಿಕ ಸಾಮರ್ಥ್ಯದ ದಾಖಲೆಗಳನ್ನು ಸಲ್ಲಿಸಬೇಕು. ಭಾರತೀಯರಿಗೆ ದ್ವಿಪಕ್ಷೀಯ ಒಪ್ಪಂದದಡಿ ಅರ್ಜೆಂಟಿನಾ ಪ್ರವಾಸಿ ವೀಸಾ ಶುಲ್ಕವಿಲ್ಲ. ಅಂತಿಮವಾಗಿ ವೀಸಾ ನೀಡುವ ಅಧಿಕಾರ ಮಾತ್ರ ಅರ್ಜೆಂಟಿನಾ ಸರಕಾರಕ್ಕೇ ಸೇರಿದೆ.

ಇದನ್ನೂ ಓದಿ: ಭಾರತೀಯರಿಗೆ ವೀಸಾ-ಮುಕ್ತ ಪ್ರವೇಶ ಸ್ಥಗಿತಗೊಳಿಸಿದ ನಾಲ್ಕು ದೇಶಗಳು

ಅರ್ಜೆಂಟಿನಾ ಪ್ರವಾಸಿ ವೀಸಾಗೆ ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜೆಂಟಿನಾಗೆ ಪ್ರವಾಸ ಹೋಗಲು ಭಾರತೀಯರು ಈ ಹಂತಗಳನ್ನು ಅನುಸರಿಸಿ ವೀಸಾಗೆ ಅರ್ಜಿ ಸಲ್ಲಿಸಬಹುದು.

  1. ವೀಸಾ ಅಗತ್ಯವಿದೆಯೇ ಎಂದು ಪರಿಶೀಲಿಸಿ: ನಿಮ್ಮ ಬಳಿ ಮಾನ್ಯ ಅಮೆರಿಕ ಪ್ರವಾಸಿ ವೀಸಾ (B2) ಇದ್ದರೆ, ಪ್ರಸ್ತುತ ನಿಯಮಗಳ ಪ್ರಕಾರ ಪ್ರತ್ಯೇಕ ಅರ್ಜೆಂಟಿನಾ ಪ್ರವಾಸಿ ವೀಸಾ ಅಗತ್ಯವಿಲ್ಲದಿರಬಹುದು. ಇಲ್ಲದಿದ್ದರೆ ಸಾಮಾನ್ಯ ಪ್ರವಾಸಿ ವೀಸಾಕ್ಕೆ ಅರ್ಜಿ ಸಲ್ಲಿಸಬೇಕು.
  2. ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ: ಕನಿಷ್ಠ ಆರು ತಿಂಗಳ ಮಾನ್ಯತೆಯಿರುವ ಪಾಸ್‌ಪೋರ್ಟ್, ಭರ್ತಿ ಮಾಡಿದ ಅರ್ಜಿ ನಮೂನೆ, ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೊಟೋ, ವಿಮಾನ ಟಿಕೆಟ್, ಹೊಟೇಲ್ ಬುಕ್ಕಿಂಗ್, ಬ್ಯಾಂಕ್ ಖಾತೆ ವಿವರಗಳು ಹಾಗೂ ಪ್ರವಾಸದ ಉದ್ದೇಶದ ದಾಖಲೆಗಳನ್ನು ಸಿದ್ಧಪಡಿಸಿ.
  3. ರಾಯಭಾರ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ: ಭಾರತದಲ್ಲಿರುವ ಅರ್ಜೆಂಟಿನಾ ರಾಯಭಾರ ಕಚೇರಿ ಅಥವಾ ಅದರ ಅಧಿಕೃತ ವೀಸಾ ವ್ಯವಸ್ಥೆಯ ಮೂಲಕ ಅರ್ಜಿ ಸಲ್ಲಿಸಬೇಕು. ಅಗತ್ಯವಿದ್ದರೆ ಸಂದರ್ಶನಕ್ಕೂ ಹಾಜರಾಗಬೇಕು.
  4. ದಾಖಲೆಗಳ ಪರಿಶೀಲನೆ: ಅಧಿಕಾರಿಗಳು ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿ, ಅಗತ್ಯವಿದ್ದರೆ ಹೆಚ್ಚುವರಿ ಮಾಹಿತಿಯನ್ನು ಕೇಳಬಹುದು.
  5. ವೀಸಾ ಅನುಮೋದನೆ: ಅರ್ಜಿ ಅನುಮೋದನೆಯಾದ ಬಳಿಕ ಪಾಸ್‌ಪೋರ್ಟ್‌ಗೆ ವೀಸಾ ನೀಡಲಾಗುತ್ತದೆ. ಪ್ರಯಾಣಕ್ಕೂ ಮುನ್ನ ವೀಸಾದ ಮಾನ್ಯತೆ, ಪ್ರವೇಶದ ಷರತ್ತುಗಳು ಹಾಗೂ ವಾಸ್ತವ್ಯದ ಅವಧಿಯನ್ನು ಪರಿಶೀಲಿಸುವುದು ಉತ್ತಮ.
Untitled design - 2026-07-25T174937.603

ಹೊಸ ಸೌಲಭ್ಯದಿಂದ ಭಾರತೀಯ ಪ್ರವಾಸಿಗರಿಗೆ ಅರ್ಜೆಂಟಿನಾಕ್ಕೆ ಪ್ರಯಾಣ ಇನ್ನಷ್ಟು ಸುಲಭವಾಗಲಿದ್ದು, ಬ್ಯೂನಸ್ ಐರಿಸ್, ಇಗ್ವಾಸು ಜಲಪಾತ, ಪಟಗೋನಿಯಾ ಮತ್ತು ಅಂಡೀಸ್ ಪರ್ವತ ಪ್ರದೇಶಗಳಂಥ ಜನಪ್ರಿಯ ಪ್ರವಾಸಿ ತಾಣಗಳಿಗೆ ಭಾರತೀಯರ ಭೇಟಿ ಹೆಚ್ಚುವ ನಿರೀಕ್ಷೆಯಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...