ಭುವನೇಶ್ವರದ ನಂದನಕಾನನ್ ಉದ್ಯಾನದಲ್ಲಿ ಪ್ರಾಣಿ ವಿನಿಮಯ
ಒಡಿಶಾದ ರಾಜಧಾನಿಯಾದ ಭುವನೇಶ್ವರವು ಈಗಾಗಲೇ ತನ್ನ ಸುಂದರ ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಈಗ ನಂದನಕಾನನ್ನ ಈ ಹೊಸ ಉಪಕ್ರಮದಿಂದಾಗಿ, ನಗರವು "ವನ್ಯಜೀವಿ ಪ್ರವಾಸೋದ್ಯಮದ ಹಬ್" ಆಗಿ ಹೊರಹೊಮ್ಮುತ್ತಿದೆ.
ಒಡಿಶಾದ ಭುವನೇಶ್ವರದಲ್ಲಿರುವ ನಂದನಕಾನನ್ ಪ್ರಾಣಿಶಾಸ್ತ್ರದ ಉದ್ಯಾನವನವು ಇತ್ತೀಚೆಗೆ ಪ್ರಾಣಿ ವಿನಿಮಯ ಕಾರ್ಯಕ್ರಮ ಕೈಗೊಂಡಿದೆ.
ಹಲವಾರು ಹೊಸ ಪ್ರಾಣಿ ಪ್ರಭೇದಗಳನ್ನು ತನ್ನದಾಗಿಸಿಕೊಳ್ಳುತ್ತಿದೆ. ಇದರಲ್ಲಿ ಮುಖ್ಯವಾಗಿ ಅಳಿವಿನಂಚಿನಲ್ಲಿರುವ ಮತ್ತು ಪ್ರವಾಸಿಗರನ್ನು ಆಕರ್ಷಿಸುವಂಥ ಪ್ರಾಣಿಗಳು ಸೇರಿವೆ. ಫಿಶಿಂಗ್ ಕ್ಯಾಟ್ಸ್, ವಾಟರ್ ಮಾನಿಟರ್ ಲಿಜರ್ಡ್, ಬ್ಲಾಕ್ ಸ್ವಾನ್. ಏಷ್ಯನ್ ವೈಲ್ಡ್ ಡಾಗ್ಸ್, ಹಿಮಾಲಯನ್ ಬ್ಲಾಕ್ ಬೇರ್ಸ್, ಗಿಡುಗ, ತೋಳ ಹಾಗೂ ಹಲವು ಪ್ರಬೇಧಗಳ ಪಕ್ಷಿಗಳು ಮತ್ತು ರೆಪ್ಟೈಲ್ಸ್ ಸೇರಿದಂತೆ ಹಲವು ಅಪರೂಪದ ಪ್ರಾಣಿಗಳನ್ನು ತರಲಾಗಿದೆ.
ಇದನ್ನೂ ಓದಿ: ವಿಶ್ವ ಸಂತೋಷ ವರದಿ ಪ್ರಕಟ :ಎಷ್ಟನೆಯ ಸ್ಥಾನದಲ್ಲಿದೆ ಭಾರತ?
ಕೇವಲ ಪ್ರಾಣಿಗಳನ್ನು ತರುವುದು ಮಾತ್ರವಲ್ಲದೆ, ಅವುಗಳಿಗೆ ಸೂಕ್ತವಾದ ವಾಸಸ್ಥಾನವನ್ನು ಉನ್ನತ ಮಟ್ಟಕ್ಕೆ ಸಿದ್ಧಪಡಿಸಲಾಗಿದೆ. ಇದು ಪ್ರಾಣಿಗಳ ಸಂರಕ್ಷಣೆಯ ಜತೆಗೆ ವೀಕ್ಷಕರಿಗೆ ಒಂದು ಅದ್ಭುತ ಅನುಭವವನ್ನು ನೀಡುತ್ತದೆ. ಇದು ಪ್ರಾಣಿಗಳ ಬ್ರೀಡಿಂಗ್ ಮತ್ತು ಸಂಶೋಧನೆಗೆ ಹೆಚ್ಚಿನ ಒತ್ತು ನೀಡುತ್ತದೆ. ಶಾಲಾ ಮಕ್ಕಳಿಗೆ ಮತ್ತು ಪ್ರಕೃತಿ ಪ್ರೇಮಿಗಳಿಗೆ ವನ್ಯಜೀವಿಗಳ ಬಗ್ಗೆ ಅರಿವು ಮೂಡಿಸಲು ಇದನ್ನು ಉತ್ತಮ ವೇದಿಕೆಯಾಗಿಸುವ ಯೋಜನೆಯಿದೆ. ವನ್ಯಜೀವಿ ಪ್ರೇಮಿಗಳಿಗೆ ಈಗ ಭುವನೇಶ್ವರವು ಭೇಟಿ ನೀಡಲೇಬೇಕಾದ ತಾಣಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಳ್ಳುತ್ತಿದೆ.