ವಿಮಾನ ಪ್ರಯಾಣ: ಪವರ್ ಬ್ಯಾಂಕ್ ಬ್ಯಾನ್ ಮಾಡಿದ ಡಿಜಿಸಿಎ
ದೆಹಲಿ-ಚೆನ್ನೈ ಇಂಡಿಗೋ ವಿಮಾನದಲ್ಲಿ ಪವರ್ ಬ್ಯಾಂಕ್ ಸ್ಫೋಟಗೊಂಡು ವಿಮಾನವನ್ನು ತುರ್ತಾಗಿ ಹೈದರಾಬಾದ್‌ಗೆ ತಿರುಗಿಸಿದ ಅಗ್ನಿ ಅವಘಡದ ಬೆನ್ನಲ್ಲೇ ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಲಿಥಿಯಂ-ಐಯಾನ್ ಬ್ಯಾಟರಿಗಳು ಅತಿಯಾದ ಒತ್ತಡ ಅಥವಾ ಬಿಸಿಗೆ ಒಳಗಾದಾಗ ಕ್ಷಣಾರ್ಧದಲ್ಲಿ ಹೊತ್ತಿ ಉರಿಯುವ ಸಾಧ್ಯತೆ ಇರುವುದರಿಂದ ತಪಾಸಣೆಯನ್ನು ಕಟ್ಟುನಿಟ್ಟುಗೊಳಿಸಲು ಏರ್‌ಲೈನ್ಸ್‌ಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ.
ವಿಮಾನ ಪ್ರಯಾಣದ ವೇಳೆ ಮೊಬೈಲ್ ಚಾರ್ಜ್ ಖಾಲಿಯಾಗದಿರಲಿ ಎಂದು ಪವರ್ ಬ್ಯಾಂಕ್ ಹಿಡಿದು ಹೊರಡುವ ಮುನ್ನ ಅದರ ಮಾದರಿ ಪರಿಶೀಲಿಸಿಕೊಳ್ಳುವುದು ಕಡ್ಡಾಯ. ಇತ್ತೀಚಿನ ದಿನಗಳಲ್ಲಿ ವಿಮಾನ ಹಾರಾಟದ ವೇಳೆ ಲಿಥಿಯಂ ಬ್ಯಾಟರಿಗಳು ಸ್ಫೋಟಗೊಳ್ಳುತ್ತಿರುವ ಘಟನೆಗಳು ಹೆಚ್ಚುತ್ತಿದ್ದು ಪ್ರಯಾಣಿಕರ ಸುರಕ್ಷತೆಗೆ ಧಕ್ಕೆಯಾಗದಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಸುರಕ್ಷತಾ ಮಾನದಂಡಗಳನ್ನು ಮತ್ತಷ್ಟು ಬಿಗಿಗೊಳಿಸಿದೆ. ದೆಹಲಿ-ಚೆನ್ನೈ ಇಂಡಿಗೋ ವಿಮಾನದಲ್ಲಿ ಪವರ್ ಬ್ಯಾಂಕ್ ಸ್ಫೋಟಗೊಂಡು ವಿಮಾನವನ್ನು ತುರ್ತಾಗಿ ಹೈದರಾಬಾದ್‌ಗೆ ತಿರುಗಿಸಿದ ಅಗ್ನಿ ಅವಘಡದ ಬೆನ್ನಲ್ಲೇ ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಲಿಥಿಯಂ-ಐಯಾನ್ ಬ್ಯಾಟರಿಗಳು ಅತಿಯಾದ ಒತ್ತಡ ಅಥವಾ ಬಿಸಿಗೆ ಒಳಗಾದಾಗ ಕ್ಷಣಾರ್ಧದಲ್ಲಿ ಹೊತ್ತಿ ಉರಿಯುವ ಸಾಧ್ಯತೆ ಇರುವುದರಿಂದ ತಪಾಸಣೆಯನ್ನು ಕಟ್ಟುನಿಟ್ಟುಗೊಳಿಸಲು ಏರ್‌ಲೈನ್ಸ್‌ಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ.
MK-PB-04 ಮಾದರಿಗೆ ಸಂಪೂರ್ಣ ನಿಷೇಧ ಸುರಕ್ಷತಾ ಆತಂಕಗಳ ಹಿನ್ನೆಲೆಯಲ್ಲಿ ಎಂಕೆ-ಪಿಬಿ-04 ಮಾದರಿಯ ಪವರ್ ಬ್ಯಾಂಕ್‌ಗಳನ್ನು ಹ್ಯಾಂಡ್ ಬ್ಯಾಗ್, ಚೆಕ್-ಇನ್ ಲಗೇಜ್ ಅಥವಾ ಕಾರ್ಗೋ ಯಾವುದರಲ್ಲೂ ಸಾಗಿಸುವುದನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ. ಅನುಮತಿ ಇರುವ ಪವರ್ ಬ್ಯಾಂಕ್‌ಗಳನ್ನು ಸೀಟಿನ ಮೇಲ್ಮಾಗದ ಕ್ಯಾಬಿನೆಟ್‌ನಲ್ಲಿ ಇಡದೆ, ತುರ್ತು ಸಂದರ್ಭದಲ್ಲಿ ತಕ್ಷಣ ಕೈಗೆ ಸಿಗುವಂತೆ ಪ್ರಯಾಣಿಕರು ತಮ್ಮ ಬಳಿಯೇ ಇಟ್ಟುಕೊಳ್ಳಬೇಕು. ಅಧಿಕೃತ BIS ಮುದ್ರ ಹೊಂದಿರುವ ಗರಿಷ್ಠ 100 ವ್ಯಾಟ್-ಅವರ್ (Wh) ಮಿತಿಯೊಳಗಿನ ಎರಡು ಪವರ್ ಬ್ಯಾಂಕ್‌ಗಳಿಗೆ ಮಾತ್ರ ಅವಕಾಶವಿದ್ದು ಪ್ರಯಾಣಿಸುವ ಮುನ್ನ ವಿಮಾನಯಾನ ಸಂಸ್ಥೆಯ ನಿಯಮಾವಳಿಗಳನ್ನು ಪರಿಶೀಲಿಸುವುದು ಸೂಕ್ತ.