ನೇಪಾಳದ ಪ್ರಸಿದ್ಧ ಚಿತ್ವಾನ್ ರಾಷ್ಟ್ರೀಯ ಉದ್ಯಾನವನದ ಆವರಣದಲ್ಲಿ ನೇಪಾಳ ಪ್ರವಾಸೋದ್ಯಮ ಮಂಡಳಿಯು ವೈಲ್ಡ್ ನೇಪಾಳ ಸಫಾರಿ ಮಾರ್ಟ್ 2026 ಅನ್ನು ಅತ್ಯಂತ ವೈಭವದಿಂದ ಪ್ರಾರಂಭಿಸಿದೆ.

ಇದನ್ನೂ ಓದಿ: ನೇಪಾಳದ ಗುಹೆಯೊಳಗೆ ಗುಪ್ತೇಶ್ವರ್ ಮಹಾದೇವ

ಈ ಸಫಾರಿ ಮಾರ್ಟ್ ನೇಪಾಳದ ವೈವಿಧ್ಯಮಯ ಪ್ರಾಣಿಸಂಕುಲ ಮತ್ತು ನೈಸರ್ಗಿಕ ಸೊಬಗನ್ನು ವಿಶ್ವದಾದ್ಯಂತ ಇರುವ ಪ್ರವಾಸೋದ್ಯಮ ಉದ್ಯಮಿಗಳು ಮತ್ತು ಹೂಡಿಕೆದಾರರಿಗೆ ಪರಿಚಯಿಸಲು ವೇದಿಕೆಯಾಗಿದೆ. ಏಕಕೊಂಬಿನ ಖಡ್ಗಮೃಗ ಮತ್ತು ಬಂಗಾಳದ ಹುಲಿಗಳಿಗೆ ಹೆಸರಾಗಿರುವ ಚಿತ್ವಾನ್ ಪ್ರದೇಶವನ್ನು ವನ್ಯಜೀವಿ ಪ್ರಿಯರ ನೆಚ್ಚಿನ ತಾಣವನ್ನಾಗಿ ರೂಪಾಂತರಿಸಲು ಸರಕಾರ ಈ ಯೋಜನೆಯನ್ನು ಹಮ್ಮಿಕೊಂಡಿದೆ.

ವೈಲ್ಡ್ ನೇಪಾಳ ಸಫಾರಿ ಮಾರ್ಟ್ ಮೂಲಕ ನೇಪಾಳದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಜಾಗತಿಕ ಹೂಡಿಕೆಗಳನ್ನು ಆಕರ್ಷಿಸಲು ಮಂಡಳಿ ಮುಂದಾಗಿದೆ. ಐಷಾರಾಮಿ ರೆಸಾರ್ಟ್‌ಗಳ ನಿರ್ಮಾಣ, ಸುಧಾರಿತ ಸಫಾರಿ ವಾಹನಗಳ ಸೌಲಭ್ಯ ಮತ್ತು ಪ್ರವಾಸಿ ಸುರಕ್ಷತಾ ಮೂಲಸೌಕರ್ಯಗಳಲ್ಲಿ ಅಂತರರಾಷ್ಟ್ರೀಯ ಕಂಪನಿಗಳು ಹೂಡಿಕೆ ಮಾಡಲು ಇದು ಅವಕಾಶ ಕಲ್ಪಿಸಿದೆ. ಇದರಿಂದ ದೇಶದ ಆರ್ಥಿಕತೆಗೆ ಭಾರಿ ಬಲ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.

ವಿಶ್ವದಾದ್ಯಂತ ನೂರಾರು ಪ್ರವಾಸೋದ್ಯಮ ಪ್ರತಿನಿಧಿಗಳು, ಟ್ರಾವೆಲ್ ಏಜೆಂಟ್‌ಗಳು ಮತ್ತು ಮಾಧ್ಯಮ ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿವೆ.