ಆಸ್ಟ್ರೇಲಿಯಾ ಪ್ರವಾಸಕ್ಕೆ ಹೋಗಬೇಕೆಂದುಕೊಂಡಿದ್ದೀರಾ? ಹಾಗಾದರೆ ನಿಮ್ಮ ಪ್ರವಾಸದ ಟಿಕೆಟ್ಗಳನ್ನು ಅಡಿಗಾಸ್‌ ಯಾತ್ರಾದಲ್ಲಿ ಮುಂಗಡವಾಗಿ ಕಾಯ್ದಿರಿಸಿಕೊಳ್ಳಲು ಇದೇ ಸಕಾಲ! ಆಸ್ಟ್ರೇಲಿಯಾದ ಅತ್ಯಂತ ಪ್ರಸಿದ್ಧ ನಗರವಾದ ಸಿಡ್ನಿ ಪ್ರವಾಸಿಗರಿಗೆ ಅತ್ಯದ್ಭುತ ಅನುಭವಗಳನ್ನು ನೀಡುತ್ತದೆ. ಸಿಡ್ನಿ ನಗರದ ಕರಾವಳಿ ಮತ್ತು ಪ್ರಸಿದ್ಧ ಕಟ್ಟಡಗಳನ್ನು ಆಕಾಶದಿಂದ ವೀಕ್ಷಿಸುವ ರೋಮಾಂಚಕಾರಿ ಹೆಲಿಕಾಪ್ಟರ್ ಸವಾರಿ ಅತ್ಯಂತ ವಿಶಿಷ್ಟವಾದದ್ದು. ಸೂರ್ಯಾಸ್ತದ ವೇಳೆಯಲ್ಲಿ ಸಿಡ್ನಿ ಹಾರ್ಬರ್ ಬೋಟ್‌ನಲ್ಲಿ ಸಾಗುತ್ತಾ, ರುಚಿಕರ ಭೋಜನವನ್ನು ಸವಿಯುವುದು ಹಬ್ಬದಂತಿರುತ್ತದೆ.

ಅಲ್ಲಿಂದ ಸಿಡ್ನಿ ಹಾರ್ಬರ್ ಬ್ರಿಡ್ಜ್, ಸಿಡ್ನಿ ಒಪೆರಾ ಹೌಸ್, ಫೋರ್ಟ್ ಡೆನಿಸನ್ ಮತ್ತು ಲೂನಾ ಪಾರ್ಕ್‌ಗಳ ಅತ್ಯಾಕರ್ಷಕ ನೋಟ ಲಭ್ಯವಾಗುತ್ತದೆ. ಬೋಂಡಿ ಬೀಚ್, ದಿ ರಾಕ್ಸ್, ಪ್ಯಾಡಿಂಗ್ಟನ್ ಹಾಗೂ ಮಿಸೆಸ್ ಮೆಕ್ವಾರಿ ಪಾಯಿಂಟ್ ಸ್ಥಳಗಳಿಗೆ ಭೇಟಿ ನೀಡಿ ಫೊಟೋಗಳನ್ನು ಕ್ಲಿಕ್ಕಿಸಿಕೊಳ್ಳಬಹುದು. ಸಿಡ್ನಿಯ ವಿಶ್ವವಿಖ್ಯಾತ ಒಪೆರಾ ಹೌಸ್‌ನ ಒಳಾಂಗಣ ಮತ್ತು ವಾಸ್ತುಶಿಲ್ಪದ ವೀಕ್ಷಣೆ ಅವಿಸ್ಮರಣೀಯ. ಸೀ ಲೈಫ್‌ ಆಕ್ವೇರಿಯಂ ಮತ್ತು ವೈಲ್ಡ್‌ ಲೈಫ್‌ ಮೃಗಾಲಯದಲ್ಲಿ ಆಸ್ಟ್ರೇಲಿಯಾದ ವಿನೂತನ ಜಲಚರಗಳು ಮತ್ತು ಕಾಂಗಾರೂ-ಕೋಲಾ ಮುಂತಾದ ವಿಶಿಷ್ಟ ಪ್ರಾಣಿಗಳನ್ನು ಹತ್ತಿರದಿಂದ ವೀಕ್ಷಿಸಬಹುದು. ಬೇರಾವ ದೇಶದಲ್ಲೂ ಈ ಜೀವಿಗಳನ್ನು ನೋಡಲು ಅಸಾಧ್ಯ. ಸಿಡ್ನಿ ಟವರ್ ಐ , ಜಗತ್ಪ್ರಸಿದ್ಧ ಗಣ್ಯರ ಮೇಣದ ಪ್ರತಿಮೆಗಳಿರುವ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂ, ಬ್ಲೂ ಮೌಂಟೇನ್ಸ್ ಮತ್ತು ಸಾಹಸಮಯ ಸವಾರಿ ಪ್ರವಾಸಿಗರಿಗೆ ಲಭ್ಯವಾಗಲಿದೆ.

ಪ್ರಕೃತಿ ಪ್ರೇಮಿಗಳಿಗೆ 'ಬ್ಲೂ ಮೌಂಟೇನ್ಸ್' ಸ್ವರ್ಗವಿದ್ದಂತೆ. ಕೇಬಲ್‌ವೇ, ಸ್ಕೈವೇ ಮತ್ತು ಅತ್ಯಂತ ಕಡಿದಾದ ರೈಲ್ವೆ ಮೂಲಕ ಪರ್ವತಗಳ ಸುಂದರ ಗಿರಿ ಕಂದರಗಳನ್ನು ವೀಕ್ಷಿಸಬಹುದು. ಕಾಂಗಾರೂಗಳಿಗೆ ಸ್ವತಃ ಆಹಾರ ಉಣಿಸಲು ಫೆದರ್‌ಡೇಲ್ ವೈಲ್ಡ್‌ಲೈಫ್ ಪಾರ್ಕ್, ತ್ರಿ ಸಿಸ್ಟರ್ಸ್' (Three Sisters) ಬಂಡೆಗಳ ದೃಶ್ಯಾವಳಿ ಮತ್ತು ಜಾಮಿಸನ್ ವ್ಯಾಲಿ ನೋಟ ಮನಮೋಹಕ. ಆಸ್ಟ್ರೇಲಿಯಾದ ಕೈರ್ನ್ಸ್ ಮತ್ತು ಕುರುಂಡ ಮಳೆಕಾಡು ಪ್ರದೇಶಗಳನ್ನು ಜೀವಮಾನದಲ್ಲಿ ತಪ್ಪದೇ ವೀಕ್ಷಿಸಬೇಕು. ಉಷ್ಣವಲಯದ ಉತ್ತರ ಕ್ವೀನ್ಸ್‌ಲ್ಯಾಂಡ್‌ನ ಹಸಿರು ಸೌಂದರ್ಯವನ್ನು ಅನ್ವೇಷಿಸಲು ಇದು ಸೂಕ್ತ ಸ್ಥಳ. ಕುರುಂಡ ಸೀನಿಕ್ ರೈಲ್ವೆಯಲ್ಲಿ ಹಸಿರು ಮಳೆಕಾಡುಗಳ ನಡುವೆ ಸಾಗುವ ಅನುಭವ ಅಪೂರ್ವ. ಕಾಡಿನ ವೈವಿಧ್ಯಮಯ ಪಕ್ಷಿಗಳು, ಸ್ಥಳೀಯ ಮಾರುಕಟ್ಟೆ ಮತ್ತು ಸಾಂಪ್ರದಾಯಿಕ ಆಹಾರದ ಸವಿ ಅತ್ಯಂತ ಸ್ಮರಣೀಯ. ಮೆಲ್ಬೋರ್ನ್ ಹಾಗೂ ಗ್ರೇಟ್ ಓಷನ್ ರೋಡ್ ಪ್ರಕೃತಿಯ ಮೈ ನವಿರೇಳಿಸುವ ದೃಶ್ಯಗಳಿಗೆ ಹೆಸರಾದ ಕರಾವಳಿ ರಸ್ತೆಯಾಗಿದೆ.

ಫಿಲಿಪ್ ಐಲ್ಯಾಂಡ್‌ನಲ್ಲಿ ಪೆಂಗ್ವಿನ್ ಪರೇಡ್ ಅದ್ಭುತ ಅನುಭವ ನೀಡುತ್ತದೆ. ಸೂರ್ಯಾಸ್ತದ ನಂತರ ಪುಟಾಣಿ ಪೆಂಗ್ವಿನ್‌ಗಳು ದಂಡೆಯಿಂದ ದಂಡೆಗೆ ಸಾಗುವ ದೃಶ್ಯ ವೈಭವ ನೋಡಲೇಬೇಕು. ಗ್ರೇಟ್ ಓಷನ್ ರೋಡ್ ಮತ್ತು 12 ಅಪೋಸಲ್ಸ್ ಸಾಗರದ ತೀರದಲ್ಲಿ ನಿಸರ್ಗ ನಿರ್ಮಿತ ಬೃಹತ್ ಸುಣ್ಣದಕಲ್ಲಿನ ಕಂಬಗಳು, ಲೋಚ್ ಅರ್ಡ್ ಗಾರ್ಜ್ ಮತ್ತು ಗಿಬ್ಸನ್ ಸ್ಟೆಪ್ಸ್ ನಿಮ್ಮನ್ನು ಬೆರಗುಗೊಳಿಸುತ್ತವೆ. ಕಾಡು ಕೋಲಾಗಳನ್ನು ವೀಕ್ಷಿಸುತ್ತಾ ಅಪೋಲೊ ಬೇನಲ್ಲಿ ಮಧ್ಯಾಹ್ನದ ಭೋಜನ ಸವಿಯಬಹುದು. ಗ್ರೇಟ್ ಓಟ್ವೇ ರಾಷ್ಟ್ರೀಯ ಉದ್ಯಾನವನದಲ್ಲಿ ಟ್ರೆಕ್ಕಿಂಗ್ ಮಾಡಬಹುದು.

ʻಅಡಿಗಾಸ್‌ ಯಾತ್ರಾದಲ್ಲಿ 13 ದಿನಗಳ ಗ್ರೂಪ್ ಪ್ಯಾಕೇಜ್‌ಗೆ ಜನವರಿ 25ಕ್ಕೇ ಬುಕಿಂಗ್ ಪ್ರಾರಂಭವಾಗಿದ್ದು ಅಲ್ಲದೆ ಫೆಬ್ರವರಿ, ಮಾರ್ಚ್, ಏಪ್ರಿಲ್ ಪ್ರವಾಸಗಳ ಬುಕಿಂಗ್ ಮತ್ತು ಹೆಚ್ಚಿನ ಮಾಹಿತಿಗೆ ಅಡಿಗಾಸ್‌ ಯಾತ್ರಾದ ಹುಬ್ಬಳ್ಳಿ, ಮತ್ತು ಬೆಂಗಳೂರಿನ ಬಸವನಗುಡಿ, ಮಲ್ಲೇಶ್ವರಂ, ವಿಜಯನಗರ ಹಾಗೂ ರಾಜರಾಜೇಶ್ವರಿ ನಗರದ ಆಫೀಸುಗಳನ್ನು ಸಂದರ್ಶಿಸಿ ಅಥವಾ ದೂರವಾಣಿ ಮುಖಾಂತರವೂ ಸಂಪರ್ಕಿಸಬಹುದಾಗಿದೆʼ ಎಂದು ಸಂಸ್ಥಾಪಕ ಕೆ ನಾಗರಾಜ ಅಡಿಗ ತಿಳಿಸಿದ್ದಾರೆ.

ದೂರವಾಣಿ: 080-26616678/ 7022259008 / 9449478944. website : www.adigasyatra.com