ಭಾರತೀಯ ರೈಲ್ವೆಯಿಂದ ಆಹಾರ ಸುರಕ್ಷತೆಗೆ ಕ್ರಮ
ರೈಲುಗಳಲ್ಲಿ ಅಧಿಕೃತ ಆಹಾರ ಮಾರಾಟಗಾರರನ್ನು ಗುರುತಿಸಲು, ಆನ್‌ಬೋರ್ಡ್ ಆಹಾರ ಸೇವೆ ನಿರ್ವಹಿಸಲು ನಿಯೋಜಿಸಲಾದ ಸಿಬ್ಬಂದಿಗಳ ಹೆಸರಿನಲ್ಲಿ QR ಕೋಡ್ ಆಧಾರಿತ ಗುರುತಿನ ಚೀಟಿ ನೀಡುವುದನ್ನು ಕಡ್ಡಾಯಗೊಳಿಸಿದೆ. ಈ ಗುರುತಿನ ಚೀಟಿಯು ಮಾರಾಟಗಾರರ ಹೆಸರು, ಆಧಾರ್ ಸಂಖ್ಯೆ, ವೈದ್ಯಕೀಯ ಫಿಟ್‌ನೆಸ್, ಪೊಲೀಸ್ ಪರಿಶೀಲನೆ ವಿವರ ಸೇರಿ ವಿವಿಧ ಮಾಹಿತಿಗಳನ್ನು ಒಳಗೊಂಡ ಕ್ಯೂಆರ್ ಕೋಡ್ ಅನ್ನು ಒಳಗೊಂಡಿರಲಿದೆ.
ಭಾರತೀಯ ರೈಲ್ವೆಯು ತನ್ನ ರೈಲ್ವೆ ಆವರಣಗಳಲ್ಲಿ ಅನಧಿಕೃತವಾಗಿ ಆಹಾರ ಮಾರಾಟಕ್ಕೆ ಬ್ರೇಕ್ ಹಾಕಲು ಮುಂದಾಗಿದೆ. ಇದರ ಭಾಗವಾಗಿ ಕ್ಯೂಆರ್ ಕೋಡ್ ವ್ಯವಸ್ಥೆಯನ್ನು ಜಾರಿಗೆ ತರಲು ನಿರ್ಧರಿಸಿದೆ. ಇದರಿಂದ ಆಹಾರದ ಗುಣಮಟ್ಟ ಮತ್ತು ರೈಲ್ವೆಯಲ್ಲಿ ನೈರ್ಮಲ್ಯ ಸುಧಾರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ರೈಲ್ವೆ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದೆ.
ಕ್ಯೂಆರ್ ಕಡ್ಡಾಯ
ರೈಲುಗಳಲ್ಲಿ ಅಧಿಕೃತ ಆಹಾರ ಮಾರಾಟಗಾರರನ್ನು ಗುರುತಿಸಲು, ಆನ್‌ಬೋರ್ಡ್ ಆಹಾರ ಸೇವೆ ನಿರ್ವಹಿಸಲು ನಿಯೋಜಿಸಲಾದ ಸಿಬ್ಬಂದಿಗಳ ಹೆಸರಿನಲ್ಲಿ QR ಕೋಡ್ ಆಧಾರಿತ ಗುರುತಿನ ಚೀಟಿ ನೀಡುವುದನ್ನು ಕಡ್ಡಾಯಗೊಳಿಸಿದೆ. ಈ ಗುರುತಿನ ಚೀಟಿಯು ಮಾರಾಟಗಾರರ ಹೆಸರು, ಆಧಾರ್ ಸಂಖ್ಯೆ, ವೈದ್ಯಕೀಯ ಫಿಟ್‌ನೆಸ್, ಪೊಲೀಸ್ ಪರಿಶೀಲನೆ ವಿವರ ಸೇರಿ ವಿವಿಧ ಮಾಹಿತಿಗಳನ್ನು ಒಳಗೊಂಡ ಕ್ಯೂಆರ್ ಕೋಡ್ ಅನ್ನು ಒಳಗೊಂಡಿರಲಿದೆ.
ಇದನ್ನೂ ಓದಿ: ತಿರುಪತಿ ಭಕ್ತರಿಗಾಗಿ ಹೊಸ ಸೌಲಭ್ಯ
ಆಹಾರದ ಪೊಟ್ಟಣಗಳ ಮೇಲೂ ಕ್ಯೂಆರ್
ಆಹಾರದ ಸುರಕ್ಷತೆಗೂ ಗಮನ ನೀಡಿರುವ ರೈಲ್ವೆ, ಆಹಾರ ಪೊಟ್ಟಣಗಳ ಮೇಲೂ ಕ್ಯೂಆರ್ ಕೋಡ್ ಅಳವಡಿಸಲು ತಿಳಿಸಿದ್ದು, ಇದರಲ್ಲಿ ಅಡುಗೆಮನೆಯ ಹೆಸರು ಮತ್ತು ಆಹಾರ ತಯಾರಾದ ದಿನಾಂಕ ಇತ್ಯಾದಿ ಮಾಹಿತಿಗಳು ಇರಲಿವೆ.
ಆಹಾರ ಸುರಕ್ಷತೆ ಮತ್ತು ನೈರ್ಮಲ್ಯ ಕಾಪಾಡಿಕೊಳ್ಳುವ ದೃಷ್ಟಿಯಿಂದ ಜನಪ್ರಿಯ ಮತ್ತು ಬ್ರಾಂಡೆಡ್ ಆಹಾರ ಪದಾರ್ಥಗಳನ್ನು ಮತ್ತು ಡೈರಿ ಉತ್ಪನ್ನು ಶಾರ್ಟ್‌ಲಿಸ್ಟ್ ಮಾಡಿ ಬಳಸುವುದು, ಆಹಾರ ಸುರಕ್ಷತಾ ಅಧಿಕಾರಿಗಳಿಂದ FSSAI ಪ್ರಮಾಣೀಕರಣ, ಅನಿರೀಕ್ಷಿತ ತಪಾಸಣೆ ಸೇರಿ ಹಲವು ಉಪಕ್ರಮಗಳನ್ನು ರೈಲ್ವೆ ಜಾರಿಗೊಳಿಸಿದೆ. ಒಟ್ಟಾರೆ ಈ ಕ್ರಮವು ರೈಲ್ವೆ ಪ್ರಯಾಣಿಕರಲ್ಲಿ ಆಹಾರದ ಕುರಿತು ವಿಶ್ವಾಸಾರ್ಹತೆ ಹೆಚ್ಚಿಸಲಿದೆ.