Thursday, March 26, 2026
Thursday, March 26, 2026

ಲಕ್ಕುಂಡಿಯಲ್ಲಿ ವಸ್ತು ಸಂಗ್ರಹಾಲಯ ಸ್ಥಾಪನೆ: ಎಚ್‌.ಕೆ. ಪಾಟೀಲ್‌

ಗದಗ ತಾಲೂಕಿನಲ್ಲಿನ ಐತಿಇಹಾಸಿಕ ಗ್ರಾಮ ಲಕ್ಕುಂಡಿಯಲ್ಲಿ ನಡೆದ ಉತ್ಖನನದಲ್ಲಿ ಸುಮಾರು 200 ಅಪರೂಪದ ವಸ್ತುಗಳು ಮತ್ತು 10 ಪ್ರಮುಖ ಶಾಸನಗಳು ಪತ್ತೆಯಾಗಿವೆ. ಅವುಗಳ ಜತೆಗೆ ಹಲವು ಪ್ರಾಚ್ಯ ಅವಶೇಷಗಳು ದೊರೆತಿದ್ದು, ಅವುಗಳನ್ನು ಕಾಪಿಡಲು ಅಪರೂಪದ ವಸ್ತುಗಳ ಸಂಗ್ರಹಾಲಯ ಸ್ಥಾಪಿಸುವುದಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ್‌ ಹೇಳಿದ್ದಾರೆ.

ವಸ್ತುಗಳ ಸಂಗ್ರಹಾಲಯ ಸ್ಥಾಪಿಸುವ ಕುರಿತು ಕರ್ನಾಟಕ ಜ್ಞಾನ ಭಂಡಾರ ಹಸ್ತಪ್ರತಿ ಮತ್ತು ಡಿಜಿಟಲೀಕರಣ ವಿಧೇಯಕ 2026 ಕುರಿತು ಚರ್ಚೆಯಲ್ಲಿ ಸಚಿವರು ಮಾತನಾಡಿದ್ದಾರೆ.

New Project (55)

ಲಕ್ಕುಂಡಿಯ ಮನೆ ಮನೆಯಲ್ಲೂ ಐತಿಹಾಸಿಕ ಶಾಸನಗಳು, ಪ್ರಾಚ್ಯ ಅವಶೇಷಗಳು ಇವೆ. ಇದನ್ನು ಗಮನಿಸಿ ಅಲ್ಲಿ ಸಂಗ್ರಹ ಕಾರ್ಯವನ್ನು ಪ್ರಾರಂಭಿಸಲಾಯಿತು. ಸಂಗ್ರಹ ಆರಂಭಿಸಿದ ಮೊದಲ ದಿನವೇ 1200 ಪ್ರಾಚ್ಯ ವಸ್ತುಗಳು ಲಕ್ಕುಂಡಿಯಲ್ಲಿ ದೊರೆತಿದ್ದು, 10 ಶಾಸನಗಳೂ ಇದರಲ್ಲಿ ಸೇರಿವೆ. ಅವುಗಳನ್ನು ಕಾಪಾಡುವ ದೃಷ್ಟಿಯಿಂದ ವಸ್ತು ಸಂಗ್ರಹಾಲಯ ಸ್ಥಾಪಿಸಲು ಉದ್ದೇಶಿಸಲಾಗಿದೆ. 3 ಎಕರೆ ಸ್ಥಳಾವಕಾಶವನ್ನು ಇದಕ್ಕಾಗಿ ಗುರುತಿಸಲಾಗಿದೆ ಎಂದರು.

ಇದೇವೇಳೆ ಸಾರ್ವಜನಿಕರ ಬಳಿ ಇರುವ ಐತಿಹಾಸಿಕ ವಸ್ತುಗಳನ್ನು, ಹಸ್ತಪ್ರತಿ ಮತ್ತು ಡಿಜಿಟಲೀಕರಣ ವಿಧೇಯಕ ಪ್ರಾಧಿಕಾರಕ್ಕೆ ನೀಡಬೇಕು ಅವು ಜ್ಞಾನದ ಸಂಪನ್ಮೂಲ ಎಂದು ಸಚಿವ ಪಾಟೀಲ್‌ ಸದನಕ್ಕೆ ಉತ್ತರಿಸಿದರು.

Jadesha Emmiganur

Jadesha Emmiganur

Jadesha Emmiganur Is a Passionate Journalist from Ballari

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..