Thursday, June 4, 2026
Thursday, June 4, 2026

ಭಾರತೀಯ ಪ್ರವಾಸಿಗರಿಗೆ ಜರ್ಮನಿಯಿಂದ ಭರ್ಜರಿ ಕೊಡುಗೆ

ಈ ಹೊಸ ನಿಯಮದ ಅಡಿಯಲ್ಲಿ, ಭಾರತೀಯ ಪ್ರಯಾಣಿಕರು ಅಮೆರಿಕ, ಕೆನಡಾ, ಯುನೈಟೆಡ್ ಕಿಂಗ್ಡಮ್ ಅಥವಾ ಇತರ ಯಾವುದೇ ಯುರೋಪೇತರ ಮೂರನೆಯ ದೇಶಗಳಿಗೆ ಜರ್ಮನಿಯ ಫ್ರಾಂಕ್‌ಫರ್ಟ್ ಅಥವಾ ಮ್ಯುನಿಚ್‌ನಂಥ ಪ್ರಮುಖ ವಿಮಾನ ನಿಲ್ದಾಣಗಳ ಮೂಲಕ ಕನೆಕ್ಟಿಂಗ್ ಫ್ಲೈಟ್ ಪಡೆಯುವಾಗ ಯಾವುದೇ ಹೆಚ್ಚುವರಿ ವೀಸಾ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ.

ಅಂತಾರಾಷ್ಟ್ರೀಯ ಪ್ರಯಾಣ ಬೆಳೆಸುವ ಭಾರತೀಯ ನಾಗರಿಕರಿಗೆ ಜರ್ಮನಿ ಸರಕಾರವು ಅತ್ಯಂತ ಮಹತ್ವದ ಮತ್ತು ಬಹುದೊಡ್ಡ ಸಮಾಧಾನಕರ ನಿರ್ಧಾರವೊಂದನ್ನು ಪ್ರಕಟಿಸಿದೆ. ಬುಧವಾರ (3 ಜೂನ್ 2026) ಜಾರಿಗೆ ಬರುವಂತೆ, ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ಪ್ರಯಾಣಿಕರು ಜರ್ಮನಿಯ ವಿಮಾನ ನಿಲ್ದಾಣಗಳ ಮೂಲಕ ಬೇರೆ ದೇಶಗಳಿಗೆ ಪ್ರಯಾಣಿಸುವಾಗ ಇನ್ನು ಮುಂದೆ ಯಾವುದೇ 'ಏರ್‌ಪೋರ್ಟ್ ಟ್ರಾನ್ಸಿಟ್ ವೀಸಾ' ಹೊಂದುವ ಅಗತ್ಯವಿಲ್ಲ. ಜರ್ಮನಿಯ ಅಧಿಕೃತ ಫೆಡರಲ್ ಲಾ ಗ್ಯಾಜೆಟ್ ನಲ್ಲಿ 2 ಜೂನ್ 2026 ರಂದು ಈ ಆದೇಶ ಪ್ರಕಟವಾಗಿದ್ದು, ಅಧಿಕೃತವಾಗಿ ಜಾರಿಗೆ ಬಂದಿದೆ ಎಂದು ಭಾರತದಲ್ಲಿರುವ ಜರ್ಮನ್ ರಾಯಭಾರ ಕಚೇರಿ ದೃಢಪಡಿಸಿದೆ.

ಈ ಹೊಸ ನಿಯಮದ ಅಡಿಯಲ್ಲಿ, ಭಾರತೀಯ ಪ್ರಯಾಣಿಕರು ಅಮೆರಿಕ, ಕೆನಡಾ, ಯುನೈಟೆಡ್ ಕಿಂಗ್ಡಮ್ ಅಥವಾ ಇತರ ಯಾವುದೇ ಯುರೋಪೇತರ ಮೂರನೆಯ ದೇಶಗಳಿಗೆ ಜರ್ಮನಿಯ ಫ್ರಾಂಕ್‌ಫರ್ಟ್ ಅಥವಾ ಮ್ಯುನಿಚ್‌ನಂಥ ಪ್ರಮುಖ ವಿಮಾನ ನಿಲ್ದಾಣಗಳ ಮೂಲಕ ಕನೆಕ್ಟಿಂಗ್ ಫ್ಲೈಟ್ ಪಡೆಯುವಾಗ ಯಾವುದೇ ಹೆಚ್ಚುವರಿ ವೀಸಾ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ. ಈ ಹಿಂದೆ ಭಾರತೀಯ ನಾಗರಿಕರು ಜರ್ಮನಿಯ ವಿಮಾನ ನಿಲ್ದಾಣದೊಳಗೆ ಕೇವಲ ವಿಮಾನ ಬದಲಾಯಿಸಬೇಕಾಗಿದ್ದರೂ ಸಹ ಕಡ್ಡಾಯವಾಗಿ ಟೈಪ್-ಎ ಟ್ರಾನ್ಸಿಟ್ ವೀಸಾ ಪಡೆಯಬೇಕಾಗಿತ್ತು. ಆದರೆ, ಈ ಹೊಸ ನಿರ್ಧಾರದಿಂದಾಗಿ ಭಾರತೀಯ ಪ್ರಯಾಣಿಕರ ಹಣ ಮತ್ತು ವೀಸಾ ಪ್ರಕ್ರಿಯೆಗೆ ತಗಲುತ್ತಿದ್ದ ಸಮಯ ಎರಡೂ ಉಳಿತಾಯವಾಗಲಿದೆ.

ಈ ಮಹತ್ವದ ಬದಲಾವಣೆಯು ಭಾರತ ಮತ್ತು ಜರ್ಮನಿ ದೇಶಗಳ ನಡುವೆ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿರುವ ದ್ವಿಪಕ್ಷೀಯ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ. ಜನವರಿ 2026ರಲ್ಲಿ ಜರ್ಮನಿಯ ಫೆಡರಲ್ ಚಾನ್ಸಲರ್ ಫ್ರೆಡ್ರಿಕ್ ಮೆರ್ಜ್ ಅವರು ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆಸಿದ ಉನ್ನತ ಮಟ್ಟದ ದ್ವಿಪಕ್ಷೀಯ ಚರ್ಚೆಯ ಫಲವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ಈ ಕುರಿತು ಎಕ್ಸ್ ಜಾಲತಾಣದಲ್ಲಿ ಹಂಚಿಕೊಂಡಿರುವ ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು, ʼಜರ್ಮನಿಯ ಈ ನಿರ್ಧಾರವನ್ನು ಭಾರತವು ಹೃತ್ಪೂರ್ವಕವಾಗಿ ಸ್ವಾಗತಿಸುತ್ತದೆ, ಈ ಹೊಸ ವ್ಯವಸ್ಥೆಯು ಭಾರತ ಮತ್ತು ಜರ್ಮನಿ ನಡುವಿನ ಜನರ ಸಂಪರ್ಕವನ್ನು ಮತ್ತು ಆರ್ಥಿಕ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲಿದೆ" ಎಂದು ತಿಳಿಸಿದ್ದಾರೆ.

ಯುರೋಪ್‌ನ ಮತ್ತೊಂದು ಪ್ರಮುಖ ವಾಯುಯಾನ ಹಬ್ ಆಗಿರುವ ಫ್ರಾನ್ಸ್ ದೇಶವು ಇತ್ತೀಚೆಗಷ್ಟೇ ಅಂದರೆ 10 ಏಪ್ರಿಲ್ 2026 ರಿಂದ ಜಾರಿಗೆ ಬರುವಂತೆ ಭಾರತೀಯರಿಗೆ ವೀಸಾ ರಹಿತ ಟ್ರಾನ್ಸಿಟ್ ಸೌಲಭ್ಯವನ್ನು ನೀಡಿತ್ತು. ಈಗ ಅದರ ಬೆನ್ನಲ್ಲೇ ಜರ್ಮನಿಯೂ ಈ ನಿಯಮವನ್ನು ಜಾರಿಗೊಳಿಸಿರುವುದರಿಂದ, ಕೇವಲ ಕೆಲವೇ ವಾರಗಳ ಅಂತರದಲ್ಲಿ ಯುರೋಪ್‌ನ ಎರಡು ಅತ್ಯಂತ ದೊಡ್ಡ ವಾಯುಯಾನ ಕೇಂದ್ರಗಳು ಭಾರತೀಯ ಪ್ರಯಾಣಿಕರಿಗೆ ಮುಕ್ತವಾದಂತಾಗಿದೆ. ಇದು ಪ್ರಮುಖವಾಗಿ ಉನ್ನತ ಶಿಕ್ಷಣಕ್ಕಾಗಿ ವಿದೇಶಗಳಿಗೆ ಹೋಗುವ ಭಾರತೀಯ ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ ಮತ್ತು ಪ್ರವಾಸಿಗರಿಗೆ ಅತ್ಯಂತ ಸಹಕಾರಿಯಾಗಲಿದೆ.

ಅಂತಾರಾಷ್ಟ್ರೀಯ ಟ್ರಾನ್ಸಿಟ್ ವಲಯ: ಪ್ರಯಾಣಿಕರು ಕಡ್ಡಾಯವಾಗಿ ಜರ್ಮನ್ ವಿಮಾನ ನಿಲ್ದಾಣದ ಅಂತರರಾಷ್ಟ್ರೀಯ ಟ್ರಾನ್ಸಿಟ್ ವಲಯದ ಒಳಗಡೆಯೇ ಇರಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಜರ್ಮನಿಯ ಇಮಿಗ್ರೇಷನ್ ದಾಟಿ ಹೊರಗೆ ಬರುವಂತಿಲ್ಲ.

ಟರ್ಮಿನಲ್ ಬದಲಾವಣೆ ಮತ್ತು ಬ್ಯಾಗೇಜ್: ಒಂದು ವೇಳೆ ಪ್ರಯಾಣಿಕರು ತಮ್ಮ ಕನೆಕ್ಟಿಂಗ್ ಫ್ಲೈಟ್ ಹಿಡಿಯಲು ಟರ್ಮಿನಲ್ ಬದಲಾಯಿಸಬೇಕಾಗಿ ಬಂದು, ಅದಕ್ಕಾಗಿ ಇಮಿಗ್ರೇಷನ್ ದಾಟಬೇಕಾದರೆ ಅಥವಾ ಲಗೇಜ್ ಅನ್ನು ತಾವೇ ಸ್ವತಃ ಕಲೆಕ್ಟ್ ಮಾಡಿ ಮತ್ತೊಮ್ಮೆ ರೀ-ಚೆಕ್ ಇನ್ ಮಾಡಬೇಕಾದ ಸಂದರ್ಭ ಎದುರಾದರೆ, ಅಂಥ ಸಂದರ್ಭಗಳಲ್ಲಿ ಸಾಮಾನ್ಯ ಶೆಂಗನ್ ವೀಸಾ ಕಡ್ಡಾಯವಾಗಿರುತ್ತದೆ.

ಒಂದೇ ದಿನದ ಪ್ರಯಾಣ: ಪ್ರಯಾಣಿಕರ ಮುಂದಿನ ಕನೆಕ್ಟಿಂಗ್ ಫ್ಲೈಟ್ ಅದೇ ದಿನ ಇರಬೇಕು. ವಿಮಾನ ನಿಲ್ದಾಣದಲ್ಲಿ ರಾತ್ರಿ ತಂಗಲು ಸಾಮಾನ್ಯ ವೀಸಾ ಇಲ್ಲದೆ ಅನುಮತಿ ಇರುವುದಿಲ್ಲ.

ದಾಖಲೆಗಳ ಪರಿಶೀಲನೆ: ಪ್ರಯಾಣಿಕರು ತಮ್ಮ ಮುಂದಿನ ಪ್ರಯಾಣದ ಕನ್ಫರ್ಮ್ ಆದ ಏರ್ ಟಿಕೆಟ್ ಮತ್ತು ತಾವು ತಲುಪಬೇಕಾದ ಅಂತಿಮ ದೇಶದ ಮಾನ್ಯತೆ ಇರುವ ವೀಸಾ ಅಥವಾ ರೆಸಿಡೆನ್ಸ್ ಪರ್ಮಿಟ್ ಅನ್ನು ಕಡ್ಡಾಯವಾಗಿ ಹೊಂದಿರಬೇಕು.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...