ಜಾಗತಿಕ ಪ್ರಯಾಣ ಆ್ಯಪ್ ಸ್ಕೈಸ್ಕ್ಯಾನರ್ ಬಿಡುಗಡೆ ಮಾಡಿರುವ ‘ಟ್ರಾವೆಲ್ ಟ್ರೆಂಡ್ಸ್ 2027’ ವರದಿಯ ಪ್ರಕಾರ, ಭಾರತೀಯ ಪ್ರವಾಸಿಗರು 2027ರಲ್ಲಿ ವಿಶಿಷ್ಟ ಅನುಭವಗಳಿಗಾಗಿ ವಿದೇಶ ಪ್ರವಾಸ ಕೈಗೊಳ್ಳಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಸಮೀಕ್ಷೆಯಲ್ಲಿ ಶೇ.58ರಷ್ಟು ಭಾರತೀಯರು ಮುಂದಿನ ವರ್ಷ ವಿದೇಶ ಪ್ರವಾಸವನ್ನು ಹೆಚ್ಚಿಸುವ ಯೋಜನೆ ಹೊಂದಿದ್ದಾರೆ.

ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಆಕರ್ಷಣೆಯಿಂದ ಶೇ.43ರಷ್ಟು ಮಂದಿ ಕಾರ್ನಿವಲ್‌ ಅನುಭವಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಜ್ವಾಲಾಮುಖಿಗಳು, ಪಿರಮಿಡ್‌ಗಳು ಮತ್ತು ಗುಹೆಗಳಂತಹ ವಿಭಿನ್ನ ಸ್ಥಳಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ವೀಕ್ಷಿಸಲು ಶೇ.38ರಷ್ಟು ಪ್ರವಾಸಿಗರು ಆಸಕ್ತಿ ಹೊಂದಿದ್ದಾರೆ.

ಪ್ರವಾಸದ ವೇಳೆ ಮೊಬೈಲ್‌ನಿಂದ ದೂರವಿದ್ದು ಪ್ರಕೃತಿಯೊಂದಿಗೆ ಬೆರೆಯಲು ಶೇ.75ರಷ್ಟು ಮಂದಿ ಬಯಸಿದ್ದಾರೆ. ಆರೋಗ್ಯ ಮತ್ತು ಫಿಟ್‌ನೆಸ್‌ಗೂ ಪ್ರವಾಸದಲ್ಲಿ ಆದ್ಯತೆ ಹೆಚ್ಚುತ್ತಿದ್ದು, ಶೇ.91ರಷ್ಟು ಮಂದಿ ಪೌಷ್ಟಿಕ ಉಪಾಹಾರ ಒದಗಿಸುವ ಹೊಟೇಲ್‌ಗಳನ್ನು ಆಯ್ಕೆ ಮಾಡಲು ಒಲವು ತೋರಿದ್ದಾರೆ. ಅಲ್ಲದೆ, ಶೇ.80ರಷ್ಟು ಭಾರತೀಯರು ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ಲಭ್ಯವಿರುವ ವಸ್ತುಗಳನ್ನು ಖರೀದಿಸಲು ಪ್ರಯಾಣಿಸಿದ್ದಾರೆ. ಪ್ರವಾಸ ಯೋಜನೆ ಮತ್ತು ಬುಕಿಂಗ್‌ಗಾಗಿ ಕೃತಕ ಬುದ್ಧಿಮತ್ತೆ ಬಳಸುವ ವಿಶ್ವಾಸವೂ ಹೆಚ್ಚಿದ್ದು, ಶೇ.87ರಷ್ಟು ಮಂದಿ ಎಐ ಬಳಕೆಗೆ ಸಿದ್ಧರಿದ್ದಾರೆ.