ಐಆರ್ ಸಿಟಿಸಿ ಭಾರತದ ಪೂರ್ವ ಭಾಗದ ದೇವಾಲಯಗಳ ಪ್ರವಾಸಕ್ಕೆ ಪ್ಯಾಕೇಜ್ ಘೋಷಿಸಿದೆ. ’ಡಿವೈನ್ ಈಸ್ಟ್ ಟೆಂಪಲ್ ಟೂರ್’ 10 ದಿನಗಳ ಪ್ಯಾಕೇಜ್ ನಲ್ಲಿ ವಾರಾಣಸಿ, ಕೊಲ್ಕತ್ತಾ, ಗಂಗಾಸಾಗರ, ಪುರಿ, ಕೊನಾರ್ಕ್ ಮತ್ತು ಬೈದ್ಯನಾಥ ಮುಂತಾದ ಪುಣ್ಯ ಕ್ಷೇತ್ರಗಳ ದರ್ಶನ ಪಡೆಯಬಹುದಾಗಿದೆ. ಈ ವಿಶೇಷ ಪ್ರವಾಸಕ್ಕಾಗಿ ಐಆರ್ ಸಿಟಿಸಿಯು ’ಭಾರತ್ ಗೌರವ್’ ರೈಲನ್ನು ಪರಿಚಯಿಸುತ್ತಿದೆ.

ಈ ತೀರ್ಥಯಾತ್ರೆಯ ಸರ್ಕ್ಯೂಟ್ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಜಾರ್ಖಂಡ್ ರಾಜ್ಯಗಳನ್ನು ಸಂಪರ್ಕಿಸಲಿದೆ. ಎಸಿ ರೈಲು ಪ್ರಯಾಣ, ಹೊಟೇಲ್ ವ್ಯವಸ್ಥೆ, ಸಸ್ಯಾಹಾರಿ ಊಟ ಮತ್ತು ಗೈಡ್ ವ್ಯವಸ್ಥೆಯನ್ನು ಈ ಪ್ಯಾಕೇಜ್ ಒಳಗೊಂಡಿದೆ. ಮಾರ್ಚ್ 8 ರಂದು ದೆಹಲಿಯ ಸಫ್ದರ್ಜಂಗ್ ನಿಂದ ಈ ಯಾತ್ರೆ ಪ್ರಾರಂಭವಾಗಲಿದ್ದು, ಹೆಚ್ಚಿನ ಮಾಹಿತಿಗಾಗಿ www.irctc.co.in ವಿಸಿಟ್ ಮಾಡಿ ಟಿಕೆಟ್ ಗಳನ್ನು ಕಾಯ್ದಿರಿಸಿಕೊಳ್ಳಬಹುದು.