ಭಾರತದಲ್ಲಿ ಈಗ ಮ್ಯೂಸಿಕಲ್ ರಸ್ತೆಗಳ ಕಲರವ ಶುರುವಾಗಿದೆ. ಮುಂಬೈನ ಏರ್ ಪೋರ್ಟ್ ರಸ್ತೆಯಲ್ಲಿ ಸಂಚರಿಸಿದರೆ, ಆಸ್ಕರ್ ಪ್ರಶಸ್ತಿ ಪಡೆದ ’ಜೈ ಹೋ’ ಹಾಡು ಕೇಳಿಬರುತ್ತದೆ. ವಾಹನಗಳು ನಿಗದಿತ ವೇಗದಲ್ಲಿ ಚಲಿಸುವಾಗ ಮಾತ್ರ ಈ ಹಾಡನ್ನು ಕೇಳಬಹುದು. ನಾರಿಮನ್ ಪಾಯಿಂಟ್‌ನಿಂದ ವರ್ಲಿಗೆ ಹೋಗುವ ಲೇನ್‌ನಲ್ಲಿ ಈ ವಿಶೇಷ ರಸ್ತೆಯನ್ನು ನಿರ್ಮಿಸಲಾಗಿದೆ.

musical road  1

ವಿಶ್ವದ ಐದನೇ ಮ್ಯೂಸಿಕಲ್ ರಸ್ತೆ ಇದಾಗಿದ್ದು, ಭಾರತದಲ್ಲಿ ನಿರ್ಮಿಸಲಾಗಿರುವ ಮೊದಲ ಮ್ಯೂಸಿಕಲ್ ರಸ್ತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಈ ಮಾದರಿಯ ರಸ್ತೆ ನಿರ್ಮಾಣ ಮಾಡ್ದಿದ್ದು, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಬುಧವಾರ ಈ ರಸ್ತೆಯನ್ನು ಉದ್ಘಾಟನೆ ಮಾಡಿದ್ದಾರೆ.